Subscribe to Updates
Get the latest creative news from FooBar about art, design and business.
- ನೀಟ್ ಹಗರಣ: ಧಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ತುಮಕೂರಿನಲ್ಲಿ ಕಾಂಗ್ರೆಸ್ ವಕೀಲರ ಘಟಕದಿಂದ ಪ್ರತಿಭಟನೆ
- ಸಹಕಾರ ಕ್ಷೇತ್ರಗಳ ಬೆಳವಣಿಗೆಗೆ ತರಬೇತಿ ಪೂರಕ: ಕೆ.ಎನ್.ರಾಜಣ್ಣ
- ರೂ.1.50 ಲಕ್ಷಗಳಂತೆ ಫೆಲೋಶಿಪ್: ಕಿರು ಅಧ್ಯಯನ ಯೋಜನೆಗೆ ಅರ್ಜಿ ಆಹ್ವಾನ
- ಜು.28 ರಂದು ಅರಳಿಮರದಡಿಯಲ್ಲಿ ‘ಮೊಳಗಲಿ ಜಾನಪದ’: ಸಂಗೀತ–ಸಾಂಸ್ಕೃತಿಕ ಕಾರ್ಯಕ್ರಮ
- ಪರ್ಯಾಯ ವ್ಯವಸ್ಥೆ ಮಾಡದೆ ತೆರವು ಮಾಡಬೇಡಿ: ಬೀದಿಬದಿ ವ್ಯಾಪಾರಿಗಳ ಸಂಘ ಮನವಿ
- ಚಿಕ್ಕನಾಯಕನಹಳ್ಳಿ: ಕುಡಿಯುವ ನೀರಿನ ವ್ಯವಸ್ಥೆ: ಮೂಲ ಸೌಕರ್ಯಕ್ಕೆ ಸೂಚನೆ
- ರಾಹುಲ್ ಗಾಂಧಿಯವರ ಧ್ವನಿ ಅಡಗಿಸುವುದಕ್ಕೆ ಕೇಂದ್ರದ ಪ್ರಯತ್ನ: ಡಾ.ಜಿ.ಪರಮೇಶ್ವರ
- ಕುಣಿಗಲ್: ಪಾವಸಂದ್ರ ಕಲ್ಲುಕ್ವಾರಿಯಲ್ಲಿ 12 ಜೀತದಾಳುಗಳ ರಕ್ಷಣೆ: ಉಪವಿಭಾಗಾಧಿಕಾರಿಗಳಿಂದ ವಿಮುಕ್ತಿ ಆದೇಶ
Author: admin
ಪಾವಗಡ: ತಾಲ್ಲೂಕಿನಲ್ಲಿ ಸಾರ್ವಜನಿಕರಿಗೆ, ಸಿಬ್ಬಂದಿ ಕೊರತೆಯಿಂದಾಗಿ ಆರೋಗ್ಯ ಸೇವೆ ಸಿಗುತ್ತಿಲ್ಲ ಎಂದು ಆರೋಪಿಸಿ, ತಾಲ್ಲೂಕು ಕಛೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಿ, ಅಗತ್ಯ ಸಿಬ್ಬಂದಿ ಒದಗಿಸಬೇಕೆಂದು ರೈತ ಸಂಘದ ಮುಖಂಡರು ಆಗ್ರಹಿಸಿದರು. ತಾಲ್ಲೂಕು ರೈತ ಸಂಘದ ಅಧ್ಯಕ್ಷ ಪೂಜಾರಪ್ಪ ನವರ ನೇತೃತ್ವದಲ್ಲಿ ತಹಶೀಲ್ದಾರ್ ರವರಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದರು. ಇದೇ ವೇಳೆ ತಾಲ್ಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ ಮಾತನಾಡಿ, ಪಾವಗಡದಲ್ಲಿ ಘನ ಸರ್ಕಾರದ ಸರ್ಕಾರಿ ಆಸ್ಪತ್ರೆ ನೂತನವಾಗಿ ಕಟ್ಟಡ ನಿರ್ಮಾಣವಾಗಿದ್ದು, ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ 3 ಜನ ಡಾಕ್ಟರ್ ಗಳು ಇದ್ದು, ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಇಲ್ಲದೆ ಜನ ಪರದಾಡುವಂತೆ ಆಗಿದೆ. ಪಾವಗಡ ಸರ್ಕಾರಿ ಆಸ್ಪತ್ರೆಗೆ ಬೇಕಾಗಿರುವ ತಜ್ಞ ವೈದ್ಯರುಗಳ ಸಂಖ್ಯೆ ಮಂಜೂರು 10 ಹುದ್ದೆ, ಈಗ ಹಾಲಿ ಕೆಲಸ ಮಾಡುತ್ತಿರುವವರು ಸಂಖ್ಯೆ 3 ಜನರಿದ್ದಾರೆ. ತುರ್ತು ಚಿಕಿತ್ಸೆ ವೈದ್ಯಾಧಿಕಾರಿ 3 ಜನರು ಇರುವ ಕಡೆ ಒಬ್ಬರೂ ಇಲ್ಲ, ದಂತ ವೈದ್ಯರುಗಳಿಲ್ಲ, ಸಹಾಯಕ ಆಡಳಿತಾಧಿಕಾರಿ ಇಲ್ಲ, ಕಚೇರಿ ಅಧೀಕ್ಷಕರಿಲ್ಲ.…
ಉತ್ತರ ಪ್ರದೇಶ: ಮುಸ್ಲಿಂ ಮಹಿಳೆಯೊಬ್ಬಳು ತನ್ನ ಗಂಡನಿಗೆ ಚಿತ್ರಹಿಂಸೆ ನೀಡಿ, ಆತನ ಖಾಸಗಿ ಭಾಗಗಳಿಗೆ ಹಾನಿ ಮಾಡಿದ ಘಟನೆ ಬಿಜ್ನೋರ್ ದಲ್ಲಿ ನಡೆದಿದೆ. ಪತಿಯನ್ನು ಬೆತ್ತಲೆ ಮಾಡಿ, ಮಂಚದ ಮೇಲೆ ಮಲಗಿಸಿ, ಕೈ-ಕಾಲುಗಳನ್ನು ಕಟ್ಟಿ ಹಾಕಿ ಕ್ರೂರವಾಗಿ ಚಿತ್ರಹಿಂಸೆ ನೀಡಿದ್ದಾಳೆ. ಏಳು ತಿಂಗಳ ಹಿಂದೆ ಇಬ್ಬರ ಕುಟುಂಬ ಒಪ್ಪಿಗೆಯ ನಂತರ ಮುಸ್ಲಿಂ ಪದ್ಧತಿಯಂತೆ ಪ್ರೇಮ ವಿವಾಹ ಆಗಿದ್ದರು ಎನ್ನಲಾಗಿದೆ. ಪತಿಯನ್ನು ಮಂಚಕ್ಕೆ ಕಟ್ಟಿ ಹಾಕಿ, ಮಂಚದಲ್ಲಿ ಅವನ ಜತೆಗೆ ಮಲಗುವುದು, ಸಿಗರೇಟ್ ಸೇದುತ್ತಿದ್ದಳು, ಮದ್ಯಪಾನ ಕೂಡ ಮಾಡುತ್ತಿದ್ದಳು, ಇದರ ಮಧ್ಯೆ ಪತಿಗೆ ಚಿತ್ರಹಿಂಸೆ ಕೂಡ ನೀಡುತ್ತಿದ್ದಳು ಎಂದು ಹೇಳಲಾಗಿದೆ. ಇದರಿಂದ ನೊಂದು ಮಗ ಮಲಗುವ ಕೋಣೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಸೊಸೆಯ ದುಷ್ಕೃತ್ಯ ಬಯಲಿಗೆಳೆದಿದ್ದಾರೆ ಅತ್ತೆ. ಆಕೆ ಹಿಂಸೆ ನೀಡಿದ್ದಳು ಎಂಬುದಕ್ಕೆ ಸಿಸಿಟಿವಿ ಕೂಡ ಸಾಕ್ಷಿಯಾಗಿದೆ. ಪತಿ ಹಾಗೂ ಸಿಸಿ ಟಿವಿ ವಿಡಿಯೋ ಆಧಾರದ ಮೇಲೆ ಮಹಿಳೆಯ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಇದೀಗ ಆಕೆ ಮಾಡಿದ ಕೃತ್ಯಕ್ಕೆ ಅವಳನ್ನು ಬಂಧಿಸಲಾಗಿದ್ದು, ಗಂಡನನ್ನು…
ಬಿಗ್ ಬಾಸ್ ಮರಾಠಿಯ ವಿನ್ನರ್, ನಟಿ ಮೇಘಾ ಧಾಡೆ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ರಾಹುಲ್ ಬೆಂಬಲಿಸಿದವರಿಗೂ ಕೂಡಾ ಅವರು, “ನೀವೆಲ್ಲರೂ ನರಕಕ್ಕೆ ಹೋಗಿ” ಅಂದಿದ್ದಾರೆ. ಚುನಾವಣಾ ಪ್ರಚಾರದ ವೇಳೆ ರಾಹುಲ್ ಅವರಿಗೆ ಶಿವಾಜಿ ಮಹರಾಜರ ಪ್ರತಿಮೆಯನ್ನು ನೀಡಲಾಗಿದೆ. ಫೋಟೋಗಾಗಿ ಅದನ್ನು ಸ್ವೀಕರಿಸಿ, ನಂತರ ಅಲ್ಲಿಯೇ ಪ್ರತಿಮೆಯನ್ನು ಬಿಟ್ಟು ಹೋಗಿದ್ದಾರಂತೆ. ಮೇಘಾ ಮಾತುಗಳು ಇದೀಗ ವೈರಲ್ ಆಗಿದ್ದು, ಅದರಲ್ಲೂ ಶಿವಾಜಿ ಪ್ರತಿಮೆ ಇಟ್ಟುಕೊಂಡು ರಾಹುಲ್ ಗಾಂಧಿ ಅವರನ್ನು ಅನೇಕರು ಟೀಕಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ರಾಮನಗರ: ಚನ್ನಪಟ್ಟಣ ಟಿಪ್ಪುನಗರದ ಮಿಲನ್ ಶಾದಿಮಹಲ್ ನಲ್ಲಿ ಅವಧಿ ಮುಗಿದ ಐಸ್ ಕ್ರೀಂ ಸೇವಿಸಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ. ಮಿಲನ್ ಶಾದಿಮಹಲ್ ನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ 80ಕ್ಕೂ ಹೆಚ್ಚು ಮಂದಿ ಐಸ್ ಕ್ರೀಂ ಸೇವಿಸಿದ್ದು, ಈ ಪೈಕಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ. ಸಂತ್ರರನ್ನು ಚಿಕಿತ್ಸೆಗಾಗಿ ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಸ್ಥಳೀಯರು ಗಾಬರಿಗೊಂಡಿದ್ದು, ಸ್ಥಳಕ್ಕೆ ಚನ್ನಪಟ್ಟಣ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಹಾಲಿವುಡ್ ನ ಅತ್ಯಂತ ಜನಪ್ರಿಯ ಸಿನಿಮಾ ಟೈಟಾನಿಕ್ ನ ಕ್ಯಾಪ್ಟನ್ ನಟ ಬರ್ನಾರ್ಡ್ ಹಿಲ್ ನಿಧನರಾಗಿದ್ದಾರೆ. 79ರ ವಯಸ್ಸಿನ ಈ ನಟ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಕೇಟ್ ವಿನ್ಸ್ ಲೆಟ್ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ಬರ್ನಾರ್ಡ್ ಈವರೆಗೂ ಸುಮಾರು 11 ಬಾರಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಬರ್ನಾರ್ಡ್ ನಿಧನಕ್ಕೆ ಕೇವಲ ಹಾಲಿವುಡ್ ಮಾತ್ರವಲ್ಲ, ಜಗತ್ತಿನ ಅನೇಕ ತಂತ್ರಜ್ಞರು ಹಾಗೂ ಕಲಾವಿದರು ಮತ್ತು ಅಭಿಮಾನಿಗಳ ಕಂಬನಿ ಮಿಡಿದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ತುಮಕೂರು: ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ವಿಚಾರದಲ್ಲಿ ಸತ್ಯನೋ- ಸುಳ್ಳೋ ಸಾಬೀತು ಆಗಲಿ, ಪ್ರಜ್ವಲ್ ರೇವಣ್ಣ ನನಗೆ ಆತ್ಮೀಯ ಸ್ನೇಹಿತ ಎಂದು ತುಮಕೂರಿನಲ್ಲಿ ಸಂಸದ ಜಿ.ಎಸ್. ಬಸವರಾಜು ತಿಳಿಸಿದ್ದಾರೆ. ತುಮಕೂರಿನಲ್ಲಿ ನಡೆದ ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿದ ಅವರು, “ಆ ನೇಚರ್ ಇರುವಂತಹ ಹುಡುಗ ಅಲ್ಲ ಆತ. ಏನು ಗ್ರಹಚಾರವೋ, ಯಾರ ಕೈವಾಡವೋ ಗೊತ್ತಿಲ್ಲ” ಎಂದು ಹೇಳಿದರು. ಇತ್ತೀಚೆಗೆ ಈ ರೀತಿ ತೇಜೋವಧೆ ಮಾಡುವುದು ಹೆಚ್ಚಾಗಿದೆ. ಜಾರಕಿಹೊಳಿಗೂ ಕೂಡ ಪಿತೂರಿ ಮಾಡಿ, ಮನೆ ಹಾಳು ಮಾಡಿ, ಮಾನ -ಮರ್ಯಾದೆ ಹರಾಜು ಹಾಕಿದ್ದಾರೆ. ಜಾರಕಿಹೊಳಿಗೆ ವಿರೋಧ ಪಕ್ಷದವರೇ ಪಿತೂರಿ ಮಾಡಿದರು ಎಂದರು. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿಯೂ ಅನುಮಾನ ಹೊರ ಹಾಕಿದ ಜಿ.ಎಸ್. ಬಸವರಾಜು. ಈಗಲೂ ಕೂಡ ವಿರೋಧ ಪಕ್ಷದವರೇ ಪಿತೂರಿ ಮಾಡಿರಬಹುದು. ಒಂದು ವೇಳೆ ಮಹಿಳೆಯರಿಗೆ ಅನ್ಯಾಯ ಆಗಿದ್ದರೆ ಶಿಕ್ಷೆ ಆಗಲೇಬೇಕು ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್…
ಮಧುಗಿರಿ: ಕೆ ಎಸ್ ಆರ್ ಟಿ ಸಿ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಒಬ್ಬ ಸ್ಥಳದಲ್ಲೇ ಮೃತಪಟ್ಟು ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ, ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿ ಹೋಬಳಿ ದಂಡಿಪುರದ ವಿಜಯಾನಂದಿ ಕ್ರಾಸ್ ಬಳಿ ನಡೆದಿದೆ. ಅಪಘಾತಕ್ಕೆ ಬಲಿಯಾದವರು ವಾಟದ ಹೊಸಹಳ್ಳಿ ಗ್ರಾಮದವರು ಎಂದು ತಿಳಿದು ಬಂದಿದೆ. ಮಹೇಂದ್ರ 36 ಮೃತಪಟ್ಟವರೆಂದು ಗುರುತಿಸಲಾಗಿದೆ. ಚರಣ್ ಹಾಗೂ ಅನಿಲ್ ಗಾಯಗೊಂಡವರಾಗಿದ್ದಾರೆ. ವಿಷಯ ತಿಳಿದ ಕೂಡಲೇ ಕೊಡಿಗೇನಹಳ್ಳಿ P S I ಶ್ರೀನಿವಾಸ್ ಪ್ರಸಾದ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ನಂತರ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಮದುವೆ ಹಿಂದಿನ ದಿನ ಸಿಹಿ ತಿಂಡಿ ನೀಡಿಲ್ಲ ಎಂದು ಮದುವೆಯನ್ನೇ ರದ್ದುಗೊಳಿಸಿದ ವಿಲಕ್ಷಣ ಘಟನೆಯೊಂದು ಮಡಿಕೇರಿಯ ಕಲ್ಯಾಣಮಂಟಪದಲ್ಲಿ ನಡೆದಿದೆ. ಹಾನಗಲ್ಲು ಗ್ರಾಮದ ಸಿದ್ಧಾರ್ಥ ಬಡಾವಣೆಯ ಯುವತಿಯ ವಿವಾಹವು ತುಮಕೂರು ಜಿಲ್ಲೆಯ ಯುವಕನೋರ್ವನೊಂದಿಗೆ ನಿಶ್ಚಯವಾಗಿತ್ತು. ಮೇ.5 ರಂದು ಜಾನಕಿ ಕನ್ವೆನ್ಶನ್ ಹಾಲ್ ನಲ್ಲಿ ವಿವಾಹ ನಿಗದಿಯಾಗಿತ್ತು. ತುಮಕೂರಿನಿಂದ ವರನ ಕಡೆಯವರು ಶನಿವಾರ ಸಂಜೆ ಮಂಟಪಕ್ಕೆ ಬಂದಿದ್ದರು. ಆದರೆ ರಾತ್ರಿಯ ಊಟದಲ್ಲಿ ಸಿಹಿತಿಂಡಿ ಇಲ್ಲ ಎಂಬ ಕಾರಣಕ್ಕೆ ತಗಾದೆ ತೆಗೆಯಲಾಗಿದ್ದು, ಗಲಾಟೆ ಶುರುವಾಗಿದೆ. ಮಂಟಪದಲ್ಲಿಯೇ ತಳ್ಳಾಟ, ನೂಕಾಟ ನಡೆದಿದೆ. ಮರುದಿನ ಬೆಳಗ್ಗೆ ಅಂದರೆ ರವಿವಾರ ಪ್ರಕರಣ ಪೊಲೀಸ್ ಠಾಣೆಗೆ ಹೋಗಿದೆ. ಶನಿವಾರ ಮದುವೆ ಬೇಡ ಎಂದು ಉಂಗುರ ಕಳಚಿಟ್ಟಿದ್ದ ವರ, ರವಿವಾರ ನಾನು ಮದುವೆಯಾಗುತ್ತೇನೆ ಎಂದು ಹೊಸ ವರಸೆ ಪ್ರಾರಂಭಿಸಿದ್ದ. ಆದರೆ ಈ ದಿಢೀರ್ ಘಟನೆಯಿಂದ ವಧು ಮದುವೆಯೇ ಬೇಡ ಎಂದು ಪೊಲೀಸರಲ್ಲಿ ಹೇಳಿಕೆ ನೀಡಿದ್ದಾಳೆ. ಮದುವೆಗೆ ಖರ್ಚು ಮಾಡಿದ ಹಣವನ್ನು ವರನ ಕಡೆಯವರು ನೀಡಬೇಕೆಂದು ವಧುವಿನ ಕಡೆಯವರು ಪೊಲೀಸ್ ಠಾಣೆ ಮುಂದೆ ಹೇಳಿದ್ದಾರೆ.…
ಇಷ್ಟು ದಿನ ಐಪಿಎಲ್ ನಲ್ಲಿ ಮಾತ್ರ ಬೆಟ್ಟಿಂಗ್ ನಡೆಯುತ್ತಿತ್ತು. ಆದರೆ ಈಗ ವಕೀಲರಿಬ್ಬರು ಲೋಕಸಭಾ ಚುನಾವಣೆಯ ಅಖಾಡದಲ್ಲಿರುವ ತಮ್ಮ ನೆಚ್ಚಿನ ಅಭ್ಯರ್ಥಿಗಳ ಪರ ಲಕ್ಷ ಲಕ್ಷ ಹಣ ಬೆಟ್ಟಿಂಗ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಮೇ 7ರಂದು 3ನೇ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಚುನಾವಣೆಯಲ್ಲಿ ಉತ್ತರ ಪ್ರದೇಶದ ಬದೌನ್ ಕ್ಷೇತ್ರದಿಂದ ಸ್ಪರ್ಧಿಸಿರುವ ಇಬ್ಬರು ನೆಚ್ಚಿನ ಅಭ್ಯರ್ಥಿಗಳ ಮೇಲೆ ವಕೀಲರಿಬ್ಬರು ತಲಾ 2 ಲಕ್ಷ ರೂ. ಬಾಜಿ ಕಟ್ಟಿದ್ದಾರೆ. ಉತ್ತರ ಪ್ರದೇಶದ ಬದೌನ್ ಕ್ಷೇತ್ರದಲ್ಲಿ ವಕೀಲ ಸತ್ಯೇಂದ್ರ ಪಾಲ್ ಮತ್ತು ವಕೀಲ ದಿವಾಕರ್ ವರ್ಮಾ ಬೆಟ್ಟಿಂಗ್ ದಾರರಾಗಿದ್ದಾರೆ ಎನ್ನಲಾಗಿದೆ. ಸತ್ಯೇಂದ್ರ ಪಾಲ್ ಸಮಾಜವಾದಿ ಪಕ್ಷದ ಅಭ್ಯರ್ಥಿ ಆದಿತ್ಯ ಯಾದವ್ ಮೇಲೆ, ದಿವಾಕರ್ ವರ್ಮಾ ಅವರು ಬಿಜೆಪಿಯ ದಿಗ್ವಿಜಯ್ ಸಿಂಗ್ ಶಾಕ್ಯಾ ಅವರು ಲೀಡ್ ನಲ್ಲಿ ಗೆಲ್ಲುತ್ತಾರೆ ಎಂದು ಬೆಟ್ಟಿಂಗ್ ಕಟ್ಟಿದ್ದಾರೆ. ಇದರಲ್ಲಿ ಸೋತವರು ಮತ್ತೊಬ್ಬ ವಕೀಲರಿಗೆ 2 ಲಕ್ಷ ರೂ. ನೀಡುವುದಾಗಿ ಬೆಟ್ಟಿಂಗ್ ಕಟ್ಟಿದ್ದಾರೆ. ಇದನ್ನೂ ಲೀಗಲ್ ಮಾಡಿದ್ದು, ನಾಲ್ವರು ಸಾಕ್ಷಿಗಳ ಸಹಿಯೊಂದಿಗೆ…
ವೀಡಿಯೋಗಳನ್ನು ಯಾರು ವೈರಲ್ ಮಾಡಿದ್ದಾರೆ ಎನ್ನುವುದಕ್ಕಿಂತ, ಸಾರ್ವಜನಿಕ ಜೀವನದಲ್ಲಿ ಹೇಗೆ ವರ್ತಿಸುತ್ತೇವೆ ಎಂಬುದು ಮುಖ್ಯ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದು, ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ ಪ್ರಕರಣ ಹಾಗೂ ರೇವಣ್ಣ ಬಂಧನದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಪ್ರಕರಣದ ತನಿಖೆಯನ್ನು ಎಸ್‍ಐಟಿ ನಡೆಸುತ್ತಿದೆ. ಗಂಭೀರ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿರುವುದರಿಂದ ರೇವಣ್ಣ ಬಂಧನವಾಗಿದೆ. ಈ ರೀತಿ ಆಗಬಾರದಿತ್ತು ಎಂದಿದ್ದಾರೆ. ಹಲವಾರು ಮಹಿಳೆಯರು ದೂರು ಕೊಟ್ಟಿದ್ದಾರೆ. ಪ್ರಜ್ವಲ್ ರೇವಣ್ಣ ಸಹ ಅರೆಸ್ಟ್ ಆಗಲೇಬೇಕು. ಪ್ರಕರಣದ ತನಿಖೆ ಸೂಕ್ತ ರೀತಿಯಲ್ಲಿ ಆಗಬೇಕು. ಈ ವಿಚಾರದಲ್ಲಿ ನಮ್ಮ ಪಕ್ಷದ ನಿಲವು ಸ್ಪಷ್ಟವಾಗಿದೆ ಎಂದಿದ್ದಾರೆ. ರೇವಣ್ಣರಿಗೆ ಸಾಕಷ್ಟು ವಯಸ್ಸಾಗಿದೆ ಇದು ದುರ್ದೈವ. ಸಾರ್ವಜನಿಕ ಜೀವನದಲ್ಲಿ ಹೇಗೆ ವರ್ತನೆ ಮಾಡುತ್ತೇವೆ ಎಂಬುದು ಬಹಳ ಮುಖ್ಯ. ವೀಡಿಯೋ ರಿಲೀಸ್ ಆಗಿರುವುದು ಬೇಸರದ ವಿಚಾರ. ಈ ರೀತಿಯ ಘಟನೆ ಆಗಬಾರದಿತ್ತು. ವೀಡಿಯೋ ನನ್ನದಲ್ಲಾ ಎಂದರೆ ನಾವು ಎಫ್‍ಎಸ್‍ಎಲ್ ಗೆ ಕಳುಹಿಸುತ್ತವೆ. ವೀಡಿಯೋ ಯಾರು ರಿಲೀಸ್ ಮಾಡಿದರು ಅನ್ನೋದು…