ತುರುವೇಕೆರೆ: ತಾಲೂಕಿನ ದಬ್ಬೆಘಟ್ಟ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾವನ್ನು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ರೇಣುಕಪ್ಪ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರು ಬಹಳ ಅದ್ದೂರಿಯಾಗಿ ಬರಮಾಡಿಕೊಂಡರು.
ದಬ್ಬೆಘಟ್ಟ ಗ್ರಾಮ ಪಂಚಾಯಿತಿ ಆಡಳಿತ ಮತ್ತು ಗ್ರಾಮಸ್ಥರ ಹಾಗೂ ಡಿ ಎಸ್ ಎಸ್, ಸಹಯೋಗದೊಂದಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳದ ಹೊಸಹಳ್ಳಿ ಗೇಟ್ ನಿಂದ ಬೈಕ್ ರ್ಯಾಲಿ ಮೂಲಕ ಅದ್ದೂರಿಯಾಗಿ ಸಂಭ್ರಮದಿಂದ, ಆತ್ಮೀಯವಾಗಿ ರಥವನ್ನು ಸ್ವಾಗತಿಸಲಾಯಿತು.
ನಾಸಿಕ್ ಡೋಲ್ ವಾದ್ಯ ದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪೂರ್ಣ ಕುಂಭದೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ ಬಳಿಕ ವೇದಿಕೆಯ ಕಾರ್ಯಕ್ರಮ ನೆರವೇರಿತು.
ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ರೇಣುಕಪ್ಪ ಹಾಗೂ ಗ್ರಾಮ ಪಂಚಾಯತಿ ಸದಸ್ಯರ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ಸು ಕಂಡಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಛಾಯಾಮಣಿ ಈಶ್ವರ್, ಮಾಜಿ ಅಧ್ಯಕ್ಷೆ ಮೋಹನ್ ಕುಮಾರಿ ಮಹೇಶ್, ಆರ್. ಪಿ ಚಿರಂಜೀವಿ, ಮುಖ್ಯಶಿಕ್ಷಕ ಪ್ರಭು, ದಲಿತ ಸಂಘರ್ಷ ಸಮಿತಿಯ ಸಂಘಟನಾ ಸಂಚಾಲಕ ಬಿ.ಪುರ ತಮ್ಮಯ್ಯ, ದಂಡಿನಶಿವರ ಕುಮಾರ್, ಬಿಗನೇನಹಳ್ಳಿ ಪುಟ್ಟರಾಜ್, ಸಹಾಯಕ ನಿರ್ದೇಶಕಿ ತ್ರಿವೇಣಿ, ದಬ್ಬೇಘಟ್ಟ ಕಂದಾಯ ನಿರೀಕ್ಷ ಮಲ್ಲಿಕ್ , ಹಳ್ಳದ ಹೊಸಳ್ಳಿ ಗಿರೀಶ್, ಮಂಜುನಾಥ್ ಸೇರಿದಂತೆ ಸಾರ್ವಜನಿಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