nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬಯಲಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ: ಡಿಜೆ,  ಮಾಡಿಫೈಡ್ ವೆಹಿಕಲ್ ಟ್ಯಾಬ್ಲೋಗಳಿಗೆ ಅವಕಾಶವಿಲ್ಲ: ಎಸ್‌ ಪಿ ಅಶೋಕ್ ಕೆ.ವಿ.

    September 9, 2026

    ಬೀದರ್: ಮುಸ್ತಾಪೂರ ಸರ್ಕಾರಿ ಶಾಲೆಗೆ ಸುಣ್ಣ-ಬಣ್ಣ ಬಳಿಯುವಂತೆ ಆಗ್ರಹಿಸಿ ಪಿಡಿಒಗೆ ಮನವಿ ಪತ್ರ ಸಲ್ಲಿಕೆ

    September 9, 2026

    ಹೊಳವನಹಳ್ಳಿಗೆ ಬಸ್ ಬಾರದೆ ವಿದ್ಯಾರ್ಥಿಗಳ ಪರದಾಟ : ಸರ್ಕಾರಿ ಬಸ್ ಗಾಗಿ ವಿದ್ಯಾರ್ಥಿಗಳ ಆಗ್ರಹ

    September 9, 2026
    Facebook Twitter Instagram
    ಟ್ರೆಂಡಿಂಗ್
    • ಬಯಲಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ: ಡಿಜೆ,  ಮಾಡಿಫೈಡ್ ವೆಹಿಕಲ್ ಟ್ಯಾಬ್ಲೋಗಳಿಗೆ ಅವಕಾಶವಿಲ್ಲ: ಎಸ್‌ ಪಿ ಅಶೋಕ್ ಕೆ.ವಿ.
    • ಬೀದರ್: ಮುಸ್ತಾಪೂರ ಸರ್ಕಾರಿ ಶಾಲೆಗೆ ಸುಣ್ಣ-ಬಣ್ಣ ಬಳಿಯುವಂತೆ ಆಗ್ರಹಿಸಿ ಪಿಡಿಒಗೆ ಮನವಿ ಪತ್ರ ಸಲ್ಲಿಕೆ
    • ಹೊಳವನಹಳ್ಳಿಗೆ ಬಸ್ ಬಾರದೆ ವಿದ್ಯಾರ್ಥಿಗಳ ಪರದಾಟ : ಸರ್ಕಾರಿ ಬಸ್ ಗಾಗಿ ವಿದ್ಯಾರ್ಥಿಗಳ ಆಗ್ರಹ
    • ಅಬಕಾರಿ ಅಕ್ರಮ ಕೇಸ್‌: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮನೆ ಮೇಲೆ ಇಡಿ (ED) ದಾಳಿ!
    • ಅಕ್ಟೋಬರ್ ಅಂತ್ಯದೊಳಗೆ ತುಮಕೂರು ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಸಲು ಡಿಸಿಎಂ ಸೂಚನೆ
    • ತುಮಕೂರು ದಸರಾ ಉತ್ಸವ ಅದ್ಧೂರಿಯಾಗಿ ಆಚರಿಸಲು ಡಿಸಿಎಂ ಸೂಚನೆ
    • ನಿಡಗಲ್ಲು ಉತ್ಸವಕ್ಕೆ ಅದ್ದೂರಿ ಚಾಲನೆ: ದುರ್ಗವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಒತ್ತಾಯ
    • 15 ಲಕ್ಷ ಬಡವರಿಗೆ ಶೀಘ್ರ ಉಚಿತ ನಿವೇಶನ: ಡಿಸಿಎಂ ಪರಮೇಶ್ವರ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬಯಲಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ: ಡಿಜೆ,  ಮಾಡಿಫೈಡ್ ವೆಹಿಕಲ್ ಟ್ಯಾಬ್ಲೋಗಳಿಗೆ ಅವಕಾಶವಿಲ್ಲ: ಎಸ್‌ ಪಿ ಅಶೋಕ್ ಕೆ.ವಿ.
    ತುಮಕೂರು September 9, 2026

    ಬಯಲಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ: ಡಿಜೆ,  ಮಾಡಿಫೈಡ್ ವೆಹಿಕಲ್ ಟ್ಯಾಬ್ಲೋಗಳಿಗೆ ಅವಕಾಶವಿಲ್ಲ: ಎಸ್‌ ಪಿ ಅಶೋಕ್ ಕೆ.ವಿ.

    By Ganesh TumkuruSeptember 9, 2026No Comments3 Mins Read
    ashok k v

    ತುಮಕೂರು: ಗಣಪತಿ ಹಬ್ಬವನ್ನು ಹಬ್ಬವಾಗಿ ಆಚರಿಸಲು ಪೊಲೀಸ್ ಇಲಾಖೆಯಿಂದ ಯಾವುದೇ ತೊಂದರೆಯಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ನಡೆದು ಕೊಂಡರೆ ಕಾನೂನಿನ ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಅಶೋಕ್ ಕೆ.ವಿ. ಎಚ್ಚರಿಕೆ ನೀಡಿದರು.

    ನಗರದ ಕುಂಚಿಟಿಗ ಸಮುದಾಯಭವನದಲ್ಲಿ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕರೆಯಿದ್ದ ತುಮಕೂರು ತಾಲೂಕು ಗಣಪತಿ ಪ್ರತಿಷ್ಠಾಪನಾ ಸಮಿತಿಗಳ ಪದಾಧಿಕಾರಿಗಳ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಿಜೆ ಮಾಡಿಫೈಡ್ ವೆಹಿಕಲ್ ಗಳಲ್ಲಿ ಬರುವ ಟ್ಯಾಬ್ಲೋಗಳಿಗೆ ಅವಕಾಶವಿಲ್ಲ. ಒಂದು ಗಣಪತಿಗೆ ಎರಡು ಸ್ಪೀಕರ್ ಬಳಸಲು ಅವಕಾಶವಿದೆ. ಮನೆಯ ಒಳಗೆ  ಪೂಜಿಸುವ ಗಣಪತಿಗಳನ್ನು ಹೊರತು ಪಡಿಸಿ, ಬಯಲಿನಲ್ಲಿ ಪೂಜಿಸುವ ಎಲ್ಲಾ ಗಣಪತಿಗಳಿಗೂ ಅನುಮತಿ ಕಡಾಯ ಎಂದು ಸ್ಪಷ್ಟಪಡಿಸಿದರು.

    ಡಿಜೆ ಬಳಸಲು ಸುಪ್ರೀಂಕೋರ್ಟ್ ಕೆಲವು ನಿಬಂಧ ವಿಧಿಸಿದೆ. ಸಾರ್ವಜನಿಕ ಸ್ಥಳ, ಸ್ಕೂಲು, ಕಾಲೇಜು, ಆಸ್ಪತ್ರೆಗಳು ಹಾಗೂ ವ್ಯಾಪಾರಿ ಸ್ಥಳಗಳ ಮುಂದೆ ಜನರಿಗೆ ತೊಂದರೆಯಾಗದಂತೆ ಮೆರವಣಿಗೆ ಶಾಂತ ರೀತಿಯಿಂದ ನಡೆಯಬೇಕು. ಮುಂಚೆಯೇ ಪೊಲೀಸ್ ಇಲಾಖೆಗೆ ತಿಳಿಸಿದರೆ, ಉತ್ಸ ವದ ದಿನ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಇಲಾಖೆ ತೆಗೆದುಕೊಂಡು, ಗಣೇಶ ಮೆರವಣಿಗೆ ಸುಗಮವಾಗಿ ಸಾಗಲು ಅನುವು ಮಾಡಿಕೊಡಲಾಗುವುದು. ಹಾಗಾಗಿ ಗಣಪತಿ ವಿಸರ್ಜನೆಯ ದಿನಾಂಕ ಮತ್ತು ರೂಟ್ ಮ್ಯಾಪ್ ಮೊದಲೇ ತಿಳಿಸಿದರೆ, ಸೂಕ್ತ ಬಂದೋಬಸ್ತ್ ಗೆ ನೇರವಾಗಲಿದೆ. ಸಾಮೂಹಿಕ ಗಣಪತಿ ವಿಸರ್ಜನೆಗೆ ಮುಂದಾದರೆ ಅದಕ್ಕೂ ಸಹ ಪೊಲೀಸ್ ಇಲಾಖೆ ಸಹಕರಿಸಲಿದೆ.

    – ಕೆ.ವಿ.ಅಶೋಕ್, ಎಸ್‌ಪಿ.


    ತುಮಕೂರಿನ ಕುಂಚಿಟಿಗ ಸಮುದಾಯ ಭವನದಲ್ಲಿ ಗಣಪತಿ ಪ್ರತಿಷ್ಠಾಪನಾ ಮಂಡಳಿಯವ ರೊಂದಿಗಿನ ಸಭೆಯಲ್ಲಿ ಎಸ್‌ ಪಿ ಕೆ.ವಿ.ಅಶೋಕ್ ಮಾತನಾಡಿದರು. ಎಸ್‌ ಪಿ ಗೋಪಾಲ್, ಡಿವೈಎಸ್‌ಪಿಗಳಾದ ಚಂದ್ರಶೇಖರ್, ಪುಟ್ಟೇಗೌಡ ಮತ್ತಿತರರಿದ್ದರು.

    ಗಣಪತಿ ಪ್ರತಿಷ್ಠಾಪನೆಗೆ ಬೇಕಾದ ಎಲ್ಲಾ ಅನುಮತಿಗಳನ್ನು ಸಿಂಗಲ್ ವಿಂಡೋ ಮೂಲಕ ವಿತರಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಕೆ.ಇ.ಬಿ. ಅನುಮತಿಗೆ ಅವರು ಸ್ಥಳ ಪರಿಶೀಲನೆ ಮಾಡಬೇಕಿರುವುದರಿಂದ ಕೊಂಚ ವಿಳಂಬವಾಗಿದ್ದು, ಅವರಿಗೂ ಸಹ ನಿಗದಿತ ಅವಧಿಯೊಳಗೆ ಅನುಮತಿ ನೀಡುಂತೆ ಕೋರಲಾಗುವುದು ಎಂದ ಎಸ್.ಪಿ. ಅವರು ಫ್ಲೆಕ್ಸ್ ಮತ್ತು ಬ್ಯಾನರ್‌ ಗಳನ್ನು ಬಿ.ಹೆಚ್. ರಸ್ತೆಯ ಎರಡು ಬದಿಯಲ್ಲಿ ಕಟ್ಟಲು ಅವಕಾಶವಿದೆ. ಅದಕ್ಕೆ ಸ್ಥಳೀಯ ಸಂಸ್ಥೆಯ ಪರವಾನಗಿ ಅಗತ್ಯ. ಆದರೆ ರಸ್ತೆಯ ಮಧ್ಯದಲ್ಲಿ ಕಟ್ಟಲು ಅವಕಾಶವಿಲ್ಲ ಹಾಗೂ ಒಂದು ಧರ್ಮ, ಸಮುದಾಯವನ್ನು ಹೀಗಳೆಯುವ ಮತ್ತು ನಿಷೇಧಿತ ಪದಗಳನ್ನು ಮುದ್ರಿಸುವುದಿಲ್ಲ. ಈಗಾಗಲೇ ಮುದ್ರಕರ ಸಭೆಯಲ್ಲಿ ಈ ಸಂಬಂಧ ಸೂಚನೆ ನೀಡಲಾಗಿದೆ ಒಂದು ಸಮುದಾಯವನ್ನು ಗುರಿಯಾಗಿಸಿದ ಯಾವುದೇ ಫ್ಲೆಕ್ಸ್, ಬ್ಯಾನರ್ ಬಳಕೆ ಮಾಡು ವಂತಿಲ್ಲ ಎಂದರು.

    ಗಣಪತಿ ಕೂರಿಸುವ ಸ್ಥಳದಲ್ಲಿ ಸಿಸಿಟಿವಿ ಕಡ್ಡಾಯ: ಗಣಪತಿ ಪ್ರತಿಷ್ಠಾಪನೆ, ಉತ್ಸವ ಮತ್ತು ವಿಸರ್ಜನೆ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಗಮನವನ್ನು ಪೊಲೀಸ್ ಇಲಾಖೆ ಹರಿಸಲಿದೆ. ಆಯೋಜಕರು ನಿಗಾವಹಿಸಬೇಕು. ಗಣಪತಿ ಕೂರಿಸುವ ಸ್ಥಳದಲ್ಲಿ ಸಿಸಿಟಿವಿ ಕ್ಯಾಮರ ಕಡ್ಡಾಯ, ಇದರಿಂದ ಮುಂದಾಗಬಹುದಾದ ಅನಾಹುತ ತಪ್ಪಿಸಲು, ಹಾಗೂ ಆಗಿರಬಹುದಾದ ಅನಾಹುತಕ್ಕೆ ಕಾರಣ ಏನು ಎಂದು ತಿಳಿದುಕೊಳ್ಳಲು ಸಹಕಾರಿಯಾಗಿದೆ. ಇದರಿಂದ ಪರಿಸ್ಥಿತಿಯ ಲಾಭ ಪಡೆದು ಸಮಾಜ ವಿರೋಧಿ ಶಕ್ತಿಗಳು ಲಾಭ ಪಡೆಯುವುದನ್ನು ತಡೆಗಟ್ಟಬಹುದು ಎಂದರು.

    500ಕ್ಕೂ ಹೆಚ್ಚು ಕ್ಯಾಮರಾ: ತುಮಕೂರು ನಗರದಲ್ಲಿ ಸುಮಾರು 500ಕ್ಕೂ ಹೆಚ್ಚು ಕ್ಯಾಮರಗಳ ಮೂಲಕ ಪ್ರತಿಯೊಂದು ವರಿಯಾದ ಚಲನವಲನಗಳನ್ನು ಪೊಲೀಸ್ ಇಲಾಖೆ ಗಮನಿಸುತ್ತಿದೆ. ಕುಡಿದು ಬಂದ ಗಲಾಟೆ ಮಾಡುವುದು, ಸಾರ್ವಜನಿಕರಿಗೆ ತೊಂದರೆ ನೀಡಿದರೆ ಕಾನೂನಿನ ಕುಣಿಕೆ ಬಿಗಿಯಾಗಲಿದೆ. ಗಣಪತಿ ಹಬ್ಬವನ್ನು ಶಾಂತವಾಗಿ, ಸಂತೋಷದಿಂದ ಎಲ್ಲರೂ ಹಬ್ಬದ ರೀತಿ ಆಚರಿಸಲು ಪೊಲೀಸ್ ಇಲಾಖೆಯ ಸಹಕಾರವಿದೆ ಎಂದು ಎಸ್.ಪಿ ಅಶೋಕ್ ಕೆ.ವಿ ತಿಳಿಸಿದರು.

    ಸಭೆಯಲ್ಲಿ ತುಮಕೂರು ನಗರ ಡಿವೈಎಸ್ಪಿ ಚಂದ್ರಶೇಖರ್, ಗ್ರಾಮಾಂತರ ಡಿವೈಎಸ್ಪಿ ಪುಟ್ಟೇಗೌಡ ಹಾಗೂ ಪೊಲೀಸ್ ಸಿಬ್ಬಂದಿಗಳು, ವಿವಿಧ ಗಣಪತಿ ಪ್ರತಿಷ್ಠಾಪನಾ ಸಮಿತಿಗಳ ಆಯೋಜಕರು ಭಾಗವಹಿಸಿದ್ದರು.

    ಸೋಶಿಯಲ್ ಮೀಡಿಯಾ ಕಂಟೆಂಟ್ ಹಾಕೋ ಮುನ್ನ ಎಚ್ಚರವಿರಲಿ:

    ಎಮ್‌.ವಿ.ಸೀ. ಗೋಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಗಣಪತಿ ವಿಸರ್ಜನೆ, ಉತ್ಸವ ಕಳೆದ ಮೂರು ವರ್ಷಗಳಿಂದ ಯಾವುದೇ ರೀತಿಯ ಅಹಿತಕರ ಘಟನೆಯಿಲ್ಲದೆ ನಡೆದುಕೊಂಡು ಬರುತ್ತಿದೆ. ಈ ವರ್ಷವೂ ಅದೇ ರೀತಿ ನಡೆಸಲು ಆಯೋಜಕರು ಸಹಕರಿಸಬೇಕೆಂಬುದು ಇಲಾಖೆ ಮನವಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಬರುವ ಕಂಟೆಂಟ್‌ ಗಳನ್ನು ವೈರಲ್ ಮಾಡುವ ಮೊದಲು ಅದರ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ತಪ್ಪಿಗೆ ಸಿಕ್ಕಿ ಹಾಕಿಕೊಳ್ಳುವ ಅಪಾಯವಿದೆ.. ಸೂಕ್ಷ್ಮ  ಸ್ಥಳಗಳಲ್ಲಿ ಮೆರವಣಿಗೆ ಸಾಗುವಾಗ ತಾಳ್ಮೆ ಇರಲಿ. ಪ್ರಚೋದನೆಗೆ ಒಳಗಾಗುವುದು ಬೇಡ ಎಂದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಅಕ್ಟೋಬರ್ ಅಂತ್ಯದೊಳಗೆ ತುಮಕೂರು ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಸಲು ಡಿಸಿಎಂ ಸೂಚನೆ

    September 8, 2026

    ತುಮಕೂರು ದಸರಾ ಉತ್ಸವ ಅದ್ಧೂರಿಯಾಗಿ ಆಚರಿಸಲು ಡಿಸಿಎಂ ಸೂಚನೆ

    September 8, 2026

    15 ಲಕ್ಷ ಬಡವರಿಗೆ ಶೀಘ್ರ ಉಚಿತ ನಿವೇಶನ: ಡಿಸಿಎಂ ಪರಮೇಶ್ವರ್

    September 8, 2026

    Leave A Reply Cancel Reply

    Our Picks

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಬಯಲಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ: ಡಿಜೆ,  ಮಾಡಿಫೈಡ್ ವೆಹಿಕಲ್ ಟ್ಯಾಬ್ಲೋಗಳಿಗೆ ಅವಕಾಶವಿಲ್ಲ: ಎಸ್‌ ಪಿ ಅಶೋಕ್ ಕೆ.ವಿ.

    September 9, 2026

    ತುಮಕೂರು: ಗಣಪತಿ ಹಬ್ಬವನ್ನು ಹಬ್ಬವಾಗಿ ಆಚರಿಸಲು ಪೊಲೀಸ್ ಇಲಾಖೆಯಿಂದ ಯಾವುದೇ ತೊಂದರೆಯಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ನಡೆದು ಕೊಂಡರೆ ಕಾನೂನಿನ…

    ಬೀದರ್: ಮುಸ್ತಾಪೂರ ಸರ್ಕಾರಿ ಶಾಲೆಗೆ ಸುಣ್ಣ-ಬಣ್ಣ ಬಳಿಯುವಂತೆ ಆಗ್ರಹಿಸಿ ಪಿಡಿಒಗೆ ಮನವಿ ಪತ್ರ ಸಲ್ಲಿಕೆ

    September 9, 2026

    ಹೊಳವನಹಳ್ಳಿಗೆ ಬಸ್ ಬಾರದೆ ವಿದ್ಯಾರ್ಥಿಗಳ ಪರದಾಟ : ಸರ್ಕಾರಿ ಬಸ್ ಗಾಗಿ ವಿದ್ಯಾರ್ಥಿಗಳ ಆಗ್ರಹ

    September 9, 2026

    ಅಬಕಾರಿ ಅಕ್ರಮ ಕೇಸ್‌: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮನೆ ಮೇಲೆ ಇಡಿ (ED) ದಾಳಿ!

    September 9, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.