ಕುಣಿಗಲ್ : ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿ ವ್ಯಾಪ್ತಿಯ ಹಳೇವೂರು, ಡಿ. ಹೊಸಹಳ್ಳಿ ಹಾಗೂ ಗೊಲ್ಲರಹಟ್ಟಿ ಗ್ರಾಮಗಳಲ್ಲಿ ತೆಂಗಿನ ಮರಗಳಿಗೆ ಕಪ್ಪುತಲೆ ಹುಳು ಬಾಧೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆಯ ವತಿಯಿಂದ ನಿಯಂತ್ರಣ ಕ್ರಮ ಕೈಗೊಳ್ಳಲಾಗಿದೆ.
ಕಪ್ಪುತಲೆ ಹುಳು ಬಾಧೆಯನ್ನು ನಿಯಂತ್ರಿಸುವ ಉದ್ದೇಶದಿಂದ ಬಾಧಿತ ರೈತರ ತೆಂಗಿನ ತೋಟಗಳಲ್ಲಿ ಗೊನಿಯೋಜಸ್ (Goniozus) ಪರಾವಲಂಬಿ ಜೀವಿಗಳನ್ನು ಬಿಡುಗಡೆ ಮಾಡಲಾಯಿತು. ಈ ಮೂಲಕ ಜೈವಿಕ ನಿಯಂತ್ರಣ ವಿಧಾನವನ್ನು ಅನುಸರಿಸಿ ತೆಂಗಿನ ಬೆಳೆ ಸಂರಕ್ಷಣೆಗೆ ಇಲಾಖೆ ಮುಂದಾಗಿದೆ.
ಈ ಸಂದರ್ಭದಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಬಿ.ವಿ. ದರ್ಶನ್, ತಿಪಟೂರಿನ ಪ್ರಯೋಗಾಲಯ ವಿಭಾಗದ ಸಹಾಯಕ ತೋಟಗಾರಿಕೆ ಅಧಿಕಾರಿ ಸುನಿಲ್ ಕುಮಾರ್ ಎಂ.ಕೆ., ಹುಲಿಯೂರುದುರ್ಗದ ಸಹಾಯಕ ತೋಟಗಾರಿಕೆ ಅಧಿಕಾರಿ ಬಿ. ರಾಜಶೇಖರ ಹಾಗೂ ರೈತರಾದ ಮಹಾದೇವ, ವೆಂಕಟೇಶ್, ತಮ್ಮಯ್ಯ, ರಾಮಕೃಷ್ಣ, ಪರಮೇಶ್, ಮಂಗಳಮ್ಮ, ಸಿದ್ದಮ್ಮ, ಜಗದೀಶ್, ಶ್ರೀಕಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
