ತುಮಕೂರು: ಒಂಬೈನ್ನೂರು ವರ್ಷಗಳ ಹಿಂದೆ ಕಲ್ಯಾಣದಲ್ಲಿ ನಡೆದ ಶರಣ ಚಳವಳಿಯನ್ನು ಅವಲೋಕಿಸಿದರೆ, ಇದು ವಾಸ್ತವವೋ, ಕಟ್ಟು ಕಥೆಯೋ ಎಂಬಂತೆ ಭಾಸವಾಗುತ್ತದೆ. ಅಂತಹ ವಚನ ಚಳವಳಿಯನ್ನು ಪುಸ್ತಕ ರೂಪದಲ್ಲಿ ನೀಡಿರುವ ಬಸವಯುಗ ವೈಭವ ಪುಸ್ತಕ ಒಂದು ಐತಿಹಾಸಿಕ ಕೃತಿ ಎಂದು ರಾಷ್ಟ್ರೀಯ ಚಿಂತಕರು, ಮಾಜಿ ಸಂಸತ್ ಸದಸ್ಯರಾದ ಡಾ.ಬಸವರಾಜ ಪಾಟೀಲ್ ಸೇಡಂ ಅಭಿಪ್ರಾಯಪಟ್ಟಿದ್ದಾರೆ.
ಶ್ರೀಸಿದ್ಧಗಂಗಾ ಮಠದಲ್ಲಿ ಲೇಖಕರಾದ ಶಾಮಲಿಂಗ ಜವಳಿ ಅವರು ಬರೆದಿರುವ ಬಸವಾದಿ ಶರಣರನ್ನು ಸ್ಮರಿಸುವ 12ನೇ ಶತಮಾನದಿಂದ 21ನೇ ಶತಮಾನದವರೆಗಿನ ಬಸವ ತತ್ವವನ್ನು ಪರಿಚಯಿಸುವ ಬಸವಯುಗ ವೈಭವ ಗ್ರಂಥ ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಅವರು, ಶರಣ ತತ್ವದ 900 ವರ್ಷಗಳ ಇತಿಹಾಸವನ್ನು ದಾಖಲಿಸುವ ಈ ಕೃತಿ ನಾಡಿನ ಉದ್ದಗಕ್ಕೂ ಬೆಳಕಾಗಬೇಕು ಎಂದರು.
ಬಸವಯುಗ ವೈಭವ ಒಂದು ವಿಶಿಷ್ಟ ಗ್ರಂಥ. 12ನೇ ಶತಮಾನದಿಂದ 21ನೇ ಶತಮಾನದವರೆಗೆ ಬಸವಣ್ಣರ ಬಗ್ಗೆ ಯಾರುಯಾರು ಬಸವ ತತ್ವವನ್ನು ಪ್ರಸರಿಸಿದರೋ ಅವರನ್ನು ಪರಿಚಯಿಸುವ ಕೆಲಸ ಆಗಿದೆ. ಬಸವಯುಗ ಮಾನವನಿಗೆ ಘನತೆ ತಂದುಕೊಟ್ಟ ಯುಗ. ಮಾನವೀಯ ಅನುಕಂಪದ ಪ್ರತಿಪಾದಿಸಿದ ಯುಗ. ಕಾಯಕ, ದಾಸೋಹ, ಸ್ತ್ರೀಸಮಾನತೆ, ಜಾತ್ಯಾತೀತ, ಮೂಢನಂಬಿಕೆ ವಿರುದ್ಧ ಹೋರಾಟ ಮಾಡಿದ ಬಸವಣ್ಣನನ್ನು ಸೊರಗಾಸಿ ಶಾಮಲಿಂಗ ಜವಳಿ ನಿರೂಪಿಸಿದ್ದಾರೆ. ಬಸವಾದಿ ಶರಣರ ಬೆಳಕು ಹರಿಯುವಂತೆ ಮಾಡಿದ್ದಾರೆ. 856 ಪುಟಗಳ ಬೃಹತ್ ಗ್ರಂಥದಂತಹ ಕೃತಿಗಳು ಮತ್ತು ಹೊರಬರಲಿ, ಸಾಮರಸ್ಯ, ಸಹಬಾಳನ್ನು ಕಲಿಸಿದ ಬಸವಯುಗ ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಿರುವರು ಸಂತಸ ತಂದಿದೆ ಎಂದು.
-ಡಾ.ಸಿ.ಸೋಮಶೇಖರ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರು.
ಒಟ್ಟಿಗೆ ತೆಗೆದುಕೊಂಡು ಹೋಗುವ ಗುಣ ನಮ್ಮ ಶರಣರಲ್ಲಿದೆ. ಈ ಕಾರ್ಯವನ್ನು ಮಾಡುವುದೇ ನಮ್ಮನ್ನು ಅಗಲಿದ ಶರಣರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದು ಡಾ.ಬಸವರಾಜ ಪಾಟೀಲ್ ಸೇಡಂ ನುಡಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರು, ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಮಾತನಾಡಿ, ಬಸವಯುಗ ವೈಭವ ಒಂದು ವಿಶಿಷ್ಟ ಗ್ರಂಥ. 12ನೇ ಶತಮಾನದಿಂದ 21ನೇ ಶತಮಾನದವರೆಗೆ ಬಸವಣ್ಣರ ಬಗ್ಗೆ ಯಾರುಯಾರು ಬಸವ ತತ್ವವನ್ನು ಪ್ರಸರಿಸಿದರೋ ಅವರನ್ನು ಪರಿಚಯಿಸುವ ಕೆಲಸ ಆಗಿದೆ. ಬಸವಯುಗ ಮಾನವನಿಗೆ ಘನತೆ ತಂದುಕೊಟ್ಟ ಯುಗ, ಮಾನವೀಯ ಅನುಕಂಪದ ಪ್ರತಿಪಾದಿಸಿದ ಯುಗ. ಕಾಯಕ, ದಾಸೋಹ, ಸ್ತ್ರೀಸಮಾನತೆ, ಜಾತ್ಯಾತೀತ, ಮೂಢನಂಬಿಕೆ ವಿರುದ್ಧ ಹೋರಾಟ ಮಾಡಿದ ಬಸವಣ್ಣನನ್ನು ಸೊರಗಾಸಿ ಶಾಮಲಿಂಗ ಜವಳಿ ನಿರೂಪಿಸಿದ್ದಾರೆ. ಬಸವಾದಿ ಶರಣರ ಬೆಳಕು ಹರಿಯುವಂತೆ ಮಾಡಿದ್ದಾರೆ. 856 ಪುಟಗಳ ಬೃಹತ್ ಗ್ರಂಥದಂತಹ ಕೃತಿಗಳು ಮತ್ತು ಹೊರಬರಲಿ, ಸಾಮರಸ್ಯ, ಸಹಬಾಳನ್ನು ಕಲಿಸಿದ ಬಸವಯುಗ ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಿರುವರು ಸಂತಸ ತಂದಿದೆ ಎಂದರು.
ಆಶಯ ನುಡಿಗಳನ್ನಾಡಿದ ಲೇಖಕ ಶಾಮಲಿಂಗ ಜವಳಿ, ಇಂತಹ ಬೃಹತ್ ಗ್ರಂಥವನ್ನು ತಯಾರಿಸಲು 40 ವರ್ಷಗಳ ನಿರಂತರ ಶ್ರಮವಿದೆ. 1986ರಲ್ಲಿ ಬಿಡುಗಡೆಯಾದ ಶರಣರ ದರ್ಶನ ಪುಸ್ತಕದಿಂದ ಪ್ರೇರೇಪಿತಗೊಂಡು, ಈ ಕೃತಿಯ ರಚನೆಗೆ ಇಳಿದೆ. 