ಹೆಚ್.ಡಿ.ಕೋಟೆ: ಭತ್ತದ ಹುಲ್ಲಿನ ಮೆದೆಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಭತ್ತದ ಹುಲ್ಲಿನ ಮೆದೆಗೆ ಭಸ್ಮವಾದ ಘಟನೆ ತಾಲೂಕಿನ ಹೆಚ್.ಮಟಕೆರೆಯಲ್ಲಿ ನಡೆದಿದೆ.
ಜನವರಿ 26ರಂದು ಈ ಘಟನೆ ನಡೆದಿದೆ. ರಾತ್ರಿ ಒಂಬತ್ತು ಗಂಟೆ ಸಮಯದಲ್ಲಿ ಹೆಚ್. ಮಟಕೆರೆ ಗ್ರಾಮದ ರಾಮನಾಯಕ್ ಕೋಂ ಲೇಟ್ ಮರಿ ನಾಯಕ್ ರವರಿಗೆ ಸೇರಿದ ಎರಡು ದೊಡ್ಡದಾದ ಭತ್ತದ ಹುಲಿನ ಮೆದೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಬೂದಿಯಾಗಿ ಹೋಗಿರುತ್ತದೆ.
ಜೆಸಿಬಿ ವಾಹನವನ್ನು ಕರೆಸಿ ಸತತ ಆರು ಗಂಟೆಗಳ ಕಾಲ ಅಗ್ನಿಶಾಮಕ ಸಿಬ್ಬಂದಿಯವರು ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟು ಬೆಂಕಿ ನಂದಿಸಿದರು. ಹುಲ್ಲಿನ ಮೆದೆ ಕಳೆದುಕೊಂಡ ರೈತನ ಕಣ್ಣೀರು ಕೋಡಿಯಾಗಿ ಹರಿಯುವುದನ್ನು ಕಂಡು ಜನರೂ ಸಂಕಟ ಪಟ್ಟರು.
ಹುಲ್ಲನ್ನು ಕಳೆದುಕೊಂಡ ರೈತನಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು, ಆತ ಚೇತರಿಸಿಕೊಳ್ಳಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕಾರ್ಯಚರಣೆಯಲ್ಲಿ ಠಾಣೆಯ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾದ ಎಂ.ಜಿ.ಸೋಮಣ್ಣ, ಸಿಬ್ಬಂದಿಯವರಾದ ಅಶೋಕ್, ರವಿಪ್ರಸಾದ್, ಮುನಿಸಿದ್ದ ನಾಯಕ, ಸಂಗಮೇಶ್ ಭಾಗಿಯಾಗಿದ್ದರು.
ವರದಿ: ಮಲಾರ ಮಹದೇವಸ್ವಾಮಿ
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: