ಬೆಂಗಳೂರು ನಗರಗಳಲ್ಲಿ ಇತ್ತೀಚೆಗೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ವಿಪರೀತ ಆಗುತ್ತಿವೆ. ಕಾಮುಕರಿಗೆ ಎಷ್ಟೇ ಬುದ್ಧಿ ಕಲಿಸಿದರೂ ಮತ್ತೆ ಮತ್ತೆ ಹುಟ್ಟಿಕೊಳ್ಳುತ್ತಿದ್ದಾರೆ. ಹುಡಗಿಯರು, ಯುವತಿಯರು ಒಂಟಿಯಾಗಿ ಓಡಾಡದಂತಾಗಿದೆ. ಅಂತೆಯೇ ಬೆಂಗಳೂರು ನಗರದಲ್ಲಿ ಇದೀಗ ಮತ್ತೊಂದು ಇಂತಹ ಪ್ರಕರಣ ಬೆಳಕಿಗೆ ಬಂದಿದೆ.
ಹೌದು, ಬೆಂಗಳೂರು ನಗರದ ನಡು ರಸ್ತೆಯಲ್ಲಿ ಕಾಮುಕನೋರ್ವ ವಿದ್ಯಾರ್ಥಿನಿಯೋರ್ವಳನ್ನು ಹಿಂಬಾಲಿಸಿ ಬಂದು ಆಕೆಯ ಖಾಸಗಿ ಅಂಗ ಮುಟ್ಟಿ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ ಘಟನೆ ನಡೆದಿದೆ. ಈ ಘಟನೆಯು ಸುರಾನ ಕಾಲೇಜು ಸಮೀಪದ ಚಾಯ್ ಪಾಯಿಂಟ್ ಬಳಿ ನಡೆದಿದೆ ಎನ್ನಲಾಗಿದೆ.
ಅಂದಹಾಗೆ, ಕಾಮುಕ ಕಿರುಕುಳ ನೀಡುತ್ತಿದ್ದಂತೆ ವಿದ್ಯಾರ್ಥಿನಿಯು ಸಹಾಯಕ್ಕೆ ಕೂಗಿದ್ದು, ಕೂಡಲೇ ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಅಲ್ಲಿಗೆ ಧಾವಿಸಿ ಆ ಪಾಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಲೈಂಗಿಕ ದೌರ್ಜನ್ಯ ಪ್ರಕರಣದಡಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಜಯನಗರ ನಿವಾಸಿ ಸುರೇಶ್(26) ಎಂದು ಗುರುತಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296