ಬೀದರ್: ಜಿಲ್ಲೆಯ ಚಿಂತಾಕಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಮಾರಪಳ್ಳಿ ಗ್ರಾಮದಲ್ಲಿ ಸೋಯಾಬಿನ್ ಮತ್ತು ತೊಗರಿ ಬೆಳೆಯುವ ಹೊಲದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ನಾಗಮಾರಪಳ್ಳಿ ಗ್ರಾಮದ ಬಸವರಾಜ ತಂದೆ ರಾಚೆಪ್ಪಾ ದದ್ದಾಪೂರೆ ಎಂದು ಗುರುತಿಸಲಾಗಿದೆ.
ನಾಗಮಾರಪಳ್ಳಿ ಗ್ರಾಮದ ಸರ್ವೆ ನಂ. 21/2 ರ ಹೊಲದ ಕಟ್ಟೆಯ ಮೇಲೆ ಗಾಂಜಾ ಗಿಡಗಳನ್ನು ಬೆಳೆಸಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಚಿಂತಾಕಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಚಂದ್ರಶೇಖರ ನಿರ್ಣೆ ಹಾಗೂ ಸಿಬ್ಬಂದಿ ಪಂಚರ ಸಮಕ್ಷಮ ಸೆಪ್ಟೆಂಬರ್ 08, 2026 ರಂದು ಮಧ್ಯಾಹ್ನ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಒಟ್ಟು 3 ಗಾಂಜಾ ಗಿಡಗಳು (ತೂಕ: 4 ಕೆಜಿ 700 ಗ್ರಾಂ) ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಮೌಲ್ಯ: 2,35,000/- ರೂ. ಆಗಿದೆ.
ಚಿಂತಾಕಿ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 57/2026, ಕಲಂ 20(ಎ)(1) ಎನ್ ಡಿಪಿಎಸ್ ಕಾಯ್ದೆಯಡಿ (NDPS Act) ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಬೀದರ್ ಪೊಲೀಸ್ ಅಧೀಕ್ಷಕರು, ಭಾಲ್ಕಿ ಪೊಲೀಸ್ ಉಪಾಧೀಕ್ಷಕರು ಹಾಗೂ ಔರಾದ್ (ಬಿ) ಸಿಪಿಐ ಅವರ ಮಾರ್ಗದರ್ಶನದಂತೆ ಈ ಕಾರ್ಯಾಚರಣೆ ನಡೆದಿದೆ. ಚಿಂತಾಕಿ ಠಾಣೆಯ ಎ.ಎಸ್.ಐ ಪ್ರಭು ಹಾಗೂ ಸಿಬ್ಬಂದಿಗಳಾದ ಶ್ರೀಪತಿ, ಸದ್ಯೋಜಾತ, ಗೊರಖನಾಥ ಮತ್ತು ಸಂಜೀವ ಅವರು ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕರ್ತವ್ಯದಲ್ಲಿಚಾತುರ್ಯ ಮೆರೆದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಬೀದರ್ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್ ಜಿಲ್ಲೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
