ಕೊರಟಗೆರೆ: ಗ್ರಾಮೀಣ ಭಾಗದ ಜನರ ಜೀವನವನ್ನ ಕಟ್ಟಕೊಟ್ಟಿದೆ ಹೈನುಗಾರಿಕೆ. ಸ್ವಾವಲಂಬಿ ಜೀವನಕ್ಕೆ ದಾರಿ ದೀಪವಾದ ಹಾಲು ಉತ್ಪಾದಕರು ತಮ್ಮ ಸಂಸಾರಕ್ಕೆ ಆಸರೆ ಎಂದು ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಸಾದರ ಸಮುದಾಯ ಭವನದಲ್ಲಿ ತುಮಲು ನಿರ್ದೇಶಕ ಸಿದ್ದಗಂಗಯ್ಯ ಅವರ ೬೨ ನೇ ಜನ್ಮ ದಿನ ಅಂಗವಾಗಿ ಏರ್ಪಡಿಸಲಾಗಿದ್ದ ತುಮಕೂರು ಹಾಲು ಒಕ್ಕೂಟ ಹಾಗೂ ಸಪ್ತಗಿರಿ ಆಸ್ಪತ್ರೆ ಸಹಯೋಗದಲ್ಲಿ ಬೃಹತ್ ಆರೋಗ್ಯ ತಪಾಸಣೆ ಮತ್ತು ಶಾಸ್ತ್ರ ಚಿಕಿತ್ಸಾ ಶಿಬಿರವನ್ನ ಉದ್ಘಾಟಿಸಿ ಮಾತನಾಡಿದರು.
ಹೈನುಗಾರಿಕೆಯಿಂದ ಎಷ್ಟೋ ಕುಟುಂಬಗಳ ಮಕ್ಕಳ ಪಾಲನೇ ಮಾಡುತ್ತಿರುವುದು ನಮ್ಮ ಕಣ್ಣ ಮುಂದೆ ಇದೆ. ಇದರಿಂದ ಗ್ರಾಮೀಣ ಭಾಗದ ಮಕ್ಕಳು ದೊಡ್ಡ ದೊಡ್ಡ ವ್ಯಾಸಂಗ ಮಾಡುತ್ತಿದ್ದು, ಸಿದ್ದರಬೆಟ್ಟದ ರೋಟರಿ ಸಂಸ್ಥೆಯಿಂದ ಕಾಮಧೇನು ಎನ್ನವ ಹೆಸರಿನಲ್ಲಿ ಸುಮಾರು ೨೪೦ ಕ್ಕೂ ಹೆಚ್ಚು ಹಸುಗಳನ್ನ ರೈತರಿಗೆ ನೀಡಲಾಗಿದೆ. ಹಸುವಿನ ಹಣವನ್ನ ಅಂತ ಅಂತವಾಗಿ ರೈತರು ಹಾಲು ಹಾಕುವುದರ ಮೂಲಕ ತಿರಿಸಲಾಗುತ್ತಿದೆ ಎಂದು ತಿಳಿಸಿದರು.
ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ಮಾತನಾಡಿ, ಹೈನುಗಾರಿಕೆ ಎನ್ನವುದು ಇಂದು ಬೃಹತ್ ಆಗಿ ಬೆಳೆದು ನಿಂತಿದೆ. ಹಾಲು ಉತ್ಪಾದನೆಯಿಂದ ಒಂದು ಸಂಸಾರ ಜೀವನ ನೆಡಸಬಹುದಾಗಿದೆ. ನಮ್ಮ ಜಿಲ್ಲೆಯಿಂದ ಸಾಕಷ್ಟು ಹಾಲು, ಮೊಸರು, ತುಪ್ಪ, ಸೇರಿದಂತೆ ಅನೇಕ ಹಾಲಿನಿಂದ ತಯಾರಿಸುವ ಪದಾರ್ಥಗಳು ಹೊರ ರಾಜ್ಯಗಳಲ್ಲಿ ಬೇಡಿಕೆ ಹೊಂದಿದ್ದು, ಇದರಿಂದ ರೈತನಿಗೂ ಸಾಕಷ್ಟು ಲಾಭ ತರಲಿದೆ ಎಂದರು.
ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಸಿದ್ದಗಂಗಯ್ಯ ಮಾತನಾಡಿ, ಶಿಕ್ಷಕನಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಟ್ಟಿದ್ದೇನೆ. ಎಷ್ಟೋ ವಿದ್ಯಾರ್ಥಿಗಳು ಒಳ್ಳೆಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಕೊರಟಗೆರೆ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಪದಾಧಿಕಾರಿಗಳು ನನಗೆ ಆಶಿರ್ವಾದ ಮಾಡಿದ ಕಾರಣ ಇಂದು ಇವರ ಸೇವೆ ಮಾಡಲು ಸಾಧ್ಯವಾಗಿದೆ. ಮುಂದೆ ಸಹ ರೈತರ ಸೇವೆ ಮಾಡಲು ಸದಾ ಮುಂದೆ ಬರುತ್ತೇನೆ ಎಂದು ತಿಳಿಸಿದರು.
ಅಂತರಾಷ್ಟ್ರೀಯ ನಗೆ ಭಾಷಣಗಾರರಾದ ಬರಗೂರು ಸುಧಾ ಮಾತನಾಡಿ, ಹೈನುಗಾರಿಕೆಯಿಂದ ಹೆಣ್ಣು ಮಕ್ಕಳು ತಮ್ಮ ಸ್ವಂತ ಕಾಲಿನಲ್ಲಿ ನಿಲ್ಲುವಂತೆ ಮಾಡಿದೆ. ಎಷ್ಟೋ ಯುವಕರನ್ನ ನಿರುದ್ಯೋಗದಿಂದ ಮುಕ್ತ ಮಾಡಿದೆ. ಇಡಿ ಭಾರತ ದೇಶದಲ್ಲಿ ಹೈನುಗಾರಿಕೆಯಲ್ಲಿ ನಮ್ಮ ತುಮಕೂರು ಮೊದನೇ ಸ್ಥಾನದಲ್ಲಿ ಇರುವುದು ನಮಗೆ ಹೆಮ್ಮೆಯ ವಿಷಯವಾಗಿದೆ, ಇದೇಕ್ಕಲ್ಲ ಕಾರಣ ಹಾಲು ಉತ್ಪಾದಕರ ಸಹಕಾರ ಸಂಘಗಳು ಎಂದು ಹೇಳಿದರು.
ತುಮುಲ್ ನಿರ್ದೇಶಕ ಎಸ್.ಆರ್.ಗೌಡ ಮಾತನಾಡಿ ರೈತರು ಬೆಳೆದಂತಹ ಬೆಳೆಗಳಿಗೆ ಸರಿಯಾದ ಬೆಲೆ ಸಿಕ್ಕದೆ ಹೈನುಗಾರಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಪ್ರತಿದಿನ 11 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದನೆ ಆಗುತ್ತಿದೆ. ಒಂದು ವಾರಕ್ಕೆ ರೈತರಿಗೆ ಒಟ್ಟು 20 ಕೋಟಿ ಹಣ ಕೈ ಸೇರಲಿದೆ. ಅದೇ ಒಂದು ವರ್ಷಕ್ಕೆ ೧೩೦೦ ಕೋಟಿ ಹಣ ನಮ್ಮ ರೈತರಿಗೆ ಹೋಗುತ್ತದೆ. ಎಂದು ತಿಳಿಸಿದರು.
ಇದೆ ವೇಳೆ ತಾಲೂಕು ಹಾಲು ಶೇಖರಣೆ ಮತ್ತು ತಾಂತ್ರಿಕ ವ್ಯವಸ್ಥಾಪಕರು ಶ್ರೀನಿವಾಸ್ ಸಹಕಾರಿ ಅಭಿವೃದ್ಧಿ ಅಧಿಕಾರಿ ಗುರುರಾಜ್, ಜೆಡಿಎಸ್ ಅಧ್ಯಕ್ಷ ಕಾಮರಾಜು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕರಂಗಯ್ಯ, ಬಿಜೆಪಿ ಅಧ್ಯಕ್ಷ ರುದ್ರೇಶ್, ನಿಕಟ ಪೂರ್ವ ಅಧ್ಯಕ್ಷ ಡಾ.ದರ್ಶನ್, ಮುಖಂಡರಾದ ಶಿವರುದ್ರಯ್ಯ, ಕುರುಡುಗಾನಹಳ್ಳಿ ರಂಗಣ್ಣ, ಕುಮಾರಣ್ಣ, ಮಾವತ್ತೂರು ಮಂಜುನಾಥ್, ಶಿವರಾಜು, ಆಶ್ವಥ್ ನಾರಾಯಣ್ ರಾಜು, ರವಿವರ್ಮ, ಸೇರಿದಂತೆ ಇತರರು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


