nammatumakuru

    Subscribe to Updates

    Get the latest creative news from FooBar about art, design and business.

    What's Hot

    ಶಿವಕುಮಾರ ಸ್ವಾಮೀಜಿ ವೃತ್ತದ ಹೆಸರು ಬದಲಾವಣೆಯಾಗಲ್ಲ; ಬಸ್ ದರ ಏರಿಕೆ ಅನಿವಾರ್ಯ: ಡಾ. ಜಿ. ಪರಮೇಶ್ವರ್

    November 7, 2026

    ಜನ ಸಾಮಾನ್ಯರ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ: ಶಾಸಕ ಡಾ.ಎಚ್.ಡಿ.ರಂಗನಾಥ್

    November 7, 2026

    ನಾವು ಹಳ್ಳಿಗುಗ್ಗುಗಳೇ ಏನಿವಾಗ? :  ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಜೆಡಿಎಸ್ ಕಾರ್ಯಕರ್ತರ ಪ್ರಶ್ನೆ

    November 7, 2026
    Facebook Twitter Instagram
    ಟ್ರೆಂಡಿಂಗ್
    • ಶಿವಕುಮಾರ ಸ್ವಾಮೀಜಿ ವೃತ್ತದ ಹೆಸರು ಬದಲಾವಣೆಯಾಗಲ್ಲ; ಬಸ್ ದರ ಏರಿಕೆ ಅನಿವಾರ್ಯ: ಡಾ. ಜಿ. ಪರಮೇಶ್ವರ್
    • ಜನ ಸಾಮಾನ್ಯರ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ: ಶಾಸಕ ಡಾ.ಎಚ್.ಡಿ.ರಂಗನಾಥ್
    • ನಾವು ಹಳ್ಳಿಗುಗ್ಗುಗಳೇ ಏನಿವಾಗ? :  ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಜೆಡಿಎಸ್ ಕಾರ್ಯಕರ್ತರ ಪ್ರಶ್ನೆ
    • ಡಿ. 2026ರೊಳಗೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸುವ ಗುರಿ: ವಿ. ಸೋಮಣ್ಣ
    • ನರಕ ಚತುರ್ದಶಿಯ ಅಭ್ಯಂಗ ಸ್ನಾನಕ್ಕೆ ಯಾವ ಎಣ್ಣೆ ಬಳಸಬೇಕು? ಎಣ್ಣೆ ಆಯ್ಕೆ ಮಾಡುವ ಮುನ್ನ ಈ ವಿಷಯಗಳನ್ನು ಗಮನಿಸಿ
    • ಶಾಲೆ ಬಳಿ ರಸ್ತೆ ಉಬ್ಬು ತೆರವು: ಮಕ್ಕಳ ಸುರಕ್ಷತೆಗೆ ಆತಂಕ,  ಮರು ಅಳವಡಿಸದಿದ್ದರೆ ರಸ್ತೆ ತಡೆದು ಪ್ರತಿಭಟನೆ ನಡೆಸುವ ಎಚ್ಚರಿಕೆ
    • ಹೊಲದಲ್ಲಿ ಬೆಳೆದಿದ್ದ ₹9.5 ಲಕ್ಷ ಮೌಲ್ಯದ ಗಾಂಜಾ ಗಿಡ ಜಪ್ತಿ: ಇಬ್ಬರು ಆರೋಪಿಗಳ ಬಂಧನ
    • ಬೀದರ್: ಬಸ್ ಹಾಗೂ ಹಾಲಿನ ದರ ಏರಿಕೆ ಖಂಡಿಸಿ ಬಿಜೆಪಿ ತೀವ್ರ ಪ್ರತಿಭಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಶಿವಕುಮಾರ ಸ್ವಾಮೀಜಿ ವೃತ್ತದ ಹೆಸರು ಬದಲಾವಣೆಯಾಗಲ್ಲ; ಬಸ್ ದರ ಏರಿಕೆ ಅನಿವಾರ್ಯ: ಡಾ. ಜಿ. ಪರಮೇಶ್ವರ್
    ರಾಜ್ಯ ಸುದ್ದಿ November 7, 2026

    ಶಿವಕುಮಾರ ಸ್ವಾಮೀಜಿ ವೃತ್ತದ ಹೆಸರು ಬದಲಾವಣೆಯಾಗಲ್ಲ; ಬಸ್ ದರ ಏರಿಕೆ ಅನಿವಾರ್ಯ: ಡಾ. ಜಿ. ಪರಮೇಶ್ವರ್

    By Ganesh TumkuruNovember 7, 2026No Comments2 Mins Read
    dr g parameshwar

    ತುಮಕೂರು: ಸಿದ್ಧಗಂಗಾ ಮಠದೊಂದಿಗೆ ತಮ್ಮ ಕುಟುಂಬಕ್ಕೆ ಹಲವು ದಶಕಗಳ ನಿಕಟ ಹಾಗೂ ಧಾರ್ಮಿಕ ಬಾಂಧವ್ಯವಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ತಿಳಿಸಿದ್ದಾರೆ. ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಶ್ರೀ ಸಿದ್ಧಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಠದ ಪರಂಪರೆ ಮತ್ತು ರಾಜ್ಯದ ಪ್ರಸ್ತುತ ಪ್ರಮುಖ ವಿಷಯಗಳ ಕುರಿತು ಸ್ಪಷ್ಟನೆ ನೀಡಿದರು.

    “ನಮ್ಮ ಕುಟುಂಬ ಮೊದಲಿನಿಂದಲೂ ಮಠದ ಭಕ್ತರಾಗಿ ನಡೆದುಕೊಳ್ಳುತ್ತಾ ಬಂದಿದೆ. ತಂದೆಯವರು ಮತ್ತು ಅಣ್ಣ ಕೂಡ ಮಠಕ್ಕೆ ಬರುತ್ತಿದ್ದರು. ಶ್ರೀಗಳೂ ಹಾಗೂ ನಮ್ಮ ತಂದೆಯವರ ಮೂಲ ಮಾಗಡಿ ತಾಲ್ಲೂಕಿನವರಾಗಿರುವುದರಿಂದ ಉತ್ತಮ ನಂಟಿದೆ. ಮನಸ್ಸಿಗೆ ಅನಿಸಿದಾಗಲೆಲ್ಲಾ ಮಠಕ್ಕೆ ಬಂದು ಸ್ವಾಮೀಜಿಗಳ ಆಶೀರ್ವಾದ ಪಡೆಯುತ್ತೇವೆ”

    — ಡಾ.ಜಿ.ಪರಮೇಶ್ವರ್, ಡಿಸಿಎಂ

     

    ಶಿವಕುಮಾರ ಸ್ವಾಮೀಜಿ ವೃತ್ತದ ಹೆಸರು ಬದಲಾವಣೆ ಇಲ್ಲ

    ತುಮಕೂರಿನ ಶಿವಕುಮಾರ ಸ್ವಾಮೀಜಿ ವೃತ್ತದ ಹೆಸರು ಬದಲಾವಣೆಯಾಗುತ್ತದೆ ಎಂಬ ವದಂತಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಡಾ. ಪರಮೇಶ್ವರ್, “ವೃತ್ತದ ಹೆಸರನ್ನು ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ. ಭಕ್ತರು ಯಾವುದೇ ಆತಂಕ ಪಡಬೇಕಿಲ್ಲ. ಆಧುನಿಕ ತಂತ್ರಜ್ಞಾನವನ್ನು ನಮ್ಮ ಜನರಿಗೆ ಮತ್ತು ಯುವಜನತೆಗೆ ಪರಿಚಯಿಸುವ ಉದ್ದೇಶದಿಂದ ಬೆಂಗಳೂರಿನ ಮಾದರಿಯಲ್ಲಿ ಇಲ್ಲೂ ಎಲ್ಇಡಿ ಪರದೆ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಸದ್ಯ ತಾಂತ್ರಿಕ ಪರೀಕ್ಷೆಗಳು ನಡೆಯುತ್ತಿದ್ದು, ತೊಂದರೆಗಳನ್ನು ಸರಿಪಡಿಸಿದ ಬಳಿಕ ಉದ್ಘಾಟಿಸಲಾಗುವುದು” ಎಂದರು.

    ಈ ಎಲ್ ಇಡಿ ಪರದೆಯನ್ನು ಸರ್ಕಾರದ ಕಾರ್ಯಕ್ರಮಗಳ ಪ್ರಚಾರ, ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳ ಜಾಹೀರಾತುಗಳಿಗೆ ನಿಗದಿತ ಶುಲ್ಕದ ಆಧಾರದಲ್ಲಿ ಬಳಸಿಕೊಳ್ಳಲಾಗುವುದು. ಇದರಲ್ಲಿ ಯಾವುದೇ ರಾಜಕೀಯ ಅಥವಾ ಧಾರ್ಮಿಕ ಉದ್ದೇಶವಿಲ್ಲ. ಹೆಸರು ಬದಲಾಯಿಸಲು ಸ್ಥಳೀಯ ಮಹಾನಗರ ಪಾಲಿಕೆಯ ಪ್ರಸ್ತಾವನೆ, ಸಚಿವ ಸಂಪುಟದ ನಿರ್ಧಾರ ಮತ್ತು ಸರ್ಕಾರದ ಆದೇಶದಂತಹ ಕಾನೂನುಬದ್ಧ ಪ್ರಕ್ರಿಯೆಗಳು ಬೇಕಾಗುತ್ತವೆ. ಅಂತಹ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

    ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ₹22,000 ಕೋಟಿ ಮನವಿ

    ರಾಜ್ಯದಲ್ಲಿ ಬರದಿಂದ ಸುಮಾರು ₹62,000 ಕೋಟಿ ನಷ್ಟವಾಗಿದೆ. ಎನ್ಡಿಆರ್ಎಫ್ (NDRF) ಮಾರ್ಗಸೂಚಿಗಳ ಪ್ರಕಾರ ₹22,000 ಕೋಟಿ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮೂರು ಬಾರಿ ಮೆಮೊರಾಂಡಮ್ ಸಲ್ಲಿಸಲಾಗಿದೆ. ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಗೃಹ ಮತ್ತು ಕೃಷಿ ಸಚಿವರನ್ನು ಭೇಟಿ ಮಾಡಲು ಸಮಯಾವಕಾಶ ಕೋರಿ ಪತ್ರ ಬರೆಯಲಾಗಿದೆ. ಮುಖ್ಯಮಂತ್ರಿಗಳು ಮತ್ತು ಸಚಿವರನ್ನೊಳಗೊಂಡ ಸರ್ವಪಕ್ಷ ನಿಯೋಗ ದೆಹಲಿಗೆ ತೆರಳಲು ಸಿದ್ಧವಾಗಿದೆ. ವಿರೋಧ ಪಕ್ಷದವರು ಬಾರದಿದ್ದರೂ, ರಾಜ್ಯ ಸರ್ಕಾರದ ಜವಾಬ್ದಾರಿಯಾಗಿ ನಾವು ಕೇಂದ್ರದ ಮುಂದೆ ಮನವಿ ಸಲ್ಲಿಸಲಿದ್ದೇವೆ ಎಂದರು.

    ಸಾರಿಗೆ ಸಂಸ್ಥೆಗಳ ಉಳಿವಿಗೆ ಬಸ್ ಪ್ರಯಾಣ ದರ ಏರಿಕೆ

    ಬಸ್ ಪ್ರಯಾಣ ದರ ಏರಿಕೆಯನ್ನು ಸಮರ್ಥಿಸಿಕೊಂಡ ಅವರು, “ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಸಂಸ್ಥೆಗಳು ನಷ್ಟದಲ್ಲಿವೆ. ಹೊಸ ಬಸ್ ಗಳ ಖರೀದಿ ಹಾಗೂ ಸಿಬ್ಬಂದಿ ಭತ್ಯೆಗಳನ್ನು ನಿರ್ವಹಿಸಬೇಕಾದ ಹೊಣೆ ಸರ್ಕಾರದ ಮೇಲಿದೆ. ಕೇಂದ್ರ ಸರ್ಕಾರ 14 ಬಾರಿ ಪೆಟ್ರೋಲ್–ಡೀಸೆಲ್ ಬೆಲೆ ಏರಿಕೆ ಮಾಡಿದಾಗ ವಿರೋಧ ಪಕ್ಷದವರು ಮಾತನಾಡಲಿಲ್ಲ. ಇಂಧನ ಬೆಲೆ ಇಳಿಕೆಯಾದರೆ ಸಾರಿಗೆ ಸಂಸ್ಥೆ ಮೇಲಿನ ಹೊರೆ ಕಡಿಮೆಯಾಗಿ ನಾವು ಕೂಡ ದರ ಕಡಿಮೆ ಮಾಡಬಹುದು” ಎಂದು ತಿಳಿಸಿದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಚೆಸ್‌ ನಲ್ಲಿ ಹಳ್ಳಿ ಪ್ರತಿಭೆ ರಾಷ್ಟ್ರಮಟ್ಟಕ್ಕೆ ಆಯ್ಕೆ |   ರಾಜ್ಯ ಮಟ್ಟದ ಚಾಂಪಿಯನ್‌ ಶಿಪ್‌ ನಲ್ಲಿ ಯದುನಂದನ್ ಜಿ.ಎನ್. ಸಾಧನೆ

    November 6, 2026

    ದೀಪಾವಳಿಯಲ್ಲಿ ಪಟಾಕಿ ಸಿಡಿಸುವಾಗ ಎಚ್ಚರ! ಈ ಮುನ್ನೆಚ್ಚರಿಕೆಗಳನ್ನು ಮರೆಯದಿರಿ

    November 6, 2026

    ನವೆಂಬರ್ ಸಂಬಳದಲ್ಲಿ ಸರ್ಕಾರಿ ನೌಕರರಿಗೆ ಡಬಲ್ ಖುಷಿ; ತುಟ್ಟಿಭತ್ಯೆ ಹೆಚ್ಚಳದ ಆದೇಶ ಪ್ರಕಟ

    November 6, 2026

    Leave A Reply Cancel Reply

    Our Picks

     ವಿಶ್ವವಿಖ್ಯಾತ ತಾಜ್ ಮಹಲ್‌ ಗೆ ರಾತ್ರಿ ಲೈಟಿಂಗ್ ವ್ಯವಸ್ಥೆ ಏಕಿಲ್ಲ? ಇದರ ಹಿಂದಿದೆ ಅಚ್ಚರಿಯ ಕಾರಣ!

    November 6, 2026

    ವೈವಿಧ್ಯತೆಯಲ್ಲಿ ಏಕತೆ ಸಾರುವ ದಿನವಿದು; ಅಕ್ಟೋಬರ್ 31ರಂದು ಏಕೆ ರಾಷ್ಟ್ರೀಯ ಏಕತಾ ದಿನ ಆಚರಿಸುತ್ತಾರೆ?

    October 31, 2026

    ವಂಚನೆಗೆ ಹಣ ಕಳೆದುಕೊಂಡವರಿಗೆ ಬ್ಯಾಂಕ್‌ ಗಳೇ ಪರಿಹಾರ ನೀಡಬೇಕಾ? ಸುಪ್ರೀಂ ಕೋರ್ಟ್ ಮಹತ್ವದ ಪ್ರಸ್ತಾಪ ಇಲ್ಲಿದೆ

    October 31, 2026

    ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಭಾರಿ ಇಳಿಕೆ: ಕ್ಯಾನ್ಸರ್ ರೋಗಿಗಳಿಗೆ ಬಿಗ್ ರಿಲೀಫ್

    October 29, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಶಿವಕುಮಾರ ಸ್ವಾಮೀಜಿ ವೃತ್ತದ ಹೆಸರು ಬದಲಾವಣೆಯಾಗಲ್ಲ; ಬಸ್ ದರ ಏರಿಕೆ ಅನಿವಾರ್ಯ: ಡಾ. ಜಿ. ಪರಮೇಶ್ವರ್

    November 7, 2026

    ತುಮಕೂರು: ಸಿದ್ಧಗಂಗಾ ಮಠದೊಂದಿಗೆ ತಮ್ಮ ಕುಟುಂಬಕ್ಕೆ ಹಲವು ದಶಕಗಳ ನಿಕಟ ಹಾಗೂ ಧಾರ್ಮಿಕ ಬಾಂಧವ್ಯವಿದೆ ಎಂದು ಉಪ ಮುಖ್ಯಮಂತ್ರಿ ಡಾ.…

    ಜನ ಸಾಮಾನ್ಯರ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ: ಶಾಸಕ ಡಾ.ಎಚ್.ಡಿ.ರಂಗನಾಥ್

    November 7, 2026

    ನಾವು ಹಳ್ಳಿಗುಗ್ಗುಗಳೇ ಏನಿವಾಗ? :  ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಜೆಡಿಎಸ್ ಕಾರ್ಯಕರ್ತರ ಪ್ರಶ್ನೆ

    November 7, 2026

    ಡಿ. 2026ರೊಳಗೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸುವ ಗುರಿ: ವಿ. ಸೋಮಣ್ಣ

    November 7, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.