nammatumakuru

    Subscribe to Updates

    Get the latest creative news from FooBar about art, design and business.

    What's Hot

    ಶ್ರವಣೂರಿನಲ್ಲಿ 2ನೇ ವರ್ಷದ ಉಚಿತ ಕಣ್ಣಿನ ತಪಾಸಣೆ — ಶಸ್ತ್ರಚಿಕಿತ್ಸಾ ಶಿಬಿರ

    October 24, 2026

    ಬಳತ (ಬಿ) ಗ್ರಾಮ ಪಂಚಾಯತ್ನಲ್ಲಿ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ: ‘ವಿಬಿ–ಜಿ ರಾಮ್ ಜಿ’ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಕರೆ

    October 24, 2026

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ!  ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ ಇಲ್ಲಿದೆ

    October 24, 2026
    Facebook Twitter Instagram
    ಟ್ರೆಂಡಿಂಗ್
    • ಶ್ರವಣೂರಿನಲ್ಲಿ 2ನೇ ವರ್ಷದ ಉಚಿತ ಕಣ್ಣಿನ ತಪಾಸಣೆ — ಶಸ್ತ್ರಚಿಕಿತ್ಸಾ ಶಿಬಿರ
    • ಬಳತ (ಬಿ) ಗ್ರಾಮ ಪಂಚಾಯತ್ನಲ್ಲಿ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ: ‘ವಿಬಿ–ಜಿ ರಾಮ್ ಜಿ’ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಕರೆ
    • ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ!  ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ ಇಲ್ಲಿದೆ
    • ನಂದಿಧ್ವಜ ಕಂಬ ಮುರಿತದಿಂದ ಮಾವುತನ ಪತ್ನಿ ಸಾವು ತನಕ! ಈ ಬಾರಿಯ ಮೈಸೂರು ದಸರಾದಲ್ಲಿ ನಡೆದಿದ್ದೇನು?
    • ಪ್ರಧಾನಿ ಮೋದಿ ಯಾವ ಮೊಬೈಲ್ ಬಳಸುತ್ತಾರೆ? ರಹಸ್ಯ ಫೋನ್‌ ಹಿಂದಿನ ಸತ್ಯವೇನು?
    • ವಾಟ್ಸಾಪ್ ಬಳಕೆದಾರರೇ ಎಚ್ಚರ! 2027ರಿಂದ ಹೊಸ ನಿಯಮ, ಫೋನ್‌ ನಲ್ಲಿ ಸಿಮ್ ಇಲ್ಲದಿದ್ದರೆ ಆ್ಯಪ್ ಬಳಕೆಗೆ ತೊಂದರೆ
    • ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ನವೆಂಬರ್ 1ರಿಂದ ಆರಂಭ: ಕೇಂದ್ರ ಸಚಿವ ವಿ. ಸೋಮಣ್ಣ
    • ಸಿದ್ದರಾಮಯ್ಯ ಬ್ಲ್ಯಾಕ್ ಮೇಲ್ ಗೆ ಯತ್ನ, ಸ್ವಪಕ್ಷೀಯರದ್ದೇ ಕೈವಾಡ :  ಯತೀಂದ್ರ ಸಿದ್ದರಾಮಯ್ಯ ಹೇಳಿದ್ದೇನು?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬಳತ (ಬಿ) ಗ್ರಾಮ ಪಂಚಾಯತ್ನಲ್ಲಿ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ: ‘ವಿಬಿ–ಜಿ ರಾಮ್ ಜಿ’ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಕರೆ
    ಜಿಲ್ಲಾ ಸುದ್ದಿ October 24, 2026

    ಬಳತ (ಬಿ) ಗ್ರಾಮ ಪಂಚಾಯತ್ನಲ್ಲಿ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ: ‘ವಿಬಿ–ಜಿ ರಾಮ್ ಜಿ’ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಕರೆ

    By Ganesh TumkuruOctober 24, 2026No Comments2 Mins Read
    balata grama panchayat

    ಕಮಲನಗರ (ಬೀದರ್): ತಾಲೂಕಿನ ಬಳತ (ಬಿ) ಗ್ರಾಮ ಪಂಚಾಯತನಲ್ಲಿ 2026–27ನೇ ಸಾಲಿನ ಸಾಮಾಜಿಕ ಪರಿಶೋಧನೆ, ನರೇಗಾ ಯೋಜನೆ ಹಾಗೂ 15 ನೇ ಹಣಕಾಸು ಮತ್ತು ರಾಜ್ಯ ಹಣಕಾಸು ಅನುದಾನ ಆಯೋಗದ ಸಾಮಾಜಿಕ ಲೆಕ್ಕ ಪರಿಶೋಧನೆಯ ಗ್ರಾಮ ಸಭೆಯನ್ನು ನಡೆಸಲಾಯಿತು. ಗ್ರಾಮದ ಹಿರಿಯ ನಾಗರಿಕರಾದ ಶರಣು ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ಜರುಗಿತು.

    ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಾಮಾಜಿಕ ಪರಿಶೋಧನೆಯ ತಾಲೂಕು ಸಂಪನ್ಮೂಲ ವ್ಯಕ್ತಿ ಸೂರ್ಯಕಾಂತ ಎಕಲಾರ, ಗ್ರಾಮಸ್ಥರು ಉದ್ಯೋಗ ಅರಸಿ ನಗರಗಳಿಗೆ ಗುಳೆ ಹೋಗದೆ, ತಮ್ಮ ಸ್ವಗ್ರಾಮದಲ್ಲೇ ಇದ್ದು ಸಿಗುವ ಕೆಲಸಗಳನ್ನು ನಿರ್ವಹಿಸಿ ಆರ್ಥಿಕವಾಗಿ ಸಬಲರಾಗಬೇಕು. ಜಮೀನಿಗೆ ಸಂಬಂಧಿಸಿದ ಕಾಮಗಾರಿಗಳು, ಕೊಳವೆ ಬಾವಿ, ಗಿಡ ನೆಡುವುದು, ದನದ ಕೊಟ್ಟಿಗೆ ಮುಂತಾದ ವೈಯಕ್ತಿಕ ಕಾಮಗಾರಿಗಳ ಜತೆಗೆ ಸಮುದಾಯ ಕಾಮಗಾರಿಗಳಲ್ಲಿಯೂ ಕೂಲಿಕಾರರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಉದ್ಯೋಗ ಸೌಲಭ್ಯ ಪಡೆಯಲು ಅಗತ್ಯ ದಾಖಲೆಗಳನ್ನು ಗ್ರಾಮ ಪಂಚಾಯತಗೆ ಸಲ್ಲಿಸಿ ತಕ್ಷಣವೇ ಜಾಬ್ ಕಾರ್ಡ್ ಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

    ಜುಲೈ 1ರಿಂದ ಜಾರಿಗೆ ಬಂದಿರುವ ‘ವಿಕಸಿತ ಭಾರತ–ಗ್ಯಾರಂಟಿ ಫಾರ್ ರೋಜಗಾರ ಅಂಡ್ ಆಜೀವಿಕ ಮಿಷನ್–ಗ್ರಾಮೀಣ’ ಯೋಜನೆಯಡಿ ದೊರೆಯುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಯಿತು.

    ಪ್ರತಿ ಕುಟುಂಬಕ್ಕೆ ವರ್ಷಕ್ಕೆ 125 ದಿನಗಳ ಕೂಲಿ ಕೆಲಸ ನೀಡಲಾಗುತ್ತದೆ.  ಮಹಿಳೆಯರು ಮತ್ತು ಪುರುಷರಿಗೆ ಯಾವುದೇ ತಾರತಮ್ಯವಿಲ್ಲದೆ ದಿನಕ್ಕೆ ₹382 ಸಮಾನ ಕೂಲಿ ನಿಗದಿಪಡಿಸಲಾಗಿದೆ.

    ಸಭೆಯಲ್ಲಿ 2026–27ನೇ ಸಾಲಿನ ನರೇಗಾ ಹಾಗೂ ಹಣಕಾಸು ಆಯೋಗದ ಅನುದಾನಗಳ ಸಾಮಾಜಿಕ ಲೆಕ್ಕ ಪರಿಶೋಧನಾ ವರದಿಯನ್ನು ಮಂಡಿಸಲಾಯಿತು. ವರದಿಯ ಕುರಿತು ಗ್ರಾಮಸ್ಥರು ಮುಕ್ತವಾಗಿ ಚರ್ಚೆ ನಡೆಸಿದರು.

