ತುರುವೇಕೆರೆ: ನಲಿ ಕಲಿ ಎಂಬ ನುಡಿಯನ್ನು ಪ್ರತಿಯೊಂದು ಶಾಲೆಗಳ ಮೇಲೂ ಬರೆದಿರುವುದನ್ನು ನಾವೆಲ್ಲರೂ ನೋಡಿರುತ್ತೇವೆ. ವಿಷಯ ಏನಪ್ಪ ಅಂದರೆ, ಇಂದಿನ ಈ ವ್ಯವಸ್ಥೆಯಲ್ಲಿ ಕಲಿಯಲು ಸರಿಯಾದ ಕಟ್ಟಡಗಳಿಲ್ಲ ಮತ್ತು ನಲಿಯಲು ಇರುವ ಆಟದ ಮೈದಾನವನ್ನು ಉಳಿಸಿಕೊಂಡು ಸುಸಜ್ಜಿತವಾಗಿ ಇಟ್ಟುಕೊಳ್ಳುವ ಬಗ್ಗೆ ಯಾವೊಬ್ಬ ಜನಪ್ರತಿನಿದಿಯೂ ತಲೆಕೆಡಿಸಿಕೊಂಡಿಲ್ಲ.
ತುರುವೇಕೆರೆ ತಾಲ್ಲೂಕಿನ ಮಾಯಸಂದ್ರದ ಸರ್ಕಾರಿ ಶಾಲಾ ಮೈದಾನವು ಸರಿಯಾದ ವ್ಯವಸ್ಥೆ ಇಲ್ಲದೇ ಮಕ್ಕಳ ಆಟೋಟಗಳಿಗೆ ತಡೆಯಾಗಿದೆ. ಕಾಲಕಾಲಕ್ಕೆ ಸರಿಯಾದ ನಿರ್ವಹಣೆ ಇಲ್ಲದೇ ಮೈದಾನದ ತುಂಬಾ ಗಿಡಗಂಟೆಗಳು ಬೆಳೆದುಕೊಂಡ ಕಾರಣ ಮೈದಾನವು ಆಡಲು ಯೋಗ್ಯವಲ್ಲದಂತಾಗಿದೆ.
ಕಳೆದ ವರ್ಷ ಜನವರಿಯಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಗೆ ಆಗಮಿಸಿದ್ದ ಇಲ್ಲಿನ ಸ್ಥಳೀಯ ಶಾಸಕರಾದ ಮಸಾಲ ಜಯರಾಮ್’ರವರು ಈ ಕ್ರೀಡಾಂಗಣಕ್ಕೆ ಇನ್ನು 6 ತಿಂಗಳಿನಲ್ಲಿ ಈ ಮೈದಾನಕ್ಕೆ ಫೆಡ್ ಲೈಟ್ ವ್ಯವಸ್ಥೆ ಮಾಡಿಸಿಕೊಡುವ ಆಶ್ವಾಸನೆ ನೀಡಿದ್ದರು. ಆದರೆ, ಒಂದು ವರ್ಷ ಕಳೆದರೂ ಆ ಮಾತು ಕೇವಲ ಆಶ್ವಾಸನೆಯಾಗಿಯೇ ಉಳಿದುಕೊಂಡಿದೆ.
ಇನ್ನಾದರೂ ಜನಪ್ರತಿನಿದಿಗಳು ಎಚ್ಚೆತ್ತುಕೊಂಡು ಈ ಕ್ರೀಡಾಂಗಣವನ್ನು ದುರಸ್ತಿಗೊಳಿಸಿ ಮಕ್ಕಳಿಗೆ ಆಡಲು ಅನುವು ಮಾಡಿಕೊಡಬೇಕಾಗಿದೆ ಎನ್ನುವ ಒತ್ತಾಯಗಳು ಇದೀಗ ಕೇಳಿ ಬಂದಿದೆ.
ವರದಿ : ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy