Subscribe to Updates
Get the latest creative news from FooBar about art, design and business.
- ನೀಟ್ ಹಗರಣ: ಧಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ತುಮಕೂರಿನಲ್ಲಿ ಕಾಂಗ್ರೆಸ್ ವಕೀಲರ ಘಟಕದಿಂದ ಪ್ರತಿಭಟನೆ
- ಸಹಕಾರ ಕ್ಷೇತ್ರಗಳ ಬೆಳವಣಿಗೆಗೆ ತರಬೇತಿ ಪೂರಕ: ಕೆ.ಎನ್.ರಾಜಣ್ಣ
- ರೂ.1.50 ಲಕ್ಷಗಳಂತೆ ಫೆಲೋಶಿಪ್: ಕಿರು ಅಧ್ಯಯನ ಯೋಜನೆಗೆ ಅರ್ಜಿ ಆಹ್ವಾನ
- ಜು.28 ರಂದು ಅರಳಿಮರದಡಿಯಲ್ಲಿ ‘ಮೊಳಗಲಿ ಜಾನಪದ’: ಸಂಗೀತ–ಸಾಂಸ್ಕೃತಿಕ ಕಾರ್ಯಕ್ರಮ
- ಪರ್ಯಾಯ ವ್ಯವಸ್ಥೆ ಮಾಡದೆ ತೆರವು ಮಾಡಬೇಡಿ: ಬೀದಿಬದಿ ವ್ಯಾಪಾರಿಗಳ ಸಂಘ ಮನವಿ
- ಚಿಕ್ಕನಾಯಕನಹಳ್ಳಿ: ಕುಡಿಯುವ ನೀರಿನ ವ್ಯವಸ್ಥೆ: ಮೂಲ ಸೌಕರ್ಯಕ್ಕೆ ಸೂಚನೆ
- ರಾಹುಲ್ ಗಾಂಧಿಯವರ ಧ್ವನಿ ಅಡಗಿಸುವುದಕ್ಕೆ ಕೇಂದ್ರದ ಪ್ರಯತ್ನ: ಡಾ.ಜಿ.ಪರಮೇಶ್ವರ
- ಕುಣಿಗಲ್: ಪಾವಸಂದ್ರ ಕಲ್ಲುಕ್ವಾರಿಯಲ್ಲಿ 12 ಜೀತದಾಳುಗಳ ರಕ್ಷಣೆ: ಉಪವಿಭಾಗಾಧಿಕಾರಿಗಳಿಂದ ವಿಮುಕ್ತಿ ಆದೇಶ
Author: admin
ಕೊರಟಗೆರೆ: ಹಲವು ಫೈನಾನ್ಸ್ ಗಳಲ್ಲಿ ಸುಮಾರು 12 ಲಕ್ಷಕ್ಕೂ ಅಧಿಕ ಸಾಲ ಪಡೆದು, ಸಾಲ ತೀರಿಸಲು ಆಗದೇ ರೈತರೊಬ್ಬರು ನೇಣಿಗೆ ಶರಣಾದ ಘಟನೆ ನಡೆದಿದೆ. ಕೊರಟಗೆರೆ ತಾಲೂಕಿನ ಸಿ ಎನ್ ದುರ್ಗಾ ಹೋಬಳಿಯ ಕಬುಗೆರೆ ಗೊಲ್ಲರಹಟ್ಟಿ ಗ್ರಾಮದ ರಾಜಣ್ಣ(38) ವರ್ಷ ನೇಣಿಗೆ ಶರಣಾಗಿರುವ ರೈತರಾಗಿದ್ದಾರೆ. ಜಮೀನಿನ ಬೋರ್ವೆಲ್ ಗಳಲ್ಲಿ ನೀರು ಸಿಗತ್ತೆ ಎಂಬ ನಂಬಿಕೆಯಿಂದ ರೈತ ರಾಜಣ್ಣ, ತನ್ನ ಮನೆಯ ಮೇಲೆ ಸಾಲ ಮಾಡಿ ಜಮೀನಿನಲ್ಲಿ 5ಕ್ಕೂ ಹೆಚ್ಚು ಬೋರ್ ವೆಲ್ ಕೊರೆಸಿದ್ದರು. ಅಷ್ಟೇ ಅಲ್ಲದೆ ತನ್ನ ಸ್ನೇಹಿತರ ಬಳಿಯೂ ಕೈ ಸಾಲ ಪಡೆದಿದ್ದರು. ಆದರೆ ಜಮೀನಿನ ಬೋರ್ವೆಲ್ ಗಳಲ್ಲಿ ನೀರು ಸಿಗಲಿಲ್ಲ. ಪಡೆದ ಸಾಲ ತಿರಿಸಲಾಗದೇ ಮನನೊಂದ ರೈತ ರಾಜಣ್ಣ, ತಡರಾತ್ರಿ ತನ್ನ ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ವರ್ಷದಿಂದ ಮಳೆ ಇಲ್ಲದೆ, ಬೆಳೆಗಳೆಲ್ಲವೂ ಸಂಪೂರ್ಣ ನಾಶವಾಗಿ, ಮಾಡಿರುವ ಸಾಲ ತೀರಿಸಲಾಗದೆ ರೈತರು ನೇಣು ಹಾಕಿಕೊಳ್ಳುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚು ನಡೆಯುತ್ತಿವೆ. ಮೈಕ್ರೋ ಫೈನಾನ್ಸ್ ಸೇರಿದಂತೆ…
ತಾಯಿಯೊಬ್ಬರು ಅವಳಿ ಮಕ್ಕಳಿಗೆ ಜನನ ನೀಡಿರುವ ಬಗ್ಗೆ ಕೇಳಿರುತ್ತೇವೆ. ಅಪರೂಪವೆಂಬಂತೆ ಗರ್ಭಿಣಿಯೊಬ್ಬರು ಒಂದಲ್ಲ ಎರಡಲ್ಲ ಬರೋಬ್ಬರಿ ಐದು ಮಕ್ಕಳಿಗೆ ಏಕಕಾಲದಲ್ಲಿ ಜನ್ಮ ನೀಡಿರುವ ಘಟನೆ ನಡೆದಿದೆ. 20 ವರ್ಷದ ಗರ್ಭಿಣಿಯೊಬ್ಬರು ಬರೋಬ್ಬರಿ ಐದು ಮಕ್ಕಳಿಗೆ ಜನ್ಮ ನೀಡಿದ ಅಪರೂಪದಲ್ಲಿ ಅಪರೂಪದ ಘಟನೆ ಬಿಹಾರದಲ್ಲಿ ನಡೆದಿದೆ. ಇಲ್ಲಿನ ಕಿಶನ್ ಗಂಜ್ ಜಿಲ್ಲೆಯಲ್ಲಿ ಇಂತಹ ಅಚ್ಚರಿಯ ಪ್ರಕರಣವೊಂದು ನಡೆದಿದ್ದು, ಈ ವಿಷಯ ಇದೀಗ ಇಡೀ ಪ್ರದೇಶದಲ್ಲಿ ಬಿಸಿಬಿಸಿ ಸುದ್ದಿಯಾಗಿ ಚರ್ಚೆಗೆ ಗ್ರಾಸವಾಗಿದೆ. ಗರ್ಭಿಣಿ ಜನ್ಮ ನೀಡಿದ ಎಲ್ಲಾ ಐದು ಮಕ್ಕಳು ಹೆಣ್ಣು ಶಿಶುಗಳಾಗಿದ್ದು, 1 ಕೆಜಿಗಿಂತ ಕಡಿಮೆ ತೂಕವಿದೆ. ಸದ್ಯ ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ಇಂತಹ ಅಪರೂಪದ ಘಟನೆಯಲ್ಲಿ ಐವರು ಹೆಣ್ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿಗೆ ಹೆರಿಗೆ ಮಾಡಿಸಿಕೊಟ್ಟ ವೈದ್ಯೆ ಡಾ. ಫರ್ಜಾನಾ ಮಾತನಾಡಿ, ಈ ಪ್ರಕರಣ ಸವಾಲಿನದ್ದಾಗಿದ್ದು, ಇಂತಹ ಪ್ರಕರಣಗಳು ತೀರಾ ವಿರಳ. ಅಚ್ಚರಿಯ ವಿಷಯ ಎಂದರೆ ಎಲ್ಲಾ ಮಕ್ಕಳು ಸಾಮಾನ್ಯ ಹೆರಿಗೆಯ ಮೂಲಕ ಜನಿಸಿದರು ಎಂದು…
ದೇಶಾದ್ಯಂತ ಸದ್ಯ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದು, ಪ್ರಜ್ವಲ್ ರೇವಣ್ಣ ಅವರನ್ನು ವಿಚಾರಣೆಗೆ ಒಳಪಡಿಸಲು ವಿಶೇಷ ತನಿಖಾ ತಂಡ ಲುಕ್ ಔಟ್ ನೋಟಿಸ್ ಹೊರಡಿಸಿದೆ ಮತ್ತು ರೆಡ್ ಕಾರ್ನರ್ ಹಾಗೂ ಬ್ಲೂ ಕಾರ್ನರ್ ನೊಟೀಸ್ ನೀಡುವ ಸಾಧ್ಯತೆಗಳಿವೆ. ಕ್ರಿಮಿನಲ್ ಪ್ರಕರಣಗಳಲ್ಲಿ ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಜಾರಿಗೊಳಿಸಲಾಗುವ ವಿಶೇಷವಾದ ನೋಟಿಸ್ ಇದಾಗಿದೆ. ಇದನ್ನು ಲುಕ್ ಔಟ್ ಸರ್ಕ್ಯೂಲರ್ ಎಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ ಇದನ್ನು ವಿದೇಶಾಂಗ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಬ್ಯೂರೋ ಆಫ್ ಇಮಿಗ್ರೇಷನ್ ಜಾರಿಗೊಳಿಸುತ್ತದೆ. ಯಾವುದೇ ರಾಜ್ಯಗಳಲ್ಲಿ ಸಂಭವಿಸಿದ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ, ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಅಪರಾಧಿಗಳನ್ನು ಪತ್ತೆ ಹಚ್ಚಲು, ಆಯಾ ರಾಜ್ಯ ಸರ್ಕಾರಗಳ ಅಧೀನ ಕಾರ್ಯದರ್ಶಿ ಹಾಗೂ ಅದಕ್ಕೆ ತತ್ಸಮಾನ ಹುದ್ದೆಗಳಲ್ಲಿರುವ ಅಧಿಕಾರಿಗಳು ಹಾಗೂ ಅದಕ್ಕಿಂತ ಮೇಲ್ಪಟ್ಟ ಅಧಿಕಾರಿಗಳು ಮನವಿ ಸಲ್ಲಿಸಿದರೆ ಮಾತ್ರ ಇಂಥ ನೋಟಿಸ್ ಜಾರಿಗೊಳಿಸುತ್ತದೆ. ಇದಲ್ಲದೆ, ರಾಜ್ಯ ಸರ್ಕಾರಗಳು ರಚನೆ ಮಾಡುವ ವಿಶೇಷ ತನಿಖಾ ತಂಡಗಳಿಗೂ ಇಂಥ ಲುಕ್ ಔಟ್ ನೋಟಿಸ್ ಜಾರಿಗೊಳಿಸಲು…
ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದಾಗ, ಕ್ರಿಕೆಟ್ ಚೆಂಡು ಮರ್ಮಾಂಗಕ್ಕೆ ಬಡಿದು 11 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಪುಣೆಯಲ್ಲಿ ನಡೆದಿದೆ. ಈ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ್ದು, ಬ್ಯಾಟರ್ ಬಾಲನ್ನು ನೇರವಾಗಿ ತನ್ನತ್ತ ಹೊಡೆದಾಗ ಶೌರ್ಯ ಎಂಬ ಬಾಲಕ ಬೌಲಿಂಗ್ ಮಾಡುತ್ತಿದ್ದ. ವೇಗವಾಗಿ ಬಂದ ಚೆಂಡು ಶೌರ್ಯನ ಮರ್ಮಾಂಗಕ್ಕೆ ಬಡಿದಿದ್ದರಿಂದ, ಆತ ಮೈದಾನದಲ್ಲೇ ಕುಸಿದು ಬಿದ್ದಿರುವುದು