nammatumakuru

    Subscribe to Updates

    Get the latest creative news from FooBar about art, design and business.

    What's Hot

     “ಸಮಾನತೆ ಕಲಿಸಿದ ಬಸವಣ್ಣ ನಾಡಿನ ಸಾಂಸ್ಕೃತಿಕ ನಾಯಕ” | ಬಸವಯುಗ ವೈಭವ ಗ್ರಂಥ ಬಿಡುಗಡೆ

    September 11, 2026

    ಬೀದರ್: ಬಿಸಿಎಂ ವಸತಿ ನಿಲಯದಲ್ಲಿ ಅವ್ಯವಸ್ಥೆ: ಕಿರಿಯ ಮೇಲ್ವಿಚಾರಕಿ ಅಮಾನತು

    September 11, 2026

    ಡಿಜೆ, ಅತಿಯಾದ ಶಬ್ದಕ್ಕೆ ಕಡಿವಾಣ : ಇನ್ಸ್ಪೆಕ್ಟರ್ ಸುರೇಶ್ ಎಚ್ಚರಿಕೆ

    September 11, 2026
    Facebook Twitter Instagram
    ಟ್ರೆಂಡಿಂಗ್
    •  “ಸಮಾನತೆ ಕಲಿಸಿದ ಬಸವಣ್ಣ ನಾಡಿನ ಸಾಂಸ್ಕೃತಿಕ ನಾಯಕ” | ಬಸವಯುಗ ವೈಭವ ಗ್ರಂಥ ಬಿಡುಗಡೆ
    • ಬೀದರ್: ಬಿಸಿಎಂ ವಸತಿ ನಿಲಯದಲ್ಲಿ ಅವ್ಯವಸ್ಥೆ: ಕಿರಿಯ ಮೇಲ್ವಿಚಾರಕಿ ಅಮಾನತು
    • ಡಿಜೆ, ಅತಿಯಾದ ಶಬ್ದಕ್ಕೆ ಕಡಿವಾಣ : ಇನ್ಸ್ಪೆಕ್ಟರ್ ಸುರೇಶ್ ಎಚ್ಚರಿಕೆ
    • ತುಮಕೂರು ದಸರಾ ಮಹೋತ್ಸವ: ಕಲಾ ತಂಡಗಳಿಂದ ಅರ್ಜಿ ಆಹ್ವಾನ
    • ತುಮಕೂರು: ವಿದ್ಯಾರ್ಥಿಗಳಿಗೆ ಪೋಕ್ಸೊ ಕಾಯ್ದೆ, ಪೌಷ್ಟಿಕಾಂಶದ ಅರಿವು ಕಾರ್ಯಕ್ರಮ
    • ವಸತಿ ಶಾಲೆಗಳಿಗೆ ವೈದ್ಯಾಧಿಕಾರಿಗಳ ಭೇಟಿ ಕಡ್ಡಾಯ: ಆಶ್ವಿಜಾ ಬಿ.ವಿ.
    • ಸಾಲ ಸೌಲಭ್ಯ: ಕಾಡುಗೊಲ್ಲ ಸಮುದಾಯದವರಿಂದ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಸುವ ವಿವರ ಇಲ್ಲಿದೆ
    • ಹೊಲದ ಕಟ್ಟೆಯಲ್ಲಿ ಗಾಂಜಾ ಗಿಡ ಬೆಳೆದಿದ್ದ ಆರೋಪಿ ಬಂಧನ; 2.35 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬೀದರ್: ಬಿಸಿಎಂ ವಸತಿ ನಿಲಯದಲ್ಲಿ ಅವ್ಯವಸ್ಥೆ: ಕಿರಿಯ ಮೇಲ್ವಿಚಾರಕಿ ಅಮಾನತು
    ಜಿಲ್ಲಾ ಸುದ್ದಿ September 11, 2026

    ಬೀದರ್: ಬಿಸಿಎಂ ವಸತಿ ನಿಲಯದಲ್ಲಿ ಅವ್ಯವಸ್ಥೆ: ಕಿರಿಯ ಮೇಲ್ವಿಚಾರಕಿ ಅಮಾನತು

    By Ganesh TumkuruSeptember 11, 2026No Comments1 Min Read
    bidar

    ಬೀದರ್: ಜಿಲ್ಲೆಯ ವಸತಿ ನಿಲಯದ ಆಡಳಿತ ನಿರ್ವಹಣೆಯಲ್ಲಿ ಗಂಭೀರ ಸ್ವರೂಪದ ಲೋಪಗಳು ಹಾಗೂ ನಿರ್ಲಕ್ಷ್ಯ ತೋರಿದ ಆರೋಪದ ಮೇರೆಗೆ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಕಿರಿಯ ಮೇಲ್ವಿಚಾರಕಿಯನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಪಂಚಾಯತ್ ಸಿಇಒ ಗಿತ್ತೆ ಮಾಧವ್ ವಿಠಲರಾವ್ ಆದೇಶ ಹೊರಡಿಸಿದ್ದಾರೆ.

