ಪ್ರತಿದಿನ 5 ಬಾರಿ ನಮಾಜ್ ಮಾಡವುದು ಮುಸ್ಲಿಂಮರ ಸಂಪ್ರದಾಯ. ಆಧ್ಯಾತ್ಮ ಭಾವವನ್ನು ವೃದ್ಧಿಗೊಳಿಸಿ ಆತ್ಮಶುದ್ಧಿಗಾಗಿ ಮುಸ್ಲಿಮರು ನಮಾಜ್ ಮಾಡುತ್ತಾರೆ. ಇದುವರೆಗೂ ನಾವೆಲ್ಲರೂ ಈ ನಮಾಜ್ ಎಂಬ ಪದ ಉರ್ದು ಭಾಷೆಯಿಂದ ಬಂದಿರಬಹುದು ಅಂತ ಭಾವಿಸಿದ್ದೆವು. ಆದ್ರೆ ಇದು ಸಂಸ್ಕೃತ ಪದವಂತೆ!! ಇದನ್ನ ಸ್ವತಃ ಮುಸ್ಲಿಂ ಧರ್ಮಗುರುಗಳೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಅಖಿಲ ಭಾರತ ಇಮಾಮ್ ಸಂಘದ ಮುಖ್ಯಸ್ಥ ಡಾ. ಇಮಾಮ್ ಉಮರ್ ಇಲ್ಯಾಸಿ ಅವರು ಸಂದರ್ಶನವೊಂದರಲ್ಲಿ ನಮಾಜ್ ಎಂಬುದು ಸಂಸ್ಕೃತ ಪದ, ನಮಾಜ್ ಎಂಬ ಪದದ ಮೂಲ ಭಾರತದ್ದು, ಅದು ಸಂಸ್ಕೃತ ಪದವಾದ ನಮಃ ದಿಂದ ಬಂದಿದೆ. ಅದರ ಅರ್ಥ ಈಶ್ವರನಿಗೆ ತಲೆ ಬಾಗಿ ನಮಸ್ಕರಿಸುವುದು, ಈಶ್ವರನಿಗೆ ಶರಣಾಗುವುದು ಅಂತಾ ಹೇಳಿದ್ದಾರೆ.
ಇಷ್ಟೇ ಅಲ್ಲದೆ ಅರಬ್ ದೇಶದವರ ಬಳಿ ನೀವು ನಮಾಜ್ ಮಾಡಿದಿರಾ ಎಂದು ಕೇಳಿದರೆ ಅವರು ಏನೂ ಹೇಳೊಲ್ಲಾ. ಏಕೆಂದರೆ ನಮಾಜ್ ಎಂಬ ಪದದ ಬಗ್ಗೆ ಅವರಿಗೆ ಗೊತ್ತಿಲ್ಲ. ಅವರು ಪ್ರಾರ್ಥನೆಗೆ ಸಲಾಹ್ ಎಂದು ಹೇಳುತ್ತಾರೆ.
ಸದ್ಯ ಕುರಿತ ಇಂಟೆರೆಸ್ಟಿಂಗ್ ವಿಡಿಯೋವನ್ನು religionworld ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಲಕ್ಷಗಟ್ಟಲೆ ವೀವ್ಸ್ ಪಡೆದುಕೊಂಡಿದೆ. ಲಕ್ಷಾಂತರ ಜನ ಲೈಕ್ಸ್, ಕಮೆಂಟ್ಸ್ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA