ತುಮಕೂರು: ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ವಿಚಾರದಲ್ಲಿ ಸತ್ಯನೋ- ಸುಳ್ಳೋ ಸಾಬೀತು ಆಗಲಿ, ಪ್ರಜ್ವಲ್ ರೇವಣ್ಣ ನನಗೆ ಆತ್ಮೀಯ ಸ್ನೇಹಿತ ಎಂದು ತುಮಕೂರಿನಲ್ಲಿ ಸಂಸದ ಜಿ.ಎಸ್. ಬಸವರಾಜು ತಿಳಿಸಿದ್ದಾರೆ.
ತುಮಕೂರಿನಲ್ಲಿ ನಡೆದ ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿದ ಅವರು, “ಆ ನೇಚರ್ ಇರುವಂತಹ ಹುಡುಗ ಅಲ್ಲ ಆತ. ಏನು ಗ್ರಹಚಾರವೋ, ಯಾರ ಕೈವಾಡವೋ ಗೊತ್ತಿಲ್ಲ” ಎಂದು ಹೇಳಿದರು.
ಇತ್ತೀಚೆಗೆ ಈ ರೀತಿ ತೇಜೋವಧೆ ಮಾಡುವುದು ಹೆಚ್ಚಾಗಿದೆ. ಜಾರಕಿಹೊಳಿಗೂ ಕೂಡ ಪಿತೂರಿ ಮಾಡಿ, ಮನೆ ಹಾಳು ಮಾಡಿ, ಮಾನ -ಮರ್ಯಾದೆ ಹರಾಜು ಹಾಕಿದ್ದಾರೆ. ಜಾರಕಿಹೊಳಿಗೆ ವಿರೋಧ ಪಕ್ಷದವರೇ ಪಿತೂರಿ ಮಾಡಿದರು ಎಂದರು.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿಯೂ ಅನುಮಾನ ಹೊರ ಹಾಕಿದ ಜಿ.ಎಸ್. ಬಸವರಾಜು. ಈಗಲೂ ಕೂಡ ವಿರೋಧ ಪಕ್ಷದವರೇ ಪಿತೂರಿ ಮಾಡಿರಬಹುದು. ಒಂದು ವೇಳೆ ಮಹಿಳೆಯರಿಗೆ ಅನ್ಯಾಯ ಆಗಿದ್ದರೆ ಶಿಕ್ಷೆ ಆಗಲೇಬೇಕು ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296