Subscribe to Updates
Get the latest creative news from FooBar about art, design and business.
- ನೀಟ್ ಹಗರಣ: ಧಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ತುಮಕೂರಿನಲ್ಲಿ ಕಾಂಗ್ರೆಸ್ ವಕೀಲರ ಘಟಕದಿಂದ ಪ್ರತಿಭಟನೆ
- ಸಹಕಾರ ಕ್ಷೇತ್ರಗಳ ಬೆಳವಣಿಗೆಗೆ ತರಬೇತಿ ಪೂರಕ: ಕೆ.ಎನ್.ರಾಜಣ್ಣ
- ರೂ.1.50 ಲಕ್ಷಗಳಂತೆ ಫೆಲೋಶಿಪ್: ಕಿರು ಅಧ್ಯಯನ ಯೋಜನೆಗೆ ಅರ್ಜಿ ಆಹ್ವಾನ
- ಜು.28 ರಂದು ಅರಳಿಮರದಡಿಯಲ್ಲಿ ‘ಮೊಳಗಲಿ ಜಾನಪದ’: ಸಂಗೀತ–ಸಾಂಸ್ಕೃತಿಕ ಕಾರ್ಯಕ್ರಮ
- ಪರ್ಯಾಯ ವ್ಯವಸ್ಥೆ ಮಾಡದೆ ತೆರವು ಮಾಡಬೇಡಿ: ಬೀದಿಬದಿ ವ್ಯಾಪಾರಿಗಳ ಸಂಘ ಮನವಿ
- ಚಿಕ್ಕನಾಯಕನಹಳ್ಳಿ: ಕುಡಿಯುವ ನೀರಿನ ವ್ಯವಸ್ಥೆ: ಮೂಲ ಸೌಕರ್ಯಕ್ಕೆ ಸೂಚನೆ
- ರಾಹುಲ್ ಗಾಂಧಿಯವರ ಧ್ವನಿ ಅಡಗಿಸುವುದಕ್ಕೆ ಕೇಂದ್ರದ ಪ್ರಯತ್ನ: ಡಾ.ಜಿ.ಪರಮೇಶ್ವರ
- ಕುಣಿಗಲ್: ಪಾವಸಂದ್ರ ಕಲ್ಲುಕ್ವಾರಿಯಲ್ಲಿ 12 ಜೀತದಾಳುಗಳ ರಕ್ಷಣೆ: ಉಪವಿಭಾಗಾಧಿಕಾರಿಗಳಿಂದ ವಿಮುಕ್ತಿ ಆದೇಶ
Author: admin
ಪಿವೋಟಲ್ ಕಂಪನಿಯು ಮೊದಲ ಸಿಂಗಲ್ ಸೀಟರ್ ವಿಮಾನವನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಕುತೂಹಲದ ವಿಷಯ ಅಂದರೆ, ಈ ವಿಮಾನಕ್ಕೆ ಪೈಲಟ್ ಲೈಸನ್ಸ್ ಇಲ್ಲದಿದ್ದರೂ ಹಾರಾಟ ನಡೆಸಬಹುದು. ಅಲ್ಲದೇ, ಈ ವಿಮಾನ ಕೇವಲ 1.5 ಕೋಟಿ ರೂಪಾಯಿ ಮಾತ್ರ. ಈ ಚಿಕ್ಕ ವಿಮಾನಕ್ಕೆ ಹೆಲಿಕ್ಸ್ ಎಂದು ಹೆಸರಿಡಲಾಗಿದ್ದು, ಮುಂದಿನ ಮೂರು ವರ್ಷಗಳಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಹೆಚ್ಚು ದಟ್ಟಣೆಯ ಪ್ರದೇಶಗಳಲ್ಲಿ ಈ ವಿಮಾನ ಹಾರಾಟ ನಡೆಸಲ್ಲ. ೨೫೪ ಪೌಂಡ್ ಗಳಿಗಿಂತ ಕಡಿಮೆ ತೂಕವನ್ನು ಸಿಂಗಲ್ ಸೀಟರ್ ವಿಮಾನ ಹೊಂದಿದ್ದು, 20 ಮೈಲಿ ವ್ಯಾಪ್ತಿಯನ್ನು ಹೊಂದಿದೆ. ಈ ವಿಮಾನವನ್ನು ಚಾಲನೆ ಮಾಡಲು ಪೈಲಟ್ ಪರವಾನಗಿ ಅಗತ್ಯವಿಲ್ಲ. ಆದರೆ, ಇದಕ್ಕೆ ತರಬೇತಿ ಕಡ್ಡಾಯವಾಗಿದೆ. ಸದ್ಯ ಈ ವಿಮಾನದ ಬೆಲೆ 1.5 ಕೋಟಿ ಎಂದು ಕಂಪನಿ ತಿಳಿಸಿದೆ. ಮಾಡೆಲ್ ಗಳ ಅನುಗುಣವಾಗಿ ದರ ಹೆಚ್ಚಾಗಲಿದೆ. ಪಿವೋಟಲ್ ವೆಬ್ ಸೈಟ್ ಮೂಲಕ ಈ ವಿಮಾನವನ್ನು ಬುಕ್ಕಿಂಗ್ ಮಾಡಬಹುದಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…
ಸಂಸದ ಪ್ರಜ್ವಲ್ ರೇವಣ್ಣ ಮತ್ತು ಶಾಸಕ ಎಚ್.ಡಿ. ರೇವಣ್ಣ ಲೈಂಗಿಕ ಹಗರಣ, ಅತ್ಯಾಚಾರ ಮತ್ತು ಅಪಹರಣಗಳಂತಹ ಗಂಭೀರ ಆರೋಪಗಳಡಿ ಸಿಲುಕಿರುವುದು ಜೆಡಿಎಸ್ ಶಾಸಕರನ್ನು ಅಕ್ಷರಶಃ ಮುಜುಗರಕ್ಕೀಡು ಮಾಡಿದೆ. ಎಚ್.ಡಿ. ರೇವಣ್ಣ ಬಂಧನವಾಗಿದ್ದು, ಇದರ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಬಂಧನದ ಸಾಧ್ಯತೆಯೂ ಸಹ ದಟ್ಟವಾಗಿದೆ. ಹೀಗಾಗಿ ಜೆಡಿಎಸ್ ಶಾಸಕರು ತಮ್ಮ ರಾಜಕೀಯ ಭವಿಷ್ಯವನ್ನು ಬೇರೆ ಪಕ್ಷಗಳಲ್ಲಿ ಕಂಡುಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ. ಪ್ರಜ್ವಲ್ ರೇವಣ್ಣ ಕಾಮಕಾಂಡ ಹೊರಬರುತ್ತಿದ್ದಂತೆಯೇ ಶಾಸಕ ಶರಣಗೌಡ ಕಂದಕೂರ್ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರಿಗೆ ಪತ್ರ ಬರೆದು ತಮ್ಮ ಅಸಮಾಧಾನ ಹೊರಗೆಡವಿದ್ದರು. ಪ್ರಜ್ವಲ್ ರೇವಣ್ಣರನ್ನು ಪಕ್ಷದಿಂದ ಹೊರಹಾಕದಿದ್ದರೆ, ತಮಗೆ ಜನರೆದುರು ನಾಚಿಕೆ ಪಡಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಅಳಲು ತೋಡಿಕೊಂಡಿದ್ದರು. ಇದರ ಬೆನ್ನಲ್ಲೇ ಮತ್ತೊಬ್ಬ ಜೆಡಿಎಸ್ ಮುಖಂಡ ಸಮೃದ್ಧಿ ಮಂಜುನಾಥ್ ಸಹ ಬಹಿರಂಗವಾಗಿ ತಮ್ಮ ಅಸಮಧಾನ ವ್ಯಕ್ತಪಡಿಸಿ ಪ್ರಜ್ವಲ್ ವಿರುದ್ಧ ಕಿಡಿಕಾರಿದ್ದರು. ಈ ಬೆಳವಣಿಗೆಗಳ ಬೆನ್ನಲ್ಲೇ ಸುಮಾರು 12 ಮಂದಿ ಜೆಡಿಎಸ್ ಶಾಸಕರು ಸಾಮೂಹಿಕವಾಗಿ ಪಕ್ಷ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂಬ…
