nammatumakuru

    Subscribe to Updates

    Get the latest creative news from FooBar about art, design and business.

    What's Hot

    ಹಳ್ಳಿಮೈಸೂರು ಗ್ರಾ.ಪಂ.ನಿಂದ ಆರ್‌ ಟಿಐ ಮಾಹಿತಿ ನೀಡಲು ನಿರಾಕರಣೆ: ‘ವೈಯಕ್ತಿಕ ಮಾಹಿತಿ’ಯ ಸಬೂಬು!

    October 3, 2026

    ಚಿನ್ನದ ದರ ಇಳಿಕೆ ಕಂಡ ಬೆನ್ನಲ್ಲೇ ಆಭರಣ ಪ್ರಿಯರಿಗೆ ಸಂತಸದ ಸುದ್ದಿ!

    October 3, 2026

    ಮೂಡಲಕೊಪ್ಪಲು ಗ್ರಾಮದ ದೇವಾಲಯಗಳ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ₹1.5 ಲಕ್ಷ ಧನಸಹಾಯ

    October 3, 2026
    Facebook Twitter Instagram
    ಟ್ರೆಂಡಿಂಗ್
    • ಹಳ್ಳಿಮೈಸೂರು ಗ್ರಾ.ಪಂ.ನಿಂದ ಆರ್‌ ಟಿಐ ಮಾಹಿತಿ ನೀಡಲು ನಿರಾಕರಣೆ: ‘ವೈಯಕ್ತಿಕ ಮಾಹಿತಿ’ಯ ಸಬೂಬು!
    • ಚಿನ್ನದ ದರ ಇಳಿಕೆ ಕಂಡ ಬೆನ್ನಲ್ಲೇ ಆಭರಣ ಪ್ರಿಯರಿಗೆ ಸಂತಸದ ಸುದ್ದಿ!
    • ಮೂಡಲಕೊಪ್ಪಲು ಗ್ರಾಮದ ದೇವಾಲಯಗಳ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ₹1.5 ಲಕ್ಷ ಧನಸಹಾಯ
    • ಹೈನುಗಾರಿಕೆ ಪ್ರೋತ್ಸಾಹಿಸಲು ರೈತರಿಗೆ ಉಚಿತ ಮೇವಿನ ಬೀಜ ವಿತರಣೆ: ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸಲು ಪಶುಪಾಲನಾ ಇಲಾಖೆಯಿಂದ ರೈತಸ್ನೇಹಿ ಹೆಜ್ಜೆ
    • ಎಡ ಜೇಬಿನಲ್ಲಿ ಮೊಬೈಲ್ ಇಟ್ಟರೆ ಹೃದಯಕ್ಕೆ ಅಪಾಯವೇ? ತಜ್ಞರು ನೀಡಿದ ಸ್ಪಷ್ಟನೆ ಇಲ್ಲಿದೆ
    • ಹೊಳೆನರಸೀಪುರ: ಮದ್ಯಪ್ರಿಯರ ಅಡ್ಡೆಯಾಗಿದ್ದ ಶ್ರವಣೂರು ಬಸ್ ನಿಲ್ದಾಣ; ಸ್ವತಃ ಪೊರಕೆ ಹಿಡಿದು ಸ್ವಚ್ಛಗೊಳಿಸಿದ ಸ್ಥಳೀಯ ವ್ಯಕ್ತಿ!
    • ತುಮಕೂರು ವಿವಿಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ: ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಕರೆ
    • ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್‌ ಗೆ ಬಿಗ್ ಶಾಕ್: ಟೆಸ್ಟ್ ಕನಸು ಅಪೂರ್ಣ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಹಳ್ಳಿಮೈಸೂರು ಗ್ರಾ.ಪಂ.ನಿಂದ ಆರ್‌ ಟಿಐ ಮಾಹಿತಿ ನೀಡಲು ನಿರಾಕರಣೆ: ‘ವೈಯಕ್ತಿಕ ಮಾಹಿತಿ’ಯ ಸಬೂಬು!
    ಜಿಲ್ಲಾ ಸುದ್ದಿ October 3, 2026

    ಹಳ್ಳಿಮೈಸೂರು ಗ್ರಾ.ಪಂ.ನಿಂದ ಆರ್‌ ಟಿಐ ಮಾಹಿತಿ ನೀಡಲು ನಿರಾಕರಣೆ: ‘ವೈಯಕ್ತಿಕ ಮಾಹಿತಿ’ಯ ಸಬೂಬು!

    By Ganesh TumkuruOctober 3, 2026No Comments1 Min Read
    rti

    ಹೊಳೆನರಸೀಪುರ: ತಾಲೂಕಿನ ಹಳ್ಳಿಮೈಸೂರು ಗ್ರಾಮ ಪಂಚಾಯಿತಿ ಕಾರ್ಯಾಲಯವು ಮಾಹಿತಿ ಹಕ್ಕು ಅಧಿನಿಯಮ 2005ರಡಿ ಸಾರ್ವಜನಿಕ ಹಿತಾಸಕ್ತಿಯ ಪ್ರಮುಖ ದಾಖಲೆಗಳನ್ನು ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಮಾಹಿತಿ ನೀಡಲು ನಿರಾಕರಿಸಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಖಾದಿ ಮತ್ತು ಗ್ರಾಮೋದ್ಯೋಗ ಸಹಕಾರ ಸಂಘ ನಿಯಮಿತದ ಕಾರ್ಯದರ್ಶಿ ಅಕ್ಷಯ್ ಕುಮಾರ್ ಹೆಚ್.ಎಂ. ಅವರು ದಿನಾಂಕ 03/09/2026 ಮತ್ತು 09/09/2026 ರಂದು ನಾಲ್ಕು ಪ್ರತ್ಯೇಕ ಅರ್ಜಿಗಳ ಮೂಲಕ ಪಂಚಾಯಿತಿ ವ್ಯಾಪ್ತಿಯ ವಿವಿಧ ದಾಖಲೆಗಳನ್ನು ಕೋರಿ ಆರ್‌ ಟಿಐ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳಲ್ಲಿ 2020 ರಿಂದ 2026 ರವರೆಗೆ ಫಾರಂ 9ರಲ್ಲಿ ಸಲ್ಲಿಸಿರುವ ಸಂಪೂರ್ಣ ಪಟ್ಟಿ ಮತ್ತು ಸಂಬಂಧಿತ ದಾಖಲೆಗಳು, ಖಾದಿ ಗ್ರಾಮೋದ್ಯೋಗದ ಮನೆ ಮತ್ತು ನಿವೇಶನದ ಅಸೆಸ್‌ ಮೆಂಟ್ ಹಾಗೂ ಡಿಮ್ಯಾಂಡ್ ರಿಜಿಸ್ಟರ್‌ ನ ಯಥಾ ನಕಲು ಪ್ರತಿ, ಸರ್ವೆ ನಂ. 84ರ ಗುಂಡು ತೋಪಿನ 2.20 ಗುಂಟೆ ಜಮೀನಿನಲ್ಲಿ ಹಾಲಿ ಇರುವ ಕಟ್ಟಡಗಳ ಕುರಿತಾದ ಮಾಹಿತಿ ಹಾಗೂ 2024–25ನೇ ಸಾಲಿನ ಸ್ವತ್ತಿನ ಸಂಖ್ಯೆ 616/939ರಿಂದ 623/953 ರವರೆಗಿನ ದಾಖಲೆಗಳ ಪ್ರತಿಗಳನ್ನು ಕೋರಲಾಗಿತ್ತು.

    ಅರ್ಜಿದಾರರು ಕೋರಿದ ವಿವಿಧ ಮಾಹಿತಿಗಳಿಗೆ ಉತ್ತರಿಸಿರುವ ಹಳ್ಳಿಮೈಸೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO), ದಿನಾಂಕ 29/09/2026 ರಂದು ಲಿಖಿತ ಉತ್ತರ ನೀಡಿದ್ದು, ತಾವು ಕೋರಿರುವ ಮಾಹಿತಿಯು ಮಾಹಿತಿ ಹಕ್ಕು ಅಧಿನಿಯಮ ಸೆಕ್ಷನ್ 8(1) ಮತ್ತು 11ರ ಅಡಿಯಲ್ಲಿ ಮೂರನೇ ವ್ಯಕ್ತಿಯ ವೈಯಕ್ತಿಕ ಮಾಹಿತಿ ಆಗಿರುವುದರಿಂದ ಮಾಹಿತಿ ಒದಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

    ಪಂಚಾಯಿತಿ ಆಡಳಿತಕ್ಕೆ ಸಂಬಂಧಿಸಿದ ಮತ್ತು ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿರುವ ಅಧಿಕೃತ ದಾಖಲೆಗಳನ್ನು ‘ವೈಯಕ್ತಿಕ ಮಾಹಿತಿ’ ಎಂದು ಬಿಂಬಿಸಿ ಮಾಹಿತಿ ನೀಡಲು ಹಿಂದೇಟು ಹಾಕಿರುವುದು ಪಂಚಾಯಿತಿ ಆಡಳಿತದ ಪಾರದರ್ಶಕತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅರ್ಜಿದಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ವರದಿ: ಮಂಜು ಶ್ರವಣೂರು, ಹೊಳೆನರಸೀಪುರ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಮೂಡಲಕೊಪ್ಪಲು ಗ್ರಾಮದ ದೇವಾಲಯಗಳ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ₹1.5 ಲಕ್ಷ ಧನಸಹಾಯ

    October 3, 2026

    ಎಡ ಜೇಬಿನಲ್ಲಿ ಮೊಬೈಲ್ ಇಟ್ಟರೆ ಹೃದಯಕ್ಕೆ ಅಪಾಯವೇ? ತಜ್ಞರು ನೀಡಿದ ಸ್ಪಷ್ಟನೆ ಇಲ್ಲಿದೆ

    October 3, 2026

    ಹೊಳೆನರಸೀಪುರ: ಮದ್ಯಪ್ರಿಯರ ಅಡ್ಡೆಯಾಗಿದ್ದ ಶ್ರವಣೂರು ಬಸ್ ನಿಲ್ದಾಣ; ಸ್ವತಃ ಪೊರಕೆ ಹಿಡಿದು ಸ್ವಚ್ಛಗೊಳಿಸಿದ ಸ್ಥಳೀಯ ವ್ಯಕ್ತಿ!

    October 3, 2026

    Leave A Reply Cancel Reply

    Our Picks

    ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್‌ ಗೆ ಬಿಗ್ ಶಾಕ್: ಟೆಸ್ಟ್ ಕನಸು ಅಪೂರ್ಣ!

    October 3, 2026

    ಫ್ಲೈದುಬೈ ವಿಮಾನ ದಾಳಿ: ಪ್ರಧಾನಿ ಮೋದಿಯೊಂದಿಗೆ ಮಾತನಾಡಿದ ಗಾಯಗೊಂಡ ಪೈಲಟ್ ಸ್ಮಿತ್ ಮಚ್ಚಾರ್ ಹೇಳಿದ್ದೇನು ?

    October 2, 2026

    ಇಂದಿನಿಂದ ವಾಣಿಜ್ಯ ಎಲ್‌ ಪಿಜಿ ಸಿಲಿಂಡರ್, ವಿಮಾನ ಇಂಧನ (ATF) ದರ ಏರಿಕೆ

    October 1, 2026

    ವೈನ್‌ ಶಾಪ್‌ ಗೆ ನುಗ್ಗಿ ಕಂಠಪೂರ್ತಿ ಮದ್ಯ ಕುಡಿದು ಅಲ್ಲೇ ನಿದ್ರೆಗೆ ಜಾರಿದ ಕೋತಿ!

    September 27, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಹಳ್ಳಿಮೈಸೂರು ಗ್ರಾ.ಪಂ.ನಿಂದ ಆರ್‌ ಟಿಐ ಮಾಹಿತಿ ನೀಡಲು ನಿರಾಕರಣೆ: ‘ವೈಯಕ್ತಿಕ ಮಾಹಿತಿ’ಯ ಸಬೂಬು!

    October 3, 2026

    ಹೊಳೆನರಸೀಪುರ: ತಾಲೂಕಿನ ಹಳ್ಳಿಮೈಸೂರು ಗ್ರಾಮ ಪಂಚಾಯಿತಿ ಕಾರ್ಯಾಲಯವು ಮಾಹಿತಿ ಹಕ್ಕು ಅಧಿನಿಯಮ 2005ರಡಿ ಸಾರ್ವಜನಿಕ ಹಿತಾಸಕ್ತಿಯ ಪ್ರಮುಖ ದಾಖಲೆಗಳನ್ನು ಕೋರಿ…

    ಚಿನ್ನದ ದರ ಇಳಿಕೆ ಕಂಡ ಬೆನ್ನಲ್ಲೇ ಆಭರಣ ಪ್ರಿಯರಿಗೆ ಸಂತಸದ ಸುದ್ದಿ!

    October 3, 2026

    ಮೂಡಲಕೊಪ್ಪಲು ಗ್ರಾಮದ ದೇವಾಲಯಗಳ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ₹1.5 ಲಕ್ಷ ಧನಸಹಾಯ

    October 3, 2026

    ಹೈನುಗಾರಿಕೆ ಪ್ರೋತ್ಸಾಹಿಸಲು ರೈತರಿಗೆ ಉಚಿತ ಮೇವಿನ ಬೀಜ ವಿತರಣೆ: ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸಲು ಪಶುಪಾಲನಾ ಇಲಾಖೆಯಿಂದ ರೈತಸ್ನೇಹಿ ಹೆಜ್ಜೆ

    October 3, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.