nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬ್ಯಾಂಕ್‌ ನಿಂದ ಗ್ರಾಹಕನಿಗೆ ₹40.30 ಲಕ್ಷ ಪರಿಹಾರ! ಏನಿದು ಪ್ರಕರಣ ?

    November 21, 2026

    ತುಮಕೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 33 ಅಧಿಕಾರಿಗಳು, ಸಿಬ್ಬಂದಿ ವರ್ಗಾವಣೆ

    November 21, 2026

    ಅಲೆಮಾರಿ ಬುಡಕಟ್ಟು ಕುಟುಂಬಗಳಿಗೆ ಮೂಲ ಸೌಕರ್ಯ ಕಲ್ಪಿಸುವುದು ಮೊದಲ ಆದ್ಯತೆ: ಶಾಸಕ ಸಿ.ಬಿ. ಸುರೇಶ್‌ ಬಾಬು

    November 21, 2026
    Facebook Twitter Instagram
    ಟ್ರೆಂಡಿಂಗ್
    • ಬ್ಯಾಂಕ್‌ ನಿಂದ ಗ್ರಾಹಕನಿಗೆ ₹40.30 ಲಕ್ಷ ಪರಿಹಾರ! ಏನಿದು ಪ್ರಕರಣ ?
    • ತುಮಕೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 33 ಅಧಿಕಾರಿಗಳು, ಸಿಬ್ಬಂದಿ ವರ್ಗಾವಣೆ
    • ಅಲೆಮಾರಿ ಬುಡಕಟ್ಟು ಕುಟುಂಬಗಳಿಗೆ ಮೂಲ ಸೌಕರ್ಯ ಕಲ್ಪಿಸುವುದು ಮೊದಲ ಆದ್ಯತೆ: ಶಾಸಕ ಸಿ.ಬಿ. ಸುರೇಶ್‌ ಬಾಬು
    • ನ.27ರಂದು ಕನಕದಾಸರ ಜಯಂತ್ಯೋತ್ಸವ ಅದ್ಧೂರಿ ಆಚರಣೆ: ಜಿಲ್ಲಾಧಿಕಾರಿ ಶುಭ ಕಲ್ಯಾಣ್
    • ಯುವ ರೈತ ಮಹಿಳೆ ಕಾವ್ಯ ದಿನೇಶ್‌ ಗೆ ತಾಲ್ಲೂಕು ಮಟ್ಟದ ಅತ್ಯುತ್ತಮ ಯುವ ರೈತ ಮಹಿಳೆ ಪ್ರಶಸ್ತಿ
    • ಕಪ್ಪುತಲೆ ಹುಳು ಬಾಧೆ ನಿಯಂತ್ರಣಕ್ಕೆ ತೆಂಗಿನ ತೋಟಗಳಲ್ಲಿ ಪರಾವಲಂಬಿ ಜೀವಿಗಳ ಬಿಡುಗಡೆ
    • ಆರೋಗ್ಯಕ್ಕಿಂತ ದೊಡ್ಡ ಭಾಗ್ಯ ಮತ್ತೊಂದಿಲ್ಲ: ಶಾಸಕ ಎಸ್.ಆರ್. ಶ್ರೀನಿವಾಸ್ | ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಉದ್ಘಾಟನೆ
    • ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶನ ಕಾರ್ಯಾಗಾರ | ಹಳ್ಳಿಗಾಡಿನ ಮಕ್ಕಳೇ ಹೆಚ್ಚು ಧೈರ್ಯಶಾಲಿಗಳು: ಮುರಳೀಧರ ಹಾಲಪ್ಪ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತುಮಕೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 33 ಅಧಿಕಾರಿಗಳು, ಸಿಬ್ಬಂದಿ ವರ್ಗಾವಣೆ
    ತುಮಕೂರು November 21, 2026

    ತುಮಕೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 33 ಅಧಿಕಾರಿಗಳು, ಸಿಬ್ಬಂದಿ ವರ್ಗಾವಣೆ

    By Ganesh TumkuruNovember 21, 2026No Comments2 Mins Read
    transfer of 33 officers

    ತುಮಕೂರು : ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಆಡಳಿತಾತ್ಮಕ ಬದಲಾವಣೆ ಕೈಗೊಂಡಿದ್ದು, ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಒಟ್ಟು 33 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.

    ತಕ್ಷಣದಿಂದಲೇ ಜಾರಿಗೆ ಬರುವಂತೆ ಹೊರಡಿಸಿರುವ ವರ್ಗಾವಣೆ ಆದೇಶದಲ್ಲಿ ಜಿಲ್ಲಾ ನೋಂದಣಾಧಿಕಾರಿಗಳು, ಹಿರಿಯ ಉಪ ನೋಂದಣಾಧಿಕಾರಿಗಳು, ಉಪ ನೋಂದಣಾಧಿಕಾರಿಗಳು, ಪ್ರಥಮ ದರ್ಜೆ ಸಹಾಯಕರು ಹಾಗೂ ದ್ವಿತೀಯ ದರ್ಜೆ ಸಹಾಯಕರು ಸೇರಿದ್ದಾರೆ.

    ಕೊಪ್ಪಳ, ರಾಯಚೂರು, ಯಾದಗಿರಿ, ಬೆಂಗಳೂರು, ತುಮಕೂರು, ಹಾಸನ, ಶಿವಮೊಗ್ಗ, ಧಾರವಾಡ, ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳಿಗೆ ಹೊಸ ಸ್ಥಳಗಳಿಗೆ ನಿಯೋಜನೆ ಮಾಡಲಾಗಿದೆ.

    ಪ್ರಮುಖ ವರ್ಗಾವಣೆಗಳಲ್ಲಿ ಕೊಪ್ಪಳದ ಜಿಲ್ಲಾ ನೋಂದಣಾಧಿಕಾರಿಯಾಗಿದ್ದ ಅನುರಾಧ ಎಂ. ಕಿನ್ನಾಳ್ ಅವರನ್ನು ಯಾದಗಿರಿಗೆ ಹಾಗೂ ರಾಯಚೂರಿನ ಜಿಲ್ಲಾ ನೋಂದಣಾಧಿಕಾರಿ ಪ್ರತಿಭಾ ಬಿಡಿಕರ್ ಅವರನ್ನು ಕೊಪ್ಪಳಕ್ಕೆ ವರ್ಗಾಯಿಸಲಾಗಿದೆ.

    ಕುಣಿಗಲ್‌ ನಲ್ಲಿ ಹಿರಿಯ ಉಪ ನೋಂದಣಾಧಿಕಾರಿಯಾಗಿದ್ದ ಮಂಜುನಾಥ್ ಅವರನ್ನು ಬೆಂಗಳೂರಿನ ಬಸವನಗುಡಿಗೆ, ಬೇಗೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂತೋಷ್ ಕುಮಾರ್ ಕಟ್ಟಿಮನಿ ಅವರನ್ನು ದೊಡ್ಡಬಳ್ಳಾಪುರಕ್ಕೆ ವರ್ಗಾಯಿಸಲಾಗಿದೆ.

    ಬೆಂಗಳೂರಿನ ಪ್ರಧಾನ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸ್ವರ್ಣಲತಾ ಎಸ್.ಎಸ್. ಅವರನ್ನು ಕೆಂಗೇರಿಯ ಉಪ ನೋಂದಣಾಧಿಕಾರಿಯಾಗಿ ನೇಮಿಸಲಾಗಿದ್ದು, ಕೆಂಗೇರಿಯ ರಾಮದಾಸ ಗೌಡ ಅವರನ್ನು ನೆಲಮಂಗಲಕ್ಕೆ ವರ್ಗಾಯಿಸಲಾಗಿದೆ. ಗುಡಿಬಂಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶಂಕರಮೂರ್ತಿ ಅವರನ್ನು ಗೌರಿಬಿದನೂರಿಗೆ ನಿಯೋಜಿಸಲಾಗಿದೆ.

    ಇನ್ನು ಬಸವನಗುಡಿ ಜಿಲ್ಲಾ ನೋಂದಣಾಧಿಕಾರಿ ಕಚೇರಿಯ ರವಿಕುಮಾರ್ ಕೆ.ವಿ. ಅವರನ್ನು ಮಲ್ಲೇಶ್ವರಕ್ಕೆ, ಆಲೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಕಾಂತಿ ಅವರನ್ನು ತುಮಕೂರಿಗೆ ಹಾಗೂ ಮಧುಗಿರಿಯ ಸತೀಶ್ ಎಸ್. ಅವರನ್ನು ಪೀಣ್ಯಕ್ಕೆ ವರ್ಗಾಯಿಸಲಾಗಿದೆ.

    ಅದೇ ರೀತಿ ಅನಿಲ್ ಜಮಖಂಡಿ ಅವರನ್ನು ಬಾಗಲಕೋಟೆಯಿಂದ ಧಾರವಾಡಕ್ಕೆ, ಧನಲಕ್ಷ್ಮಿ ಅವರನ್ನು ಮಂಡ್ಯದಿಂದ ಕೊರಟಗೆರೆಗೆ ಹಾಗೂ ಚೇತನ್ ಗುಟಾಲ್ ಅವರನ್ನು ಸಾಗರದಿಂದ ಶಿವಮೊಗ್ಗಕ್ಕೆ ವರ್ಗಾವಣೆ ಮಾಡಲಾಗಿದೆ.

    ಈ ವರ್ಗಾವಣೆ ಪ್ರಕ್ರಿಯೆಯಲ್ಲಿ ಏಳು ಮಂದಿ ಪ್ರಥಮ ದರ್ಜೆ ಸಹಾಯಕರು ಹಾಗೂ ಇಬ್ಬರು ದ್ವಿತೀಯ ದರ್ಜೆ ಸಹಾಯಕರು ಕೂಡ ಸೇರಿದ್ದಾರೆ.

    ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಡಳಿತಾತ್ಮಕ ಕಾರ್ಯವೈಖರಿಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಈ ಬದಲಾವಣೆಗಳನ್ನು ಕೈಗೊಳ್ಳಲಾಗಿದ್ದು, ವಿವಿಧ ಕಚೇರಿಗಳಲ್ಲಿ ಹೊಸದಾಗಿ ನಿಯೋಜನೆಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿ ಶೀಘ್ರದಲ್ಲೇ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ನ.27ರಂದು ಕನಕದಾಸರ ಜಯಂತ್ಯೋತ್ಸವ ಅದ್ಧೂರಿ ಆಚರಣೆ: ಜಿಲ್ಲಾಧಿಕಾರಿ ಶುಭ ಕಲ್ಯಾಣ್

    November 21, 2026

    ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶನ ಕಾರ್ಯಾಗಾರ | ಹಳ್ಳಿಗಾಡಿನ ಮಕ್ಕಳೇ ಹೆಚ್ಚು ಧೈರ್ಯಶಾಲಿಗಳು: ಮುರಳೀಧರ ಹಾಲಪ್ಪ

    November 21, 2026

    ಆಶ್ರಯ ನೀಡಿದ ವೈದ್ಯ ದಂಪತಿಗೆ ನಂಬಿಕೆ ದ್ರೋಹ: 800 ಗ್ರಾಂ ಚಿನ್ನಾಭರಣ ಕದ್ದ ಮಹಿಳೆ ಬಂಧನ, ಕೊಲೆ ಸಂಚೂ ಬಯಲು!

    November 21, 2026

    Leave A Reply Cancel Reply

    Our Picks

    ಬ್ಯಾಂಕ್‌ ನಿಂದ ಗ್ರಾಹಕನಿಗೆ ₹40.30 ಲಕ್ಷ ಪರಿಹಾರ! ಏನಿದು ಪ್ರಕರಣ ?

    November 21, 2026

    ಮಧ್ಯಪ್ರದೇಶದ ನರ್ಮದಾ ಕಣಿವೆಯಲ್ಲಿ 5 ಲಕ್ಷ ವರ್ಷಗಳ ಹಿಂದಿನ ಪಳೆಯುಳಿಕೆ ಪತ್ತೆ! ಏನದು ?

    November 20, 2026

    ಐಐಟಿಎಫ್ 2026ರಲ್ಲಿ EPFO ಲಾಂಜ್ ಮತ್ತು ESIC ಪೆವಿಲಿಯನ್ ಉದ್ಘಾಟಿಸಿದ ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವೀಯ

    November 16, 2026

    ರಾಮಾಯಣದ ಪುಷ್ಪಕ ವಿಮಾನವನ್ನು ನಿರ್ಮಿಸಿದ್ದು ಯಾರು? ರಾವಣನ ಕೈಗೆ ಸಿಕ್ಕಿದ್ದು ಹೇಗೆ? ಪುರಾಣ ಮತ್ತು ವಿಜ್ಞಾನ ಹೇಳುವುದೇನು?

    November 15, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ಬ್ಯಾಂಕ್‌ ನಿಂದ ಗ್ರಾಹಕನಿಗೆ ₹40.30 ಲಕ್ಷ ಪರಿಹಾರ! ಏನಿದು ಪ್ರಕರಣ ?

    November 21, 2026

    ಮನೆ ಖರೀದಿ, ವಾಹನ ಖರೀದಿ, ಮಕ್ಕಳ ಶಿಕ್ಷಣ ಸೇರಿದಂತೆ ಹಲವು ಅಗತ್ಯಗಳಿಗಾಗಿ ಜನರು ಬ್ಯಾಂಕ್‌ ಗಳಿಂದ ಸಾಲ ಪಡೆಯುತ್ತಾರೆ. ಸಾಲ…

    ತುಮಕೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 33 ಅಧಿಕಾರಿಗಳು, ಸಿಬ್ಬಂದಿ ವರ್ಗಾವಣೆ

    November 21, 2026

    ಅಲೆಮಾರಿ ಬುಡಕಟ್ಟು ಕುಟುಂಬಗಳಿಗೆ ಮೂಲ ಸೌಕರ್ಯ ಕಲ್ಪಿಸುವುದು ಮೊದಲ ಆದ್ಯತೆ: ಶಾಸಕ ಸಿ.ಬಿ. ಸುರೇಶ್‌ ಬಾಬು

    November 21, 2026

    ನ.27ರಂದು ಕನಕದಾಸರ ಜಯಂತ್ಯೋತ್ಸವ ಅದ್ಧೂರಿ ಆಚರಣೆ: ಜಿಲ್ಲಾಧಿಕಾರಿ ಶುಭ ಕಲ್ಯಾಣ್

    November 21, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.