nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಭಾರಿ ಇಳಿಕೆ: ಕ್ಯಾನ್ಸರ್ ರೋಗಿಗಳಿಗೆ ಬಿಗ್ ರಿಲೀಫ್

    October 29, 2026

    ಗೃಹಿಣಿಯರೇ, ವಿದ್ಯಾರ್ಥಿಗಳೇ ಎಚ್ಚರ! ವರ್ಕ್ ಫ್ರಮ್ ಹೋಮ್ ಹೆಸರಿನಲ್ಲಿ ಆನ್ ಲೈನ್ ವಂಚಕರ ಜಾಲ!

    October 29, 2026

    ರೈಲಿನಲ್ಲಿ ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ಮೊಬೈಲ್ ಚಾರ್ಜಿಂಗ್ ಬಂದ್? ಪ್ರಯಾಣಿಕರು ತಿಳಿಯಬೇಕಾದ ಮಾಹಿತಿ

    October 29, 2026
    Facebook Twitter Instagram
    ಟ್ರೆಂಡಿಂಗ್
    • ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಭಾರಿ ಇಳಿಕೆ: ಕ್ಯಾನ್ಸರ್ ರೋಗಿಗಳಿಗೆ ಬಿಗ್ ರಿಲೀಫ್
    • ಗೃಹಿಣಿಯರೇ, ವಿದ್ಯಾರ್ಥಿಗಳೇ ಎಚ್ಚರ! ವರ್ಕ್ ಫ್ರಮ್ ಹೋಮ್ ಹೆಸರಿನಲ್ಲಿ ಆನ್ ಲೈನ್ ವಂಚಕರ ಜಾಲ!
    • ರೈಲಿನಲ್ಲಿ ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ಮೊಬೈಲ್ ಚಾರ್ಜಿಂಗ್ ಬಂದ್? ಪ್ರಯಾಣಿಕರು ತಿಳಿಯಬೇಕಾದ ಮಾಹಿತಿ
    • ಕಿಡ್ನಿ ರೋಗಿಗಳಿಗೆ ಮನೆಬಾಗಿಲಲ್ಲೇ ಡಯಾಲಿಸಿಸ್ ಸೇವೆ? ಕಿಡ್ನಿ ರೋಗಿಗಳಿಗೆ ಗುಡ್‌ ನ್ಯೂಸ್
    • ಹೊಸಕೋಟೆ, ತುಮಕೂರಿಗೂ ಮೆಟ್ರೋ ಸಂಪರ್ಕ: ಬೆಂಗಳೂರಿನ ಸುತ್ತಮುತ್ತ ಭೂಮಿಗೆ ಹೆಚ್ಚುತ್ತಾ ಬೇಡಿಕೆ?
    • ಕೃಷಿ ಹೊಂಡಕ್ಕೆ ಬಿದ್ದು ದಂಪತಿ ಸಾವು: ಪತ್ನಿಯನ್ನು ರಕ್ಷಿಸಲು ಹೋದ ಪತಿಯೂ ಸಾವು!
    • ವಿಧಾನಪರಿಷತ್ ಚುನಾವಣೆ ಸೋಲಿಗೆ ನಮ್ಮವರೇ ಕಾರಣ: ಕೆ.ಎನ್. ರಾಜಣ್ಣ ಆಕ್ರೋಶ
    • ಉಪವಿಭಾಗ ಕಚೇರಿ ಸಮೀಪ ಹೊಸ ಬಾರ್‌ ಗೆ ಅನುಮತಿ ನೀಡಲು ಸಿದ್ಧತೆ?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕಿಡ್ನಿ ರೋಗಿಗಳಿಗೆ ಮನೆಬಾಗಿಲಲ್ಲೇ ಡಯಾಲಿಸಿಸ್ ಸೇವೆ? ಕಿಡ್ನಿ ರೋಗಿಗಳಿಗೆ ಗುಡ್‌ ನ್ಯೂಸ್
    ಆರೋಗ್ಯ October 29, 2026

    ಕಿಡ್ನಿ ರೋಗಿಗಳಿಗೆ ಮನೆಬಾಗಿಲಲ್ಲೇ ಡಯಾಲಿಸಿಸ್ ಸೇವೆ? ಕಿಡ್ನಿ ರೋಗಿಗಳಿಗೆ ಗುಡ್‌ ನ್ಯೂಸ್

    By Ganesh TumkuruOctober 29, 2026No Comments1 Min Read
    kidney

    ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಗುಣಮಟ್ಟದ ಡಯಾಲಿಸಿಸ್ ಸೇವೆ ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮಹತ್ವದ ಯೋಜನೆ ರೂಪಿಸುತ್ತಿದೆ. ರೋಗಿಗಳಿಗೆ ಮನೆಬಾಗಿಲಲ್ಲೇ ಡಯಾಲಿಸಿಸ್ ಸೇವೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಸೇವೆಗಳ ನಿರ್ವಹಣೆ ಮತ್ತು ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಆರೋಗ್ಯ ಸೇವೆಗಳ ಲಭ್ಯತೆಯನ್ನು ಹೆಚ್ಚಿಸಿ, ರೋಗಿಗಳಿಗೆ ಉತ್ತಮ ಚಿಕಿತ್ಸೆ ಒದಗಿಸುವುದು ಸರ್ಕಾರದ ಗುರಿಯಾಗಿದೆ.

    ರಾಜ್ಯದಲ್ಲಿ 750 ನೂತನ ಆ್ಯಂಬುಲೆನ್ಸ್‌ಗಳನ್ನು ಲೋಕಾರ್ಪಣೆ ಮಾಡಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ. ಈ ಕುರಿತು ಆರೋಗ್ಯ ಸಚಿವ ಯು.ಟಿ. ಖಾದರ್ ಮಾಹಿತಿ ನೀಡಿದ್ದು, ಗ್ರಾಮೀಣ ಪ್ರದೇಶಗಳಿಗೆ ಕೇವಲ 20 ನಿಮಿಷಗಳಲ್ಲಿ ಆ್ಯಂಬುಲೆನ್ಸ್ ತಲುಪುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ. ನಿಗದಿತ ಸಮಯದಲ್ಲಿ ಆ್ಯಂಬುಲೆನ್ಸ್ ತಲುಪದಿದ್ದರೆ 3,000 ರೂ. ದಂಡ ವಿಧಿಸುವ ಯೋಜನೆಯೂ ಇದೆ ಎಂದು ಅವರು ಹೇಳಿದ್ದಾರೆ.

    ಇದಲ್ಲದೆ, ಪ್ರತಿ ತಾಲೂಕು ಆಸ್ಪತ್ರೆಯಲ್ಲೂ ಐದು ಐಸಿಯು ಹಾಸಿಗೆಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಹೊಸ ಆಸ್ಪತ್ರೆಗಳನ್ನು ಹೆಚ್ಚಿಸುವುದಕ್ಕಿಂತ ಈಗಿರುವ ಆಸ್ಪತ್ರೆಗಳಲ್ಲೇ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವುದಕ್ಕೆ ಸರ್ಕಾರ ಆದ್ಯತೆ ನೀಡಲಿದೆ ಎಂದು ಸಚಿವರು ತಿಳಿಸಿದ್ದಾರೆ.

    ಮಹಿಳೆಯರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ರಾಜ್ಯದಲ್ಲಿ ಮಹಿಳಾ ಆರೋಗ್ಯ ನೀತಿಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಯು.ಟಿ. ಖಾದರ್ ಹೇಳಿದ್ದಾರೆ. ಮಹಿಳೆಯರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    ಕ್ಯಾನ್ಸರ್ ಔಷಧಿಗಳನ್ನು ಕಡಿಮೆ ದರದಲ್ಲಿ ಲಭ್ಯವಾಗುವಂತೆ ಮಾಡುವಲ್ಲಿ ಮಾಧ್ಯಮಗಳ ಸಹಕಾರ ಮಹತ್ವದ್ದಾಗಿದೆ ಎಂದು ತಿಳಿಸಿದ ಸಚಿವರು, ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಔಷಧಿಗಳು ದೊರೆಯುವಂತೆ ಕೇಂದ್ರ ಸರ್ಕಾರವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಹೆಚ್ಚಿನ ಬೆಲೆಯ ಔಷಧಿಗಳ ದರ ನಿಯಂತ್ರಣಕ್ಕೆ ಕೇಂದ್ರ ಆರೋಗ್ಯ ಇಲಾಖೆ ಗಮನಹರಿಸಬೇಕು. ಪ್ರತಿಯೊಂದು ವಿಚಾರದಲ್ಲೂ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸುವ ಪರಿಸ್ಥಿತಿ ಏಕೆ ಎದುರಾಗಬೇಕು ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ದೀಪಾವಳಿಯಲ್ಲಿ ಸಿಹಿ ತಿನ್ನುವ ಆಸೆಯಿದೆಯೇ? ಶುಗರ್ ಫ್ರೀ ಸಿಹಿ ಸಂಪೂರ್ಣ ಸುರಕ್ಷಿತವೇ? ಮಧುಮೇಹಿಗಳು ತಿಳಿಯಬೇಕಾದ ಸಂಗತಿಗಳು

    October 27, 2026

    ಬೆಳಗ್ಗೆ ಎದ್ದ ತಕ್ಷಣ ಸೀನುವ ಅಭ್ಯಾಸವಿದೆಯೇ? ನಿರ್ಲಕ್ಷ್ಯ ಮಾಡಬೇಡಿ, ಇದು ಈ ಲಕ್ಷಣವಾಗಿರಬಹುದು!

    October 20, 2026

    ಕಿಡ್ನಿ ಸ್ಟೋನ್ಸ್ ತಡೆಯಲು ಎಷ್ಟು ನೀರು ಕುಡಿಯಬೇಕು? ಯಾವ ಆಹಾರಗಳನ್ನು ಸೇವಿಸಬೇಕು?

    October 17, 2026

    Leave A Reply Cancel Reply

    Our Picks

    ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಭಾರಿ ಇಳಿಕೆ: ಕ್ಯಾನ್ಸರ್ ರೋಗಿಗಳಿಗೆ ಬಿಗ್ ರಿಲೀಫ್

    October 29, 2026

    ಭಾರತೀಯ ಷೇರು ಮಾರುಕಟ್ಟೆಗೆ ಭಾರೀ ಹೊಡೆತ: ₹30 ಲಕ್ಷ ಕೋಟಿ ಸಂಪತ್ತು ಕರಗಲು 10 ಕಾರಣಗಳೇನು?

    October 28, 2026

    ಕ್ರೆಡಿಟ್ ಕಾರ್ಡ್ ಹೊಂದಿರುವ ಪತಿ ಮೃತಪಟ್ಟರೆ ಸಾಲವನ್ನು ಪತ್ನಿ ತೀರಿಸಬೇಕಾ? ಬ್ಯಾಂಕಿಂಗ್ ನಿಯಮಗಳೇನು?

    October 26, 2026

    PM Kisan ಹಣ ಯಾವಾಗ ಬರುತ್ತೆ? ರೈತರು ಈ ಕೆಲಸಗಳನ್ನು ಮಾಡದಿದ್ದರೆ ಕಂತು ಸ್ಥಗಿತವಾಗಬಹುದು!

    October 26, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಭಾರಿ ಇಳಿಕೆ: ಕ್ಯಾನ್ಸರ್ ರೋಗಿಗಳಿಗೆ ಬಿಗ್ ರಿಲೀಫ್

    October 29, 2026

    ಕ್ಯಾನ್ಸರ್ ಚಿಕಿತ್ಸೆಯ ವೆಚ್ಚದಿಂದ ಕಂಗಾಲಾಗಿರುವ ರೋಗಿಗಳಿಗೆ ತುಸು ನೆಮ್ಮದಿ ನೀಡುವ ಬೆಳವಣಿಗೆ ನಡೆದಿದೆ. ಭಾರತೀಯ ಔಷಧ ಬೆಲೆ ನಿಯಂತ್ರಣ ಸಂಸ್ಥೆ…

    ಗೃಹಿಣಿಯರೇ, ವಿದ್ಯಾರ್ಥಿಗಳೇ ಎಚ್ಚರ! ವರ್ಕ್ ಫ್ರಮ್ ಹೋಮ್ ಹೆಸರಿನಲ್ಲಿ ಆನ್ ಲೈನ್ ವಂಚಕರ ಜಾಲ!

    October 29, 2026

    ರೈಲಿನಲ್ಲಿ ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ಮೊಬೈಲ್ ಚಾರ್ಜಿಂಗ್ ಬಂದ್? ಪ್ರಯಾಣಿಕರು ತಿಳಿಯಬೇಕಾದ ಮಾಹಿತಿ

    October 29, 2026

    ಕಿಡ್ನಿ ರೋಗಿಗಳಿಗೆ ಮನೆಬಾಗಿಲಲ್ಲೇ ಡಯಾಲಿಸಿಸ್ ಸೇವೆ? ಕಿಡ್ನಿ ರೋಗಿಗಳಿಗೆ ಗುಡ್‌ ನ್ಯೂಸ್

    October 29, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.