ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಣಿವೆ ಬಿಳಚಿ ಬಳಿ ನಡೆದಿತ್ತು. ಮೃತದೇಹದ ಕಿವಿ ಓಲೆಯಿಂದಲೇ ಕೊಲೆವೊಂದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಳೆದ ಮೇ 9ರಂದು ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಕಿವಿಯೋಲೆ ಹಂತಕರ ಸುಳಿವು ನೀಡಿದೆ.
ಕೈ-ಕಾಲು ಕಟ್ಟಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಆದರೆ ಮೃತದೇಹ ಸಂಪೂರ್ಣ ಕೊಳೆತ ಹಿನ್ನೆಲೆಯಲ್ಲಿ ಗುರುತು ಹಿಡಿಯಲು ಕಷ್ಟವಾಗಿತ್ತು. ಮೃತದೇಹ ಸಿಕ್ಕ ಜಾಗದಲ್ಲಿ ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ನಾಪತ್ತೆ ಆಗಿದ್ದಾರೆ ಎಂಬ ಪ್ರಕರಣ ದಾಖಲಿಸಿಕೊಂಡಿದ್ದದ್ದು ತಿಳಿದಿತ್ತು.
ಭದ್ರಾ ನಾಲೆಯಲ್ಲಿ ಸಿಕ್ಕ ಮೃತದೇಹಕ್ಕೂ ಇಲ್ಲಿ ಮಿಸ್ಸಿಂಗ್ ಆಗಿದ್ದ ಮಹಿಳೆಗೂ ತಾಳೆ ಮಾಡಿ ನೋಡಿದ್ದರು. ಆಗ ಮೃತದೇಹದಲ್ಲಿದ್ದ ಕಿವಿ ಓಲೆಯಿಂದ ಮೃತಳ ಗುರುತನ್ನು ಪತ್ತೆ ಮಾಡಲಾಯಿತು. ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರಕೆರೆ ಗ್ರಾಮದ ನಿವಾಸಿ ನೇತ್ರಾವತಿ (47) ಕೊಲೆಯಾಗಿದ್ದಾರೆ ಎನ್ನಲಾಗಿದೆ. ಕುಮಾರ ಎಚ್.ಜಿ. (38) ಹಾಗೂ ಚಿದಾನಂದಪ್ಪ(54) ಎಂಬುವವರು ನೇತ್ರಾವತಿಯನ್ನು ಕೊಂದು ನಾಲೆಗೆ ಬೀಸಾಕಿ ಹೋಗಿದ್ದರು. ಆರೋಪಿಗಳ ಜಮೀನಿನಲ್ಲಿ ನೇತ್ರಾವತಿ ಅಡಿಕೆ ಮರಗಳನ್ನು ಕಡಿದು ಹಾಕಿದ್ದಳು. ಇದೇ ಸಿಟ್ಟಿನಲ್ಲಿ ನೇತ್ರಾವತಿಯನ್ನು ಕೊಲೆ ಮಾಡಿ ಬಳಿಕ ಕೈ-ಕಾಲು ಕಟ್ಟಿ ಭದ್ರಾ ಕಾಲುವೆಗೆ ಎಸೆದಿದ್ದಾರೆ ಎನ್ನಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA