ಬೆಂಗಳೂರು: ತನ್ನ ಅಕ್ಕನ ಮನೆಯಲ್ಲೇ ಹಣ ಹಾಗೂ ಚಿನ್ನಾಭರಣ ಕದ್ದಿದ್ದ ಆರೋಪಿ ತಂಗಿಯನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಉಮಾ ಎಂದು ಗುರುತಿಸಲಾಗಿದೆ. ಬಂಧಿಯಾಗಿರುವ ಉಮಾಳಿಂದ 65 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಲಕ್ಷಾಂತರ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ತನ್ನ ಅಕ್ಕ ಊರಿಗೆ ತೆರಳಿದ್ದ ವೇಳೆ ನಕಲಿ ಕೀ ಬಳಸಿ 52 ಲಕ್ಷ ರೂ. ನಗದು ಹಾಗೂ 180 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದಳು. ಹಾಗೂ ಲಕ್ಷಾಂತರ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಯ ಅಕ್ಕ ಏ.24 ರಂದು ಊರಿಗೆ ತೆರಳಿದ್ದರು. ಊರಿಗೆ ತೆರಳುವ ಮುನ್ನ ಸಂಬಂಧಿಯೊಬ್ಬರ ಮನೆಗೆ ಮನೆಯ ಕೀ ಕೊಟ್ಟು ತೆರಳಿದ್ದರು. ರಾತ್ರಿ ವೇಳೆ ಅವರು ಕಾವಲಿಗೆ ಎಂದು ಮನೆಗೆ ತೆರಳಿದ್ದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿತ್ತು.
ಉಮಾ ಸ್ತ್ರಿ ಶಕ್ತಿ ಸೇರಿದಂತೆ ಹಲವು ಕಡೆ ಸಾಲ ಮಾಡಿಕೊಂಡಿದ್ದಳು. ಇತ್ತೀಚೆಗೆ ಭಾವನ ಜತೆ ಕೂಡ ಹಣ ಕೇಳಿದ್ದಳು, ಆದರೆ ಅವರು ಕೊಟ್ಟಿರಲಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ಅಕ್ಕ ಮನೆಯವರು ಊರಿಗೆ ಹೋದಾಗ, ನಕಲಿ ಕೀ ಬಳಸಿ ಚಿನ್ನ-ನಗದು ಎಗರಿಸಿದ್ದಳು. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ 6 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296