ಬೆಂಗಳೂರು: ನಟ ದರ್ಶನ್ ಜೈಲು ಪಾಲಾಗಿರುವ ಬಗ್ಗೆ ನಟಿ, ಮಾಜಿ ಸಂಸದೆ ರಮ್ಯಾ ಪ್ರತಿಕ್ರಿಯೆ ನೀಡಿದ್ದು, ನಟ ದರ್ಶನ್ ಜೊತೆ ನಾನು ಸಿನಿಮಾ ಮಾಡಿದ್ದೇನೆ. ಸಿನಿಮಾ ಶೂಟಿಂಗ್ ವೇಳೆ ತಾವು ನಡೆದುಕೊಂಡು ಬಂದ ಹಾದಿ ಬಗ್ಗೆ ನನ್ನ ಬಳಿ ಹಂಚಿಕೊಂಡಿದ್ದರು. ನನಗೆ ಹೆಮ್ಮೆ ಅನಿಸಿತ್ತು. ಲೈಟ್ ಬಾಯ್ ಆಗಿ ಕೆಲಸ ಮಾಡಿ ಈ ಮಟ್ಟಕ್ಕೆ ಬೆಳೆದಿದ್ದಾರೆ. ಆದರೆ ಇತ್ತೀಚಿಗೆ ಅವರ ನಡವಳಿಕೆಯಿಂದ ತುಂಬಾ ಬೇಜಾರಾಗಿತ್ತು ಎಂದಿದ್ದಾರೆ.
ಅವರು ತಮ್ಮ ಜೀವನ ಹಾಳು ಮಾಡಿಕೊಂಡರು. ಈ ಮಟ್ಟಕ್ಕೆ ಬೆಳೆದ ಮೇಲೆ ಜವಾಬ್ದಾರಿ ಇರುತ್ತದೆ. ಅವರ ಅಕ್ಕಪಕ್ಕ ಯಾರು ಒಳ್ಳೆಯವರಿಲ್ಲ ಅನಿಸುತ್ತೆ ಗೊತ್ತಿಲ್ಲ. ತಮ್ಮ ಸುತ್ತಮುತ್ತ ಒಳ್ಳೆಯವರನ್ನು ಇಟ್ಟುಕೊಂಡು ಒಳ್ಳೆಯ ದಾರಿಯಲ್ಲಿ ಕರೆದುಕೊಂಡು ಹೋಗಬಹುದಿತ್ತು. ಮೊದಲು ಅಕ್ಕಪಕ್ಕದವರ ಸಹವಾಸ ಬಿಡಬೇಕು ಎಂದು ರಮ್ಯಾ ಹೇಳಿದ್ದಾರೆ.
ಜಡ್ಜ್ಮೆಂಟ್ ಕೇಳಿದಾಗ ರಿಲೀಫ್ ಅಂತಾ ಅನಿಸಿದೆ. ಈಗ ನಾವು ಹೋಗುತ್ತಿರುವ ಸಮಾಜ ಕೆಟ್ಟ ದಾರಿಯಲ್ಲಿದೆ. ಹೆಣ್ಣುಮಕ್ಕಳ ರಕ್ಷಣೆ, ಗೌರವ ವಿಷಯದಲ್ಲಿ ಸುಪ್ರೀಂ ಕೋರ್ಟ್ ಆರ್ಡರ್ ಬಂದಾಗ ನಾನು ಮಾಡಿದ ಪೋಸ್ಟ್ ಗೆ ಕೆಟ್ಟದಾಗಿ ಕಾಮೆಂಟ್ ಹಾಕುತ್ತಿದ್ದರು. ನಾವೇ ಕಾನೂನು ಕೈಗೆತ್ತಿಕೊಂಡರೆ ಈ ರೀತಿಯ ಕೆಟ್ಟ ಕೆಲಸಗಳು ಆಗುತ್ತವೆ. ಜಡ್ಜ್ಮೆಂಟ್‌ನಿಂದ ಸಮಾಜಕ್ಕೆ ಒಳ್ಳೆಯದಾಗುತ್ತೆ. ಸಮಾಜಕ್ಕೆ ಒಂದೊಳ್ಳೆ ಮೆಸೇಜ್ ಹೋಗಿದೆ ಎಂದರು.
ಪವಿತ್ರಾ ಗೌಡ ಯಾರು ಅಂತಾ ನನಗೆ ಮೊದಲು ಗೊತ್ತಿರಲಿಲ್ಲ. ಆಕೆಗೆ ಈ ಸ್ಥಿತಿ ಬರಬಾರದಿತ್ತು. ಒಂದು ಕಡೆ ನನಗೆ ಬೇಜಾರಾಗುತ್ತೆ. ಯಾಕಂದ್ರೆ ಪವಿತ್ರಾ ಗೌಡ ಒಬ್ಬ ತಾಯಿ, ಅವರಿಗೆ ಮಗಳಿದ್ದಾಳೆ. ಕಾನೂನು ಕೈಗೆ ತೆಗೆದುಕೊಳ್ಳದೇ ನಾವು ನಿಯಮಗಳ ಪ್ರಕಾರ ನಡೆದುಕೊಂಡಿದ್ರೆ ಇದೆಲ್ಲಾ ಆಗುತ್ತಿರಲಿಲ್ಲ ಎಂದು ರಮ್ಯಾ ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC