‘ದಾದಾಸಾಹೇಬ್ ಫಾಲ್ಕೆ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ಅವಾರ್ಡ್ಸ್’ನಲ್ಲಿ ನಟಿ ನಯನತಾರಾಗೆ ‘ಬೆಸ್ಟ್ ವರ್ಸಟೈಲ್ ನಟಿ’ ಪ್ರಶಸ್ತಿ ನೀಡಲಾಗಿದೆ. ವಿಭಿನ್ನ ಪಾತ್ರಗಳ ಮೂಲಕ ಚಿತ್ರರಂಗಗಳಲ್ಲಿ ಖ್ಯಾತಿ ಗಳಿಸಿರುವ ನಟಿ ಇದೀಗ ‘ಅತ್ಯುತ್ತಮ ಬಹುಮಖ ಪ್ರತಿಭೆಯುಳ್ಳ ನಟಿ’ ಪ್ರಶಸ್ತಿ ಗಳಿಸಿದ್ದಾರೆ.
ಇದೇ ವೇಳೆ ‘ಅನಿಮಲ್’ ಚಿತ್ರಕ್ಕಾಗಿ ಸಂದೀಪ್ ರೆಡ್ಡಿ ವಂಗಾ ಅವರು ಬೆಸ್ಟ್ ಡೈರೆಕ್ಟರ್’ ಪ್ರಶಸ್ತಿ ಪಡೆದಿದ್ದಾರೆ. 2022ರಲ್ಲಿ ನಟಿ ನಯನತಾರಾ, ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಸದ್ಯ ಅವಳಿ ಮಕ್ಕಳಿಗೆ ತಾಯಿಯಾಗಿದ್ದಾರೆ. ಸಿನಿಮಾದ ಜೊತೆಗೆ ಸಂಸಾರವನ್ನು ಚಂದವಾಗಿ ನಡೆಸಿಕೊಂಡು ಹೋಗುತ್ತಿರುವ ನಟಿ ಇದೀಗ ‘ಬೆಸ್ಟ್ ವರ್ಸಟೈಲ್ ನಟಿ’ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ.
ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ಪಟ್ಟವನ್ನು ಅಲಂಕರಿಸಿರುವ ನಯನತಾರಾ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅಂದ ಹಾಗೆ ನಯನತಾರಾ ಸಿನಿಮಾವೊಂದಕ್ಕೆ 10 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗುತ್ತಿದೆ.
ಇತ್ತೀಚೆಗಷ್ಟೇ ತಮ್ಮ ಸ್ವಂತ ಇನ್ ಸ್ಟಾಗ್ರಾಂ ಅಕೌಂಟ್ ಮಾಡಿಕೊಂಡಿರುವ ನಟಿ ನಯನತಾರಾ, ಈ ಮೊದಲು ತಮ್ಮ ಪತಿ ವಿಘ್ನೇಶ್ ಶಿವನ್ ಅಕೌಂಟ್ ನಿಂದ ತಮ್ಮ ಮಾಹಿತಿ ಹಾಗೂ ಫೋಟೋಗಳನ್ನು ಶೇರ್ ಮಾಡುತ್ತಿದ್ದರು. ಈಗ ತಮ್ಮದೇ ಅಕೌಂಟ್ ಮೂಲಕ ಬಹಳಷ್ಟು ಪೋಸ್ಟ್ ಶೇರ್ ಮಾಡುತ್ತಿರುವ ನಯನತಾರಾ, ಇತ್ತೀಚಿಗೆ ಗಂಡ ವಿಘ್ನೇಶ್ ಶಿವನ್ ಜೊತೆಗಿರುವ ಕ್ಯೂಟ್ ಫೋಟೋಗಳನ್ನು ಹಂಚಿಕೊಂಡಿದ್ದರು.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296