ಜೊತೆಗಾರನೇ ಚಾಕು ಇರಿದು ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಸುಂಕದಕಟ್ಟೆ ಬಳಿ ನಡೆದಿದೆ. ಬಿಡದಿ ಮೂಲದ ದಿವ್ಯಾ (30) ಕೊಲೆಯಾದ ಮಹಿಳೆ. ಈಕೆಯ ಜೊತೆಗಾರ ಶಾಂತಕುಮಾರ್ ಕೊಲೆ ಮಾಡಿದ ವ್ಯಕ್ತಿ.
ಈ ಇಬ್ಬರು ಬಿಡದಿ ಮೂಲದವರು ಆಗಿದ್ದಾರೆ. 4 ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದು ವಾಸಿಸತೊಡಗಿದ್ದರು. ಆದರೆ ಮದುವೆ ಆಗಿರುವ ಬಗ್ಗೆ ಅನುಮಾನವಿದೆ. ಈ ಮೊದಲು ಕಾಮಾಕ್ಷಿಪಾಳ್ಯದಲ್ಲಿ ಇಬ್ಬರು ಮನೆ ಮಾಡಿದ್ದರು. ಆ ನಂತರ ಇಬ್ಬರ ನಡುವೆ ಜಗಳವಾಗಿದ್ದರಿಂದ ಮಹಿಳೆ ಏಕಾಂಗಿಯಾಗಿ ವಾಸಿಸತೊಡಗಿದಳು.
5 ದಿನದ ಹಿಂದೆ ಬೆಂಗಳೂರಿನ ಸುಂಕದಕಟ್ಟೆಯ ಸೊಲ್ಲಾಪುರಂ ಲೇಔಟ್ ನಲ್ಲಿ ಮಹಿಳೆ ಬಾಡಿಗೆ ಮನೆ ಮಾಡಿದ್ದಳು. ಈ ಬಗ್ಗೆ ಆರೋಪಿ ತಿಳಿದುಕೊಂಡಿದ್ದ. ರಾತ್ರಿ 9:30ಕ್ಕೆ ಬಾಡಿಗೆ ಮನೆ ಬಳಿ ಬಂದಿದ್ದು ಇಬ್ಬರು ಜೊತೆಯಲ್ಲೇ ಮನೆಯೊಳಗೆ ಹೋಗಿದ್ದಾರೆ. ಮನೆ ಒಳಗೆ ಯಾವುದೋ ವಿಷಯಕ್ಕೆ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಈ ವೇಳೆ ಚಾಕು ತೆಗೆದುಕೊಂಡು ಮಹಿಳೆಗೆ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296