nammatumakuru

    Subscribe to Updates

    Get the latest creative news from FooBar about art, design and business.

    What's Hot

    ತೊರೆಯ ಪಕ್ಕದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ; ಕೊಲೆ ಶಂಕೆ!

    November 24, 2026

    ಪೊಲೀಸ್ ಠಾಣೆಯಲ್ಲೇ ಯುವಕನ ಮೇಲೆ ಚಾಕು ಇರಿತ!

    November 24, 2026

    ಅನಗತ್ಯ ಸ್ಪ್ಯಾಮ್ ಕರೆ, ಮೆಸೇಜ್‌ ಗಳಿಂದ ಬೇಸತ್ತಿದ್ದೀರಾ? ಇಲ್ಲಿದೆ ಪರಿಹಾರ

    November 23, 2026
    Facebook Twitter Instagram
    ಟ್ರೆಂಡಿಂಗ್
    • ತೊರೆಯ ಪಕ್ಕದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ; ಕೊಲೆ ಶಂಕೆ!
    • ಪೊಲೀಸ್ ಠಾಣೆಯಲ್ಲೇ ಯುವಕನ ಮೇಲೆ ಚಾಕು ಇರಿತ!
    • ಅನಗತ್ಯ ಸ್ಪ್ಯಾಮ್ ಕರೆ, ಮೆಸೇಜ್‌ ಗಳಿಂದ ಬೇಸತ್ತಿದ್ದೀರಾ? ಇಲ್ಲಿದೆ ಪರಿಹಾರ
    • ಜಮೀನು, ಮನೆ ಪತ್ರಗಳು ಕಳೆದುಹೋದರೆ ಏನು ಮಾಡಬೇಕು? ದಾಖಲೆಗಳ ಸುರಕ್ಷತೆಗೆ ಇಲ್ಲಿವೆ ಉಪಾಯಗಳು
    • ಸರ್ಕಾರಿ ಶಾಲೆಗಳ ದತ್ತು ನೀತಿ ಮತ್ತು ಎಡಿಬಿ ಸಾಲದ ಒಪ್ಪಂದಕ್ಕೆ ವಿರೋಧ: AIDSO ನೇತೃತ್ವದಲ್ಲಿ ವಿದ್ಯಾರ್ಥಿ–ಪೋಷಕರ ಪ್ರತಿಭಟನೆ
    • ಪೆಟ್ರೋಲ್ ಬಂಕ್‌ ನಲ್ಲಿ ₹110, ₹210 ಅಥವಾ ₹510ಕ್ಕೇ ಪೆಟ್ರೋಲ್ ಹಾಕಿಸುವುದೇಕೆ? ಇದರ ಹಿಂದಿದೆ ಆಸಕ್ತಿದಾಯಕ ಕಾರಣಗಳು!
    • ಕಾರ್ತಿಕ ಹುಣ್ಣಿಮೆ ಯಾವಾಗ? ಪೂಜೆ, ದೀಪದಾನಕ್ಕೆ ಶುಭ ಮುಹೂರ್ತ ಇಲ್ಲಿದೆ!
    •  ತುಳಸಿ ವಿವಾಹ: ಶುಭ ಮುಹೂರ್ತ, ಪೂಜಾ ಸಾಮಗ್ರಿ, ಮಂತ್ರ ಮತ್ತು ಆಚರಣೆಯ ವಿಧಿವಿಧಾನಗಳೇನು?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತೊರೆಯ ಪಕ್ಕದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ; ಕೊಲೆ ಶಂಕೆ!
    ಕೊರಟಗೆರೆ November 24, 2026

    ತೊರೆಯ ಪಕ್ಕದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ; ಕೊಲೆ ಶಂಕೆ!

    By Ganesh TumkuruNovember 24, 2026No Comments2 Mins Read
    koratagere

    ಕೊರಟಗೆರೆ : ತಾಲ್ಲೂಕಿನ ವಡ್ಡಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೀಲಗಾನಹಳ್ಳಿ–ಕತ್ತಿ ನಾಗೇನಹಳ್ಳಿ ಸಂಪರ್ಕ ರಸ್ತೆಯ ಪಕ್ಕದಲ್ಲಿರುವ ತೊರೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿರುವ ಘಟನೆ ಸ್ಥಳೀಯರಲ್ಲಿ ಆತಂಕ ಹಾಗೂ ಹಲವು ಅನುಮಾನಗಳಿಗೆ ಕಾರಣವಾಗಿದೆ.

    ರಸ್ತೆ ಪಕ್ಕದ ತೊರೆಯಲ್ಲಿ ವ್ಯಕ್ತಿಯ ಮೃತದೇಹ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಕೊರಟಗೆರೆ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಗಂಭೀರತೆಯನ್ನು ಪರಿಗಣಿಸಿ ಸಿಪಿಐ ಪುರುಷೋತ್ತಮ್, ಪಿಎಸ್ಐ ತೀರ್ಥೇಶ್ ಹಾಗೂ ಮಧುಗಿರಿ ಉಪವಿಭಾಗದ ಡಿವೈಎಸ್ಪಿ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಘಟನಾ ಸ್ಥಳದಲ್ಲಿ ಮೃತ ದೇಹದ ಸ್ಥಿತಿಗತಿ ಹಾಗೂ ಸುತ್ತಮುತ್ತಲಿನ ಪರಿಸ್ಥಿತಿಯನ್ನು ಅಧಿಕಾರಿಗಳು ಪರಿಶೀಲಿಸಿದ್ದು, ಹೆಚ್ಚಿನ ಮಾಹಿತಿ ಕಲೆಹಾಕಲು ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಲಾಗಿದೆ. ತಜ್ಞರು ಸ್ಥಳದಲ್ಲಿನ ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದು, ಘಟನೆಯ ಕುರಿತು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

    ಕೊಲೆಯೋ ಅಥವಾ ಆಕಸ್ಮಿಕ ಸಾವೋ?

    ಅಪರಿಚಿತ ವ್ಯಕ್ತಿಯ ಮೃತದೇಹ ನಿರ್ಜನ ಪ್ರದೇಶದ ತೊರೆಯ ಪಕ್ಕದಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ವ್ಯಕ್ತಿಯನ್ನು ಬೇರೆಡೆ ಕೊಲೆ ಮಾಡಿ ಮೃತದೇಹವನ್ನು ಇಲ್ಲಿ ತಂದು ಎಸೆದಿರಬಹುದೆಂಬ ಶಂಕೆ ಸ್ಥಳೀಯರಲ್ಲಿ ವ್ಯಕ್ತವಾಗಿದೆ. ಆದರೆ ಈವರೆಗೆ ಕೊಲೆ ನಡೆದಿರುವುದಕ್ಕೆ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಮೃತ ವ್ಯಕ್ತಿಯ ಗುರುತು ಪತ್ತೆಯಾಗದಿರುವುದು ಪೊಲೀಸರಿಗೆ ತನಿಖೆಯ ಪ್ರಮುಖ ಸವಾಲಾಗಿದೆ.

    ಮೃತ ವ್ಯಕ್ತಿ ಯಾರು? ಯಾವ ಊರಿನವರು? ಈ ಪ್ರದೇಶಕ್ಕೆ ಹೇಗೆ ಬಂದರು? ಸಾವಿಗೆ ಕಾರಣವೇನು? ಎಂಬ ಹಲವು ಪ್ರಶ್ನೆಗಳು ಇದೀಗ ಸಾರ್ವಜನಿಕರಲ್ಲಿ ಮೂಡಿವೆ. ವ್ಯಕ್ತಿಯ ಗುರುತು ಪತ್ತೆಹಚ್ಚಲು ಹಾಗೂ ಸಾವಿನ ಹಿಂದಿನ ನೈಜ ಕಾರಣ ತಿಳಿದುಕೊಳ್ಳಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿನ ಸ್ವರೂಪದ ಕುರಿತು ಹೆಚ್ಚಿನ ಸ್ಪಷ್ಟತೆ ದೊರೆಯುವ ನಿರೀಕ್ಷೆಯಿದೆ. ಸುತ್ತ ಮುತ್ತಲಿನ ಗ್ರಾಮಗಳ ಜನರಿಂದ ಮಾಹಿತಿ ಸಂಗ್ರಹಿಸುವುದು ಸೇರಿದಂತೆ ಲಭ್ಯವಿರುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

    ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ವ್ಯಕ್ತಿಯ ಗುರುತು ಮತ್ತು ಸಾವಿನ ಹಿಂದಿನ ರಹಸ್ಯವನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆ ಮುಂದಾಗಿದೆ.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ತುಂಬಾಡಿ ಬಳಿ ಹಳ್ಳಕ್ಕೆ ನುಗ್ಗಿದ ಖಾಸಗಿ ಬಸ್; ತಪ್ಪಿದ ಭಾರೀ ಅನಾಹುತ

    November 22, 2026

    ನೇಗಲಾಲದ ಶ್ರೀ ಕಾವಲಮ್ಮ ದೇವಾಲಯಕ್ಕೆ 80 ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ. ರಸ್ತೆ ನಿರ್ಮಾಣ | ನ.21ರಂದು ಪ್ರಜಾ ಸೇವಾ ಆಂದೋಲನದಲ್ಲಿ ಡಾ.ಜಿ. ಪರಮೇಶ್ವರ್ ಅವರಿಂದ ರಸ್ತೆ ಲೋಕಾರ್ಪಣೆ

    November 20, 2026

    ಹೊಳವನಹಳ್ಳಿಯಲ್ಲಿ ನಿವೇಶನ ಹಕ್ಕುಪತ್ರ ವಿತರಣೆ ಸಭೆ ದಿಢೀರ್ ರದ್ದು! | ಕೊನೆ ಕ್ಷಣದಲ್ಲಿ ಸಭೆ ಮುಂದೂಡಿಕೆ; ನೂರಾರು ಫಲಾನುಭವಿಗಳಿಗೆ ನಿರಾಸೆ

    November 19, 2026

    Leave A Reply Cancel Reply

    Our Picks

    ಪೆಟ್ರೋಲ್ ಬಂಕ್‌ ನಲ್ಲಿ ₹110, ₹210 ಅಥವಾ ₹510ಕ್ಕೇ ಪೆಟ್ರೋಲ್ ಹಾಕಿಸುವುದೇಕೆ? ಇದರ ಹಿಂದಿದೆ ಆಸಕ್ತಿದಾಯಕ ಕಾರಣಗಳು!

    November 23, 2026

    ಮದುವೆ ಸೀಸನ್‌ ನಿಂದ ವ್ಯಾಪಾರಿಗಳಿಗೆ ಶುಕ್ರದೆಸೆ; ದೇಶಾದ್ಯಂತ 52 ಲಕ್ಷ ಮದುವೆಗಳ ನಿರೀಕ್ಷೆ: ಇಲ್ಲಿದೆ ಲೆಕ್ಕಾಚಾರ 

    November 23, 2026

    ಬ್ಯಾಂಕ್‌ ನಿಂದ ಗ್ರಾಹಕನಿಗೆ ₹40.30 ಲಕ್ಷ ಪರಿಹಾರ! ಏನಿದು ಪ್ರಕರಣ ?

    November 21, 2026

    ಮಧ್ಯಪ್ರದೇಶದ ನರ್ಮದಾ ಕಣಿವೆಯಲ್ಲಿ 5 ಲಕ್ಷ ವರ್ಷಗಳ ಹಿಂದಿನ ಪಳೆಯುಳಿಕೆ ಪತ್ತೆ! ಏನದು ?

    November 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ತೊರೆಯ ಪಕ್ಕದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ; ಕೊಲೆ ಶಂಕೆ!

    November 24, 2026

    ಕೊರಟಗೆರೆ : ತಾಲ್ಲೂಕಿನ ವಡ್ಡಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೀಲಗಾನಹಳ್ಳಿ–ಕತ್ತಿ ನಾಗೇನಹಳ್ಳಿ ಸಂಪರ್ಕ ರಸ್ತೆಯ ಪಕ್ಕದಲ್ಲಿರುವ ತೊರೆಯಲ್ಲಿ ಅಪರಿಚಿತ ವ್ಯಕ್ತಿಯ…

    ಪೊಲೀಸ್ ಠಾಣೆಯಲ್ಲೇ ಯುವಕನ ಮೇಲೆ ಚಾಕು ಇರಿತ!

    November 24, 2026

    ಅನಗತ್ಯ ಸ್ಪ್ಯಾಮ್ ಕರೆ, ಮೆಸೇಜ್‌ ಗಳಿಂದ ಬೇಸತ್ತಿದ್ದೀರಾ? ಇಲ್ಲಿದೆ ಪರಿಹಾರ

    November 23, 2026

    ಜಮೀನು, ಮನೆ ಪತ್ರಗಳು ಕಳೆದುಹೋದರೆ ಏನು ಮಾಡಬೇಕು? ದಾಖಲೆಗಳ ಸುರಕ್ಷತೆಗೆ ಇಲ್ಲಿವೆ ಉಪಾಯಗಳು

    November 23, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.