ಬಳ್ಳಾರಿ: ಜೈಲಲ್ಲಿ ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ ಗೆ ಆರ್ಥೋಪೆಡಿಕ್ ತಜ್ಞವೈದ್ಯರಿಂದ ತಪಾಸಣೆ ನಡೆಸಲಾಗಿದ್ದು ಇದೀಗ ನ್ಯೂರೋ ಸರ್ಜನ್ ರಿಂದ ದರ್ಶನ್ ತಪಾಸಣೆ ನಡೆಯುತ್ತಿದೆ.
ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿರುವ ಹಿನ್ನಲೆ ದರ್ಶನ್ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕರೆತರಲಾಗಿದ್ದು ವೈದ್ಯರಿಂದ ತಪಾಸಣೆ ನಡೆಸಲಾಗುತ್ತಿದೆ.
ಕಳೆದ ವಾರ ಅರ್ಥೋಪೆಡಿಕ್ ವೈದ್ಯರು ತಪಾಸಣೆ ಮಾಡಿದ್ದರು ಇದೀಗ ನ್ಯೂರೋ ಸರ್ಜನ್ ಡಾ.ವಿಶ್ವನಾಥ ಅವರಿಂದ ದರ್ಶನ್ ತಪಾಸಣೆ ನಡೆಸಲಾಗುತ್ತಿದೆ.
ಜೈಲಿನ ಅಧಿಕಾರಿಗಳಿಗೆ ವೈದ್ಯಕೀಯ ರಿಪೋರ್ಟ್ ಕೊಡೋ ಮುನ್ನ ನ್ಯೂರೋ ಸರ್ಜನ್ ಪರಿಶೀಲಿಸಬೇಕಿತ್ತು. ನ್ಯೂರೋ ಸರ್ಜನ್ ವರದಿ ಬಳಿಕ ಅರ್ಥೋಪೆಡಿಕ್ ವೈದ್ಯರು ದರ್ಶನ್ ಬೆನ್ನು ನೋವಿನ ಪೂರ್ಣ ವರದಿ ನೀಡಲಿದ್ದಾರೆ.
ವೈದ್ಯರ ವರದಿ ಆಧಾರದಲ್ಲಿ ದರ್ಶನ್ ಬೆಂಗಳೂರಿಗೆ ಶಿಫ್ಟ್ ಆಗುವ ಬಗ್ಗೆ ನಿರ್ಧಾರವಾಗಲಿದೆ ಎಂದು ತಿಳಿದು ಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296