nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬಿಡದಿಯಲ್ಲಿ ರೈತರು ರಸ್ತೆ ತಡೆ ಮಾಡಬಾರದು, ನನಗೆ ಯಾವುದೇ ಪ್ರತಿಷ್ಠೆ ಇಲ್ಲ: ಸಿಎಂ ಡಿ.ಕೆ.ಶಿವಕುಮಾರ್

    September 27, 2026

    ಬೀದರ್‌: ಅಮಲ್ಲಾಪುರ ಸ್ಮಶಾನ ಭೂಮಿ ಸಮಸ್ಯೆ ಬಗೆಹರಿಸದಿದ್ದರೆ ಡಿಸಿ ಕಚೇರಿಗೆ ಮುತ್ತಿಗೆ: ಹೋರಾಟಗಾರರ ಎಚ್ಚರಿಕೆ

    September 27, 2026

    ವೈನ್‌ ಶಾಪ್‌ ಗೆ ನುಗ್ಗಿ ಕಂಠಪೂರ್ತಿ ಮದ್ಯ ಕುಡಿದು ಅಲ್ಲೇ ನಿದ್ರೆಗೆ ಜಾರಿದ ಕೋತಿ!

    September 27, 2026
    Facebook Twitter Instagram
    ಟ್ರೆಂಡಿಂಗ್
    • ಬಿಡದಿಯಲ್ಲಿ ರೈತರು ರಸ್ತೆ ತಡೆ ಮಾಡಬಾರದು, ನನಗೆ ಯಾವುದೇ ಪ್ರತಿಷ್ಠೆ ಇಲ್ಲ: ಸಿಎಂ ಡಿ.ಕೆ.ಶಿವಕುಮಾರ್
    • ಬೀದರ್‌: ಅಮಲ್ಲಾಪುರ ಸ್ಮಶಾನ ಭೂಮಿ ಸಮಸ್ಯೆ ಬಗೆಹರಿಸದಿದ್ದರೆ ಡಿಸಿ ಕಚೇರಿಗೆ ಮುತ್ತಿಗೆ: ಹೋರಾಟಗಾರರ ಎಚ್ಚರಿಕೆ
    • ವೈನ್‌ ಶಾಪ್‌ ಗೆ ನುಗ್ಗಿ ಕಂಠಪೂರ್ತಿ ಮದ್ಯ ಕುಡಿದು ಅಲ್ಲೇ ನಿದ್ರೆಗೆ ಜಾರಿದ ಕೋತಿ!
    • ಗಿಟಾರ್ ಬ್ಯಾಗ್‌ ಗೆ ಹೆಲ್ಮೆಟ್ ಹಾಕಿಲ್ಲವೆಂದು ₹500 ದಂಡ!
    • ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಗೆ ಕೋರ್ಟ್‌ನಲ್ಲಿ ಹಿನ್ನಡೆ
    • ಹಾಲಿನ ದರ ಏರಿಕೆ; ಸಂಪುಟದಲ್ಲಿ ಚರ್ಚಿಸಿ ಅಂತಿಮ ತೀರ್ಮಾನ: ಸಿಎಂ ಡಿ.ಕೆ.ಶಿವಕುಮಾರ್
    • ಪವಿತ್ರಾ ಗೌಡ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್!
    • ಮರಗಳ ಮಾರಣಹೋಮದಿಂದ ಮಳೆ ಕೊರತೆ: ನ್ಯಾ.ಜಯಂತ್ ಕುಮಾರ್ ಕಳವಳ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪಾವಗಡ: ಗಾಯಾಳುಗಳಿಗೆ ಸರ್ಕಾರಿ ವೆಚ್ಚದಲ್ಲಿ ಚಿಕಿತ್ಸೆಗೆ ಸೂಚನೆ: ಸಚಿವ ಆರಗ ಜ್ಞಾನೇಂದ್ರ
    ಪಾವಗಡ March 20, 2022

    ಪಾವಗಡ: ಗಾಯಾಳುಗಳಿಗೆ ಸರ್ಕಾರಿ ವೆಚ್ಚದಲ್ಲಿ ಚಿಕಿತ್ಸೆಗೆ ಸೂಚನೆ: ಸಚಿವ ಆರಗ ಜ್ಞಾನೇಂದ್ರ

    By adminMarch 20, 2022No Comments2 Mins Read
    araga jnanendra

    ತುಮಕೂರು: ಪಾವಗಡ ತಾಲೂಕು ಪಳವಳ್ಳಿ  ಕಟ್ಟೆ ಕೆರೆಯ ಬಳಿ ಶನಿವಾರ ಸಂಭವಿಸಿದ ಭೀಕರ ಅಪಘಾತದಲ್ಲಿ  ಗಾಯಗೊಂಡವರಿಗೆ ಸರ್ಕಾರಿ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ನೀಡಲು ಗೃಹ  ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ ಅವರು ಜಿಲ್ಲಾ  ಶಸ್ತ್ರ ಚಿಕಿತ್ಸಕ ಡಾ.ಟಿ.ಎ. ವೀರಭದ್ರಯ್ಯ ಅವರಿಗೆ ಸೂಚನೆ ನೀಡಿದರು.

    ಅಪಘಾತದಲ್ಲಿ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿರುವ 19 ಮಂದಿಯ ಆರೋಗ್ಯ ವಿಚಾರಿಸಿ ಸಮಾಧಾನ ಹೇಳಿದ ನಂತರ ಅಧಿಕಾರಿಗಳ  ಸಭೆ ನಡೆಸಿ ಮಾತನಾಡಿದ ಅವರು ಚಾಲಕನ ಅಜಾಗರೂಕತೆಯಿಂದ  ನಿಯಂತ್ರಣ ತಪ್ಪಿ ಸಂಭವಿಸಿದ ಬಸ್ ಅಪಘಾತದಲ್ಲಿ ಈವರೆಗೆ ಮರಣ ಹೊಂದಿದ 6  ಮಂದಿ ವಾರಸುದಾರರಿಗೆ ತಲಾ 5 ಲಕ್ಷ ರೂ.ಗಳ ಪರಿಹಾರವನ್ನು  ಮುಖ್ಯಮಂತ್ರಿಗಳು ಘೋಷಿಸಿದ್ದಾರೆ ಎಂದು ಹೇಳಿದರು.

    ಗಾಯಾಳುಗಳ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಹೆಚ್ಚಿನ  ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾದ ಗಾಯಾಳುಗಳ ಚಿಕಿತ್ಸಾ  ವೆಚ್ಚವನ್ನೂ ಸಹ ಸರ್ಕಾರದಿಂದಲೇ ಭರಿಸಲಾಗುವುದು. ಆಸ್ಪತ್ರೆಗೆ  ದಾಖಲಾದ ಗಾಯಾಳುಗಳಿಗೆ ಔಷಧಿಗಾಗಿ ಹೊರಗಡೆ ಚೀಟಿ

    ಬರೆದುಕೊಡದೆ ಜಿಲ್ಲಾಸ್ಪತ್ರೆಯಲ್ಲಿಯೇ ಒದಗಿಸಬೇಕು ಹಾಗೂ  ಜಿಲ್ಲಾಸ್ಪತ್ರೆ ವತಿಯಿಂದಲೇ ಊಟೋಪಹಾರದ ವ್ಯವಸ್ಥೆ ಮಾಡಬೇಕು  ಎಂದು ಸೂಚನೆ ನೀಡಿದರು.

    ಅಪಘಾತದಲ್ಲಿ ಮರಣ ಹೊಂದಿದವರ ಜೀವ ಮರಳಿ  ತರಲಾಗುವುದಿಲ್ಲ. ಆದರೆ ಮತ್ತೊಮ್ಮೆ ಇಂತಹ ಘಟನೆಗಳು  ಮುಂದೆಂದೂ ಮರುಕಳಿಸದಂತೆ ಸಾರಿಗೆ, ರಾಜ್ಯ ರಸ್ತೆ ಸಾರಿಗೆ ನಿಗಮ, ಪೊಲೀಸ್ ಇಲಾಖೆಗಳು ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಖಾಸಗಿ  ಸಾರಿಗೆಗಳಿಂದ ದೊಡ್ಡ ಲಾಭಿಯೇ ನಡೆಯುತ್ತಿದೆ ಎಂಬ ದೂರುಗಳು  ಬಂದಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶಾಲಾ-ಕಾಲೇಜು  ವಿದ್ಯಾರ್ಥಿಗಳು, ನೌಕರರು ಕೆಲಸಕ್ಕೆ ಹೊರಡುವ ಸಮಯದಲ್ಲಿ ಪ್ರಯಾಣಿಕರ ಬೇಡಿಕೆಗನುಗುಣವಾಗಿ ಕೆಎಸ್ಸಾರ್ಟಿಸಿ ಸಾರಿಗೆ ಬಸ್ಸುಗಳ  ವ್ಯವಸ್ಥೆ ಮಾಡಬೇಕು. ಪ್ರಯಾಣಿಕರ ಬೇಡಿಕೆಗನುಗುಣವಾಗಿ ಸಾರಿಗೆ  ವ್ಯವಸ್ಥೆ ಕಲ್ಪಿಸದ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ಮೇಲೆ ಕಟ್ಟುನಿಟ್ಟಿನ  ಕ್ರಮ ಕೈಗೊಳ್ಳಲಾಗುವುದು ಎಂದರಲ್ಲದೆ ಪರವಾನಗಿಯಿಲ್ಲದ  ಬಸ್, ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು ಅಧಿಕಾರಿಗಳಿಗೆ ನಿರ್ದೇಶನ  ನೀಡಿದರು.

    ಅನುಭವಿ ಮತ್ತು ಪರವಾನಗಿ ಹೊಂದಿದ ಚಾಲಕರಿಗೆ ಹಾಗೂ ಸೂಕ್ತ  ದಾಖಲೆಗಳನ್ನು ಹೊಂದಿದ ವಾಹನಗಳ ಸಂಚಾರಕ್ಕೆ  ಅನುಮತಿಸಬೇಕು. ಪೊಲೀಸ್ ಇಲಾಖೆ ಸಿಬ್ಬಂದಿ ನೆರವಿನೊಂದಿಗೆ  ಕಡ್ಡಾಯವಾಗಿ ಚಾಲನಾ ಪರವಾನಗಿ ಸೇರಿದಂತೆ ವಾಹನ ದಾಖಲೆಗಳ ತಪಾಸಣೆ ಮಾಡಬೇಕೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜು ಹಾಗೂ  ಮಧುಗಿರಿ ಉಪ ಪ್ರಾದೇಶಿಕ ಸಾರಿಗೆ ಅಧಿಕಾರಿ ದೇವಿಕ ಅವರಿಗೆ ಸೂಚಿಸಿದರು. ಅಪಘಾತ ಪ್ರಕರಣಗಳು ಹೆಚ್ಚಾಗಿ ಸಂಭವಿಸುವ ಜಾಗಗಳನ್ನು  ಗುರುತಿಸಿ ಅಪಘಾತ ನಿಯಂತ್ರಣಕ್ಕೆ ಕೈಗೊಳ್ಳಬಹುದಾದ  ಕ್ರಮಗಳನ್ನು ಜರೂರಾಗಿ ಕೈಗೊಳ್ಳಬೇಕೆಂದು ಸಚಿವರು ಸೂಚಿಸಿದಾಗ ಉತ್ತರಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜು ಹೆಚ್ಚು ಅಪಘಾತ ಪ್ರಕರಣಗಳು ವರದಿಯಾಗುತ್ತಿದ್ದ ಗುಬ್ಬಿ ಮತ್ತು ಶಿರಾ ತಾಲೂಕಿನಲ್ಲಿ  ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಂಡ ಪರಿಣಾಮ ಪ್ರಕರಣಗಳ ಸಂಖ್ಯೆ ತಗ್ಗಿದ್ದು, ಪಾವಗಡ ಮತ್ತು ಮಧುಗಿರಿ ತಾಲೂಕಿನಲ್ಲಿಯೂ ಕ್ರಮವಹಿಸಲಾಗುವುದು ಎಂದು ಸಭೆಗೆ ಮಾಹಿತಿ  ನೀಡಿದರು.

    ಶನಿವಾರ ಬೆಳಿಗ್ಗೆ ಸಂಭವಿಸಿದ ಬಸ್ ಅಪಘಾತ ಸ್ಥಳಕ್ಕೆ ಸಕಾಲಕ್ಕೆ  ತೆರಳಿ ಗಾಯಳುಗಳನ್ನು ಚಿಕಿತ್ಸೆಗಾಗಿ ಸ್ಥಳಾಂತರಿಸಲು ಹಾಗೂ  ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಶ್ರಮಿಸಿದ  ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗಳ ಕಾರ್ಯವನ್ನು ಶ್ಲಾಘಿಸಿದರು. ಸಚಿವರು ಇದಕ್ಕೂ ಮುನ್ನ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರಿಂದ ಅಪಘಾತದ ಸಂಪೂರ್ಣ ವಿವರಣೆ ಪಡೆದರು.

    ಸಭೆಯಲ್ಲಿ ಶಾಸಕ ಜ್ಯೋತಿಗಣೇಶ್, ಆರೋಗ್ಯ ಮತ್ತು ಕುಟುಂಬ  ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ, ಕೆಎಸ್ಸಾರ್ಟಿಸಿ ವಿಭಾಗೀಯ  ನಿಯಂತ್ರಣಾಧಿಕಾರಿ ಬಸವರಾಜು, ತಹಶೀಲ್ದಾರ್ ಮೋಹನ್‌ಕುಮಾರ್,  ಮತ್ತಿತರರು ಹಾಜರಿದ್ದರು.

    ವರದಿ : ರಾಜೇಶ್ ರಂಗನಾಥ್


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

    admin
    • Website

    Related Posts

    ದಸರಾ ಕ್ರೀಡಾಕೂಟ: ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್‌ ನಲ್ಲಿ ಪಾವಗಡದ ಚನ್ನಕೇಶವಪುರ ತಂಡಕ್ಕೆ ದ್ವಿತೀಯ ಸ್ಥಾನ

    September 26, 2026

    ಕಿಲಾರ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ರಾಮಚಂದ್ರ ಹೆಚ್. ಅವಿರೋಧ ಆಯ್ಕೆ

    September 19, 2026

    ಬರದ ತೀವ್ರತೆ: ರೈತರ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಲಿ: ಕುರಿಮಲ್ಲಪ್ಪ ಆಗ್ರಹ

    September 17, 2026

    Leave A Reply Cancel Reply

    Our Picks

    ವೈನ್‌ ಶಾಪ್‌ ಗೆ ನುಗ್ಗಿ ಕಂಠಪೂರ್ತಿ ಮದ್ಯ ಕುಡಿದು ಅಲ್ಲೇ ನಿದ್ರೆಗೆ ಜಾರಿದ ಕೋತಿ!

    September 27, 2026

    ಕಾವೇರಿ ಜಲ ವಿವಾದ: CWMA ಆದೇಶ ಪಾಲನೆ ಮುಂದುವರಿಸಲು ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚನೆ

    September 24, 2026

    ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಹಿರಿಯ ನಟ ಅನಂತ್ ನಾಗ್

    September 23, 2026

    ಗಣೇಶೋತ್ಸವ ಅನ್ನದಾನದ ವೇಳೆ ಕುದಿಯುತ್ತಿದ್ದ ಸಾಂಬಾರ್‌ ಪಾತ್ರೆಗೆ ಬಿದ್ದು ಮಹಿಳೆ ದಾರುಣ ಸಾವು

    September 22, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಬಿಡದಿಯಲ್ಲಿ ರೈತರು ರಸ್ತೆ ತಡೆ ಮಾಡಬಾರದು, ನನಗೆ ಯಾವುದೇ ಪ್ರತಿಷ್ಠೆ ಇಲ್ಲ: ಸಿಎಂ ಡಿ.ಕೆ.ಶಿವಕುಮಾರ್

    September 27, 2026

    ಬೆಂಗಳೂರು: ಬಿಡದಿಯಲ್ಲಿ ರೈತರು ಯಾರೂ ರಸ್ತೆ ತಡೆ ನಡೆಸಬಾರದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದು, ಟೌನ್‌ ಶಿಪ್‌ ಬೇಡವಾದವರು…

    ಬೀದರ್‌: ಅಮಲ್ಲಾಪುರ ಸ್ಮಶಾನ ಭೂಮಿ ಸಮಸ್ಯೆ ಬಗೆಹರಿಸದಿದ್ದರೆ ಡಿಸಿ ಕಚೇರಿಗೆ ಮುತ್ತಿಗೆ: ಹೋರಾಟಗಾರರ ಎಚ್ಚರಿಕೆ

    September 27, 2026

    ವೈನ್‌ ಶಾಪ್‌ ಗೆ ನುಗ್ಗಿ ಕಂಠಪೂರ್ತಿ ಮದ್ಯ ಕುಡಿದು ಅಲ್ಲೇ ನಿದ್ರೆಗೆ ಜಾರಿದ ಕೋತಿ!

    September 27, 2026

    ಗಿಟಾರ್ ಬ್ಯಾಗ್‌ ಗೆ ಹೆಲ್ಮೆಟ್ ಹಾಕಿಲ್ಲವೆಂದು ₹500 ದಂಡ!

    September 27, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.