ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಎನ್.ಆರ್. ಪುರ ತಾಲೂಕಿನ ಕರಗುಂದ ಗ್ರಾಮದಲ್ಲಿ ನಡೆದಿದೆ.
ಅಪಘಾತದಲ್ಲಿ ಕಳಸ ತಾಲೂಕು ಹೊರನಾಡು ಮೂಲದ ಇಬ್ಬರು ಯುವಕರು ಮೃತಪಟ್ಟಿರುತ್ತಾರೆ. ಹೊರನಾಡು ಸಮೀಪದ ಮುಂಡುಗದ ಮನೆ ಗ್ರಾಮದ ಸುನಿಲ್ ಹಾಗೂ ಹಾಸನ ಮೂಲದ ಉಮೇಶ್ ಮೃತಪಟ್ಟ ಯುವಕರು.
ಇವರಿಬ್ಬರು ಹೊರನಾಡಿನ ವಸತಿಗೃಹ ಒಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಸೋಮವಾರ ಮುಂಜಾನೆ ತನ್ನ ಬೈಕ್ ಸರ್ವಿಸ್ ಗೆಂದು ಸುನಿಲ್ ಉಮೇಶ್ ನೊಂದಿಗೆ ಶಿವಮೊಗ್ಗಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.
ಬಾಳೆಹೊನ್ನೂರು ಎನ್.ಆರ್. ಪುರ ರಸ್ತೆಯಲ್ಲಿ ಕರಗುಂದ ಗ್ರಾಮದ ಸಮೀಪ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಪರಿಣಾಮ ಇಬ್ಬರು ಯುವಕರು ತೀವ್ರ ಪೆಟ್ಟಿನಿಂದ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಈ ಇಬ್ಬರು ಯುವಕರು ತಲೆಗೆ ಹೆಲ್ಮಟ್ ಧರಿಸಲಿಲ್ಲ ಎಂದು ತಿಳಿದುಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296