ಇದೇ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ದಕ್ಷಿಣ ದೆಹಲಿ ಕ್ಷೇತ್ರದಿಂದ ರಾಜನ್ ಸಿಂಗ್(26) ಎಂಬ ತೃತೀಯಲಿಂಗಿಯೊಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಧೋತಿ, ಕ್ಯಾಪ್ ಮತ್ತು ಚಿನ್ನದ ಆಭರಣಗಳನ್ನು ಧರಿಸಿ, ಏಕಾಂಗಿಯಾಗಿ ಸಾಕೇತ್ ನಲ್ಲಿರುವ ದಕ್ಷಿಣ ದೆಹಲಿಯ ಚುನಾವಣಾಧಿಕಾರಿಯ ಕಚೇರಿಗೆ ತೆರಳಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ತೃತೀಯಲಿಂಗಿಗಳಿಗೆ ಪ್ರತ್ಯೇಕ ನಾಗರಿಕ ಸೌಲಭ್ಯಗಳ ಕೊರತೆಯಿಂದಾಗಿ ಮತ್ತು ಅವರ ಸಾಮಾಜಿಕ ಸ್ಥಿತಿಗತಿ ಮತ್ತು ಹಕ್ಕುಗಳಿಗಾಗಿ, ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜನರು ಮತ್ತು ಅಧಿಕಾರಿಗಳ ಗಮನ ಸೆಳೆಯಲು, ನಾನು ಈ ಸ್ಪರ್ಧಿಸುತ್ತಿದ್ದೇನೆ ಎಂದು ತಿಳಿಸಿದರು. ಚುನಾವಣೆಯಲ್ಲಿ ಸರ್ಕಾರವು ರಾಷ್ಟ್ರೀಯ ತೃತೀಯ ಲಿಂಗಿಗಳ ಆಯೋಗವನ್ನು ಸ್ಥಾಪಿಸಬೇಕೆಂದು ನಾನು ಬಯಸುತ್ತೇನೆ. ಇದರಿಂದಾಗಿ ನಮ್ಮ ಮೂಲಭೂತ ಅಗತ್ಯಗಳು, ಉದ್ಯೋಗ ಮತ್ತು ಶಿಕ್ಷಣದಲ್ಲಿ ಕನಿಷ್ಠ 1% ಮೀಸಲಾತಿಯನ್ನಾದರೂ ಜಾರಿಗೆ ತರಬಹುದು. ನಾನು ಗೆದ್ದರೆ, ತೃತೀಯ ಲಿಂಗಿಗಳ ಮೂಲಭೂತ ಅಗತ್ಯಗಳನ್ನು ಪೂರೈಸುವ ಕೆಲಸ ಮಾಡುತ್ತೇನೆ ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…
ಸಾಮಾನ್ಯವಾಗಿ ಎಲ್ಲ ಆಹಾರಕ್ಕೂ ವಿರುದ್ಧ ಆಹಾರಗಳು ಇರುತ್ತವೆ. ಹಾಗೆಯೇ ಮಾವಿನ ಹಣ್ಣಿ ಗೆ ಕೂಡ ವಿರುದ್ಧ ಆಹಾರವಿದೆ. ಮಾವಿನ ಹಣ್ಣಿನ ಜೊತೆ ಅಂತಹ ಆಹಾರವನ್ನು ಸೇವಿಸಿದಾಗ ಕೆಲವರಿಗೆ ಹೊಟ್ಟೆಯ ತೊಂದರೆ, ವಾಂತಿ, ಅಲರ್ಜಿ, ಚರ್ಮದ ತೊಂದರೆ ಅಥವಾ ಹೊಟ್ಟೆನೋವು ಇತ್ಯಾದಿ ಕಾಣಿಸಿಕೊಳ್ಳುತ್ತದೆ. ಅಂತಹ ಆಹಾರಗಳ ಸಂಯೋಜನೆ ಶರೀರಕ್ಕೆ ವಿಷಕಾರಿಯಾಗುತ್ತದೆ. ಆದ್ದರಿಂದ ಮಾವಿನ ಹಣ್ಣಿನ ಜೊತೆ ಅವುಗಳನ್ನು ಸೇವಿಸದೇ ಇರುವುದು ಆರೋಗ್ಯಕ್ಕೆ ಒಳ್ಳೆಯದು. ಮಾವಿನಹಣ್ಣಿಗೆ ವಿರುದ್ಧವಾದ ಅಂತಹ ಆಹಾರಗಳು ಯಾವುದೆನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಮಸಾಲೆ ಪದಾರ್ಥ: ಹೆಚ್ಚು ಮಸಾಲೆಬೆರೆತ ಆಹಾರಗಳು ಕೂಡ ಮಾವಿಗೆ ಒಳ್ಳೆಯದಲ್ಲ. ಇವೆರಡರ ಕಾಂಬಿನೇಶನ್ ನಿಂದ ದೇಹದಲ್ಲಿ ಹುಣ್ಣು, ಮೊಡವೆ ಚರ್ಮದ ಖಾಯಿಲೆಗಳು ಹುಟ್ಟಬಹುದು. ಹಾಗಾಗಿ ಮಾವಿನ ಹಣ್ಣಿನೊಂದಿಗೆ ಮಸಾಲೆಯುಕ್ತ ಪದಾರ್ಥ ಅಥವಾ ಶೀತಲ ಆಹಾರವನ್ನು ಸೇವಿಸದೇ ಇರುವುದು ಒಳಿತು. ಹಾಗಲಕಾಯಿ: ಅದರಕ್ಕೆ ಕಹಿ ಉದರಕ್ಕೆ ಸಿಹಿಯಾದ ಹಾಗಲಕಾಯಿ ಸಾಮಾನ್ಯ ದಿನಗಳಲ್ಲಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಮಾವಿನ ಹಣ್ಣಿಗೆ ಹಾಗಲಕಾಯಿ ವಿರುದ್ಧ ಆಹಾರವಾಗಿದೆ. ನಿಮ್ಮ ಊಟದಲ್ಲಿ ಹಾಗಲಕಾಯಿ ಇದ್ದು…
ಇತ್ತೀಚಿನ ದಿನಗಳಲ್ಲಿ ಪ್ರತಿ ದುಬಾರಿ ಕಾರುಗಳಲ್ಲಿ ಏರ್ ಬ್ಯಾಗ್ ಇರುತ್ತದೆ. ಕಾರು ಅಪಘಾತದ ಸಂದರ್ಭದಲ್ಲಿ, ಚಾಲಕನ ಜೀವವನ್ನು ಉಳಿಸಲು ಏರ್‌ಬ್ಯಾಗ್‌ಗಳನ್ನು ಮೊದಲು ಸಕ್ರಿಯಗೊಳಿಸಲಾಗುತ್ತದೆ. ಏರ್ ಬ್ಯಾಗ್ ಎಂದರೆ ನೈಲಾನ್ ಬಟ್ಟೆಯಿಂದ ಮಾಡಿದ ಚೀಲ. ಅಪಘಾತದ ಸಂದರ್ಭದಲ್ಲಿ, ಅದನ್ನು ತೆರೆಯಲು ಸ್ವಿಚ್ ಅನ್ನು ಬಳಸುವ ಅಗತ್ಯವಿಲ್ಲ, ಅದು ಸ್ವತಃ ತೆರೆದುಕೊಳ್ಳುತ್ತದೆ. ಕಾರಿನ ಸ್ಟೀರಿಂಗ್ ವೀಲ್, ಗೇಟ್, ಡ್ಯಾಶ್ ಬೋರ್ಡ್ ನಲ್ಲಿ ಏರ್ ಬ್ಯಾಗ್ ಅಳವಡಿಸಲಾಗಿರುತ್ತದೆ. ಇದು ಕಾರ್ ನಲ್ಲಿ ಇರಲೇಬೇಕು. ಏರ್ ಬ್ಯಾಗ್ ಸೆಕೆಂಡುಗಳಲ್ಲಿ ಓಪನ್ ಆಗುತ್ತದೆ. ಅಪಘಾತ ಸಂಭವಿಸಿದ ತಕ್ಷಣ, ಕಾರಿನ ಒಂದಷ್ಟು ಟೆಕ್ನಿಕಲ್ ಮೂಲಕ ಓಪನ್ ಆಗುತ್ತದೆ. ಕಾರಿನಲ್ಲಿ ಸಿಗುವ ಸಿಗ್ನಲ್ ಅನ್ನು ಸ್ವೀಕರಿಸಿದ ತಕ್ಷಣ, ಸ್ಟೇರಿಂಗ್ ವೀಲ್ ನ ಅಡಿಯಲ್ಲಿ ಗಾಳಿ ತುಂಬುವಿಕೆಯು ಆರಂಭವಾಗುತ್ತದೆ. ಇನ್ಫ್ಲೇಟರ್ ಸೋಡಿಯಂ ಅಜೈಡ್ ಗ್ಯಾಸ್ ನ್ನು ಇದು ಹೊಂದಿರುತ್ತದೆ. ಹಾಗೆಯೇ ಇದು ರಾಸಾಯನಿಕ ಪ್ರಕ್ರಿಯೆಯ ಮೂಲಕ Nitrogenನ್ನು ಉತ್ಪಾದಿಸುತ್ತದೆ. ಗಾಳಿಚೀಲವು Nitrogen ತುಂಬುವ ಮೂಲಕ ಉಬ್ಬಿಕೊಳ್ಳುತ್ತದೆ. ಅಸಲಿ ಹಾಗೂ ನಕಲಿ ಏರ್ ಬ್ಯಾಗ್…
ಭಾರತೀಯ ನೌಕಾಪಡೆಯು ಅಗ್ನಿವೀರ್ ಎಸ್ ಎಸ್ ಆರ್ ಮತ್ತು ಎಂಆರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಿದ್ಧರಿರುವ ಎಲ್ಲಾ ಅವಿವಾಹಿತ ಪುರುಷರು ಮತ್ತು ಮಹಿಳೆಯರು ಅಧಿಕೃತ ವೆಬ್‌ಸೈಟ್ https://www.joinindiannavy.gov.in/ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಪ್ರಕ್ರಿಯೆಯು 13 ಮೇ 2024 ರಿಂದ ಪ್ರಾರಂಭವಾಗುತ್ತದೆ. ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ ಈ ನೇಮಕಾತಿಗೆ ಮೇ 27 ಅಥವಾ ಮೊದಲು ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯ ಮೂಲಕ ಹಲವು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ವಿದ್ಯಾರ್ಹತೆ: ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ಮಂಡಳಿಯಿಂದ ಗಣಿತ ಮತ್ತು ಭೌತಶಾಸ್ತ್ರದೊಂದಿಗೆ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಗುರುತಿಸಲ್ಪಟ್ಟ ಪಾಲಿಟೆಕ್ನಿಕ್ ಸಂಸ್ಥೆಯಿಂದ ಇಂಜಿನಿಯರಿಂಗ್ (ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಆಟೋಮೊಬೈಲ್/ಕಂಪ್ಯೂಟರ್ ಸೈನ್ಸ್/ಇಂಜಿನಿಯರಿಂಗ್) ಮಾಡಿರಬೇಕು. ಒಟ್ಟು 50% ಅಂಕಗಳೊಂದಿಗೆ ಇನ್‌ಸ್ಟ್ರುಮೆಂಟೇಶನ್ ಟೆಕ್ನಾಲಜಿ/ಇನ್‌ಫರ್ಮೇಷನ್ ಟೆಕ್ನಾಲಜಿಯಲ್ಲಿ ಮೂರು ವರ್ಷದ ಡಿಪ್ಲೊಮಾ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕು. ವಯಸ್ಸಿನ ಮಿತಿ: ಈ ಹುದ್ದೆಗಳಿಗೆ…
ಲೋಕಸಭಾ ಚುನಾವಣೆಯ ಮತ ಎಣಿಕೆಯ ದಿನವಾದ ಜೂನ್ 4 ರಂದು ಆಡಳಿತರೂಢ ಎನ್ ಡಿಎ ಒಕ್ಕೂಟ ಮಧ್ಯಾಹ್ನ 12:30ರ ವೇಳೆಗೆ 400 ಸ್ಥಾನಗಳ ಗಡಿಯನ್ನು ದಾಟಿರುತ್ತದೆ ಎಂದು ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಬಿಜೆಪಿಯು 2019ರ ಲೋಕಸಭಾ ಚುನಾವಣೆಯಲ್ಲಿ ಯಾವ ರೀತಿ ಉತ್ತಮ ಸಾಧನೆ ಮಾಡಿದೆಯೋ ಅದೇ ರೀತಿಯ ಫಲಿತಾಂಶ ಮಹಾರಾಷ್ಟ್ರ, ದೆಹಲಿ, ಕರ್ನಾಟಕ, ಮಧ್ಯಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ಮತ್ತು ಗುಜರಾತ್‌ನಲ್ಲಿ ಪುನರಾವರ್ತನೆಯಾಗಲಿದೆ ಎಂದರು. ಪಶ್ಚಿಮ ಬಂಗಾಳದಲ್ಲಿ ಕನಿಷ್ಟ 30 ಸ್ಥಾನಗಳನ್ನು ಈ ಬಾರಿ ಬಿಜೆಪಿ ಗೆಲ್ಲಲಿದೆ ಎಂದು ಹೇಳಿದರು. ದಕ್ಷಿಣದ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಭಾರೀ ಸ್ಪರ್ಧೆ ಇರುವುದನ್ನು ಅಮಿತ್ ಶಾ ಒಪ್ಪಿಕೊಂಡಿದ್ದಾರೆ. ಈ ಬಾರಿ ಕೇರಳ ಮತ್ತು ತಮಿಳುನಾಡಿನಲ್ಲಿ ನಾವು ಖಾತೆ ತೆರೆಯಲಿದ್ದೇವೆ. ದಕ್ಷಿಣದ ನಾಲ್ಕು ರಾಜ್ಯಗಳಲ್ಲಿ ನಾವು ಕಾಂಗ್ರೆಸ್ ಗಿಂತ ಮುಂದಿದ್ದೇವೆ ಎಂದು…
ಕೋವಿಶೀಲ್ಡ್ ಲಸಿಕೆ ನೀಡಿದ ಬಳಿಕ ಮೃತಪಟ್ಟಿದ್ದಾರೆ ಎನ್ನಲಾದ ಯುವತಿಯ ಪೋಷಕರು, ಜಗತ್ತಿನ ಅತಿ ದೊಡ್ಡ ಲಸಿಕೆ ಉತ್ಪಾದಕ ಸಂಸ್ಥೆಯಾಗಿರುವ ಬ್ರಿಟಿಷ್ ಔಷಧ ತಯಾರಿಕಾ ದಿಗ್ಗಜ ಆಸ್ಟ್ರಾಜೆನಿಕಾ ವಿರುದ್ಧ ದಾವೆ ಹೂಡಲು ಉದ್ದೇಶಿಸಿದ್ದಾರೆ. ತನ್ನ ಕೋವಿಡ್ ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್ ಲೆಟ್ ಗಳ ಸಂಖ್ಯೆಯನ್ನು ಕಡಿಮೆ ಮಾಡುವ ಅಪರೂಪದ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಬ್ರಿಟನ್ ನ್ಯಾಯಾಲಯದಲ್ಲಿ ಆಸ್ಟ್ರಾಜೆನಿಕಾ ಒಪ್ಪಿಕೊಂಡ ಬಳಿಕ ಅವರು ಈ ಚಿಂತನೆ ನಡೆಸಿದ್ದಾರೆ. ಭಾರತದಲ್ಲಿ ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಸಂಸ್ಥೆಯು ‘ಕೋವಿಶೀಲ್ಡ್’ ಹೆಸರಿನಲ್ಲಿ ಆಸ್ಟ್ರಾಜೆನಿಕಾ ಲಸಿಕೆಯನ್ನು ಉತ್ಪಾದಿಸುತ್ತಿದ್ದು, ವ್ಯಾಪಕವಾಗಿ ವಿತರಿಸಲಾಗಿತ್ತು. ಈ ವಿವಾದದ ಕುರಿತು ಎಸ್‌ಐಐ ಇನ್ನೂ ಹೇಳಿಕೆ ನೀಡಿಲ್ಲ. 2021ರಲ್ಲಿ ಕೋವಿಡ್ ಲಸಿಕೆ ಪಡೆದುಕೊಂಡ ಬಳಿಕ ವೇಣುಗೋಪಾಲನ್ ಗೋವಿಂದನ್ ಅವರು ತಮ್ಮ 20 ವರ್ಷದ ಮಗಳನ್ನು ಕಳೆದುಕೊಂಡಿದ್ದರು. ಅಡ್ಡಪರಿಣಾಮಗಳ ಕುರಿತು ಆಸ್ಟ್ರಾಜೆನಿಕಾ ಒಪ್ಪಿಕೊಂಡಿರುವುದು ತೀರಾ ತಡವಾಗಿದೆ ಮತ್ತು ಅನೇಕ ಮಂದಿ ಜೀವ ಕಳೆದುಕೊಂಡ ಬಳಿಕ ಈ ಹೇಳಿಕೆ ಬಂದಿದೆ ಎಂದು…
ಯಾವಾಗಲೂ ಮುಖದ ಮೇಲಿನ ಕಲೆಗಳು, ಕುತ್ತಿಗೆಯ ಭಾಗದಲ್ಲಿ ಕಪ್ಪು ಕಲೆಗಳು, ಅಲ್ಲಲ್ಲಿ ಗುಳ್ಳೆಗಳು ಸೌಂದರ್ಯವನ್ನು ಹಾಳು ಮಾಡುತ್ತದೆ. ಸೂರ್ಯನ ಬಿಸಿಲಿನಿಂದ ಕುತ್ತಿಗೆ ಸುತ್ತ ಕಪ್ಪು ಕಲೆಗಳು ಉಂಟಾಗುತ್ತದೆ. ಈ ಕಪ್ಪು ಕಲೆಗಳನ್ನು ಹೈಪರ್ಪಿಗ್ಮೆಂಟೇಶನ್ ಎಂದು ಕರೆಯಲಾಗುತ್ತದೆ. ವಿಶೇಷವಾಗಿ ಬೇಸಿಗೆಯಲ್ಲಿ ಈ ಸಮಸ್ಯೆ ಹೆಚ್ಚಾಗಿರುತ್ತದೆ. ಇದಲ್ಲದೇ ಅನೇಕ ಮಂದಿ ತಮ್ಮ ಮುಖ ಅಥವಾ ಕುತ್ತಿಗೆಯ ಮೇಲೆ ಸನ್ಸ್ಕ್ರೀನ್ ಅನ್ನು ಹಚ್ಚುವುದಿಲ್ಲ. ಇದರ ಪರಿಣಾಮ ಸೂರ್ಯನ ಬಿಸಿಲಿನಿಂದ ಕುತ್ತಿಗೆ ಸುತ್ತ ಕಪ್ಪು ಕಲೆಗಳು ಉಂಟಾಗುತ್ತದೆ. ಈ ಕಪ್ಪು ಕಲೆಗಳನ್ನು ಹೈಪರ್ ಪಿಗ್ಮೆಂಟೇಶನ್ ಎಂದು ಕರೆಯಲಾಗುತ್ತದೆ. ಅಕಾಂತೋಸಿಸ್ ನಿಗ್ರಿಕಾನ್ಸ್, ಹಾರ್ಮೋನ್ ಸಮಸ್ಯೆ, ಕುತ್ತಿಗೆಯ ಸುತ್ತಾ ಕಪ್ಪು ಕಲೆಗಳನ್ನು ಉಂಟು ಮಾಡುತ್ತದೆ. ಈ ಸಮಸ್ಯೆಯನ್ನು ನಿಭಾಯಿಸಲು ಅನೇಕ ಮಂದಿ ವಿವಿಧ ರೀತಿಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಸೌಂದರ್ಯವರ್ಧಕಗಳನ್ನು ಬಳಸುತ್ತಾರೆ. ಆದರೆ ನಾವು ಬಳಸುವ ರಾಸಾಯನಿಕ ಉತ್ಪನ್ನಗಳು ಕೆಲವೊಮ್ಮೆ ನಮ್ಮ ಮೇಲೆ ಅಡ್ಡ ಪರಿಣಾಮ ಬೀರಬಹುದು ಎಂಬುದನ್ನು ನೆನಪಿಟ್ಟುಕೊಳ್ಳಿ. ಹಾಗಾಗಿ ಕುತ್ತಿಗೆಯ ಮೇಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು ಹರಸಾಹಸ ಪಡುವ ಬದಲು…
ಐಪಿಎಲ್ 2024ರಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ಆರ್ ಸಿಬಿ ತಂಡದ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ವಿಶೇಷ ದಾಖಲೆ ಬರೆದಿದ್ದಾರೆ. ಅದು ಕೂಡ ಆರ್ ಸಿಬಿ ತಂಡದ ಮಾಜಿ ಆಟಗಾರ ಕ್ರಿಸ್ ಗೇಲ್ ಹೆಸರಿನಲ್ಲಿದ್ದ ರೆಕಾರ್ಡ್ ಅನ್ನು ಅಳಿಸಿ ಹಾಕುವ ಮೂಲಕ ಎಂಬುದು ವಿಶೇಷ. ಇದೀಗ 64 ರನ್ ಗಳೊಂದಿಗೆ ಈ ದಾಖಲೆಯನ್ನು ಮುರಿಯುವಲ್ಲಿ ಫಾಫ್ ಡುಪ್ಲೆಸಿಸ್ ಯಶಸ್ವಿಯಾಗಿದ್ದಾರೆ. ಈ ಮೂಲಕ ಪವರ್ ಪ್ಲೇನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅತೀ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ RCB ತಂಡದ ನಾಯಕ ಫಾಫ್ ಡುಪ್ಲೆಸಿಸ್ ಹೊಸ ಇತಿಹಾಸ ಬರೆದಿದ್ದಾರೆ. ಅದು ಕೂಡ ಸ್ಪೋಟಕ ದಾಂಡಿಗ ಕ್ರಿಸ್ ಗೇಲ್ ಹೆಸರಿನಲ್ಲಿದ್ದ ದಶಕದ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು…