ಬೆಂಗಳೂರು: ಮಾನವ ಹಕ್ಕು ಉಲ್ಲಂಘನೆ, ಮಹಿಳೆಯರಿಗೆ ಧಕ್ಕೆ ತಂದ ಆರೋಪ ಬಿಗ್ಬಾಸ್ ಶೋ ಹಾಗೂ ಕೆಲವು ಸ್ಪರ್ಧಿಗಳ ಮೇಲೆ ಇದೆ. ಹೀಗಾಗಿ ಬಿಗ್ ಬಾಸ್ ಗೆ ಕುಂಬಳಗೋಡು ಪೊಲೀಸರು ನೋಟಿಸ್ ನೀಡಿದ್ದಾರೆ.
ನರಕಕ್ಕೆ ಹೋದ ಸ್ಪರ್ಧಿಗಳಿಗೆ ಊಟದ ಬದಲು ಗಂಜಿ, ನೆಲದ ಮೇಲೆ ಹಾಕಲಾದ ಬೆಡ್ ನಲ್ಲಿ ನಿದ್ದೆ, ಕೂರಲು ಕುರ್ಚಿ ಇಲ್ಲ, ನೀರಿಗೆ ಒಂದು ಮಡಿಕೆ, ಶೌಚಾಲಯಕ್ಕೆಂದು ಹೋಗಲು ಸ್ವರ್ಗವಾಸಿಗಳ ಅನುಮತಿ ಮಾಡಬೇಕಿತ್ತು. ಇವು ಸಾಮಾಜಿಕ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿತ್ತು. ಪೌಷ್ಠಿಕ ಆಹಾರ, ಶೌಚಾಲಯದ ವ್ಯವಸ್ಥೆಯನ್ನು ಸಹ ನೀಡದೆ ಮಾನವ ಹಕ್ಕು ಉಲ್ಲಂಘಟನೆ ಮಾಡಲಾಗಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಅವರು ಆರೋಪ ಮಾಡಿದ್ದರು.
ಹೀಗಾಗಿ ಬಿಗ್ ಬಾಸ್ ಸೆಟ್ ಗೆ ತೆರಳಿ ಇನ್‌ಸ್ಪೆಕ್ಟರ್ ಮಂಜುನಾಥ್ ಹೂಗಾರ ಅವರು ನೋಟಿಸ್ ನೀಡಿದ್ದಾರೆ. ಸ್ವರ್ಗ- ನರಕ ವಿಚಾರವಾಗಿ ನಡೆದ ಸಂಭಾಷಣೆಯ ರಾ ಫುಟೇಜ್ ನೀಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296