ತುಮಕೂರು: ರೈಲು ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿರುವ ಘಟನೆ ಕುಣಿಗಲ್ ಪಟ್ಟಣದ ಹೊರಹೊಲಯದಲ್ಲಿ ನಡೆದಿದೆ. ಟ್ರೈನ್ ಸ್ವಲ್ಪ ಮುಂದೆ ಸಾಗಿದ್ರು ಶಾಕ್ ನಿಂದ ಹೊತ್ತಿ ಉರಿಯೋ ಸಾಧ್ಯತೆಯಿತ್ತು, ಸಾವಿರಾರು ಜನ ಪ್ರಯಾಣಿಕರ ಪ್ರಾಣಕ್ಕೆ ಕುತ್ತು ತರುತ್ತಿತ್ತು.
ಬೆಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಸಾವಿರಾರು ಜನ ಪ್ರಯಾಣಿಸುತ್ತಿದ್ದರು. ಕುಣಿಗಲ್ ಬಳಿ ರೈಲ್ವೆ ಟ್ರಾಕ್ ನಲ್ಲಿ ಹೈವೊಲ್ಟೇಜ್ ಎಲೆಕ್ಟ್ರಿಕ್ ವೈರ್ ಬಿದ್ದಿತ್ತು. ವಿದ್ಯುತ್ ಲೈನ್ ಕಟ್ ಆಗಿರೋದು ನೋಡಿದ ಚಾಲಕ ತಕ್ಷಣ ಟ್ರೈನ್ ನಿಲ್ಲಿಸಿದ್ದಾರೆ.
ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ ತಪ್ಪಿದೆ. ಚಾಲಕನ ಕಾರ್ಯಕ್ಕೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296