ಹೆಚ್.ಡಿ.ಕೋಟೆ: ಇಲ್ಲಿನ ಮಿನಿ ವಿಧಾನಸೌಧ ಮುಂಭಾಗದಲ್ಲಿ ಜೆಡಿಎಸ್ ಯುವ ಮುಖಂಡ ಕೃಷ್ಣನಾಯಕ ಅವರ ನೇತೃತ್ವದಲ್ಲಿ ಮಾಡಿರುವ ಅಪ್ಪಾಜಿ ಕ್ಯಾಂಟಿನ್ ನ್ನು ಹೆಚ್.ಡಿ.ಕುಮಾರಸ್ವಾಮಿ ಉದ್ಘಾಟನೆಯನ್ನು ಮಾಡಿದರು.
ತಾಲ್ಲೂಕು ಆಡಳಿತ ಮುಂಭಾಗದಲ್ಲಿ ಇಂದಿನಿಂದ ಅಪ್ಪಾಜಿ ಕ್ಯಾಂಟಿನ್ ಯಲ್ಲಿ ತಿಂಡಿ ಊಟ ಕ್ಕೆ ತಾಲ್ಲೂಕಿನ ಮುಖಂಡರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ಕ್ಯಾಂಟಿನ್ ಯಲ್ಲಿ ತಾಲ್ಲೂಕಿನ ಜನತೆಗೆ ಅನುಕೂಲವಾಗಲಿ ಎಂದು ಸಮಾಜ ಸೇವೆಕ ಕೃಷ್ಣ ನಾಯಕ ಕ್ಯಾಂಟಿನ್ ಯನ್ನು ತೆರೆದಿದ್ದಾರೆ. ಕ್ಯಾಂಟಿನ್ ನಲ್ಲಿ ತಿಂಡಿ ಊಟದ ಬೆಲೆ 10 ರೂಪಾಯಿ ಅಷ್ಟೇ. ತಾಲ್ಲೂಕಿನ ಸಾರ್ವಜನಿಕರು ಮತ್ತು ರೈತರು ವಿವಿಧ ಗ್ರಾಮಗಳಿಂದ ಬಂದ್ದಿರುತ್ತಾರೆ ಕಡಿಮೆ ಬೆಲೆಯಲ್ಲಿ ತಿಂಡಿ ಊಟ ನೀಡುತ್ತಿರುವುದು ಜನರಿಗೆ ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ಸಿ.ವಿ.ನಾಗರಾಜು, ಹುಣಸೂರು ಜೆಡಿಎಸ್ ತಾಲ್ಲೂಕು ಅಧ್ಯಕ್ಷ ದೇವರಹಳ್ಳಿ ಸೋಮಶೇಖರ್, ಗ್ಯಾಸ್ ಪ್ರಕಾಶ್, ಸಾಗರೆ ಶಂಕರ್, ನೆನಪು ರವಿ, ಪ್ರಶಾಂತ್ ಪ್ರವೀಣ್, ಕೃಷ್ಣಪುರಶಿವಯ್ಯ, ರಘು ಇನ್ನೂ ಮುಖಂಡರು ಭಾಗಿಯಾಗಿದ್ದರು
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz