31 ವರ್ಷದ ಮಹಿಳೆಯೊಬ್ಬರು ಸಲ್ಲಿಸಿದ್ದ ರಿಟ್ ಅರ್ಜಿ ಮಾನ್ಯ ಮಾಡಿದೆ ಹೈಕೋರ್ಟ್. ಕೊಲೆ ಪ್ರಕರಣವೊಂದರಲ್ಲಿ ಸಜಾಬಂಧಿಯಾಗಿರುವ ಅವರ ಪತಿಯನ್ನು 30 ದಿನ ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಜೈಲು ಅಧೀಕ್ಷಕರಿಗೆ ಆದೇಶಿಸಿದೆ. ಯಾಕೆ ಗೊತ್ತೆ ?
ಸಂತಾನ ಭಾಗ್ಯ ಪಡೆಯುವುದಕ್ಕಾಗಿ 31 ವರ್ಷದ ಮಹಿಳೆಯೊಬ್ಬರು ಸಲ್ಲಿಸಿದ್ದ ರಿಟ್ ಅರ್ಜಿ ಮಾನ್ಯ ಮಾಡಿದೆ ಹೈಕೋರ್ಟ್. ಆನಂದ್ ಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋಲಾರದ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ 2019ರಲ್ಲಿ ಆದೇಶಿಸಿತ್ತು. ಈ ಶಿಕ್ಷೆಯನ್ನು ಹೈಕೋರ್ಟ್ 2023ರಲ್ಲಿ 10 ವರ್ಷಕ್ಕೆ ಇಳಿಸಿತ್ತು. ಜೈಲಿಗೆ ಹೋಗುವ ಮುನ್ನ ಆನಂದ್ ಮತ್ತು ಅರ್ಜಿದಾರಾಗಿರುವ ಪತ್ನಿ ಪರಸ್ಪರ ಪ್ರೀತಿಸುತ್ತಿದ್ದರು. ಜೈಲಿಗೆ ಹೋದ ಮೇಲೂ ಅವರ ಪ್ರೀತಿ ಮುಂದುವರಿದಿತ್ತು. ಇಬ್ಬರೂ ಮದುವೆಯಾಗಲು ನಿಶ್ಚಯಿಸಿದ್ದರು. ಈ ಸಂಬಂಧ ಆನಂದ್ ಪ್ರಿಯತಮೆ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ್ದ ಹೈಕೋರ್ಟ್ 2023ರ ಮಾರ್ಚ್ ತಿಂಗಳಲ್ಲಿ, ಮದುವೆಯಾಗಲು ಆನಂದ್ ಅವರಿಗೆ 80 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡಲು ಆದೇಶಿಸಿತ್ತು.
ಈಗ ಸಂತಾನ ಭಾಗ್ಯ ಪಡೆಯುವುದಕ್ಕಾಗಿ ಪತ್ನಿ ಆನಂದ್ ಅವರಿಗೆ ಪೆರೋಲ್ ಬೇಕೆಂದು ಅರ್ಜಿ ಹಾಕಿದ್ದು ಕೋರ್ಟ್ ಸಮ್ಮತಿಸಿದೆ. 30 ದಿನ ಪೆರೋಲ್ ದೊರೆತಿದೆ. ‘ಪೆರೋಲ್ ಅವಧಿಯಲ್ಲಿ ವಾರಕ್ಕೊಮ್ಮೆ ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಮಾಡಬೇಕು. ಅವಧಿ ಮುಗಿದ ನಂತರ ಪುನಃ ಆನಂದ್ ಹಾಗೂ ಅರ್ಜಿದಾರರು ಪೆರೋಲ್ ವಿಸ್ತರಣೆಗೆ ಕೋರಬಹುದು’ ಎಂದು ನಿರ್ದೇಶಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