    ಔರಾದ್ ತಾಲೂಕಿನ ಧೂಪತಮಹಾಗಾಂವ್ ಗ್ರಾಮದ ವಸತಿ ನಿಲಯದ ಕಿರಿಯ ಮೇಲ್ವಿಚಾರಕಿ ಶೋಭಾ ಅಮಾನತುಗೊಂಡವರಾಗಿದ್ದಾರೆ.

    ಸೆಪ್ಟೆಂಬರ್ 3 ರಂದು ಜಿ.ಪಂ. ಸಿಇಒ ಗಿತ್ತೆ ಮಾಧವ್ ಅವರು ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದ ವೇಳೆ, ವಿದ್ಯಾರ್ಥಿಗಳ ಸುರಕ್ಷತೆ, ಆರೋಗ್ಯ ಹಾಗೂ ಶೈಕ್ಷಣಿಕ ಹಿತಾಸಕ್ತಿಗೆ ಸಂಬಂಧಿಸಿದ ವ್ಯವಸ್ಥೆಗಳಲ್ಲಿ ಹಲವು ಗೊಂದಲ ಹಾಗೂ ಅವ್ಯವಸ್ಥೆಗಳು ಕಂಡುಬಂದಿದ್ದವು.

    ವಸತಿ ನಿಲಯದ ನಿರ್ವಹಣೆಯಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಕಿರಿಯ ಮೇಲ್ವಿಚಾರಕಿ ಶೋಭಾ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಅವರು ಸಲ್ಲಿಸಿದ್ದ ಲಿಖಿತ ಉತ್ತರವು ಸಮಂಜಸವಾಗಿಲ್ಲದಿರುವುದು ಪರಿಶೀಲನೆಯಲ್ಲಿ ದೃಢಪಟ್ಟಿತ್ತು.

    ಕರ್ತವ್ಯಲೋಪ ಮತ್ತು ಮೇಲ್ವಿಚಾರಣೆಯಲ್ಲಿ ಎಸಗಿದ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿ, ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ಅನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅವರನ್ನು ಅಮಾನತುಗೊಳಿಸಲಾಗಿದೆ.

    ಅಮಾನತು ಅವಧಿಯಲ್ಲಿ ನಿಯಮಾನುಸಾರ ಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗಿರುವ ಶೋಭಾ ಅವರು, ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

    ವರದಿ: ಅರವಿಂದ ಮಲ್ಲಿಗೆ, ಬೀದರ್


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಹೊಲದ ಕಟ್ಟೆಯಲ್ಲಿ ಗಾಂಜಾ ಗಿಡ ಬೆಳೆದಿದ್ದ ಆರೋಪಿ ಬಂಧನ; 2.35 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ

    September 10, 2026

    ಭಂಡಾರಕುಮಟಾದಲ್ಲಿ ಜಾಬ್ ಕಾರ್ಡ್ ಮೇಳ: 125 ದಿನ ಉದ್ಯೋಗ, ರೂ. 382 ಕೂಲಿ ಕುರಿತು ಜಾಗೃತಿ

    September 10, 2026

    ಕೆಎಸ್‌ ಆರ್‌ ಟಿಸಿ ಬಸ್‌ ಹಾಗೂ ಟ್ರ್ಯಾಕ್ಟ‌ರ್ ಅಪಘಾತ: ಬಸ್ ಚಾಲಕ ದುರ್ಮರಣ

    September 10, 2026

    Leave A Reply Cancel Reply

    Our Picks

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

     “ಸಮಾನತೆ ಕಲಿಸಿದ ಬಸವಣ್ಣ ನಾಡಿನ ಸಾಂಸ್ಕೃತಿಕ ನಾಯಕ” | ಬಸವಯುಗ ವೈಭವ ಗ್ರಂಥ ಬಿಡುಗಡೆ

    September 11, 2026

    ತುಮಕೂರು: ಒಂಬೈನ್ನೂರು ವರ್ಷಗಳ ಹಿಂದೆ ಕಲ್ಯಾಣದಲ್ಲಿ ನಡೆದ ಶರಣ ಚಳವಳಿಯನ್ನು ಅವಲೋಕಿಸಿದರೆ, ಇದು ವಾಸ್ತವವೋ, ಕಟ್ಟು ಕಥೆಯೋ ಎಂಬಂತೆ ಭಾಸವಾಗುತ್ತದೆ.…

    ಬೀದರ್: ಬಿಸಿಎಂ ವಸತಿ ನಿಲಯದಲ್ಲಿ ಅವ್ಯವಸ್ಥೆ: ಕಿರಿಯ ಮೇಲ್ವಿಚಾರಕಿ ಅಮಾನತು

    September 11, 2026

    ಡಿಜೆ, ಅತಿಯಾದ ಶಬ್ದಕ್ಕೆ ಕಡಿವಾಣ : ಇನ್ಸ್ಪೆಕ್ಟರ್ ಸುರೇಶ್ ಎಚ್ಚರಿಕೆ

    September 11, 2026

    ತುಮಕೂರು ದಸರಾ ಮಹೋತ್ಸವ: ಕಲಾ ತಂಡಗಳಿಂದ ಅರ್ಜಿ ಆಹ್ವಾನ

    September 11, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.