Subscribe to Updates
Get the latest creative news from FooBar about art, design and business.
- ನೀಟ್ ಹಗರಣ: ಧಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ತುಮಕೂರಿನಲ್ಲಿ ಕಾಂಗ್ರೆಸ್ ವಕೀಲರ ಘಟಕದಿಂದ ಪ್ರತಿಭಟನೆ
- ಸಹಕಾರ ಕ್ಷೇತ್ರಗಳ ಬೆಳವಣಿಗೆಗೆ ತರಬೇತಿ ಪೂರಕ: ಕೆ.ಎನ್.ರಾಜಣ್ಣ
- ರೂ.1.50 ಲಕ್ಷಗಳಂತೆ ಫೆಲೋಶಿಪ್: ಕಿರು ಅಧ್ಯಯನ ಯೋಜನೆಗೆ ಅರ್ಜಿ ಆಹ್ವಾನ
- ಜು.28 ರಂದು ಅರಳಿಮರದಡಿಯಲ್ಲಿ ‘ಮೊಳಗಲಿ ಜಾನಪದ’: ಸಂಗೀತ–ಸಾಂಸ್ಕೃತಿಕ ಕಾರ್ಯಕ್ರಮ
- ಪರ್ಯಾಯ ವ್ಯವಸ್ಥೆ ಮಾಡದೆ ತೆರವು ಮಾಡಬೇಡಿ: ಬೀದಿಬದಿ ವ್ಯಾಪಾರಿಗಳ ಸಂಘ ಮನವಿ
- ಚಿಕ್ಕನಾಯಕನಹಳ್ಳಿ: ಕುಡಿಯುವ ನೀರಿನ ವ್ಯವಸ್ಥೆ: ಮೂಲ ಸೌಕರ್ಯಕ್ಕೆ ಸೂಚನೆ
- ರಾಹುಲ್ ಗಾಂಧಿಯವರ ಧ್ವನಿ ಅಡಗಿಸುವುದಕ್ಕೆ ಕೇಂದ್ರದ ಪ್ರಯತ್ನ: ಡಾ.ಜಿ.ಪರಮೇಶ್ವರ
- ಕುಣಿಗಲ್: ಪಾವಸಂದ್ರ ಕಲ್ಲುಕ್ವಾರಿಯಲ್ಲಿ 12 ಜೀತದಾಳುಗಳ ರಕ್ಷಣೆ: ಉಪವಿಭಾಗಾಧಿಕಾರಿಗಳಿಂದ ವಿಮುಕ್ತಿ ಆದೇಶ
Author: admin
ಸಂಗೀತ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನ ಖ್ಯಾತ ಗಾಯಕಿ ಮೇಲೆ ಅಭಿಮಾನಿಯೊಬ್ಬ ಬಾಟಲಿ ಎಸೆದ ಘಟನೆ ಡೆಹ್ರಾಡೋನ್ ನಲ್ಲಿ ನಡೆದಿದೆ. ಸುನಿಧಿ ಚೌಹಾಣ್ ಬಿಟೌನ್ ಖ್ಯಾತ ಗಾಯಕಿಯರಲ್ಲಿ ಒಬ್ಬರು. ಇತ್ತೀಚಿನ ದಿನಗಳಲ್ಲಿ ಅನೇಕ ಮ್ಯೂಸಿಕ್ ಕಾನ್ಸಾರ್ಟ್ ಗಳನ್ನು ನೀಡುತ್ತಿದ್ದಾರೆ. ಅವರ ಕಾರ್ಯಕ್ರಮ ನೋಡಲು ಅಪಾರ ಮಂದಿ ಬರುತ್ತಾರೆ. ಡೆಹ್ರಾಡೋನ್ ನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸುನಿಧಿ ಹಾಡುತ್ತಿದ್ದಾಗ ಅವರತ್ತ ಅಭಿಮಾನಿಯೊಬ್ಬ ಪ್ಲ್ಯಾಸ್ಟಿಕ್ ಬಾಟಲಿಯನ್ನು ಎಸೆದಿದ್ದಾನೆ. ಆದರೆ ಇದರಿಂದ ವಿಚಲಿತರಾಗದ ಸುನಿಧಿ, “ಬಾಟಲಿಗಳನ್ನು ಎಸೆಯುವುದರಿಂದ ಏನಾಗುತ್ತದೆ? ಏನೂ ಇಲ್ಲ. ಇದು ಶೋಗೆ ಅಡ್ಡಿ ಆಗುತ್ತದೆ. ನಿಮಗೆ ಅದು ಬೇಕೇ?” ಎಂದು ಕೇಳಿದ್ದಾರೆ. ಇದಕ್ಕೆ ಎಲ್ಲರೂ ಒಟ್ಟಾಗಿ ಒಂದೇ ಧ್ವನಿಯಲ್ಲಿ “ಇಲ್ಲ” ಎಂದು ಹೇಳಿದ್ದಾರೆ. ಕಾರ್ಯಕ್ರಮದ ಬಳಿ ಸುನಿಧಿ ಕಾನ್ಸಾರ್ಟ್ ಹಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬಾಲಿವುಡ್ ನಲ್ಲಿ ‘ಶೀಲಾ ಕಿ ಜವಾನಿ’, ‘ಕಮ್ಲಿ’, ‘ಕ್ರೇಜಿ ಕಿಯಾ ರೇ’, ‘ಆಜಾ ನಾಚ್ಲೆ’, ‘ಬೀಡಿ, ‘ದೇಸಿ ಗರ್ಲ್’, ‘ಧೂಮ್ ಮಚಾಲೆ’, ಹೀಗೆ ಹತ್ತಾರು ಸೂಪರ್ ಹಿಟ್…
ಲೋಕಸಭೆ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಟಿ ಕಂಗನಾ ರಣಾವತ್, ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಬದಲು ತಮ್ಮದೇ ಪಕ್ಷದ ತೇಜಸ್ವಿ ಸೂರ್ಯರನ್ನು ಟೀಕಿಸಿ ಪೇಚಿಗೆ ಸಿಲುಕಿದ್ದಾರೆ. ತೇಜಸ್ವಿ ಮತ್ತು ತೇಜಸ್ವಿ ಎಂಬ ಹೆಸರಿನಲ್ಲಿರುವ ಸಾಮ್ಯತೆಯಿಂದಾಗಿ ಕಂಗನಾ ರಣಾವತ್ ಈ ಯಡವಟ್ಟು ಮಾಡಿಕೊಂಡಿದ್ದಾರೆ. “ಹಾಳಾದ ರಾಜಕುಮಾರರ ಪಕ್ಷವೊಂದಿದೆ… ಚಂದ್ರನ ಮೇಲೆ ಆಲೂಗಡ್ಡೆ ಬೆಳೆಯಲು ಬಯಸುವ ರಾಹುಲ್ ಗಾಂಧಿ ಇರಬಹುದು ಅಥವಾ ಗೂಂಡಾಗಿರಿ ಮಾಡುವ ಮತ್ತು ಮೀನು ತಿನ್ನುವ ತೇಜಸ್ವಿ ಸೂರ್ಯ ಇರಬಹುದು” ಎಂದು ಕಂಗನಾ ಹೇಳಿದ್ದಾರೆ. ವಾಸ್ತವವಾಗಿ ಆರ್ ಜೆಡಿ ನಾಯಕ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಕಂಗನಾ ವಾಗ್ದಾಳಿಯಲ್ಲಿ ಟಾರ್ಗೆಟ್ ಆಗಬೇಕಿತ್ತು. ತೇಜಸ್ವಿ ಯಾದವ್ ನವರಾತ್ರಿ ವೇಳೆ ಮೀನು ತಿನ್ನುತ್ತಿರುವ ವೀಡಿಯೋ ಇತ್ತೀಚೆಗೆ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವೆ ಪ್ರಮುಖ ಸಂಘರ್ಷದ ವಿಷಯವಾಗಿ ಪರಿಣಮಿಸಿತ್ತು. ಇದನ್ನೇ ಮುಂದಿಟ್ಟುಕೊಂಡು ಕಂಗನಾ ರಣಾವತ್ ಟೀಕಾಪ್ರಹಾರ ನಡೆಸಲು ಮುಂದಾಗಿದ್ದರು. ಆದರೆ ತೇಜಸ್ವಿ ಯಾದವ್ ಬದಲು, ಬೆಂಗಳೂರು…
ಖಡಕ್ ಪೊಲೀಸ್ ಅಧಿಕಾರಿಯೆಂದೇ ಕರ್ನಾಟಕದಾದ್ಯಂತ ಜನಪ್ರಿಯರಾಗಿದ್ದ ಕೆ. ಅಣ್ಣಾಮಲೈ ಈಗ ರಾಜಕೀಯರಂಗದಲ್ಲಿ ಬ್ಯುಸಿಯಾಗಿದ್ದಾರೆ. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಆಗಿ ಕೊನೆಯದಾಗಿ ಸೇವೆ ಸಲ್ಲಿಸಿದ್ದ ಅವರು 4 ವರ್ಷಗಳ ಹಿಂದೆ ರಾಜೀನಾಮೆ ನೀಡಿದ್ದರು. ಇದೀಗ ಅಣ್ಣಾಮಲೈ ಬಯೋಪಿಕ್ ವಿಚಾರ ಚರ್ಚೆಗೆ ಬಂದಿದೆ. ಕೆ ಅಣ್ಣಾಮಲೈ ರಾಜೀನಾಮೆ ವಿಚಾರ ಭಾರೀ ಅಚ್ಚರಿಗೆ ಕಾರಣವಾಗಿತ್ತು. ರಾಜಕೀಯರಂಗ ಸೇರಲು ಅವರು ಈ ನಿರ್ಧಾರ ಕೈಗೊಂಡಿದ್ದಾಗ ಆಗ ಸುದ್ದಿಯಾಗಿತ್ತು. ಬಳಿಕ ಅದು ನಿಜವೂ ಆಗಿತ್ತು. ಸದ್ಯ ತಮಿಳುನಾಡಿನ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಯ ಕಣದಲ್ಲಿದ್ದಾರೆ. 9 ವರ್ಷಗಳ ಕಾಲ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ತಮ್ಮ ಖಡಕ್ ಕಾರ್ಯವೈಖರಿಯಿಂದ ಅಣ್ಣಾಮಲೈ ಕರ್ನಾಟಕ ಪೊಲೀಸ್‌ನ ಸಿಂಗಂ ಎಂದೇ ಖ್ಯಾತರಾಗಿದ್ದರು. 1984ರ ಜೂ.4ರಂದು ಹುಟ್ಟಿದ ಅಣ್ಣಾಮಲೈ ಮೂಲತಃ ತಮಿಳುನಾಡಿನ ಕೊಯಮತ್ತೂರಿನವರು. ಬಿಇ ಎಂಜಿನಿಯರಿಂಗ್ ಮಾಡಿ ಎಂಬಿಎ ಪೂರ್ಣಗೊಳಿಸಿದ ಅಣ್ಣಾಮಲೈ 2011ರ ಬ್ಯಾಚ್ ನ ಐಪಿಎಸ್ ಅಧಿಕಾರಿ ಆಗಿದ್ದರು. ಕಾರ್ಕಳ ಉಪವಿಭಾಗದ ಎಎಸ್ಪಿಯಾಗಿ 2011ರಲ್ಲಿ ವೃತ್ತಿ ಆರಂಭಿಸಿ ಅಣ್ಣಾಮಲೈ 2013ರಲ್ಲಿ ಉಡುಪಿ…
ತುಮಕೂರು: ತುಮಕೂರು ಜಿಲ್ಲೆ ತಿಪಟೂರು ನಗರದ ಕೋಡಿ ಸರ್ಕಲ್ ನಲ್ಲಿ ಸರ್ಕಾರದ ಯಾವುದೇ ಪೂರ್ವಾನುಮತಿ ಪಡೆಯದೆ ಪ್ರತಿಮೆ ಸ್ಥಾಪನೆ ಮಾಡಿರುವುದರಿಂದ ತಾಲ್ಲೂಕು ಆಡಳಿತ ಪ್ರತಿಮೆ ತೆರವಿಗೆ ಮುಂದಾಗಿದೆ. ಪ್ರತಿಮೆ ತೆರವುಗೊಳಿಸಲು ತಾಲ್ಲೂಕು ಆಡಳಿತ ಮುಂದಾದ ಹಿನ್ನೆಲೆ, ಕೋಡಿಸರ್ಕಲ್ ವೃತ್ತದಲ್ಲಿ ಸಾವಿರಾರು ಜನ ಜಮಾವಣೆಗೊಂಡು ಪ್ರತಿಭಟನೆಗೆ ಮುಂದಾದರು. ಸರ್ಕಲ್ ನಲ್ಲಿ ಅನಧಿಕೃತವಾಗಿ ಜಗಜ್ಯೋತಿ ಬಸವೇಶ್ವರರ ಪ್ರತಿಮೆ ಸ್ಥಾಪನೆಯ ಪ್ರತಿಮೆ ತೆರವುಗೊಳಿಸಲು ಮುಂದಾದ ತಾಲೂಕು ಆಡಳಿತದ ಕ್ರಮ ಖಂಡಿಸಿ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಕೋಡಿ ಸರ್ಕಲ್ ನಲ್ಲಿ ನಗರಸಭೆ ವತಿಯಿಂದ ಅಭಿವೃದ್ಧಿಪಡಿಸಿ ಸರ್ಕಲ್ ನಲ್ಲಿ ಸ್ಥಾಪಿಸಲಾಗಿದ್ದ ಮಂಟಪದ ಒಳಗೆ, ರಾತ್ರೋರಾತ್ರಿ ಕೆಲ ವ್ಯಕ್ತಿಗಳು ಜಗಜ್ಯೋತಿ ಬಸವೇಶ್ವರರ ಪುತ್ತಳಿಯನ್ನ ತಂದಿಟ್ಟು ಪೂಜೆ ಸಲ್ಲಿಸಲಾಗಿದ್ದು, ಪ್ರತಿಮೆಯನ್ನ ಯಾವುದೇ ಅಧಿಕೃತ ಅನುಮತಿ ಪಡೆಯದೆ ಏಕಾಏಕಿ ಸ್ಥಾಪನೆ ಮಾಡಿರುವುದು ಕಾನೂನುಬಾಹಿರವಾಗಿದೆ ಎಂದು ಆರೋಪಿಸಲಾಯಿತು. ಸಾರ್ವಜನಿಕ ಸ್ಥಳದಲ್ಲಿ ಪ್ರತಿಮೆ ಸ್ಥಾಪನೆಗೆ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಅವಕಾಶ ಇರುವುದಿಲ್ಲ. ಯಾವುದೇ ಅನುಮತಿ ಪಡೆಯದೆ ಪ್ರತಿಮೆ ಸ್ಥಾಪನೆ ಮಾಡಿರುವುದು ಕಾನೂನುಬಾಹಿರವಾಗಿದೆ ಎಂದು ತಿಪಟೂರು…
ಮಾಲೀಕನ ಜೋಕ್ ಅನ್ನು ಗಂಭೀರವಾಗಿ ಪರಿಗಣಿಸಿದ ಹೋಟೆಲ್ ಸಹಾಯಕನೊಬ್ಬ ಅದೇ ಜೋಕ್ ಅನ್ನು ರಿಯಲ್ ಆಗಿ ಮಾಡಲು ಹೋಗಿ ಜೈಲು ಪಾಲಾಗಿದ್ದಾನೆ. ಆತ ಕೆಲಸಕ್ಕಿದ್ದ ಅದೇ ಹೋಟೆಲ್ ಮುಂದೆ ನಿಲ್ಲಿಸಿದ್ದ ಬೈಕ್ ನ್ನು ಕದ್ದು, ಇದೀಗ ಜೈಲು ಪಾಲಾಗಿರುವ ವಿಚಿತ್ರ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಕೇರಳದ ತಲಶ್ಶೇರಿ ಮೂಲದ ಶಹೀಮ್ ಸಿ ಅಲಿಯಾಸ್ ಶಾಜ್ ಎಂಬ ಹುಡುಗನೊಬ್ಬ ಮಡಿವಾಳದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಅದ್ಯಾಕೋ ಆತನಿಗೆ ತನ್ನ ಕೇರಳದ ಮನೆಯನ್ನು ಒಮ್ಮೆ ಭೇಟಿ ಮಾಡಿ ಬರಬೇಕೆಂದು ಅನ್ನಿಸಿದೆ. ಹಾಗಾಗಿ ತನ್ನ ಮಾಲೀಕನಿಂದ ತನಗೆ ಬರಬೇಕಾಗಿದ್ದ ಹಣವನ್ನು ಪಾವತಿಸುವಂತೆ ಆತ ಮಾಲೀಕನನ್ನು ಕೇಳಿಕೊಂಡಿದ್ದಾನೆ. ತನ್ನ ಸಂಬಳವನ್ನು ಪಾವತಿಸುವಂತೆ ಶಹೀಮ್ ಮಾಲೀಕರನ್ನು ಕೇಳಿದ್ದಾನೆ. ಬಾಕಿ ಸಂಬಳ ನೀಡಿದರೆ ತಾನು ಕೇರಳಕ್ಕೆ ಭೇಟಿ ನೀಡುವುದಾಗಿ ಹೇಳಿದರೂ ಮಾಲೀಕರು ಆತನಿಗೆ ಸಂಬಳ ನೀಡಲು ನಿರಾಕರಿಸಿದ್ದಾರೆ. ಸಂಬಳ ಕೊಡುವ ಬದಲು ಆ ಮಾಲಿಕ ನೌಕರನಿಗೆ ಒಂದು ಜೋಕ್ ಮಿಶ್ರಿತ ಸಲಹೆ ನೀಡಿದ್ದಾನೆ. ಇದೇ ಹೋಟೆಲ್ ಮುಂದೆ ನಿಲ್ಲಿಸಿದ್ದ ಬೈಕಿನ…
ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆಯನ್ನು ಗುರಿಯಾಗಿಸಿ ಮತ್ತೊಂದು ಭೀಕರ ಭಯೋತ್ಪಾದನಾ ದಾಳಿ ನಡೆದಿದೆ. ಭಾರತೀಯ ವಾಯು ಪಡೆಯ ಒಬ್ಬ ಯೋಧ ಮೃತಪಟ್ಟಿದ್ದು, ಇನ್ನೂ ಐವರು ಗಾಯಗೊಂಡ ಘಟನೆ ನೆನ್ನೆ ವರದಿಯಾಗಿದೆ. ಐಎಎಫ್ ನ ಒಂದು ವಾಹನ ಸೇರಿದಂತೆ ಎರಡು ವಾಹನಗಳ ಮೇಲೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಸುರಾನ್ ಕೋಟ್ ಪ್ರದೇಶದಲ್ಲಿ ಉಗ್ರರು ಭೀಕರ ಸ್ವರೂಪದ ಗುಂಡಿನ ದಾಳಿ ನಡೆಸಿದ್ದಾರೆ. ಗಾಯಗೊಂಡಿರುವ ಐವರಲ್ಲಿ, ವಾಯು ಸೇನೆಯ ಒಬ್ಬ ಯೋಧನ ಸ್ಥಿತಿ ಗಂಭೀರವಾಗಿದೆ. ಅವರೆಲ್ಲರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಉಧಾಂಪುರದ ಕಮಾಂಡ್ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಹೆಚ್ಚುವರಿ ಭದ್ರತಾ ಪಡೆಗಳನ್ನು ರವಾನಿಸಲಾಗಿದೆ. ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಸ್ಥಳೀಯ ರಾಷ್ಟ್ರೀಯ ರೈಫಲ್ಸ್ ಘಟಕವು ಇಡೀ ಪ್ರದೇಶವನ್ನು ನಿರ್ಬಂಧಿಸಿದ್ದು, ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಭದ್ರತಾ ಪಡೆಗಳ ಮೂಲಗಳು ತಿಳಿಸಿವೆ. ಐಎಎಫ್ ನ ಗರುಡ ವಿಶೇಷ ಪಡೆಗಳು ಇಲ್ಲಿ ಕಾರ್ಯಾಚರಣೆಗೆ ಸನ್ನದ್ಧವಾಗಿದ್ದು, ಸೇನೆಯ ಹೆಚ್ಚುವರಿ…
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ವನ್ಯಜೀವಿ ಹಾಗೂ ಮಾನವ ಸಂಘರ್ಷ ಮುಂದುವರೆದಿದ್ದು, ಭಾನುವಾರ ಕಾಡಾನೆ ದಾಳಿಗೆ ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ದೊಡ್ಡಮಾಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚಿಕಲ್ ದುರ್ಗಾ ಸಮೀಪದ ಕೆಸುವಿನಕಲ್ ಕಾಫಿ ಎಸ್ಟೇಟ್ ನಲ್ಲಿ ನಡೆದಿದೆ. ಕೂಲಿ ಕಾರ್ಮಿಕ ಆನಂದ ಪೂಜಾರಿ(55) ಕಾಡಾನೆ ದಾಳಿಯಿಂದ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಎಂದಿನಂತೆ ಭಾನುವಾರ ಬೆಳಗ್ಗೆಯೂ ಕಾಫಿ ಎಸ್ಟೇಟ್ ನಲ್ಲಿ ಕೂಲಿ ಕೆಲಸಕ್ಕೆ ತೆರಳಿದ ವೇಳೆ ಒಂಟಿ ಸಲಗ ದಾಳಿ ನಡೆಸಿದ ಪರಿಣಾಮ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಆನೆ ತುಳಿತಕ್ಕೆ ಆನಂದ ಪೂಜಾರಿ ಬಲಿಯಾಗಿದ್ದಾರೆ. ನೂರ್ ಅಹಮದ್ ಎನ್ನುವವರಿಗೆ ಸೇರಿದ ಕೆಸುವಿನಕಲ್ ಎಸ್ಟೇಟ್ ನಲ್ಲಿ ಆನಂದ ಪೂಜಾರಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಎಂದಿನಂತೆ ಭಾನುವಾರ ಬೆಳಗ್ಗೆಯೂ ಆನಂದ ಪೂಜಾರಿ ಎಸ್ಟೇಟ್ ಗೆ ಕೆಲಸಕ್ಕೆ ಎಂದು ತೆರಳುತ್ತಿರುವಾಗ ಒಂಟಿ ಸಲಗ ಏಕಾಏಕಿ ದಾಳಿ ನಡೆಸಿದೆ. ಈ ವೇಳೆ ಆನಂದ ಪೂಜಾರಿ ತಪ್ಪಿಸಿಕೊಳ್ಳಲು ಯತ್ನಿಸಿದರಾದರೂ ಅದು ಸಾಧ್ಯವಾಗಲೇ ಇಲ್ಲ. ಕಾಡಾನೆ ದಾಳಿಯಿಂದ ಮೃತಪಟ್ಟ ಆನಂದ ಪೂಜಾರಿ ಅವರ ಪತ್ನಿ…
ಮೋದಿ ಮಾಡಿರುವ 10 ಸಾಧನೆ ಹೇಳಿದ್ರೆ ಅಂದೇ ರಾಜಕೀಯಕ್ಕೆ ನಿವೃತ್ತಿ ಘೋಷಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ನಾನು ಪ್ರಮಾಣ ವಚನ ಸ್ವೀಕರಿದ ತಕ್ಷಣ ಐದು ಗ್ಯಾರಂಟಿ ಜಾರಿಗೆ ಆದೇಶ ಮಾಡಿದ್ದೆವು. ನಾಲ್ಕು ಸಲ ಗೆದ್ದ ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ ಸಾಧನೆ ಎನು?, ಇವರನ್ನ ಸಚಿವ ಸ್ಥಾನದಲ್ಲಿ ಇರಲು ಅಸಮರ್ಥ ಎಂದು ತೆಗೆದು ಹಾಕಲಾಯಿತು. ಇದು ಬಿಜೆಪಿಯ ಸುಳ್ಳು, ಕಾಂಗ್ರೆಸ್ ನ ಸತ್ಯದ ನಡುವಿನ ಚುನಾವಣೆ. ಈ ಸಲ ಸೋಲುವುದು ಖಚಿತವಾಗಿ ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ಪತ್ನಿ ಗಾಯತ್ರಿ ಸಿದ್ದೇಶ್ವರಗೆ ಟಿಕೆಟ್ ಕೊಡಿಸಿದ್ದಾರೆ ಎಂದರು. ಬಿಜೆಪಿ ಎಂಪಿಗಳು ಕೊಲೆ ಬಸವ ಇದ್ದಂತೆ. ರಾಜ್ಯದಲ್ಲಿ ಭೀಕರ ಬರವಿದ್ದರೂ ಬಿಜೆಪಿ ಸಂಸದರು ಪರಿಹಾರ ಕೇಳಲಿಲ್ಲ. ರಾಜ್ಯಕ್ಕೆ 14,690 ಕೋಟಿ ರೂಪಾಯಿ ಕೇಂದ್ರ ಅನುದಾನ ನೀಡಲಿಲ್ಲ, ಭದ್ರಾ ಮೇಲ್ಡಂಡ 5,300 ಕೋಟಿ ಹಣ ನೀಡಲೇ ಇಲ್ಲ. ಬರಗಾಲ ಹಿನ್ನೆಲೆ 18 ಸಾವಿರ ಕೋಟಿ ಪರಿಹಾರ ಕೊಟ್ಟಿಲ್ಲ. ಎಂಪಿಗಳು…
ಹಿಮಾಚಲ ಪ್ರದೇಶದ ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ 9ನೇ ತರಗತಿಯ ವಿದ್ಯಾರ್ಥಿನಿಗೆ ಅಶ್ಲೀಲ ವೀಡಿಯೋ ತೋರಿಸಿ ಆಕೆಯ ಮೇಲೆ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜ್ಯ ರಾಜಧಾನಿ ಶಿಮ್ಲಾದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಜುಂಗಾ ಎಂಬಲ್ಲಿ ಈ ಕೃತ್ಯ ನಡೆದಿದೆ. ಸರ್ಕಾರಿ ಪ್ರೌಢಶಾಲೆಯ ಡ್ರಾಯಿಂಗ್ ಶಿಕ್ಷಕ, ಮೇ 2 ರಂದು ಶಾಲೆಯಲ್ಲಿ ಬಲವಂತವಾಗಿ ವಿದ್ಯಾರ್ಥಿನಿಗೆ ಅಶ್ಲೀಲ ವೀಡಿಯೋ ತೋರಿಸಿದ್ದಾನೆ. ಅಲ್ಲದೇ ಅನುಚಿತವಾಗಿ ವಿದ್ಯಾರ್ಥಿನಿಯನ್ನು ಸ್ಪರ್ಶಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಎ ಅಡಿಯಲ್ಲಿ ಮಾನಭಂಗಕ್ಕೆ ಯತ್ನ ಮತ್ತು ಲೈಂಗಿಕ ಅಪರಾಧಗಳಿಂದ, ಮಕ್ಕಳ ರಕ್ಷಣೆ (POCSO) ಕಾಯ್ದೆಯ ಸೆಕ್ಷನ್ 10 ಮತ್ತು 12ರ ಅಡಿಯಲ್ಲಿ ಲೈಂಗಿಕ ಕಿರುಕುಳ ಮತ್ತು ಹಲ್ಲೆಯ ಯತ್ನದ ಪ್ರಕರಣ ದಾಖಲಾಗಿದೆ. ಆರೋಪಿಯ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…
ಎಸ್ಸಿ, ಎಸ್ಟಿ ಅನುದಾನ ಮುಸ್ಲಿಂ ಪಾಲಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರ ವಿರುದ್ಧ ಜಾಹೀರಾತು ನೀಡಿದ್ದರಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಅಮಿತ್ ಮಾಳವಿಯಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ಎಸ್ಸಿ, ಎಸ್ಟಿ ಅನುದಾನ ಮುಸ್ಲಿಂ ಪಾಲಾಗುತ್ತಿದೆ ಎಂದು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದು, ಈ ಮೂಲಕ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ದೂರು ನೀಡಿದ್ದು, ಈ ದೂರಿನ ಮೇರೆಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಬಿಜೆಪಿಯ ಮೂವರು ನಾಯಕರ ವಿರುದ್ಧ ಎಫ್ಐಆರ್ ದಾಖಲಾಗಿದೆ. ವೀಡಿಯೋವೊಂದನ್ನು ಬಿಜೆಪಿ ಕರ್ನಾಟಕದ X ಪೇಜ್ ನಲ್ಲಿ ಪೋಸ್ಟ್ ವೊಂದನ್ನು ಮಾಡಲಾಗಿದ್ದು, ಅದರಲ್ಲಿ ರಾಹುಲ್ ಗಾಂಧಿ, ಸಿದ್ದರಾಮಯ್ಯ ಮುಸ್ಲಿಂ ಎಂಬಂತೆ ಬಿಂಬಿಸಿ ಮೊಟ್ಟೆಯಲ್ಲಿ ಬರುವ ಮರಿಗಳನ್ನು ಬೇರೆ ಬೇರೆ ಸಮದಾಯಗಳಿಗೆ ಹೋಲಿಕೆ ಮಾಡಿದ್ದಾರೆ ಎಂದು ಕೆಪಿಸಿಸಿ ಕಾನೂನು ಘಟಕ ಆರೋಪಿಸಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿಯ ಕಾನೂನು ಘಟಕದ ರಮೇಶ್ ಬಾಬು ದೂರಿನಲ್ಲಿ ಮನವಿ ಮಾಡಿದ್ದಾರೆ. ಜೆಪಿ…