    ಕಾರ್ಯಕ್ರಮವು ನಾಡಗೀತೆಯೊಂದಿಗೆ ಆರಂಭವಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಶಿವಕುಮಾರ್ ಪಾಟೀಲ್ ಅವರು ಆಗಮಿಸಿದವರನ್ನು ಸ್ವಾಗತಿಸಿ, ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ವಂದಿಸಿದರು.

    ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ಬಿಲ್ ಕಲೆಕ್ಟರ್, ಗ್ರಾ.ಪಂ. ಸಿಬ್ಬಂದಿ, ಕೂಲಿಕಾರರು, ಗ್ರಾಮಸ್ಥರು ಹಾಗೂ ಸಾಮಾಜಿಕ ಪರಿಶೋಧನೆ ತಂಡದ ಸದಸ್ಯರಾದ ಶೇಷ ರಾವ್ ವಿಠಲ್, ಸುನಿಲ್ ವಿಠಲ್, ಸಂಗೀತ, ಪ್ರಶಾಂತ್ ಉಪಸ್ಥಿತರಿದ್ದರು.

    ವರದಿ: ಅರವಿಂದ ಮಲ್ಲೀಗೆ, ಬೀದರ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಶ್ರವಣೂರಿನಲ್ಲಿ 2ನೇ ವರ್ಷದ ಉಚಿತ ಕಣ್ಣಿನ ತಪಾಸಣೆ — ಶಸ್ತ್ರಚಿಕಿತ್ಸಾ ಶಿಬಿರ

    October 24, 2026

    ಬೈಕ್ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ನೆರವಿಗೆ ಧಾವಿಸಿದ ಶಾಸಕ ಹೆಚ್.ಟಿ. ಮಂಜು

    October 23, 2026

    ಮಾನಸಿಕ ಆರೋಗ್ಯ ಸೇವೆ ಪಡೆಯಲು ಹಿಂದೇಟು ಹಾಕಬಾರದು: ಡಾ.ನಂದಿತಾ

    October 23, 2026

    Leave A Reply Cancel Reply

    Our Picks

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ!  ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ ಇಲ್ಲಿದೆ

    October 24, 2026

    ಪ್ರಧಾನಿ ಮೋದಿ ಯಾವ ಮೊಬೈಲ್ ಬಳಸುತ್ತಾರೆ? ರಹಸ್ಯ ಫೋನ್‌ ಹಿಂದಿನ ಸತ್ಯವೇನು?

    October 24, 2026

    ವಾಟ್ಸಾಪ್ ಬಳಕೆದಾರರೇ ಎಚ್ಚರ! 2027ರಿಂದ ಹೊಸ ನಿಯಮ, ಫೋನ್‌ ನಲ್ಲಿ ಸಿಮ್ ಇಲ್ಲದಿದ್ದರೆ ಆ್ಯಪ್ ಬಳಕೆಗೆ ತೊಂದರೆ

    October 24, 2026

    ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ₹15,000 ಸಿಗುತ್ತಾ? ಕೇಂದ್ರದ ಉದ್ಯೋಗ ಯೋಜನೆಯ ಅರ್ಹತೆಗಳೇನು?

    October 21, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಶ್ರವಣೂರಿನಲ್ಲಿ 2ನೇ ವರ್ಷದ ಉಚಿತ ಕಣ್ಣಿನ ತಪಾಸಣೆ — ಶಸ್ತ್ರಚಿಕಿತ್ಸಾ ಶಿಬಿರ

    October 24, 2026

    ಶ್ರವಣೂರು: ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವತಿಯಿಂದ ಹಾಸನದ ಶ್ರೀ ಮಂಜುನಾಥ ಐ ಕೇರ್ ಸಹಯೋಗದಲ್ಲಿ ಉಚಿತ ಕಣ್ಣಿನ…

    ಬಳತ (ಬಿ) ಗ್ರಾಮ ಪಂಚಾಯತ್ನಲ್ಲಿ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ: ‘ವಿಬಿ–ಜಿ ರಾಮ್ ಜಿ’ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಕರೆ

    October 24, 2026

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ!  ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ ಇಲ್ಲಿದೆ

    October 24, 2026

    ನಂದಿಧ್ವಜ ಕಂಬ ಮುರಿತದಿಂದ ಮಾವುತನ ಪತ್ನಿ ಸಾವು ತನಕ! ಈ ಬಾರಿಯ ಮೈಸೂರು ದಸರಾದಲ್ಲಿ ನಡೆದಿದ್ದೇನು?

    October 24, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.