ವೀಡಿಯೋದಲ್ಲಿ ದಾಖಲಾಗಿದೆ. ನಂತರ ಬಾಲಕನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ಈ ಸಂಬಂಧ ಆಕಸ್ಮಿಕ ಸಾವು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ಸಮುದ್ರದಲ್ಲಿ ಮುಳುಗಿ ಐವರು ಮೆಡಿಕಲ್ ವಿದ್ಯಾರ್ಥಿಗಳು ದುರಂತ ಅಂತ್ಯ ಕಂಡಿದ್ದಾರೆ. ಮದುವೆ ಸಮಾರಂಭಕ್ಕೆಂದು ಐವರು ವಿದ್ಯಾರ್ಥಿಗಳು ತೆರಳಿದ್ದರು ಎನ್ನಲಾಗಿದೆ. ಇದೇ ವೇಳೆ, ಲೆಮುರ್ ಬೀಚ್ ನಲ್ಲಿ ಈಜಾಡಲು ಹೋಗಿದ್ದಾರೆ. ಈ ವೇಳೆ ಐವರೂ ನೀರು ಪಾಲಾಗಿದ್ದಾರೆ. ಐವರಲ್ಲಿ ಇಬ್ಬರು ಯುವತಿಯರಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಐವರೂ ತಿರುಚಿರಪಳ್ಳಿಯಲ್ಲಿರುವ ಎಸ್‌ಆರ್‌ಎಂ ಮೆಡಿಕಲ್ ಕಾಲೇಜಿನವರು ಎಂದು ಮಾಹಿತಿ ಲಭ್ಯವಾಗಿದೆ. ಮೃತರನ್ನು ತಂಜಾವೂರಿನ ಚಾರುಕವಿ, ನೇಯ್ ವೇಲಿಯ ಗಾಯತ್ರಿ, ಕನ್ಯಾಕುಮಾರಿಯ ಸರ್ವದರ್ಶಿತ್, ದಿಂಡಿಗಲ್ ನ ಪ್ರವೀಣ್ ಸ್ಯಾಮ್ ಹಾಗೂ ಆಂಧ್ರಪ್ರದೇಶದ ವೆಂಕಟೇಶ್ ಎಂಬುದಾಗಿ ಗುರುತಿಸಲಾಗಿದೆ. ಒಟ್ಟು ಎಂಟು ವಿದ್ಯಾರ್ಥಿಗಳು ಈಜಾಡಲು ಹೋಗಿದ್ದಾಗ ಐವರು ನೀರುಪಾಲಾಗಿದ್ದಾರೆ. ಇಂಟರ್ನ್‌ಗಳಾಗಿದ್ದ ಕರೂರಿನ ನೇಶಿ, ಥೆಂಗಿಯ ಪ್ರಿಯಾಂಕಾ ಹಾಗೂ ಮದುರೈನ ಶರಣ್ಯ ಎಂಬ ಯುವತಿಯರನ್ನು ರಕ್ಷಿಸಲಾಗಿದೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. “ಲೆಮುರ್ ಬೀಚ್ ಖಾಸಗಿ ಬೀಚ್ ಆಗಿದ್ದು, ಇಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಭಾನುವಾರ ಮದುವೆಗೆ ಬಂದಿದ್ದ ವಿದ್ಯಾರ್ಥಿಗಳು ಅವರಲ್ಲೇ ಗುಂಪುಗಳಾಗಿ ಚದುರಿ ಹೋಗಿದ್ದಾರೆ. ಗೆಳೆಯರು…
