ಭಾರತ — ಪಾಕಿಸ್ತಾನ ಸಂಘರ್ಷದ ಬಳಿಕ ಪಾಕಿಸ್ತಾನದ ಮೇಲಿನ ದ್ವೇಷ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನದಲ್ಲಿ ಪಾಕ್ ಎಂಬ ಹೆಸರಿದೆ ಎನ್ನುವ ಕಾರಣಕ್ಕೆ “ಮೈಸೂರು ಪಾಕ್” ಹೆಸರನ್ನು ಬದಲಿಸಲಾಗಿದೆ.
ರಾಜಸ್ಥಾನದಲ್ಲಿ ಮೈಸೂರು ಪಾಕ್ ನ ಹೆಸರನ್ನು ಮೈಸೂರು ಶ್ರೀ ಎಂದು ಬದಲಿಸಲಾಗಿದೆ. ಮೈಸೂರು ಪಾಕ್ ನಲ್ಲಿ ಪಾಕ್ ಎಂಬ ಹೆಸರು ಬರುತ್ತದೆ ಎನ್ನುವ ಕಾರಣಕ್ಕೆ ಸಿಹಿ ತಿನಿಸುಗಳ ಅಂಗಡಿ ಮಾಲೀಕರು ‘ಪಾಕ್’ ಪದವನ್ನು ತೆಗೆದು ಅಲ್ಲಿಗೆ ‘ಶ್ರೀ’ ಎಂದು ಹೆಸರಿಟ್ಟಿದ್ದಾರೆ.
ಮೈಸೂರು ಪಾಕ್ ನ ಹೆಸರು ಮಾತ್ರವಲ್ಲದೇ ಮೋತಿ ಪಾಕ್, ಗೊಂಡ್ ಪಾಕ್ ಹೆಸರನ್ನೂ ಬದಲಿಸಲಾಗಿದ್ದು, ಪಾಕ್ ಎಂಬ ಶಬ್ದದ ಬದಲಿ ಶ್ರೀ ಎಂದು ಬದಲಿಸಲಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.
ಭಾರತದಲ್ಲಿರುವ ಸಿಹಿ ತಿನಿಸುಗಳ ಹೆಸರಿಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ. ಪಾಕ್ ಎಂದರೆ ಪಾಕಿಸ್ತಾನವಲ್ಲ, ಪಾಕ ಎಂದರ್ಥ ಆದ್ರೆ, ವ್ಯಾಪಾರಿಗಳು ಪಾಕ್ ಎಂಬ ಹೆಸರು ಬಳಸಲು ವಿರೋಧ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW