ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಹಿಂಸಾಚಾರ, ಕೊಲೆ, ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡವೆ ಗಲಾಟೆ ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, ಮೂರನೇ ಹಂತದ ಮತದಾನದ ವೇಳೆಯೂ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆದಿದೆ. ಮುರ್ಷಿದಾಬಾದ್ ನಲ್ಲಿ ಬಿಜೆಪಿ ಅಭ್ಯರ್ಥಿ ಧನಂಜಯ್ ಘೋಷ್ ಮತ ಚಲಾಯಿಸಲು ಹೋದಾಗ ಈ ಗಲಾಟೆ ನಡೆದಿದೆ. ಮುರ್ಷಿದಾಬಾದ್ ನಲ್ಲಿ ಧನಂಜಯ್ ಘೋಷ್ ಮತದಾನ ಮಾಡಲು ಹೋದಾಗ ಅವರನ್ನು ಬೂತ್ ಏಜೆಂಟ್ ಒಬ್ಬರು ತಡೆದಿದ್ದಾರೆ.
ಇದೇ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದು ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಗೆ ಕಾರಣವಾಗಿದೆ. “ನಾನೊಬ್ಬ ಬಿಜೆಪಿ ಅಭ್ಯರ್ಥಿ. ನನಗೇ ಚುನಾವಣೆ ಏಜೆಂಟ್ ಒಬ್ಬ ಬಂದು ಬೆದರಿಕೆ ಹಾಕುತ್ತಾನೆ ಎಂದರೆ, ಸಾಮಾನ್ಯ ಜನರ ಗತಿ ಏನು? ಆತನ ವಿರುದ್ಧ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಲಾಗುವುದು” ಎಂದು ಧನಂಜಯ್ ಘೋಷ್ ತಿಳಿಸಿದ್ದಾರೆ.
ಮುರ್ಷಿದಾಬಾದ್ ಲೋಕಸಭೆ ಕ್ಷೇತ್ರದ ರಾಬಿನಗರದಲ್ಲೂ ಗಲಾಟೆ ನಡೆದಿದೆ. ಕಾಂಗ್ರೆಸ್-ಎಡಪಕ್ಷದ ಜಂಟಿ ಅಭ್ಯರ್ಥೀ ಮೊಹಮ್ಮದ್ ಸಲೀಂ ಎಂಬುವರು ನಕಲಿ ಬೂತ್ ಏಜೆಂಟ್ ಒಬ್ಬನನ್ನು ಹಿಡಿದು ಹಾಕಿದ್ದಾನೆ ಎಂದಿದ್ದಾರೆ. ಇದಾದ ಬಳಿಕ, ಸಲೀಂ ವಿರುದ್ಧ ಗೋ ಬ್ಯಾಕ್ ಎಂಬ ಘೋಷಣೆ ಕೂಗಿದ್ದು, ನಂತರ ಗಲಾಟೆ ನಡೆದಿದೆ.
ಪಶ್ಚಿಮ ಬಂಗಾಳದಲ್ಲಿ 1 ಗಂಟೆ ಸುಮಾರಿಗೆ ಶೇ.49.27ರಷ್ಟು ಮತದಾನ ದಾಖಲಾಗಿದೆ. ಇನ್ನು, ಮಹಾರಾಷ್ಟ್ರದಲ್ಲಿ ಇದೇ ವೇಳೆಗೆ ಶೇ.31.55ರಷ್ಟು ಮತದಾನ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296