nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬೀದರ್: ಕಟಾವಿಗೆ ಬಂದಿದ್ದ ಕಬ್ಬು ಬೆಂಕಿಗಾಹುತಿ: ಲಕ್ಷಾಂತರ ರೂಪಾಯಿ ನಷ್ಟದಿಂದ ಆರ್ಥಿಕ ಸಂಕಷ್ಟದಲ್ಲಿ ರೈತರು

    October 27, 2026

    ಜಿಲ್ಲಾ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಕೈಗೊಳ್ಳಿ: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ

    October 27, 2026

    ಉದ್ಯಮಶೀಲತೆಯ ಹೊಸ ಮುಂಜಾವು: ಭದ್ರತೆಯಿಲ್ಲದ ಸಾಲ, ಆತ್ಮವಿಶ್ವಾಸಕ್ಕೊಂದು ಭದ್ರ ಬುನಾದಿ!

    October 27, 2026
    Facebook Twitter Instagram
    ಟ್ರೆಂಡಿಂಗ್
    • ಬೀದರ್: ಕಟಾವಿಗೆ ಬಂದಿದ್ದ ಕಬ್ಬು ಬೆಂಕಿಗಾಹುತಿ: ಲಕ್ಷಾಂತರ ರೂಪಾಯಿ ನಷ್ಟದಿಂದ ಆರ್ಥಿಕ ಸಂಕಷ್ಟದಲ್ಲಿ ರೈತರು
    • ಜಿಲ್ಲಾ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಕೈಗೊಳ್ಳಿ: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ
    • ಉದ್ಯಮಶೀಲತೆಯ ಹೊಸ ಮುಂಜಾವು: ಭದ್ರತೆಯಿಲ್ಲದ ಸಾಲ, ಆತ್ಮವಿಶ್ವಾಸಕ್ಕೊಂದು ಭದ್ರ ಬುನಾದಿ!
    • ಡಿಸಿಎಂ ಡಾ.ಜಿ. ಪರಮೇಶ್ವರ್ ಆರೋಗ್ಯದಲ್ಲಿ ಏರುಪೇರು: ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು
    • ದೀಪಾವಳಿಯಲ್ಲಿ ಸಿಹಿ ತಿನ್ನುವ ಆಸೆಯಿದೆಯೇ? ಶುಗರ್ ಫ್ರೀ ಸಿಹಿ ಸಂಪೂರ್ಣ ಸುರಕ್ಷಿತವೇ? ಮಧುಮೇಹಿಗಳು ತಿಳಿಯಬೇಕಾದ ಸಂಗತಿಗಳು
    • ತುಮಕೂರಿನಲ್ಲಿ ಭೀಕರ ರಸ್ತೆ ಅಪಘಾತ: ಉದ್ಯೋಗ ಸಂದರ್ಶನಕ್ಕೆ ಹೊರಟಿದ್ದ ಇಬ್ಬರು ಯುವತಿಯರು ದುರ್ಮರಣ!
    • ‘ನಮ್ಮತುಮಕೂರು’ ವರದಿಯ ಬೆನ್ನಲ್ಲೇ ಎಚ್ಚೆತ್ತ ಆಡಳಿತ: ಶಿರಾಗೇಟ್ ರಸ್ತೆಯಲ್ಲಿ ಕೊಳೆತ ಬೂದುಗುಂಬಳಕಾಯಿ ತೆರವು!
    • ಕೊರಟಗೆರೆ: ತುಂಡಾದ ವಿದ್ಯುತ್ ತಂತಿಗೆ 6 ಕುರಿ ಬಲಿ: ಜೀವನಾಧಾರ ಕಳೆದುಕೊಂಡ ರೈತ ಮಹಿಳೆಯಿಂದ ಕಣ್ಣೀರು, ಪರಿಹಾರಕ್ಕೆ ಆಗ್ರಹ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬೀದರ್: ಕಟಾವಿಗೆ ಬಂದಿದ್ದ ಕಬ್ಬು ಬೆಂಕಿಗಾಹುತಿ: ಲಕ್ಷಾಂತರ ರೂಪಾಯಿ ನಷ್ಟದಿಂದ ಆರ್ಥಿಕ ಸಂಕಷ್ಟದಲ್ಲಿ ರೈತರು
    ಜಿಲ್ಲಾ ಸುದ್ದಿ October 27, 2026

    ಬೀದರ್: ಕಟಾವಿಗೆ ಬಂದಿದ್ದ ಕಬ್ಬು ಬೆಂಕಿಗಾಹುತಿ: ಲಕ್ಷಾಂತರ ರೂಪಾಯಿ ನಷ್ಟದಿಂದ ಆರ್ಥಿಕ ಸಂಕಷ್ಟದಲ್ಲಿ ರೈತರು

    By Ganesh TumkuruOctober 27, 2026No Comments2 Mins Read
    bidar

    ಬೀದರ್: ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಭವಿಸುತ್ತಿರುವ ಅಗ್ನಿ ಅವಘಡಗಳಿಂದಾಗಿ ಕಟಾವಿನ ಹಂತಕ್ಕೆ ಬಂದಿದ್ದ ಕಬ್ಬಿನ ಬೆಳೆ ಸುಟ್ಟು ಕರಕಲಾಗಿದ್ದು, ಸಾಲ–ಸೋಲ ಮಾಡಿ ಬೆಳೆ ಬೆಳೆದಿದ್ದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯುತ್ ಇಲಾಖೆಯ ನಿರ್ಲಕ್ಷ್ಯ ಹಾಗೂ ಶಾರ್ಟ್ ಸರ್ಕ್ಯೂಟ್ ಅವಘಡಗಳಿಂದಾಗಿ ಸಾಲು ಸಾಲು ಅಗ್ನಿ ದುರಂತಗಳು ಸಂಭವಿಸುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

    ಭಾಲ್ಕಿ ತಾಲೂಕಿನ ಭಾತಂಬ್ರಾ ಮತ್ತು ಜೋಳದಾಪಕಾ ಗ್ರಾಮಗಳಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆ ಬೆಂಕಿಗೆ ಬಲಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಭಾತಂಬ್ರಾ ಗ್ರಾಮದ ರೈತ ಮಹೇಶ ರಾಚೋಟೆ ಅವರಿಗೆ ಸೇರಿದ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿನ ಬೆಳೆ ಸಂಪೂರ್ಣ ನಾಶವಾಗಿದೆ. ಮಳೆಯ ಅಭಾವದ ನಡುವೆಯೂ ಕಷ್ಟಪಟ್ಟು ಉತ್ತಮವಾಗಿ ಬೆಳೆಸಿದ್ದ ಕಬ್ಬು ಕಟಾವಿನ ಹಂತಕ್ಕೆ ತಲುಪಿತ್ತು. ಆದರೆ, ಭಾನುವಾರ ಕಬ್ಬಿನ ಹೊಲದ ಮೇಲೆ ಹಾದುಹೋಗಿದ್ದ ವಿದ್ಯುತ್ ತಂತಿಗಳು ಪರಸ್ಪರ ಘರ್ಷಣೆಗೊಂಡ ಪರಿಣಾಮ ಬೆಂಕಿ ಕಾಣಿಸಿಕೊಂಡು ಬೆಳೆ ಬೂದಿಯಾಗಿದೆ.

    ಇದೇ ರೀತಿ ಜೋಳದಾಪಕಾ ಗ್ರಾಮದ ರೈತ ಬಸವರಾಜ ಶಿವರಾಜ ಪಾಟೀಲ್ ಅವರಿಗೆ ಸೇರಿದ ಸುಮಾರು ಎರಡೂವರೆ ಎಕರೆ ಕಬ್ಬಿನ ಬೆಳೆಗೆ ಬೆಂಕಿ ತಗುಲಿದೆ. ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಂಕಿ ನಂದಿಸುವಷ್ಟರಲ್ಲಿಯೇ ಎರಡು ಎಕರೆಗೂ ಅಧಿಕ ಪ್ರದೇಶದಲ್ಲಿದ್ದ ಕಬ್ಬು ಸುಟ್ಟು ಭಸ್ಮವಾಗಿದೆ.

    ಮತ್ತೊಂದೆಡೆ, ಕಮಲನಗರ ತಾಲೂಕಿನ ಹಾಲಹಳ್ಳಿ ಗ್ರಾಮದಲ್ಲಿಯೂ ಇಂತಹದೇ ಘಟನೆ ಸಂಭವಿಸಿದೆ. ಹಾಲಹಳ್ಳಿ ಗ್ರಾಮದ ರೈತ ಬಾಪುರಾವ ಪಾಟೀಲ್ ಎಂಬುವವರು ಒಂದೇ ಕಡೆ ಐದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬಿನಲ್ಲಿ ಸುಮಾರು ಮೂರು ಎಕರೆ ಬೆಳೆ ಸೋಮವಾರ ಮಧ್ಯಾಹ್ನ ಐಪಿ ಸೆಟ್ ಟಿಸಿಯಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಭಸ್ಮವಾಗಿದೆ. ಇದರಿಂದ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.

    ಕಷ್ಟಪಟ್ಟು ಬೆಳೆಸಿದ ಬೆಳೆ ಕಣ್ಣೆದುರಲ್ಲೇ ನಶಿಸಿ ಹೋಗಿರುವುದರಿಂದ ರೈತರು ತೀವ್ರ ಆಕ್ರೋಶ ಮತ್ತು ಸಂಕಷ್ಟ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಕಂದಾಯ ಹಾಗೂ ವಿದ್ಯುತ್ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು, ನಷ್ಟದ ಮೌಲ್ಯಮಾಪನ ಮಾಡಿ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ಸ್ಥಳೀಯ ರೈತರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

    ವರದಿ: ಅರವಿಂದ ಮಲ್ಲಿಗೆ, ಬೀದರ್


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಶ್ರವಣೂರಿನಲ್ಲಿ 2ನೇ ವರ್ಷದ ಉಚಿತ ಕಣ್ಣಿನ ತಪಾಸಣೆ — ಶಸ್ತ್ರಚಿಕಿತ್ಸಾ ಶಿಬಿರ

    October 24, 2026

    ಬಳತ (ಬಿ) ಗ್ರಾಮ ಪಂಚಾಯತ್ನಲ್ಲಿ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ: ‘ವಿಬಿ–ಜಿ ರಾಮ್ ಜಿ’ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಕರೆ

    October 24, 2026

    ಬೈಕ್ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ನೆರವಿಗೆ ಧಾವಿಸಿದ ಶಾಸಕ ಹೆಚ್.ಟಿ. ಮಂಜು

    October 23, 2026

    Leave A Reply Cancel Reply

    Our Picks

    ಕ್ರೆಡಿಟ್ ಕಾರ್ಡ್ ಹೊಂದಿರುವ ಪತಿ ಮೃತಪಟ್ಟರೆ ಸಾಲವನ್ನು ಪತ್ನಿ ತೀರಿಸಬೇಕಾ? ಬ್ಯಾಂಕಿಂಗ್ ನಿಯಮಗಳೇನು?

    October 26, 2026

    PM Kisan ಹಣ ಯಾವಾಗ ಬರುತ್ತೆ? ರೈತರು ಈ ಕೆಲಸಗಳನ್ನು ಮಾಡದಿದ್ದರೆ ಕಂತು ಸ್ಥಗಿತವಾಗಬಹುದು!

    October 26, 2026

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ!  ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ ಇಲ್ಲಿದೆ

    October 24, 2026

    ಪ್ರಧಾನಿ ಮೋದಿ ಯಾವ ಮೊಬೈಲ್ ಬಳಸುತ್ತಾರೆ? ರಹಸ್ಯ ಫೋನ್‌ ಹಿಂದಿನ ಸತ್ಯವೇನು?

    October 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಬೀದರ್: ಕಟಾವಿಗೆ ಬಂದಿದ್ದ ಕಬ್ಬು ಬೆಂಕಿಗಾಹುತಿ: ಲಕ್ಷಾಂತರ ರೂಪಾಯಿ ನಷ್ಟದಿಂದ ಆರ್ಥಿಕ ಸಂಕಷ್ಟದಲ್ಲಿ ರೈತರು

    October 27, 2026

    ಬೀದರ್: ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಭವಿಸುತ್ತಿರುವ ಅಗ್ನಿ ಅವಘಡಗಳಿಂದಾಗಿ ಕಟಾವಿನ ಹಂತಕ್ಕೆ ಬಂದಿದ್ದ ಕಬ್ಬಿನ ಬೆಳೆ ಸುಟ್ಟು ಕರಕಲಾಗಿದ್ದು, ಸಾಲ–ಸೋಲ…

    ಜಿಲ್ಲಾ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಕೈಗೊಳ್ಳಿ: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ

    October 27, 2026

    ಉದ್ಯಮಶೀಲತೆಯ ಹೊಸ ಮುಂಜಾವು: ಭದ್ರತೆಯಿಲ್ಲದ ಸಾಲ, ಆತ್ಮವಿಶ್ವಾಸಕ್ಕೊಂದು ಭದ್ರ ಬುನಾದಿ!

    October 27, 2026

    ಡಿಸಿಎಂ ಡಾ.ಜಿ. ಪರಮೇಶ್ವರ್ ಆರೋಗ್ಯದಲ್ಲಿ ಏರುಪೇರು: ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು

    October 27, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.