2012 ರಿಂದ 2023ರವರೆಗೆ ನಿರಂತರವಾಗಿ ಓಡಾಟ ನಡೆಸಿ, ಹಲವು ಧರ್ಮ, ಜಾತಿಯ ಪ್ರಾಜ್ಞರನ್ನು ಭೇಟಿಯಾಗಿ, ಅವರ ಮಾತುಗಳನ್ನು ಆಲಿಸಿ, ಹಲವು ಮತಮಾನ್ಯಗಳಿಗೆ ಪ್ರವಾಸ ಮಾಡಿ ಯಾರಿಂದುಲೂ ಈ ಕೃತಿಯ ಬಗ್ಗೆ ವಿವಾದ ಭೀಪದಂತೆ ನೋಡಿಕೊಂಡಿದ್ದೇವೆ. ಇದುವರೆಗೂ 150ಕ್ಕೂ ಹೆಚ್ಚು ವಿದ್ವಾಂಸರು, ಸಂಶೋಧಕರು ಈ ಕೃತಿಯನ್ನು ಓದಿ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ಇಂತಹ ಕೃತಿಯನ್ನು ಬಿಡುಗಡೆ ಮಾಡಲು ಅವಕಾಶ ಮಾಡಿಕೊಟ್ಟ ಸಿದ್ಧಗಂಗಾ ಮಠದ ಶ್ರೀಸಿದ್ಧಲಿಂಗಸ್ವಾಮೀಜಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ವಿದ್ವಾನ್ ಎಂ.ಜಿ. ಸಿದ್ಧರಾಮಯ್ಯ ಮಾತನಾಡಿ, ಸಿದ್ಧಗಂಗಾ ಮಠ ನತ್ಸಂಥಹ ಅಜ್ಞಾನದ ಮಕ್ಕಳತೆ ಆಸರೆ ನೀಡಿದೆ. ಇಲ್ಲಿನ ಮಕ್ಕಳಿಗೆ ಶಿಕ್ಷಣದ ಜೊತೆಗೆ, ಸಂಸ್ಕಾರವನ್ನು ನೀಡಿ, ಅವರ ಬೆಳವಣಿಗೆಗೆ ಕಾರಣರಾಗಿದ್ದಾರೆ. ಅವರು ಪುಸ್ತಕ ಬಿಡುಗಡೆ ಅವಕಾಶ ಕಲ್ಪಿಸಿರುವುದು ನಮ್ಮೆಲ್ಲರ ಭಾಗ್ಯ ಎಂದರು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗಸ್ವಾಮೀಜಿ ಮಾತನಾಡಿ, ಶಾಮಲಿಂಗ ಜವಳಗಿ ಅವರು ಹೊರತಂದಿರುವ ಬಸವಯುಗ ವೈಭವ ಅತ್ಯಂತ ಮಹತ್ವ ಕೃತಿ. ಬಸವಯುಗದ ಬೆಳಕು ಎಲ್ಲಾ ಶತಮಾನಕ್ಕೂ ಬೇಕಿದೆ. ಒಳ್ಳೆಯ ಮನುಷ್ಯನಾಗಲು ಬಸವಣ್ಣನವರ ವಿಚಾರಧಾರೇಗಳು ಬೇಕಿದೆ. ಪ್ರಚಾರಕ್ಕಿಂತ ಆಚರಣೆ ಮುಖ್ಯವಾಗಿದೆ. ಬಸವಣ್ಣನವರ ಬಗ್ಗೆ ಅಪಾರ ಕೃತಿಗಳಿವೆ. ಅವುಗಳಿಗೆ ಕಳಸವಿಟ್ಟಂತೆ ಈ ಕೃತಿ ಇದೆ. ಬಸವಣ್ಣನವರ ಬಗ್ಗೆ ಸಂಶೋಧನೆ ನಡೆಸುವವರಿಗೆ ಆಕರ ಗ್ರಂಥವಾಗಿದೆ. ನಾವೆಲ್ಲರೂ ಕೊಂಡು ಓದುವ ಮೂಲಕ ಪ್ರೋತ್ಸಾಹಿಸಬೇಕಿದೆ ಎಂದರು.ಕಾರ್ಯಕ್ರಮದಲ್ಲಿ ಯುವ ಚಿಂತಕರಾದ ಮಹೇಶ್ ರೆಡ್ಡಿ ವೆಂಕಟರೆಡ್ಡಿ ಮುದ್ದಾಳ, ವಿನ್ಯಾಸಕರಾದ ರವಿಕಿರಣ್ ನರಗುಂದ, ಮುದ್ರಕರಾದ ಬಿ.ವಿ.ಪಾಟೀಲ್,ಅಕ್ಷರ ಜೋಡಿಸಿದ ಶರಣಕುಮಾರ್ ಮರಪತಿ ಸೇರಿದಂತೆ ಇತರರು ಭಾಗಿಯಾಗಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
