ತುರುವೇಕೆರೆ: ಪಟ್ಟಣದ ಶ್ರೀ ಸತ್ಯ ಗಣಪತಿ ಆಸ್ಥಾನ ಮಂಟಪದಲ್ಲಿ ತುರುವೇಕೆರೆ ತಾಲೂಕು ಗ್ರಾಮ ಪಂಚಾಯಿತಿ ನೌಕರರ 6ನೇ ಸಮ್ಮೇಳನವನ್ನು ಗ್ರಾಮ ಪಂಚಾಯತಿ ನೌಕರರ ಸಂಘ ಮತ್ತು ಸಿಐಟಿಯು ಕಾರ್ಮಿಕ ಸಂಘಟನೆಯ ಸಹಯೋಗದೊಂದಿಗೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ತುರುವೇಕೆರೆ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಿ ಎಸ್ ಸತೀಶ್ ಕುಮಾರ್ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ತುರುವೇಕೆರೆ ತಾಲೂಕು ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷರಾದ ರಂಗನಾಥ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಗೋಪಾಲಕೃಷ್ಣ ಹರಳಹಳ್ಳಿ, ಈ ದಿನ ನಡೆಯುತ್ತಿರುವ ಸಮ್ಮೇಳವನ್ನು ವಿಜಯೋತ್ಸವವನ್ನಾಗಿ ಆಚರಿಸಬೇಕಾಗಿದೆ. ಏಕೆಂದರೆ 1994ರಲ್ಲಿ ಸರ್ಕಾರವು ಇವರ್ಯಾರು ಸರ್ಕಾರಿ ನೌಕರರೆ ಅಲ್ಲ, ಇವರಿಗೆ ಯಾವುದೇ ವೇತನವಿಲ್ಲ ಎಂದಿತ್ತು. ಆದರೆ ಇದೀಗ ಸರ್ಕಾರದ ಬೊಕ್ಕಸದಿಂದ ವೇತನ ನೀಡುತ್ತಿದೆ ಇದು ಇತಿಹಾಸದ ಸಮಾವೇಶವಾಗಿದೆ ಎಂದು ನನ್ನ ಭಾವನೆಯಾಗಿದೆ ಎಂದರು.
ನಂತರ ಮಾತನಾಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸತೀಶ್ ಕುಮಾರ್, ಇತ್ತೀಚಿನ ದಿನಗಳಲ್ಲಿ ಪಂಚಾಯಿತಿ ನೌಕರರು ಸಂಘಟನೆಗಳನ್ನು ಕಟ್ಟುವ ಮೂಲಕ ಸರ್ಕಾರಕ್ಕೆ ತಮ್ಮ ದುಃಖ ದುಮ್ಮಾನಗಳನ್ನು ಗಮನಕ್ಕೆ ತರುತ್ತಿವೆ. ಇದು ಒಳ್ಳೆಯ ಬೆಳವಣಿಗೆ ಈಗ ಸರ್ಕಾರಗಳು ಸರಿಯಾದ ಸಮಯಕ್ಕೆ ನೌಕರರಿಗೆ ವೇತನವನ್ನು ನೀಡುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಪದೋನ್ನತಿ ಹೊಂದಿದ ಕರ ವಸೂಲಿಗಾರ, ಕೊಂಡಜ್ಜಿ ಗ್ರಾಮ ಪಂಚಾಯಿತಿಯ ಪುಷ್ಪ, ಮುನಿಯೂರು ಗ್ರಾಮ ಪಂಚಾಯಿತಿಯ ಸುಶೀಲಮ್ಮ ಹಾಗೂ ಸೊರವನಹಳ್ಳಿ ಗ್ರಾಮ ಪಂಚಾಯಿತಿಯ ಬಾಲು ಕುಮಾರ್ ರವರುಗಳನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಿ ಐ ಟಿ ಯು ನ ತಾಲೂಕು ಕಾರ್ಯದರ್ಶಿ ಸತೀಶ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಪಿ.ರಾಜು, ಗ್ರಾಮ ಪಂಚಾಯಿತಿ ನೌಕರರ ರಾಜ್ಯ ಸಮಿತಿ ಸದಸ್ಯರಾದ ರಮೇಶ್ ಮುಗಳೂರು, ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಶೃತಿ , ಕಟ್ಟಡ ಕಾರ್ಮಿಕರ ಸಂಘದ ಕಾರ್ಯದರ್ಶಿ ಮಂಜುನಾಥ್, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಾರುತಿ ಟಿ.ಎನ್. , ಆಟೋ ಚಾಲಕರ ಸಂಘದ ಅಧ್ಯಕ್ಷ ಗಂಗಣ್ಣ, ಗ್ರಾಮ ಪಂಚಾಯಿತಿ ನೌಕರರ ಸಂಘದ ಉಪಾಧ್ಯಕ್ಷ ಶಿವಕುಮಾರ್, ಮನೋಹರ್, ಜಯಪ್ರಕಾಶ್, ತಿಮ್ಮೇಗೌಡ, ಗುರುಮೂರ್ತಿ, ಬಸವರಾಜು ಕಾರ್ಯದರ್ಶಿಗಳಾದ ಪುಷ್ಪ, ಶೇಖರ್ ಸಹಕಾರ್ಯದರ್ಶಿಗಳಾದ ಮಂಜುನಾಥ್, ಕಾವ್ಯ, ರಾಮಾಚಾರಿ, ಚಂದ್ರಯ್ಯ, ಕೆಂಪೇಗೌಡ, ಮೋಹನ್, ಕುಮಾರ್, ಹೊಸಳ್ಳಪ್ಪ ಸದಸ್ಯರುಗಳಾದ ಲೋಕೇಶ್, ರಾಜು, ವಿರೂಪಾಕ್ಷ, ಬೋಜರಾಜ, ತಿಮ್ಮಣ್ಣಗೌಡ, ಕೃಷ್ಣಯ್ಯ ,ಲೋಕೇಶ್ ಗೌಡ, ಚಂದ್ರಶೇಖರ್ , ವಸಂತ್, ಮುಂತಾದವರು ಪಾಲ್ಗೊಂಡಿದ್ದರು.
ವರದಿ: ಸುರೇಶ್ ಬಾಬು ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz