nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು ದಸರಾ ಹೆಲಿರೈಡ್ ಗೆ ವಿಶ್ವವಿದ್ಯಾಲಯ ಕ್ಯಾಂಪಸ್ ನ ಜಾಗ ನೀಡಲು ಆಡಳಿತ ಮಂಡಳಿ ನಕಾರ: ಶೈಕ್ಷಣಿಕ ಹಿತದೃಷ್ಟಿಯಿಂದ ವಿವಿ ನಿರ್ಧಾರ

    October 12, 2026

    ತುಮಕೂರು: ವಿದ್ಯಾರ್ಥಿ ಹಿತಾಸಕ್ತಿಗಿಂತ ವಾಣಿಜ್ಯ ಲಾಭ ಮುಖ್ಯವೇ?: ತುಮಕೂರು ವಿವಿಯಲ್ಲಿ ಹೆಲಿರೈಡ್‌ ಗೆ AIDSO ತೀವ್ರ ಆಕ್ಷೇಪ

    October 12, 2026

    ಶಿವಮೊಗ್ಗದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಕಾರಿಗೆ ಯುವ ಕಾಂಗ್ರೆಸ್ ಮುತ್ತಿಗೆ ಯತ್ನ

    October 12, 2026
    Facebook Twitter Instagram
    ಟ್ರೆಂಡಿಂಗ್
    • ತುಮಕೂರು ದಸರಾ ಹೆಲಿರೈಡ್ ಗೆ ವಿಶ್ವವಿದ್ಯಾಲಯ ಕ್ಯಾಂಪಸ್ ನ ಜಾಗ ನೀಡಲು ಆಡಳಿತ ಮಂಡಳಿ ನಕಾರ: ಶೈಕ್ಷಣಿಕ ಹಿತದೃಷ್ಟಿಯಿಂದ ವಿವಿ ನಿರ್ಧಾರ
    • ತುಮಕೂರು: ವಿದ್ಯಾರ್ಥಿ ಹಿತಾಸಕ್ತಿಗಿಂತ ವಾಣಿಜ್ಯ ಲಾಭ ಮುಖ್ಯವೇ?: ತುಮಕೂರು ವಿವಿಯಲ್ಲಿ ಹೆಲಿರೈಡ್‌ ಗೆ AIDSO ತೀವ್ರ ಆಕ್ಷೇಪ
    • ಶಿವಮೊಗ್ಗದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಕಾರಿಗೆ ಯುವ ಕಾಂಗ್ರೆಸ್ ಮುತ್ತಿಗೆ ಯತ್ನ
    • ಹಾಸನ: ಪ್ಲಾಸ್ಟಿಕ್ ಚೀಲದಲ್ಲಿ ವೃದ್ಧೆಯ ಮೃತದೇಹ ತುಂಬಿ ನಾಲೆಗೆ ಎಸೆದಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್– ಆರೋಪಿ ಬಂಧನ
    • ತಿಪಟೂರು: ಬಿ.ಎಚ್. ರಸ್ತೆಯಲ್ಲಿ ಬೃಹತ್ ಮರ ಬಿದ್ದು ನಿವೃತ್ತ ಶಿಕ್ಷಕ ದುರಂತ ಸಾವು
    • ಅಪ್ರಾಪ್ತರ ಕೈಗೆ ವಾಹನ ನೀಡಿದರೆ ಪೋಷಕರಿಗೆ ₹25 ಸಾವಿರ ದಂಡ: ಭಾಲ್ಕಿ ಡಿವೈಎಸ್ಪಿ ಎಚ್ಚರಿಕೆ
    • ದೇಶದಲ್ಲಿ ಪ್ರಜಾಪ್ರಭುತ್ವವೋ ಅಥವಾ ತುರ್ತು ಪರಿಸ್ಥಿತಿಯೋ? ಪ್ರಧಾನಿ ಮೋದಿ ಉತ್ತರಿಸಬೇಕು: ಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ
    • ‘ಪ್ರೇಮದ ಊರಲಿ’ ಸಿನಿಮಾ ವೀಕ್ಷಣೆಗೆ ಹೋಗಿದ್ದ ಕುಟುಂಬಕ್ಕೆ ಶಾಕ್; ಮಂಚದ ಕೆಳಗೆ ಅವಿತಿದ್ದ ಕಳ್ಳ ರೆಡ್‌ ಹ್ಯಾಂಡ್‌ ಸಿಕ್ಕಿಬಿದ್ದ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » “ಅರ್ಥಪೂರ್ಣ ಕಾರ್ಯಕ್ರಮದ ಮೂಲಕ ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ: ಸಿಎಂ ಬೊಮ್ಮಾಯಿ
    ರಾಜ್ಯ ಸುದ್ದಿ March 28, 2022

    “ಅರ್ಥಪೂರ್ಣ ಕಾರ್ಯಕ್ರಮದ ಮೂಲಕ ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ: ಸಿಎಂ ಬೊಮ್ಮಾಯಿ

    By adminMarch 28, 2022No Comments2 Mins Read
    puneeth rajkumar

    ಡಾ: ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನವನ್ನು ಸರ್ಕಾರ ಘೋಷಿಸಿದೆ. ಅವರ ಕುಟುಂಬದವರ ಬಳಿ ಮಾತನಾಡಿ ಪ್ರಶಸ್ತಿ ಪ್ರದಾನ ಮಾಡುವ ದಿನಾಂಕವನ್ನು ನಿಗದಿ ಮಾಡಲಾಗುವುದು. ಪುನೀತ್ ರಾಜ್‍ಕುಮಾರ್ ಅವರ ಪ್ರತಿಭೆ ಹಾಗೂ ಮಾನವೀಯ ಗುಣಗಳಿಗೆ ತಕ್ಕ ರೀತಿಯಲ್ಲಿ ಅರ್ಥಪೂರ್ಣವಾಗಿ ದೊಡ್ಡ ಪ್ರಮಾಣದಲ್ಲಿ ಕರ್ನಾಟಕ ರತ್ನ ನೀಡಲು ಚಿಂತನೆ ಮಾಡಿದ್ದು, ತಯಾರಿಯನ್ನೂ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.

    ಅವರು ಇಂದು ಬಿಬಿಎಂಪಿ ನೌಕರರ ಕನ್ನಡ ಸಂಘ ಆಯೋಜಿಸಿದ್ದ ಡಾ: ರಾಜ್ ಕುಮಾರ್ ಗಾಜಿನ ಮನೆ, ಬಿಬಿಎಂಪಿ ಕಚೇರಿ ಆವರಣದಲ್ಲಿ ಡಾ: ಪುನೀತ್ ರಾಜ್‍ಕುಮಾರ್ ಅವರ ಕಂಚಿನ ಪುತ್ಥಳಿಯ ಅನಾವರಣ ಹಾಗೂ ಗಂಧದಗುಡಿ ಉದ್ಯಾನವನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

    ಪುನೀತ್ ರಾಜ್‍ಕುಮಾರ್ ನಿಜವಾಗಿಯೂ ನಮ್ಮ ಕರ್ನಾಟಕದ ರತ್ನ (Karnataka Ratna award ).ಈ ರತ್ನದ ಪುತ್ಥಳಿಯನ್ನು ಬಿಬಿಎಂಪಿ ಕನ್ನಡ ನೌಕರರ ಸಂಘ ಅನಾವರಣ ಮಾಡಿರುವುದು ನಿಜವಾಗಿಯೂ ಪುನೀತ್ ರಾಜ್ ಕುಮಾರ್ ಅವರ ಬಗೆಗಿನ ಪ್ರೀತಿ ಬಹಳ ದೊಡ್ಡದು. ಅದರಲ್ಲಿ ಪ್ರೀತಿ, ವಿಶ್ವಾಸ, ಅಭಿಮಾನದ ಸಂಕೇತವಿದೆ ಎಂದರು.

    ಡಾ.ರಾಜ್ ಕುಟುಂಬದ ಪ್ರಬುದ್ಧತೆ:

    ಪುನೀತ್ ರಾಜ್ ಕುಮಾರ್ ಕಾಲವಾದ ಸಂದರ್ಭದಲ್ಲಿ ಕುಟುಂಬ ಅತ್ಯಂತ ಮುತ್ಸದಿತನದಿಂದ ನಡೆದುಕೊಂಡಿದೆ. ಇದನ್ನು ಎಂದಿಗೂ ಮರೆಯಲಾಗದು. ಕಷ್ಟದಲ್ಲಿ ಸಂಯಮವನ್ನು ಉಳಿಸಿಕೊಳ್ಳುವುದು ಬಹಳ ಕಷ್ಟ. ಸಂತುಲನದ ಭಾವ, ಚಿಂತನೆ, ನಡವಳಿಕೆ ಬಹಳ ಮುಖ್ಯ. ಇದು ಅವರ ಕುಟುಂಬದವರು ಪ್ರಬುದ್ಧತೆಯನ್ನು ತೋರುತ್ತದೆ ಎಂದರು. ಪುನೀತ್ ರಾಜ್ ಕುಮಾರ್ ಅವರ ಜಾತ್ರೆ ನಿರಂತರವಾಗಿ ಸಾಗುತ್ತದೆ ಎಂದರು.

    ಪುನೀತ್ ಕನ್ನಡದ ಉಸಿರು:

    ಪುನೀತ್ ರಾಜ್‍ಕುಮಾರ್ ಕೇವಲ ಹೆಸರಾಗಿ ಉಳಿದಿಲ್ಲ. ಪ್ರತಿಯೊಬ್ಬ ಕನ್ನಡಿಗನ ಉಸಿರಾಗಿ ಉಳಿದಿದ್ದಾರೆ. ಒಬ್ಬ ಮನುಷ್ಯ ಹೇಗೆ ಬದುಕಿದ ಎನ್ನುವುದನ್ನು ಅವರು ಇಲ್ಲದೇ ಇರುವಾಗ ತಿಳಿಯುತ್ತದೆ. ಅತ್ಯಂತ ಸಣ್ಣ ವಯಸ್ಸಿನಲ್ಲಿ ನಮ್ಮನ್ನು ನಗುನಗುತ್ತಲೇ ಬಿಟ್ಟುಹೋಗಿದ್ದಾರೆ. ಕನ್ನಡಿಗರ ಪ್ರತಿಯೊಂದು ಕುಟುಂಬದಲ್ಲಿ ತಮ್ಮ ಕುಟುಂಬದ ಸದಸ್ಯನೊಬ್ಬನನ್ನು ಕಳೆದುಕೊಂಡ ಭಾವನೆ ಇಡೀ ಕರ್ನಾಟದಲ್ಲಿ ಆವರಿಸಿದೆ. ಯಾದಗಿರಿ, ಹಾವೇರಿ, ಮೈಸೂರು ಹೀಗೆ ಕರ್ನಾಟಕದ ಮೂಲೆ ಮೂಲೆಗೆ ಹೋದಲ್ಲಿ ಅವರ ಭಾವಚಿತ್ರಗಳನ್ನು ಪೂಜಿಸುವುದನ್ನು ನಾವು ಕಾಣುತ್ತೇವೆ ಎಂದರು.
    ಅವರ ಸಮಾಧಿಗೆ ಇಂದಿಗೂ ಅವರ ಅಭಿಮಾನಿಗಳ ದಂಡು ಬರುವುದನ್ನು ನೋಡಿದಾಗ ಆಶ್ಚರ್ಯವಾಗುತ್ತದೆ. ಎಷ್ಟು ಅದ್ಭುತವಾದ ಪ್ರೀತಿ ವಿಶ್ವಾಸವನ್ನು ಪುನೀತ್ ರಾಜ್‍ಕುಮಾರ್ ಗಳಿಸಿದ್ದರು ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಪುನೀತ್ ರಾಜ್‍ಕುಮಾರ್ ನಮ್ಮ ನಡುವೆ ಇದ್ದಾರೆ ಎಂಬ ಭಾವನೆಯಿಂದ ನಮ್ಮ ಎಲ್ಲಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ.ಅವರನ್ನು ನಾವು ಕಳೆದುಕೊಂಡಿಲ್ಲ. ಆದರೆ ಅವರಿಂದ ಬಹಳಷ್ಟನ್ನು ಪಡೆದುಕೊಂಡಿದ್ದೇವೆ ಎಂದರು.

    ಆಕರ್ಷಕ ನಗು:

    ಅವರ ನಗು ಕನ್ನಡಿಗರನ್ನಷ್ಟೇ ಅಲ್ಲ ಎಲ್ಲಾ ಭಾಷಿಕರನ್ನು ಆಕರ್ಷಸಿದೆ. ಅವರ ಆತ್ಮೀಯತೆ ಎಲ್ಲಾ ಬಾಷೆಯ ಮೇರು ನಟರನ್ನು ಸೆಳೆದಿದೆ.ಅವರ ಬಗ್ಗೆ ಅಭಿಮಾನದಿಂದ ಮಾತನಾಡಿದಾಗ ಅವರು ಗಳಿಸಿದ್ದ ಸ್ನೇಹ, ವಿಶ್ವಾಸವನ್ನು ತೋರಿಸುತ್ತದೆ.

    ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ನಿರರ್ಗಳವಾಗಿ ಅಭಿನಯಿಸಬಲ್ಲವರಾಗಿದ್ದರು.ನನ್ನ ನಟನೆಗೆ ನಮ್ಮ ತಂದೆಯೇ ಕಾರಣ.ಪಾತ್ರದೊಳಗೆ ಹೋಗಿ ನಟನೆ ಮಾಡು. ತಂದೆ ಎದುರು ಮಾಡುತ್ತಿದ್ದೇನೆ ಎನ್ನುವ ಭಾವ ಇರಬಾರದು ಎಂದು ಅವರ ತಂದೆ ಹೇಳಿಕೊಟ್ಟಿದ್ದರು ಎಂದು ಪುನೀತ್ ತಿಳಿಸಿದ್ದನ್ನು ಮುಖ್ಯಮಂತ್ರಿಗಳು ಸ್ಮರಿಸಿದರು.

    ಮುಗ್ಧತೆ:

    ಮೊದಲ ಚಿತ್ರದಿಂದ ಕೊನೆ ಚಿತ್ರದವರೆಗೂ ಪುನೀತ್ ಅವರ ನಟನೆಯಲ್ಲಿ ಮುಗ್ದತೆ ಉಳಿದುಕೊಂಡಿತ್ತು. ಮುಗ್ಧತೆ ದೇವರು ಕೊಡುವ ಕಾಣಿಕೆ. ಎಲ್ಲರಿಗೂ ಅದು ಬರುವುದಿಲ್ಲ. ಕೆಲವೇ ಕೆಲವರಿಗೆ ಅದನ್ನು ಕಾಪಾಡಿಕೊಂಡು ಹೋಗುವುದು ಬರುತ್ತದೆ. ಕನ್ನಡ ಚಿತ್ರರಂಗದಲ್ಲಿ ಮುಗ್ಧತೆಯನ್ನು ಕಾಪಾಡಿಕೊಂಡವರು ಡಾ: ರಾಜ್‍ಕುಮಾರ್ ಹಾಗೂ ಡಾ: ಪುನೀತ್ ರಾಜ್ ಕುಮಾರ್ ಇಬ್ಬರೇ ಎಂದರು.

    ವರದಿ: ಆಂಟೋನಿ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

    admin
    • Website

    Related Posts

    ಶಿವಮೊಗ್ಗದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಕಾರಿಗೆ ಯುವ ಕಾಂಗ್ರೆಸ್ ಮುತ್ತಿಗೆ ಯತ್ನ

    October 12, 2026

    ‘ಪ್ರೇಮದ ಊರಲಿ’ ಸಿನಿಮಾ ವೀಕ್ಷಣೆಗೆ ಹೋಗಿದ್ದ ಕುಟುಂಬಕ್ಕೆ ಶಾಕ್; ಮಂಚದ ಕೆಳಗೆ ಅವಿತಿದ್ದ ಕಳ್ಳ ರೆಡ್‌ ಹ್ಯಾಂಡ್‌ ಸಿಕ್ಕಿಬಿದ್ದ!

    October 12, 2026

    “30 ನಾಯಕರಿಗೆ ಕೋಟಿ ಕೋಟಿ ಕೊಟ್ಟಿದ್ದೇನೆ” ಎಂದ ಪ್ರದೀಪ್ ಈಶ್ವರ್! ಕಾಂಗ್ರೆಸ್‌ ನಲ್ಲಿ ಭಿನ್ನಮತ ಸ್ಫೋಟ

    October 11, 2026

    Leave A Reply Cancel Reply

    Our Picks

    ‘We’re Sorry’: ಸಿಜೆಪಿ ನಾಯಕ ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಸುದ್ದಿ ಮುಟ್ಟಿಸಿದ ಪೊಲೀಸ್; ವೈರಲ್ ವೀಡಿಯೊ

    October 12, 2026

    ನಾನಾ ಪಾಟೇಕರ್ ಸಾವಿಗೆ ನಿಜ ಕಾರಣ ಏನು? ಮರಣೋತ್ತರ ಪರೀಕ್ಷೆ ವರದಿ ಬಯಲು!

    October 11, 2026

     CJP ನಾಯಕರ ವಶಕ್ಕೆ ಪುರುಷ ಪೋಲಿಸರ  ಮಹಿಳಾ ಪೊಲೀಸರ ಎಂಟ್ರಿ ಹಿಂದಿನ ಕಾರಣವೇನು?

    October 11, 2026

    ಬೀದರ್‌: ರಾಷ್ಟ್ರೀಯ ಭೀಮ್ ರಾಜ್ ಸೇನಾ ಅಧ್ಯಕ್ಷ ರಾಜೇಶ್‌ ಕಾಂಬ್ಳೆಗೆ ಸನ್ಮಾನ

    October 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರು ದಸರಾ ಹೆಲಿರೈಡ್ ಗೆ ವಿಶ್ವವಿದ್ಯಾಲಯ ಕ್ಯಾಂಪಸ್ ನ ಜಾಗ ನೀಡಲು ಆಡಳಿತ ಮಂಡಳಿ ನಕಾರ: ಶೈಕ್ಷಣಿಕ ಹಿತದೃಷ್ಟಿಯಿಂದ ವಿವಿ ನಿರ್ಧಾರ

    October 12, 2026

    ತುಮಕೂರು: ತುಮಕೂರು ದಸರಾ–2026 ಉತ್ಸವದ ಅಂಗವಾಗಿ ಜಿಲ್ಲಾಡಳಿತದಿಂದ ಆಯೋಜಿಸಲು ಉದ್ದೇಶಿಸಲಾಗಿದ್ದ ಹೆಲಿಕ್ಯಾಪ್ಟರ್ ರೈಡ್ ಗೆ (Helicopter Ride) ತುಮಕೂರು ವಿಶ್ವವಿದ್ಯಾನಿಲಯವು…

    ತುಮಕೂರು: ವಿದ್ಯಾರ್ಥಿ ಹಿತಾಸಕ್ತಿಗಿಂತ ವಾಣಿಜ್ಯ ಲಾಭ ಮುಖ್ಯವೇ?: ತುಮಕೂರು ವಿವಿಯಲ್ಲಿ ಹೆಲಿರೈಡ್‌ ಗೆ AIDSO ತೀವ್ರ ಆಕ್ಷೇಪ

    October 12, 2026

    ಶಿವಮೊಗ್ಗದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಕಾರಿಗೆ ಯುವ ಕಾಂಗ್ರೆಸ್ ಮುತ್ತಿಗೆ ಯತ್ನ

    October 12, 2026

    ಹಾಸನ: ಪ್ಲಾಸ್ಟಿಕ್ ಚೀಲದಲ್ಲಿ ವೃದ್ಧೆಯ ಮೃತದೇಹ ತುಂಬಿ ನಾಲೆಗೆ ಎಸೆದಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್– ಆರೋಪಿ ಬಂಧನ

    October 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.