Subscribe to Updates
Get the latest creative news from FooBar about art, design and business.
- ನೀಟ್ ಹಗರಣ: ಧಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ತುಮಕೂರಿನಲ್ಲಿ ಕಾಂಗ್ರೆಸ್ ವಕೀಲರ ಘಟಕದಿಂದ ಪ್ರತಿಭಟನೆ
- ಸಹಕಾರ ಕ್ಷೇತ್ರಗಳ ಬೆಳವಣಿಗೆಗೆ ತರಬೇತಿ ಪೂರಕ: ಕೆ.ಎನ್.ರಾಜಣ್ಣ
- ರೂ.1.50 ಲಕ್ಷಗಳಂತೆ ಫೆಲೋಶಿಪ್: ಕಿರು ಅಧ್ಯಯನ ಯೋಜನೆಗೆ ಅರ್ಜಿ ಆಹ್ವಾನ
- ಜು.28 ರಂದು ಅರಳಿಮರದಡಿಯಲ್ಲಿ ‘ಮೊಳಗಲಿ ಜಾನಪದ’: ಸಂಗೀತ–ಸಾಂಸ್ಕೃತಿಕ ಕಾರ್ಯಕ್ರಮ
- ಪರ್ಯಾಯ ವ್ಯವಸ್ಥೆ ಮಾಡದೆ ತೆರವು ಮಾಡಬೇಡಿ: ಬೀದಿಬದಿ ವ್ಯಾಪಾರಿಗಳ ಸಂಘ ಮನವಿ
- ಚಿಕ್ಕನಾಯಕನಹಳ್ಳಿ: ಕುಡಿಯುವ ನೀರಿನ ವ್ಯವಸ್ಥೆ: ಮೂಲ ಸೌಕರ್ಯಕ್ಕೆ ಸೂಚನೆ
- ರಾಹುಲ್ ಗಾಂಧಿಯವರ ಧ್ವನಿ ಅಡಗಿಸುವುದಕ್ಕೆ ಕೇಂದ್ರದ ಪ್ರಯತ್ನ: ಡಾ.ಜಿ.ಪರಮೇಶ್ವರ
- ಕುಣಿಗಲ್: ಪಾವಸಂದ್ರ ಕಲ್ಲುಕ್ವಾರಿಯಲ್ಲಿ 12 ಜೀತದಾಳುಗಳ ರಕ್ಷಣೆ: ಉಪವಿಭಾಗಾಧಿಕಾರಿಗಳಿಂದ ವಿಮುಕ್ತಿ ಆದೇಶ
Author: admin
ಬೀಜಿಂಗ್: ವ್ಯಕ್ತಿಯೊಬ್ಬ ಒಟ್ಟು 10 ಮಂದಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಚೀನಾದ ಝೆನ್ ಕ್ಸಿಯಾಂಗ್ ಕೌಂಟಿಯ ಚೆಂಗ್ನಾನ್ ಆಸ್ಪತ್ರೆಯಲ್ಲಿ ನಡೆದಿದೆ. ಏಕಾಏಕಿ ಆಸ್ಪತ್ರೆಗೆ ನುಗ್ಗಿದ ವ್ಯಕ್ತಿಯು 10 ಮಂದಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇನ್ನು ಈ ಘಟನೆಯಲ್ಲಿ 23ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿದ ಪೊಲೀಸರು ಶಂಕಿತನನ್ನು ಬಂಧಿಸಿದ್ದಾರೆ. ಇನ್ನು, ಸದ್ಯ 10 ಮಂದಿಯನ್ನು ಕೊಲೆ ಮಾಡಿದ ಆರೋಪಿಯನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಾಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಹಿಂದೆಯೂ ಕೂಡ ಚೀನಾದ ದಕ್ಷಿಣ ಚೀನಾದ ಗುವಾಂಗ್ ಡಾಂಗ್ ಪ್ರಾಂತ್ಯದಲ್ಲಿ ಶಿಶುವಿಹಾರದಲ್ಲಿ ಆರು ಮಂದಿ ಕೊಲೆಯಾಗಿದ್ದರು ಮತ್ತು ಒಬ್ಬರು ಗಾಯಗೊಂಡಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಕೊರಟಗೆರೆ: ಹಲಸಿನಕಾಯಿ ಕೀಳಲು ಮರ ಹತ್ತಿದ ಕೂಲಿ ಕಾರ್ಮಿಕ ಕಾಲು ಜಾರಿ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಳಲಸಂದ್ರ ಗ್ರಾಮದ ಸಮೀಪವಿರುವ ತೋಟದಲ್ಲಿ ನಡೆದಿದೆ. ಹಲಸಿನಕಾಯಿ ಕೀಳಲು ಹೇಳಿದ ತೋಟದ ಮಾಲೀಕ ಬಸವರಾಜು. ಕೂಲಿ ಕಾರ್ಮಿಕ ಸಾವಗೀಡಾಗಿದ್ದಾರೆ ಎಂದು ತಿಳಿದ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಮಧುಸೂದನ್ ಮೃತಪಟ್ಟವರಾಗಿದ್ದಾರೆ. ಮಧುಸೂದನ್ ಪ್ರತಿದಿನವೂ ಕೆಲಸಕ್ಕೆ ಬರುವುದಿಲ್ಲ ಎಂದರೂ, ತೋಟದ ಮಾಲೀಕ ಬಲವಂತವಾಗಿ ಕರೆದುಕೊಂಡು ಹೋಗಿ ಮದ್ಯಪಾನ ಮಾಡಿಸಿ ತನ್ನ ತೋಟದ ಕೆಲಸ ಮಾಡಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಮರ ಹತ್ತಲು ಬರದಿದ್ದವನಿಗೆ, ಮದ್ಯಪಾನ ಮಾಡಿಸಿ ಮರ ಹತ್ತಲು ತೋಟದ ಮಾಲೀಕ ಹೇಳಿರುವುದಾಗಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಬೆಳಿಗ್ಗೆ 7:45ಕ್ಕೆ ಘಟನೆ ನಡೆದಿದ್ದರೂ ಮಧ್ಯಾಹ್ನದವರೆಗೂ ಯಾರಿಗೂ ಮಾಹಿತಿ ನೀಡದೆ ಊರಿನ ಪ್ರಮುಖರ ಜೊತೆ ಸೇರಿ ಪ್ರಕರಣ ಮುಚ್ಚಿ ಹಾಕುವ ಯತ್ನ ಮಾಡಿದ್ದಾರೆ. ಊರಿನ ಜನರಿಗೆ ಮಾಹಿತಿ ತಿಳಿಯುತ್ತಿದ್ದಂತೆ, ತೋಟದ ಮಾಲೀಕ ಏನು ಗೊತ್ತಿಲ್ಲದ ಹಾಗೆ ಸ್ಥಳಕ್ಕೆ ಬಂದಿದ್ದಾರೆ…
ಜೊತೆಗಾರನೇ ಚಾಕು ಇರಿದು ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಸುಂಕದಕಟ್ಟೆ ಬಳಿ ನಡೆದಿದೆ. ಬಿಡದಿ ಮೂಲದ ದಿವ್ಯಾ (30) ಕೊಲೆಯಾದ ಮಹಿಳೆ. ಈಕೆಯ ಜೊತೆಗಾರ ಶಾಂತಕುಮಾರ್ ಕೊಲೆ ಮಾಡಿದ ವ್ಯಕ್ತಿ. ಈ ಇಬ್ಬರು ಬಿಡದಿ ಮೂಲದವರು ಆಗಿದ್ದಾರೆ. 4 ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದು ವಾಸಿಸತೊಡಗಿದ್ದರು. ಆದರೆ ಮದುವೆ ಆಗಿರುವ ಬಗ್ಗೆ ಅನುಮಾನವಿದೆ. ಈ ಮೊದಲು ಕಾಮಾಕ್ಷಿಪಾಳ್ಯದಲ್ಲಿ ಇಬ್ಬರು ಮನೆ ಮಾಡಿದ್ದರು. ಆ ನಂತರ ಇಬ್ಬರ ನಡುವೆ ಜಗಳವಾಗಿದ್ದರಿಂದ ಮಹಿಳೆ ಏಕಾಂಗಿಯಾಗಿ ವಾಸಿಸತೊಡಗಿದಳು. 5 ದಿನದ ಹಿಂದೆ ಬೆಂಗಳೂರಿನ ಸುಂಕದಕಟ್ಟೆಯ ಸೊಲ್ಲಾಪುರಂ ಲೇಔಟ್ ನಲ್ಲಿ ಮಹಿಳೆ ಬಾಡಿಗೆ ಮನೆ ಮಾಡಿದ್ದಳು. ಈ ಬಗ್ಗೆ ಆರೋಪಿ ತಿಳಿದುಕೊಂಡಿದ್ದ. ರಾತ್ರಿ 9:30ಕ್ಕೆ ಬಾಡಿಗೆ ಮನೆ ಬಳಿ ಬಂದಿದ್ದು ಇಬ್ಬರು ಜೊತೆಯಲ್ಲೇ ಮನೆಯೊಳಗೆ ಹೋಗಿದ್ದಾರೆ. ಮನೆ ಒಳಗೆ ಯಾವುದೋ ವಿಷಯಕ್ಕೆ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಈ ವೇಳೆ ಚಾಕು ತೆಗೆದುಕೊಂಡು ಮಹಿಳೆಗೆ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ…
ಹೊರವಲಯದ ಶ್ರೀ ಜಯಬಸವ ತಪೋವನದಲ್ಲಿ ಮೇ.೧೦ ರಂದು ನಡೆಯಲಿರುವ ಬಸವ ಜಯಂತಿ ಹಿನ್ನೆಲೆಯಲ್ಲಿ, ನಮ್ಮ ನಡಿಗೆ ಬಸವಣ್ಣನೆಡೆಗೆ ಎಂಬ ಧ್ಯೇಯವಾಕ್ಯದೊಂದಿಗೆ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಯಬಸವ ತಪೋವನ ವಿಶ್ವ ಧರ್ಮಪೀಠದ ಶ್ರೀ ಜಯಬಸವಾನಂದ ಸ್ವಾಮೀಜಿ ತಿಳಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿರೇಮಗಳೂರು ಅಂಬೇಡ್ಕರ್ ವೃತ್ತದಿಂದ ಶ್ರೀ ಜಯಬಸವ ತಪೋವನದವರೆಗೆ, ಬೆಳಗ್ಗೆ ೬ ರಿಂದ ೧ ಗಂಟೆ ಕಾಲ ೩ ಕಿಮೀ ದೂರವನ್ನು ಬಸವಾದಿ ಶರಣರ ವಚನಗಳ ಪಠಣದೊಂದಿಗೆ, ವಾಯುವಿಹಾರ ನಡೆಸಲಾಗುವುದು. ನಗರ ಮತ್ತು ಗ್ರಾಮೀಣ ಪ್ರದೇಶದ ಬಸವಣ್ಣನ ಅಭಿಮಾನಿಗಳು, ಸರ್ವ ಜನಾಂಗದ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಬಸವ ತಪೋವನದಲ್ಲಿ ಬೆಳಗ್ಗೆ ೭ ಗಂಟೆಗೆ ಬಸವ ಧ್ವಜಾರೋಹಣ ನಂತರ, ೮ ಗಂಟೆವರೆಗೆ ವಚನ ಗಾಯನ ಹಾಗೂ ೫ ಮಂದಿ ಗಣ್ಯರು ಬಸವ ಜಯಂತಿ ಬಗ್ಗೆ ಶುಭ ಸಂದೇಶ ನೀಡಲಿದ್ದಾರೆ ಎಂದರು. ಬಸವ ನಡಿಗೆ ಕಾರ್ಯಕ್ರಮಕ್ಕೆ ಶಾಸಕ ಎಚ್.ಡಿ. ತಮ್ಮಯ್ಯ ಚಾಲನೆ ನೀಡುವರು. ಬಸವ ಧ್ವಜಾರೋಹಣವನ್ನು…
ಪ್ರಜ್ವಲ್ ರೇವಣ್ಣ ಅವರಂತೆಯೇ, ಇಂದಲ್ಲ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಸಚಿವ ಪರಮೇಶ್ವರ ಅವರ ವೀಡಿಯೊಗಳೂ ಹೊರಬರಬಹುದು. ನಾನು ಅವರಿಗೆ ಸೂಚನೆ ಕೊಡುತ್ತಿದ್ದೇನೆ; ಈಗಲೇ ಆ ‘ಮಹಾನಾಯಕ’ನನ್ನು ತಡೆಯಿರಿ’ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಬೆಂಗಳೂರು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನನ್ನ ಖಾಸಗಿ ವೀಡಿಯೊಗಳು ಹೊರಗೆ ಬಂದಾಗಲೇ ನಾನು ಎಚ್ಚರಿಕೆ ಕೊಟ್ಟಿದ್ದೆ. ‘ಆ ಮಹಾನಾಯಕ ಬಹಳ ಪ್ರಭಾವಿ, ಹಣ ಇದ್ದವನು. ಏನು ಬೇಕಾದರೂ ಮಾಡಬಲ್ಲೆ ಎಂಬ ಸೊಕ್ಕು ಇದೆ. ಅವನಿಗೆ ಇತಿಶ್ರೀ ಹಾಡಬೇಕು’ ಎಂದರು. ‘ಸಿಎಂ ಅವರಿಗೆ ಮುಂದೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಈ ವೀಡಿಯೊ ಪ್ರಕರಣಗಳಿಗೆ ಪಕ್ಷಾತೀತವಾಗಿ ಕೊನೆಹಾಡಿ’ ಎಂದರು. ‘ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್ ಕೈವಾಡವಿದೆ ಎಂದು ಹೇಳುತ್ತಿದ್ದಾರೆ. ಆದರೆ, ನನ್ನ ಪ್ರಕರಣದಲ್ಲಿ ನೇರ ಕೈವಾಡ ಇದೆ. ಎಲ್ಲ ಸಾಕ್ಷಿ, ದಾಖಲೆಗಳೂ ನನ್ನ ಬಳಿ ಇವೆ. ಪ್ರಜ್ವಲ್ ವಿಚಾರದಲ್ಲಿ ಪರೋಕ್ಷವಾಗಿ ಆರೋಪಿ ಎನ್ನುತ್ತಿದ್ದಾರೆ. ಆದರೆ, ನನ್ನ ವಿಚಾರದಲ್ಲಿ ನೇರ ಆರೋಪಿ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.…
ಮುಂದಿನ 2-3 ದಿನಗಳಲ್ಲಿ ಎಲ್ಲಾ ಬರಪೀಡಿತ ರೈತರಿಗೆ ಪರಿಹಾರ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಕರ್ನಾಟಕವು ಕೇಂದ್ರ ಸರ್ಕಾರದಿಂದ 3,454.22 ಕೋಟಿ ರೂಪಾಯಿಗಳನ್ನು ಪಡೆಯುವ ಮೊದಲು, 33.58 ಲಕ್ಷ ರೈತರಿಗೆ 636.45 ಕೋಟಿ ರೂಪಾಯಿ ಮೌಲ್ಯದ ಮಧ್ಯಂತರ ಪರಿಹಾರವನ್ನು ತನ್ನದೇ ಆದ ಬೊಕ್ಕಸದಿಂದ ಪಾವತಿಸಲಾಗಿದೆ ಎಂದು ಅವರು ಹೇಳಿದರು. ಇದರಲ್ಲಿ 4.43 ಲಕ್ಷ ಸಣ್ಣ ಜಮೀನು ಹೊಂದಿರುವ ರೈತರು ತಮ್ಮ ಅರ್ಹತೆಗೆ ಅನುಗುಣವಾಗಿ ಸಂಪೂರ್ಣ ಪರಿಹಾರವನ್ನು ಪಡೆದಿದ್ದಾರೆ. ಮೇ 6 ರವರೆಗೆ 27.38 ಲಕ್ಷ ರೈತರು ಎನ್ ಡಿಆರ್‌ಎಫ್ ಅಡಿಯಲ್ಲಿ ಒಟ್ಟು 2,425.13 ಕೋಟಿ ರೂ.ಗಳ ಪರಿಹಾರವನ್ನು ಪಡೆದಿದ್ದಾರೆ. ಇದುವರೆಗೆ 31.82 ಲಕ್ಷ ರೈತರಿಗೆ ಸಂಪೂರ್ಣ ಪರಿಹಾರ ಸಿಕ್ಕಿದೆ, ಇನ್ನುಳಿದ ಎರಡು ಲಕ್ಷ ರೈತರಿಗೆ ಒಂದೆರಡು ದಿನದಲ್ಲಿ ಬಾಕಿ ಹಣ ಸಿಗಲಿದೆ ಎಂದು ಹೇಳಿದರು. ಬರ ಪರಿಹಾರಕ್ಕಾಗಿ ಕರ್ನಾಟಕಕ್ಕೆ ಹಣಕಾಸು ನೆರವು ಬಿಡುಗಡೆ ಮಾಡುವುದು ಸಂವಿಧಾನ ಮತ್ತು ರಾಜ್ಯ ವಿಪತ್ತು ನಿರ್ವಹಣಾ ನಿಧಿ ಮತ್ತು ಗೃಹ ಸಚಿವಾಲಯ…
ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಹಿಂಸಾಚಾರ, ಕೊಲೆ, ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡವೆ ಗಲಾಟೆ ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, ಮೂರನೇ ಹಂತದ ಮತದಾನದ ವೇಳೆಯೂ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆದಿದೆ. ಮುರ್ಷಿದಾಬಾದ್ ನಲ್ಲಿ ಬಿಜೆಪಿ ಅಭ್ಯರ್ಥಿ ಧನಂಜಯ್ ಘೋಷ್ ಮತ ಚಲಾಯಿಸಲು ಹೋದಾಗ ಈ ಗಲಾಟೆ ನಡೆದಿದೆ. ಮುರ್ಷಿದಾಬಾದ್ ನಲ್ಲಿ ಧನಂಜಯ್ ಘೋಷ್ ಮತದಾನ ಮಾಡಲು ಹೋದಾಗ ಅವರನ್ನು ಬೂತ್ ಏಜೆಂಟ್ ಒಬ್ಬರು ತಡೆದಿದ್ದಾರೆ. ಇದೇ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದು ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಗೆ ಕಾರಣವಾಗಿದೆ. “ನಾನೊಬ್ಬ ಬಿಜೆಪಿ ಅಭ್ಯರ್ಥಿ. ನನಗೇ ಚುನಾವಣೆ ಏಜೆಂಟ್ ಒಬ್ಬ ಬಂದು ಬೆದರಿಕೆ ಹಾಕುತ್ತಾನೆ ಎಂದರೆ, ಸಾಮಾನ್ಯ ಜನರ ಗತಿ ಏನು? ಆತನ ವಿರುದ್ಧ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಲಾಗುವುದು” ಎಂದು ಧನಂಜಯ್ ಘೋಷ್ ತಿಳಿಸಿದ್ದಾರೆ. ಮುರ್ಷಿದಾಬಾದ್ ಲೋಕಸಭೆ ಕ್ಷೇತ್ರದ ರಾಬಿನಗರದಲ್ಲೂ ಗಲಾಟೆ ನಡೆದಿದೆ. ಕಾಂಗ್ರೆಸ್-ಎಡಪಕ್ಷದ ಜಂಟಿ ಅಭ್ಯರ್ಥೀ…
ನವವಧು ವರರು ಸಾವಿರಾರು ಕನಸು ಹೊತ್ತು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ವಿಶೇಷ ಅಂದ್ರೆ ಇಲ್ಲಿ ವರನಿಗೆ ಮಾತ್ರ ಮದುವೆಯ ಸಂಭ್ರಮ. ಹೊಸ ಬಾಳ್ವೆ ನಡೆಸುವ ಕನಸು. ಆದ್ರೆ ವಧುವಿನ ಕನಸು ಬೇರೆಯದೆ ಆಗಿತ್ತು. ಹೌದು, ಈ ವಿಚಿತ್ರ ಪ್ರೇಮ ಘಟನೆ ಬಗ್ಗೆ ನೀವು ತಿಳಿಯಲೇ ಬೇಕು. ಇಲ್ಲಿ ನವವಧು ಮದುವೆಯಾದ ಹಲವು ದಿನದವರೆಗೂ ತನ್ನ ಗಂಡನೊಂದಿಗೆ ಮೊದಲ ರಾತ್ರಿ ಕಳೆಯಲು ನಿರಾಕರಿಸಿದ್ದಳು. ನವವಧು ದಿನದಿಂದ ದಿನಕ್ಕೆ ವರನಿಂದ ದೂರವಿದ್ದು ಆರೋಗ್ಯ ಸಮಸ್ಯೆ ಕಾರಣ ನೀಡುತ್ತಿದ್ದಳು. ಆದರೆ ವಧುವಿನ ನವರಂಗಿ ಆಟ ಕೆಲವು ದಿನಗಳವರೆಗೆ ವರನಿಗೆ ಗೊತ್ತಾಗಿರಲಿಲ್ಲ. ಕೊನೆಗೂ ಸತ್ಯ ಬಯಲಾದಾಗ ವರನಿಗೆ ತಾನು ಮೋಸ ಹೋದ ಅರಿವಾಗಿದೆ. ತಾನು ಮದುವೆಯಾದ ವಧು ತನಗೆ ತಿಳಿಯದಂತೆ ಬೇರೊಬ್ಬ ಪುರುಷನ ಸಂಪರ್ಕದಲ್ಲಿದ್ದಳು. ತಂನ್ನೊಂದಿಗೆ ಸುಳ್ಳಿನ ಕಂತೆ ಕಟ್ಟುತ್ತಾ ಅತ್ತ ತನ್ನ ಪ್ರಿಯಕರನ ಬಳಿ ನಿನಗಷ್ಟೇ ದೇಹ ನೀಡುವುದಾಗಿ ಮಾತು ಕೊಟ್ಟಿದ್ದಳು. ಅಷ್ಟು ಮಾತ್ರವಲ್ಲದೆ ಮದುವೆಯಾದ ಹತ್ತನೇ ದಿನ ಆಕೆ ಪ್ರೇಮಿಯೊಂದಿಗೆ ಪರಾರಿಯಾಗಿದ್ದಳು. ಇನ್ನೇನು ಈ…
ಮತದಾನ ಮಾಡಲು ಬಂದ ಯುವಕ ವಿಚಿತ್ರವಾಗಿ ವರ್ತಿಸಿದ್ದು, ಕೆಲಕಾಲ ಮತಗಟ್ಟೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಈ ಘಟನೆ ನೆರೆಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಸಾಂಗೋಲಾ ತಾಲೂಕಿನ ಬಾಗಲವಾಡಿ ಗ್ರಾಮದಲ್ಲಿ ನಡೆದಿದ್ದು, ಯುವಕನೊಬ್ಬ ಇವಿಎಂಗೆ ಬೆಂಕಿ ಹಚ್ಚಿದ್ದಾನೆ. ಇದರಿಂದಾಗಿ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಅಲ್ಲಿದ್ದ ಸಿಬ್ಬಂದಿ ನೀರು ಹಾಕಿ ಬೆಂಕಿ ಹರಿಸಿದ್ದಾರೆ. ಮರಾಠಾ ಆಕರ್ಷಣ ವಿಚಾರಕ್ಕೆ ಆಕ್ರೋಶಗೊಂಡಿದ್ದ ಎನ್ನಲಾಗಿದೆ. ಇನ್ನೂ ಈ ಮತಗಟ್ಟೆಯಲ್ಲಿ ಸುಮಾರು 1300 ಮತದಾರರಿರುವ ಕೇಂದ್ರವಾಗಿದೆ. ಸದ್ಯ ಯುವಕನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಚಿನ್ನ, ಬೆಳ್ಳಿಯತ್ತ ಹೂಡಿಕೆಗಳು ಹೆಚ್ಚುತ್ತಿವೆ. ಪರಿಣಾಮವಾಗಿ ಈ ಅಮೂಲ್ಯ ಲೋಹಗಳ ಬೆಲೆ ಏರಿಕೆ ಮುಂದುವರಿಯುತ್ತಿದೆ. ಇಂದು ಬುಧವಾರ ಚಿನ್ನದ ಬೆಲೆ ಗ್ರಾಮ್ ಗೆ 30 ರೂನಷ್ಟು ಏರಿಕೆ ಆಗಿದೆ. ಬೆಳ್ಳಿ ಬೆಲೆ ಒಂದು ರೂ ಹೆಚ್ಚಾಗಿದೆ. ಹಲವು ದೇಶಗಳಲ್ಲಿ ಚಿನ್ನದ ಬೆಲೆ ಹೆಚ್ಚಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ ನ 22 ಕ್ಯಾರಟ್ ಚಿನ್ನದ ಬೆಲೆ 66,350 ರೂಪಾಯಿ ಇದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 72,380 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,500 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 66,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ ಗೆ 8,400 ರುಪಾಯಿಯಲ್ಲಿ ಇದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 8ಕ್ಕೆ): 22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 66,350 ರೂ 24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 72,380 ರೂ…