ಮಹಾರಾಷ್ಟ್ರ: ರೈಲಿನಲ್ಲಿ ಗೋಮಾಂಸ ಸಾಗಾಟ ಮಾಡುತ್ತಿರುವ ಎಂಬ ಶಂಕೆಯಿಂದ ವೃದ್ಧನೊಬ್ಬನಿಗೆ ಸಹಪ್ರಯಾಣಿಕರು ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ಮಹಾರಾಷ್ಟ್ರದಲ್ಲಿ ಧುಲೆ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದಿದೆ.
ಜಲಗಾಂವ್ ಜಿಲ್ಲೆಯ ನಿವಾಸಿ ಅಶ್ರಫ್ ಮುನ್ಯಾರ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಮಾಲೆಗಾಂವ್ ನಲ್ಲಿರುವ ತಮ್ಮ ಮಗಳ ಮನೆಗೆ ಧುಲೆ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಎರಡು ದೊಡ್ಡ ಪ್ಲಾಸ್ಟಿಕ್ ಬಾಕ್ಸ್ ಗಳಲ್ಲಿ ಅಶ್ರಫ್ ಮುನ್ಯಾರ್ ಮಾಂಸವನ್ನು ತಂದಿದ್ದರು. ಇದನ್ನು ಗಮನಿಸಿದ ಸುಮಾರು ಹನ್ನೆರಡು ಜನರಿದ್ದ ತಂಡ ವಿಚಾರಣೆ ನಡೆಸಿ, ವೃದ್ಧ ಎಂದೂ ನೋಡದೇ ಅಮಾನವೀಯವಾಗಿ ಥಳಿಸಿದ್ದಾರೆ.
ಮಗಳ ಕುಟುಂಬಕ್ಕಾಗಿ ಮಾಂಸ ತೆಗೆದುಕೊಳ್ಳುತ್ತಿದ್ದೇನೆ ಎಂದು ವೃದ್ಧ ಪರಿಪರಿಯಾಗಿ ಬೇಡಿದರೂ ಗುಂಪು ವೃದ್ಧನನ್ನು ಮತ್ತಷ್ಣು ಕೆಣಕಿ ಪ್ರಶ್ನಿಸಿದ್ದಾರೆ. ಯಾವ ಮಾಂಸ ಎಂದು ಕೇಳಿದ್ದಾರೆ. ಈ ವೇಳೆ ವೃದ್ಧ ಇದು ಕೋಣದ ಮಾಂಸ ಎಂದು ಹೇಳಿದ್ದಾರೆ. ಈ ವೇಳೆ ದುಷ್ಕರ್ಮಿಗಳು ನಾವು ಅದನ್ನು ಪರೀಕ್ಷಿಸಿದ ನಂತರ ಯಾವುದರ ಮಾಂಸ ಎಂದು ಗೊತ್ತಾಗುತ್ತದೆ ಎಂದು ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q