Subscribe to Updates
Get the latest creative news from FooBar about art, design and business.
- ನೀಟ್ ಹಗರಣ: ಧಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ತುಮಕೂರಿನಲ್ಲಿ ಕಾಂಗ್ರೆಸ್ ವಕೀಲರ ಘಟಕದಿಂದ ಪ್ರತಿಭಟನೆ
- ಸಹಕಾರ ಕ್ಷೇತ್ರಗಳ ಬೆಳವಣಿಗೆಗೆ ತರಬೇತಿ ಪೂರಕ: ಕೆ.ಎನ್.ರಾಜಣ್ಣ
- ರೂ.1.50 ಲಕ್ಷಗಳಂತೆ ಫೆಲೋಶಿಪ್: ಕಿರು ಅಧ್ಯಯನ ಯೋಜನೆಗೆ ಅರ್ಜಿ ಆಹ್ವಾನ
- ಜು.28 ರಂದು ಅರಳಿಮರದಡಿಯಲ್ಲಿ ‘ಮೊಳಗಲಿ ಜಾನಪದ’: ಸಂಗೀತ–ಸಾಂಸ್ಕೃತಿಕ ಕಾರ್ಯಕ್ರಮ
- ಪರ್ಯಾಯ ವ್ಯವಸ್ಥೆ ಮಾಡದೆ ತೆರವು ಮಾಡಬೇಡಿ: ಬೀದಿಬದಿ ವ್ಯಾಪಾರಿಗಳ ಸಂಘ ಮನವಿ
- ಚಿಕ್ಕನಾಯಕನಹಳ್ಳಿ: ಕುಡಿಯುವ ನೀರಿನ ವ್ಯವಸ್ಥೆ: ಮೂಲ ಸೌಕರ್ಯಕ್ಕೆ ಸೂಚನೆ
- ರಾಹುಲ್ ಗಾಂಧಿಯವರ ಧ್ವನಿ ಅಡಗಿಸುವುದಕ್ಕೆ ಕೇಂದ್ರದ ಪ್ರಯತ್ನ: ಡಾ.ಜಿ.ಪರಮೇಶ್ವರ
- ಕುಣಿಗಲ್: ಪಾವಸಂದ್ರ ಕಲ್ಲುಕ್ವಾರಿಯಲ್ಲಿ 12 ಜೀತದಾಳುಗಳ ರಕ್ಷಣೆ: ಉಪವಿಭಾಗಾಧಿಕಾರಿಗಳಿಂದ ವಿಮುಕ್ತಿ ಆದೇಶ
Author: admin
ಬೆಂಗಳೂರು: ತನ್ನ ಅಕ್ಕನ ಮನೆಯಲ್ಲೇ ಹಣ ಹಾಗೂ ಚಿನ್ನಾಭರಣ ಕದ್ದಿದ್ದ ಆರೋಪಿ ತಂಗಿಯನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಉಮಾ ಎಂದು ಗುರುತಿಸಲಾಗಿದೆ. ಬಂಧಿಯಾಗಿರುವ ಉಮಾಳಿಂದ 65 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಲಕ್ಷಾಂತರ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ತನ್ನ ಅಕ್ಕ ಊರಿಗೆ ತೆರಳಿದ್ದ ವೇಳೆ ನಕಲಿ ಕೀ ಬಳಸಿ 52 ಲಕ್ಷ ರೂ. ನಗದು ಹಾಗೂ 180 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದಳು. ಹಾಗೂ ಲಕ್ಷಾಂತರ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯ ಅಕ್ಕ ಏ.24 ರಂದು ಊರಿಗೆ ತೆರಳಿದ್ದರು. ಊರಿಗೆ ತೆರಳುವ ಮುನ್ನ ಸಂಬಂಧಿಯೊಬ್ಬರ ಮನೆಗೆ ಮನೆಯ ಕೀ ಕೊಟ್ಟು ತೆರಳಿದ್ದರು. ರಾತ್ರಿ ವೇಳೆ ಅವರು ಕಾವಲಿಗೆ ಎಂದು ಮನೆಗೆ ತೆರಳಿದ್ದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿತ್ತು. ಉಮಾ ಸ್ತ್ರಿ ಶಕ್ತಿ ಸೇರಿದಂತೆ ಹಲವು ಕಡೆ ಸಾಲ ಮಾಡಿಕೊಂಡಿದ್ದಳು. ಇತ್ತೀಚೆಗೆ ಭಾವನ ಜತೆ ಕೂಡ ಹಣ ಕೇಳಿದ್ದಳು, ಆದರೆ ಅವರು ಕೊಟ್ಟಿರಲಿಲ್ಲ ಎನ್ನಲಾಗಿದೆ.…
ಕಾಡಾನೆ ಹಾವಳಿ ಮಾನವ ಸಂಘರ್ಷಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜೊತೆಗೆ ರಾಜ್ಯ ಸರಕಾರ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ ಆಗ್ರಹಿಸಿದರು. ತಾಲೂಕಿನ ದೊಡ್ಡಮಾಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚಿನಕಲ್ ದುರ್ಗದ ಕೆಸವಿನಹಕಲು ಎಸ್ಟೇಟ್ ನಲ್ಲಿ ಆನಂದ ಪೂಜಾರಿ ಎಂಬ ಕಾರ್ಮಿಕನನ್ನು ಆನೆ ತುಳಿದು ಸಾಯಿಸಿದೆ. ಮೂಡಿಗೆರೆ ಕ್ಷೇತ್ರವೊಂದರಲ್ಲೇ ವರ್ಷದಲ್ಲಿ ೪-೫ ಮಂದಿ ಕಾಡಾನೆಗೆ ಬಲಿಯಾಗಿದ್ದಾರೆ. ಕಳೆದ ವರ್ಷ ಹೆಡದಾಳು ಗ್ರಾಮದ ಮೀನಾ ಕಾಡಾನೆಗೆ ಸಿಲುಕಿ ಮೃತಪಟ್ಟಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯಲ್ಲಿದ್ದರು. ಪ್ರತಿಭಟನೆ ಕಾವು ಜೋರಾದಾಗ ಮುಖ್ಯಮಂತ್ರಿಗಳು ನನಗೆ ದೂರವಾಣಿ ಕರೆಮಾಡಿ ಪ್ರತಿಭಟನೆ ಬಿಟ್ಟು ಮುಂದಿನ ಸಂಸ್ಕಾರ ನಡೆಸಿ, ಆನೆ ಹಾವಳಿ ತಡೆಗೆ ಒಂದು ವಾರದಲ್ಲಿ ಅರಣ್ಯ ಸಚಿವರನ್ನು ಕಳುಹಿಸಿ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಈವರೆಗೆ ಯಾವೊಬ್ಬ ಜನಪ್ರತಿನಿಧಿ, ಅಧಿಕಾರಿ ಆನೆ ಹಾವಳಿ ತಡೆ ಬಗ್ಗೆ ಮಾತಾಡಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಬೇಜವಾಬ್ದಾರಿ ಸಚಿವರಾಗಿದ್ದಾರೆ. ಮೂಡಿಗೆರೆ ಶಾಸಕಿ ನಯನಾ…
ಬೆಂಗಳೂರು: ಹಾಸನ ವಿಡಿಯೋ ಪೆನ್ ಡ್ರೈವ್ ಸೂತ್ರಧಾರಿ ಡಿ.ಕೆ. ಶಿವಕುಮಾರ್ ಎಂದು ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಗಂಭೀರ ಆರೋಪ ಮಾಡಿ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಡಿ.ಕೆ. ಶಿವಕುಮಾರ್ ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ನನ್ನ ವಿರುದ್ಧ ಆರೋಪಿಸಿರುವ ದೇವರಾಜೇಗೌಡ ಬಿಜೆಪಿ ಕಾರ್ಯಕರ್ತ. ಹೀಗಾಗಿ ಬಿಜೆಪಿ-ಜೆಡಿಎಸ್ ನಾಯಕರ ಅಣತಿಯಂತೆ ನನ್ನ ವಿರುದ್ಧ ಸುಳ್ಳು ಅಪಾದನೆ ಮಾಡಲಾಗಿದೆ, ನನ್ನ ವಿರುದ್ಧ ಮಾಡಿರುವ ಆಪಾದನೆಗಳು ಸುಳ್ಳು ಹಾಗೂ ಆಧಾರರಹಿತ. ನನಗೂ, ಪೆನ್ ಡ್ರೈವ್ ಬಿಡುಗಡೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ವಿರುದ್ಧ ಆರೋಪಿಸಿರುವ ದೇವರಾಜೇಗೌಡ ಬಿಜೆಪಿ ಕಾರ್ಯಕರ್ತ ಎಂದು ಸ್ಪಷ್ಟನೆ ನೀಡಿದ್ದಾರೆ. ಕೋತಿ ತಿಂದು ಮೇಕೆ ಬಾಯಿಗೆ ಒರೆಸಿತು ಎಂಬಂತೆ ದೇವರಾಜೇಗೌಡ ಮಾಡೋದೆಲ್ಲ ಮಾಡಿ ಈಗ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಇದರ ಹಿಂದೆ ಬಿಜೆಪಿ-ಜೆಡಿಎಸ್ ನಾಯಕರ ಷಡ್ಯಂತ್ರ ಇದೆ. ದೇವರಾಜೇಗೌಡ ಈ ಹಿಂದೆ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ದೇವರಾಜೇಗೌಡ ಬಿಜೆಪಿಯ ಸಕ್ರಿಯ ಕಾರ್ಯಕರ್ತ. ಪ್ರಜ್ವಲ್ ಪ್ರಕರಣದಲ್ಲಿ ಜೆಡಿಎಸ್,…
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಜಸ್ಟ್ ಅರ್ಧಗಂಟೆ ಸುರಿದ ಮಳೆ ಬೆಂಗಳೂರನ್ನೇ ಅಲ್ಲಾಡಿಸಿದೆ. ಒಂದು ಕಡೆ ಅಂಡರ್ ಪಾಸ್ ಗಳು ಜಲಾವೃತಗೊಂಡರೆ, ಮತ್ತೊಂದೆಡೆ 25ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. ವಾಹನ ಸವಾರರು ಪರದಾಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅರ್ಧಗಂಟೆ ಬಂದ ಮಳೆಗೆ ನಗರದಲ್ಲಿ 25ಕ್ಕೂ ಹೆಚ್ಚು ಭಾಗದಲ್ಲಿ ಮರಗಳು ಧರೆಗೆ ಉರುಳಿವೆ ಎಂದು ತಿಳಿದುಬಂದಿದೆ. ದೂರು ಬಂದ ನಗರಗಳಲ್ಲಿ ಮರಗಳನ್ನು ಬಿಬಿಎಂಪಿ ಸಿಬ್ಬಂದಿಗಳು ತೆರೆವುಗೊಳಿಸಿದ್ದಾರೆ ಎಂದು ಬಿಬಿಎಂಪಿ ಕಂಟ್ರೋಲ್ ರೂಮ್ ಇಂದ ಮಾಹಿತಿ ನೀಡಲಾಗಿದೆ. ನಗರದ ಜಯನಗರ, ಬಸವನಗುಡಿ, ಮಲ್ಲೆಶ್ವರಂ, ಕೋರಮಂಗಲ, ಬಿಟಿಎಂ ಲೇಔಟ್, ಯಶವಂತರಪುರ ಸೇರದಿಂತೆ ಹಲವೆಡೆ ಮರಗಳು ಧರೆಗೆ ಉರುಳಿವೆ. ಆನೇಕಲ್ ತಾಲೂಕಿನ ಬನಹಳ್ಳಿಯಲ್ಲಿ 10 ಕ್ಕೂ ಹೆಚ್ಚು ಮನೆಗಳ ಶೀಟ್ ಗಳು ಹಾರಿ ಹೋಗಿದ್ದು, ಸಿಮೆಂಟ್ ಬ್ರಿಕ್ಸ್ ಗಳು ಕೂಡಾ ನೆಲಕ್ಕುರುಳಿವೆ. ಆನೇಕಲ್ ಭಾಗದಲ್ಲೂ ಬಿರುಗಾಳಿ ಹಾಗೂ ಆಲಿಕಲ್ಲು ಸಹಿತ ಮಳೆ ಆಗಿದೆ. ಸೂರ್ಯಸಿಟಿಯಲ್ಲಿ ಆಸ್ಪತ್ರೆಯ ಶೀಟ್ ಗಳೇ ಹಾರಿ ಹೋಗಿವೆ. ಪಾರ್ಕಿಂಗ್ ನಲ್ಲಿದ್ದ ಕಾರುಗಳು…
‘ದಾದಾಸಾಹೇಬ್ ಫಾಲ್ಕೆ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ಅವಾರ್ಡ್ಸ್’ನಲ್ಲಿ ನಟಿ ನಯನತಾರಾಗೆ ‘ಬೆಸ್ಟ್ ವರ್ಸಟೈಲ್ ನಟಿ’ ಪ್ರಶಸ್ತಿ ನೀಡಲಾಗಿದೆ. ವಿಭಿನ್ನ ಪಾತ್ರಗಳ ಮೂಲಕ ಚಿತ್ರರಂಗಗಳಲ್ಲಿ ಖ್ಯಾತಿ ಗಳಿಸಿರುವ ನಟಿ ಇದೀಗ ‘ಅತ್ಯುತ್ತಮ ಬಹುಮಖ ಪ್ರತಿಭೆಯುಳ್ಳ ನಟಿ’ ಪ್ರಶಸ್ತಿ ಗಳಿಸಿದ್ದಾರೆ. ಇದೇ ವೇಳೆ ‘ಅನಿಮಲ್’ ಚಿತ್ರಕ್ಕಾಗಿ ಸಂದೀಪ್ ರೆಡ್ಡಿ ವಂಗಾ ಅವರು ಬೆಸ್ಟ್ ಡೈರೆಕ್ಟರ್’ ಪ್ರಶಸ್ತಿ ಪಡೆದಿದ್ದಾರೆ. 2022ರಲ್ಲಿ ನಟಿ ನಯನತಾರಾ, ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಸದ್ಯ ಅವಳಿ ಮಕ್ಕಳಿಗೆ ತಾಯಿಯಾಗಿದ್ದಾರೆ. ಸಿನಿಮಾದ ಜೊತೆಗೆ ಸಂಸಾರವನ್ನು ಚಂದವಾಗಿ ನಡೆಸಿಕೊಂಡು ಹೋಗುತ್ತಿರುವ ನಟಿ ಇದೀಗ ‘ಬೆಸ್ಟ್ ವರ್ಸಟೈಲ್ ನಟಿ’ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ. ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ಪಟ್ಟವನ್ನು ಅಲಂಕರಿಸಿರುವ ನಯನತಾರಾ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅಂದ ಹಾಗೆ ನಯನತಾರಾ ಸಿನಿಮಾವೊಂದಕ್ಕೆ 10 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ತಮ್ಮ ಸ್ವಂತ ಇನ್ ಸ್ಟಾಗ್ರಾಂ ಅಕೌಂಟ್ ಮಾಡಿಕೊಂಡಿರುವ ನಟಿ ನಯನತಾರಾ, ಈ ಮೊದಲು ತಮ್ಮ…
ಬೆಂಗಳೂರು: ರಾಚೇನಹಳ್ಳಿ ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮವಾಗಿದೆ. ಸಾವಿರಾರು ಮೀನುಗಳು ಸತ್ತು ತೇಲುತ್ತಿವೆ. ಸತ್ತ ಮೀನುಗಳ ವಾಸನೆಯಿಂದಾಗಿ ವಾಯುವಿಹಾರಿಗಳು ಬೆಳಗ್ಗೆ-ಸಂಜೆ ವಾಕ್ ಮಾಡಲು ಈ ಕೆರೆಗೆ ಬರುತ್ತಿಲ್ಲ. ರಣಹದ್ದುಗಳು ಮತ್ತು ನಾಯಿಗಳು ಸತ್ತ ಮೀನುಗಳನ್ನು ತಿನ್ನಲು ಬರುತ್ತಿವೆ. ಸತ್ತ ಮೀನುಗಳನ್ನು ಅರ್ಧಂಬರ್ಧ ತಿಂದು ಕೆರೆ ಅಕ್ಕಪಕ್ಕದ ಮನೆಗಳ ಬಳಿ ಬಿಟ್ಟು ಹೋಗುತ್ತಿವೆಯಂತೆ. ಅಕ್ಕಪಕ್ಕದ ಮನೆಗಳಿಂದ ನೇರವಾಗಿ ನೀರನ್ನು ಬಿಡಲಾಗ್ತಿದೆ. ಇದರಿಂದ ಕೆರೆಯಲ್ಲಿರುವ ಮೀನುಗಳು ಸಾವನ್ನಪ್ಪುತ್ತಿವೆ ಎಂದು ಕೆಲವರು ತಿಳಿಸಿದ್ದಾರೆ. ಇದರಿಂದ ವಾಸನೆ ತಾಳಲಾಗದೆ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಥಣಿಸಂದ್ರ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ರಾಚೇನಹಳ್ಳಿ ಕೆರೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿರುವ 148 ಎಕರೆ ವಿಸ್ತೀರ್ಣ ಹೊಂದಿದೆ. ಕೆರೆಯಲ್ಲಿ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಪ್ರತಿನಿತ್ಯ ವಾಕ್ ಮಾಡಲು ಬರ್ತಿವಿ. ಆದರೆ ಸತ್ತಿರುವ ಮೀನುಗಳಿಂದ ತುಂಬಾ ಕೆಟ್ಟ ವಾಸನೆ ಬರ್ತಿದೆ. ದಯವಿಟ್ಟು ಬಿಬಿಎಂಪಿ ಅಧಿಕಾರಿಗಳು ಕೆರೆಯನ್ನು ಕ್ಲೀನ್ ಮಾಡಿಸಬೇಕು ಎಂದು ನಿವಾಸಿಗಳು ಮನವಿ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಎಸಗಿರುವ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಶಾಸಕ ಹೆಚ್.ಡಿ. ರೇವಣ್ಣರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟ ನಗರದಲ್ಲಿಂದು ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿತು. ಅಜಾದ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ರಾಜಕೀಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಶಾಸಕ ಹೆಚ್.ಡಿ. ರೇವಣ್ಣ ಮತ್ತು ಈತನ ಮಗ ಸಂಸದ ಪ್ರಜ್ವಲ್ ರೇವಣ್ಣ ಇವರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಲ್ಲದೆ, ಮಹಿಳೆಯರ ಬೆತ್ತಲೆ ವೀಡಿಯೋ ಚಿತ್ರೀಕರಿಸಿರುವ ಪ್ರಕರಣ ಹಾಗೂ ಮಹಿಳೆಯೋರ್ವರನ್ನು ಅಪಹರಿಸಿ ಬಚ್ಚಿಟ್ಟ ಪ್ರಕರಣ ಇಡೀ ರಾಜ್ಯ ತಲೆ ತಗ್ಗಿಸುವಂತಾಗಿದೆ ಎಂದು ಆರೋಪಿಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ಚುನಾವಣೆ ಪೂರ್ವದಲ್ಲಿ ಸಂಸದ ಪ್ರಜ್ವಲ್ ರೇವಣ್ಣನ ಕಾಮದ ಕರ್ಮಕಾಂಡ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಾಗ, ರಾಜ್ಯ ಗುಪ್ತಚರ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಸರ್ಕಾರದ ಗಮನಕ್ಕೆ ತರಬೇಕಾದ ಆದ್ಯ ಕರ್ತವ್ಯವಾಗಿತ್ತು. ಆದರೆ ಹಾಸನದ ಮಹಾಪ್ರಭುಗಳ ಮುಲಾಜಿಗೆ ಹೆದರಿ ಅಲ್ಲಿನ…
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣದ ಸಂತ್ರಸ್ತೆಯರನ್ನು ರಕ್ಷಣೆಗೆ ಮುಂದಾಗಿರುವ ವಿಶೇಷ ತನಿಖಾ ತಂಡ (ಎಸ್ ಐಟಿ) ಸಂತ್ರಸ್ತ ಮಹಿಳೆಯರಿಗೆ ಕಾನೂನಿನ ನೆರವು, ರಕ್ಷಣೆ ಅಥವಾ ಇನ್ನಿತರೆ ಸಹಾಯ ಬೇಕಿದ್ದಲ್ಲಿ ಸಹಾಯವಾಣಿಯನ್ನು ಆರಂಭಿಸಿದೆ. ಹೌದು, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ ಇಡೀ ದೇಶದವನ್ನೇ ಬೆಚ್ಚಿ ಬೀಳಿಸಿದೆ. ಸುಮಾರು 2,900ಕ್ಕೂ ಅಧಿಕ ಅಶ್ಲೀಲ ವೀಡಿಯೋಗಳ ಪೆನ್ ಡ್ರೈವ್ ಹಂಚಿಕೆಯಾಗಿದೆ. ಇದರಿಂದ ಎಷ್ಟೋ ಕುಟುಂಬಗಳು ಬೀದಿಗೆ ಬರುವ ಸಾಧ್ಯತೆಯಿದೆ. ಪ್ರಜ್ವಲ್ ರೇವಣ್ಣನಿಂದ ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ವೀಡಿಯೋ ವೈರಲ್ ಆಗುತ್ತಿದ್ದಂತೆ, ಈಕೆ ಪೊಲೀಸರಿಗೆ ದೂರು ಕೊಟ್ಟು ತನ್ನ ಬಂಧನಕ್ಕೆ ಕಾರಣವಾಗಬಹುದು ಎಂದು ಸಂತ್ರಸ್ತ ಮಹಿಳೆಯನ್ನು ಕಿಡ್ನಾಪ್ ಮಾಡಿಸಲಾಗಿತ್ತು. ಆದರೆ, ಅತ್ಯಾಚಾರ ಸಂತ್ರಸ್ತೆಯ ಮಗ ನೀಡಿದ ದೂರಿನ ಅನ್ವಯ ಎಸ್‌ಐಟಿ ಪೊಲೀಸರು ಮಹಿಳೆಯನ್ನು ಹುಡುಕಿ ರಕ್ಷಣೆ ಮಾಡಿದ್ದಾರೆ. ಈಗ ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಅತ್ಯಾಚಾರಕ್ಕೆ ಒಳಗಾದ ಮಹಿಳೆಯರಿಗೆ ರಕ್ಷಣೆ ನೀಡುವುದಕ್ಕೆ ಎಸ್‌ಐಟಿ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತ ಮಹಿಳೆಯರಿಗಾಗಿ…
ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಎನ್.ಆರ್. ಪುರ ತಾಲೂಕಿನ ಕರಗುಂದ ಗ್ರಾಮದಲ್ಲಿ ನಡೆದಿದೆ. ಅಪಘಾತದಲ್ಲಿ ಕಳಸ ತಾಲೂಕು ಹೊರನಾಡು ಮೂಲದ ಇಬ್ಬರು ಯುವಕರು ಮೃತಪಟ್ಟಿರುತ್ತಾರೆ. ಹೊರನಾಡು ಸಮೀಪದ ಮುಂಡುಗದ ಮನೆ ಗ್ರಾಮದ ಸುನಿಲ್ ಹಾಗೂ ಹಾಸನ ಮೂಲದ ಉಮೇಶ್ ಮೃತಪಟ್ಟ ಯುವಕರು. ಇವರಿಬ್ಬರು ಹೊರನಾಡಿನ ವಸತಿಗೃಹ ಒಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಸೋಮವಾರ ಮುಂಜಾನೆ ತನ್ನ ಬೈಕ್ ಸರ್ವಿಸ್ ಗೆಂದು ಸುನಿಲ್ ಉಮೇಶ್ ನೊಂದಿಗೆ ಶಿವಮೊಗ್ಗಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಬಾಳೆಹೊನ್ನೂರು ಎನ್.ಆರ್. ಪುರ ರಸ್ತೆಯಲ್ಲಿ ಕರಗುಂದ ಗ್ರಾಮದ ಸಮೀಪ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಪರಿಣಾಮ ಇಬ್ಬರು ಯುವಕರು ತೀವ್ರ ಪೆಟ್ಟಿನಿಂದ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಈ ಇಬ್ಬರು ಯುವಕರು ತಲೆಗೆ ಹೆಲ್ಮಟ್ ಧರಿಸಲಿಲ್ಲ ಎಂದು ತಿಳಿದುಬಂದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಕಳೆದ ಐದು ಕಾಲ ಪತ್ರಿಕೆಯನ್ನು ಪ್ರಕಟಿಸಿರುವ ಸ್ಥಳೀಯ ಸ್ಯಾಂಕಿ ರಸ್ತೆಯ ಐಕಾನಿಕ್ “ಕಾವೇರಿ “ ಚಿತ್ರಮಂದಿರ ಈ ನೆನಪು ಮಾತ್ರ. 1974ರ ಜನವರಿ 11ರಂದು ರಾಜ್ ಕುಮಾರ್ ಅಭಿನಯದ ಶ್ರೇಷ್ಠ ಕನ್ನಡ ಚಲನಚಿತ್ರ ‘ಬಂಗಾರದ ಪಂಜರ’ ಪ್ರದರ್ಶನದೊಂದಿಗೆ ಬಾಗಿಲು ತೆರೆದ ಈ ಚಿತ್ರಮಂದಿರ ಇತ್ತೀಚೆಗೆ ತನ್ನ ಸುವರ್ಣ ಮಹೋತ್ಸವದ ಮೈಲಿಗಲ್ಲು ಆಚರಿಸಿತ್ತು. ಅದರ ಸುದೀರ್ಘ ಇತಿಹಾಸ ಮತ್ತು ಅಚ್ಚುಮೆಚ್ಚಿನ ನೆನಪುಗಳು, ಕಾವೇರಿ ಸಿನಿಮಾ ಆನ್ ಲೈನ್ ಸ್ಟ್ರೀಮಿಂಗ್ ಮತ್ತು ದೊಡ್ಡ ಥಿಯೇಟರ್ ಗಳಂತಹ ಮನರಂಜನೆಯಲ್ಲಿ ಬದಲಾವಣೆಗಳನ್ನು ಹೊಂದಲು ಸಾಧ್ಯವಾಗಲಿಲ್ಲ. ಕಡಿಮೆ ಜನರು ಮತ್ತು ಕಡಿಮೆ ಹಣ ಗಳಿಸುವುದರಿಂದ ಅದನ್ನು ಶಾಶ್ವತವಾಗಿ ಮುಚ್ಚಬೇಕು. ಭವ್ಯತೆ ಮತ್ತು ಸೌಕರ್ಯಗಳಿಗೆ ಹೆಸರುವಾಸಿಯಾಗಿರುವ ಕಾವೇರಿ ಚಿತ್ರಮಂದಿರ, ನಗರದ ಅತಿದೊಡ್ಡ ಆಸನ ಸಾಮರ್ಥ್ಯಗಳಲ್ಲಿ ನೆಲೆಗೊಂಡಿದೆ. ಮೆಜೆಸ್ಟಿಕ್ ನಲ್ಲಿರುವ ಕಪಾಲಿ ಚಿತ್ರಮಂದಿರದ ನಂತರ ಎರಡನೆಯದು ಇದಾಗಿದೆ. ಅದರ 1300 ಆಸನಗಳು ಮತ್ತು ವಿಶಿಷ್ಟವಾದ ಮಿನಿ-ಬಾಲ್ಕನಿಯೊಂದಿಗೆ, ಇದು ಪೋಷಕರಿಗೆ ಸ್ಮರಣೀಯ ಸಿನಿಮಾ ಅನುಭವವನ್ನು ಒದಗಿಸಿದೆ. ವಿಶಾಲವಾದ ಪಾರ್ಕಿಂಗ್ ಸೌಲಭ್ಯವು ಅದರ ಆಕರ್ಷಣೆಯನ್ನು…