ದೀಪಾವಳಿ ಹಬ್ಬದ ಸಂಭ್ರಮಕ್ಕೂ ಮುನ್ನ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆ ಘೋಷಿಸಿದೆ. ಈ ಆಫರ್ ಮೂಲಕ ಕೇವಲ 10 ತಿಂಗಳ ಹಣ ಪಾವತಿಸಿ ಬರೋಬ್ಬರಿ 15 ತಿಂಗಳ ಕಾಲ ಜಿಯೋ ಹೋಮ್ ಸೇವೆ ಪಡೆಯಬಹುದು. ಅಂದರೆ, ಹೆಚ್ಚುವರಿಯಾಗಿ 5 ತಿಂಗಳ ಸೇವೆ ಸಂಪೂರ್ಣ ಉಚಿತವಾಗಿ ದೊರೆಯಲಿದೆ. ಇದರೊಂದಿಗೆ ಲೈವ್ ಟಿವಿ ಚಾನೆಲ್ಗಳು, ಅನಿಯಮಿತ ಹೈ–ಸ್ಪೀಡ್ ವೈ–ಫೈ ಹಾಗೂ ಹಲವು ಜನಪ್ರಿಯ ಒಟಿಟಿ (OTT) ವೇದಿಕೆಗಳ ಸೌಲಭ್ಯವೂ ಲಭ್ಯವಾಗಲಿದೆ.
ಜಿಯೋದ ಈ ವಿಶೇಷ ಕೊಡುಗೆ ‘ಜಿಯೋ ಹೋಮ್’ (JioHome) ಸೇವೆಯ ಅಡಿಯಲ್ಲಿ ಲಭ್ಯವಿದ್ದು, ಜಿಯೋ ಫೈಬರ್ (JioFiber) ಮತ್ತು ಜಿಯೋ ಏರ್ಫೈಬರ್ (JioAirFiber) ಯೋಜನೆಗಳನ್ನು ಒಳಗೊಂಡಿದೆ. ಕಂಪನಿಯು ‘ಫ್ರೀಡಂ ಆಫರ್’ ಹೆಸರಿನಲ್ಲಿ ಈ ಕೊಡುಗೆ ನೀಡುತ್ತಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಜಿಯೋ, 10 ತಿಂಗಳ ಪ್ಲಾನ್ಗೆ ಹಣ ಪಾವತಿಸಿದರೆ 15 ತಿಂಗಳ ಸೇವೆ ಪಡೆಯಬಹುದು ಎಂದು ತಿಳಿಸಿದೆ.
10 ತಿಂಗಳ ಹಣಕ್ಕೆ 15 ತಿಂಗಳ ಸೇವೆ ಹೇಗೆ?
ಜಿಯೋ ಹೋಮ್ ಫ್ರೀಡಂ ಆಫರ್ ಪ್ರಕಾರ, ಗ್ರಾಹಕರು ತಿಂಗಳಿಗೆ 666 ರೂಪಾಯಿಯಂತೆ 10 ತಿಂಗಳ ರೀಚಾರ್ಜ್ ಮಾಡಿಸಬೇಕು. ಹೀಗೆ ಒಟ್ಟು 6,660 ರೂಪಾಯಿ ಪಾವತಿಸಿದರೆ 15 ತಿಂಗಳವರೆಗೆ ಜಿಯೋ ಹೋಮ್ ಸೇವೆ ಪಡೆಯಬಹುದು. ಅಂದರೆ, ಹೆಚ್ಚುವರಿಯಾಗಿ ಐದು ತಿಂಗಳ ಸೇವೆಗೆ ಯಾವುದೇ ಹಣ ಪಾವತಿಸುವ ಅಗತ್ಯವಿಲ್ಲ.ಆದರೆ ಈ ಕೊಡುಗೆ ಸದ್ಯ ಈಗಾಗಲೇ ಜಿಯೋ ಹೋಮ್ ಸೇವೆ ಬಳಸುತ್ತಿರುವ ಅರ್ಹ ಗ್ರಾಹಕರಿಗೆ ಮಾತ್ರ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ. ಆಫರ್ ಪಡೆಯಲು ಆಸಕ್ತ ಗ್ರಾಹಕರು 8219582195
ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬಹುದು.
ಇನ್ನು ಹೊಸ ಗ್ರಾಹಕರಿಗೂ ಜಿಯೋ ವಿಶೇಷ ಕೊಡುಗೆ ನೀಡುತ್ತಿದೆ. ಎರಡು ತಿಂಗಳ ಜಿಯೋ ಹೋಮ್ ಪ್ಲಾನ್ ಖರೀದಿಸಿದರೆ ಒಂದು ತಿಂಗಳ ಹೆಚ್ಚುವರಿ ಸೇವೆಯನ್ನು ಉಚಿತವಾಗಿ ಪಡೆಯಬಹುದು.1,000ಕ್ಕೂ ಹೆಚ್ಚು ಟಿವಿ ಚಾನೆಲ್ಗಳು, ಒಟಿಟಿ ಸೌಲಭ್ಯ
ಜಿಯೋ ಹೋಮ್ ಸೇವೆಯ ಮೂಲಕ 15 ಭಾಷೆಗಳಲ್ಲಿ 1,000ಕ್ಕೂ ಹೆಚ್ಚು ಡಿಜಿಟಲ್ ಟಿವಿ ಚಾನೆಲ್ಗಳನ್ನು ವೀಕ್ಷಿಸಬಹುದು. ಇದರೊಂದಿಗೆ ಹಲವು ಜನಪ್ರಿಯ ಒಟಿಟಿ ಅಪ್ಲಿಕೇಶನ್ಗಳ ಸಬ್ಸ್ಕ್ರಿಪ್ಷನ್ ಹಾಗೂ ಅನಿಯಮಿತ ಹೈ-ಸ್ಪೀಡ್ ವೈ-ಫೈ ಸೌಲಭ್ಯವೂ ದೊರೆಯಲಿದೆ.
ಜಿಯೋ ಟಿವಿ ಪ್ಲಸ್ (JioTV+) ಆ್ಯಪ್ ಮೂಲಕ ಒಂದೇ ಜಿಯೋ ಸೆಟ್ಟಾಪ್ ಬಾಕ್ಸ್ ಬಳಸಿ ಮನೆಯ ಎರಡು ಸ್ಮಾರ್ಟ್ ಟಿವಿಗಳಲ್ಲಿ ಮನರಂಜನೆ ಪಡೆಯುವ ಅವಕಾಶವಿದೆ. ವಾರ್ಷಿಕ ಪ್ಲಾನ್ ಆಯ್ಕೆ ಮಾಡಿಕೊಂಡರೆ ಇನ್ಸ್ಟಾಲೇಷನ್ ಉಚಿತವಾಗಿರುತ್ತದೆ. ಈ ಸೆಟಪ್ನಲ್ಲಿ ವೈ-ಫೈ ರೂಟರ್, 4K ಟಿವಿ ಸೆಟ್ ಟಾಪ್ ಬಾಕ್ಸ್ ಮತ್ತು ಹೊರಾಂಗಣ ಸಾಧನವನ್ನು ಒದಗಿಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ.
ಇದೇ ವೇಳೆ ಜಿಯೋ ಇತ್ತೀಚೆಗೆ 15 ರೂಪಾಯಿಯ ಹೊಸ ರೀಚಾರ್ಜ್ ಪ್ಯಾಕ್ ಪರಿಚಯಿಸಿದೆ ಎಂಬ ವರದಿಗಳೂ ಪ್ರಕಟವಾಗಿವೆ. ಈ ಪ್ಯಾಕ್ನಲ್ಲಿ 24 ಗಂಟೆಗಳ ಕಾಲ ಅನಿಯಮಿತ 5G ಇಂಟರ್ನೆಟ್ ಸೌಲಭ್ಯ ದೊರೆಯಲಿದೆ ಎಂದು ಹೇಳಲಾಗಿದೆ.ಜಿಯೋ ತನ್ನ ವಾರ್ಷಿಕೋತ್ಸವದ ಕೊಡುಗೆಯ ಭಾಗವಾಗಿ ಮತ್ತೊಂದು ವಿಶೇಷ ಆಫರ್ ನೀಡುತ್ತಿದೆ. 1,499 ರೂಪಾಯಿ ಬೆಲೆಯ ಜಿಯೋ ಭಾರತ್ ಕೀಪ್ಯಾಡ್ ಫೋನ್ ಖರೀದಿಸುವ ಗ್ರಾಹಕರಿಗೆ ಆರು ತಿಂಗಳ ರೀಚಾರ್ಜ್ ಉಚಿತವಾಗಿ ದೊರೆಯಲಿದೆ.
ಈ ಕೊಡುಗೆಯಲ್ಲಿ JioBharat A1, B1, B2 ಮತ್ತು B3 ಸರಣಿಯ ಫೋನ್ಗಳು ಸೇರಿವೆ. ಉಚಿತ ರೀಚಾರ್ಜ್ ಅವಧಿಯಲ್ಲಿ ಪ್ರತಿ ತಿಂಗಳು 14 ಜಿಬಿ ಡೇಟಾ (ಪ್ರತಿದಿನ 0.5 ಜಿಬಿ) ಹಾಗೂ ಅನಿಯಮಿತ ಎಚ್ಡಿ ಕರೆಗಳ ಸೌಲಭ್ಯ ಸಿಗಲಿದೆ.ಇದರ ಜೊತೆಗೆ 500ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್ಗಳು, ಜಿಯೋ ಪೇ (JioPay), ಜಿಯೋ ಸಾವನ್ (JioSaavn), ಜಿಯೋ ಹಾಟ್ಸ್ಟಾರ್ (JioHotstar), ಸೇಫ್ಟಿ ಫಸ್ಟ್ (Safety First) ಫೀಚರ್ಗಳು ಹಾಗೂ 23 ಭಾರತೀಯ ಭಾಷೆಗಳ ಬೆಂಬಲವೂ ಈ ಫೋನ್ಗಳಲ್ಲಿ ಲಭ್ಯವಿದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜಿಯೋ ತನ್ನ ಹೋಮ್ ಇಂಟರ್ನೆಟ್ ಬಳಕೆದಾರರು ಹಾಗೂ ಕೀಪ್ಯಾಡ್ ಫೋನ್ ಖರೀದಿಸುವ ಗ್ರಾಹಕರಿಗೆ ಹಲವು ಕೊಡುಗೆಗಳನ್ನು ಮುಂದಿಟ್ಟಿದೆ. ಆಫರ್ ಪಡೆಯುವ ಮುನ್ನ ಅದರ ಅರ್ಹತೆ, ಮಾನ್ಯತಾ ಅವಧಿ ಮತ್ತು ಅನ್ವಯವಾಗುವ ಷರತ್ತುಗಳನ್ನು ಅಧಿಕೃತ ಜಿಯೋ ವೇದಿಕೆಯಲ್ಲಿ ಪರಿಶೀಲಿಸುವುದು ಉತ್ತಮ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