ಅಶ್ಲೀಲ ವಿಡಿಯೋಗಳನ್ನು ವಾಟ್ಸ್‌ಆ್ಯಪ್ ಅಥವಾ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹಾಸನ ಪೆನ್ ಡ್ರೈವ್ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಎಚ್ಚರಿಕೆ ನೀಡಿದೆ. ಹಾಸನದಲ್ಲಿ ನಡೆದಿದೆ ಎನ್ನಲಾದ ಕೆಲವು ಅಶ್ಲೀಲ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗಿವೆ. ವಾಟ್ಸ್‌ಆ್ಯಪ್ ಮೂಲಕ ಒಬ್ಬರಿಂದ ಒಬ್ಬರಿಗೆ ಶೇರ್ ಆಗುತ್ತಿದೆ. ಇದರಿಂದ ಸಂತ್ರಸ್ತೆಯರ ಘನತೆ ಹಾಗೂ ಗೌರವಕ್ಕೆ ಚ್ಯುತಿಯಾಗುತ್ತಿದೆ. ಹೀಗಾಗಿ ಉದ್ದೇಶಪೂರ್ವವಾಗಿ ವಾಟ್ಸ್‌ಆ್ಯಪ್ ಸೇರಿ ಇನ್ನಿತರ ಆ್ಯಪ್ ಗಳ ಮುಖಾಂತರ ವೀಡಿಯೋ ಹಂಚುವುದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 69 (ಎ) ಹಾಗೂ 228 (ಎ) 1, 292 ಐಪಿಸಿ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಐಟಿ ಪ್ರಕಟಣೆಯಲ್ಲಿ ತಿಳಿಸಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರಿಗೆ ಕಾನೂನು ನೆರವು ನೀಡಲು ಈಗಾಗಲೇ ಎಸ್ಐಟಿ ಸಹಾಯವಾಣಿ ಆರಂಭಿಸಿದೆ. ಬೆಳಗ್ಗೆ 8ರಿಂದ ರಾತ್ರಿ 8ವರೆಗೆ ಕರೆ ಮಾಡಿ ಮಾತನಾಡಬಹುದು.…
ಗದಗ: ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ದಾರುಣವಾಗಿ ಸಾವನಪ್ಪಿರುವ ಘಟನೆ ಮುಂಡರಗಿ ತಾಲೂಕಿನ ಹೈತಾಪುರ ಗ್ರಾಮದಲ್ಲಿ ನಡೆದಿದೆ. 5 ವರ್ಷದ ಬಾಲಕ ಮನೋಜ್ ಹಾಗೂ 34 ವರ್ಷದ ಗೀತಾ ಹೆಸರೂರು ಮೃತ ದುರ್ದೈವಿಗಳಾಗಿದ್ದಾರೆ. ತಂಗಿಯ ಮಗನೊಂದಿಗೆ ಕೃಷಿ ಹೊಂಡದಲ್ಲಿ ಜಲಸಮಾಧಿ ಆಗಿದ್ದಾರೆ ಮಹಿಳೆ. ಕೃಷಿ ಹೊಂಡದಿಂದ ನೀರು ತರಲು ಹೋದಾಗ ಕಾಲು ಜಾರಿ ಮನೋಜ್ ಮೊದಲು ಕೃಷಿ ಹೊಂಡಕ್ಕೆ ಬಿದ್ದಿದ್ದಾನೆ. ಬಾಲಕ ಮನೋಜ್ ರಕ್ಷಣೆಗೆ ಹೋದಾಗ ಗೀತಾ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆದರೆ, ನೀರಿನ ಅಭಾವದಿಂದ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬಹುಭಾಷಾ ನಟಿ ಸಮಂತಾ ಇತ್ತೀಚೆಗೆ ತನ್ನ ಅನಾರೋಗ್ಯ, ಸೆಕ್ಸಿ ಡ್ರೆಸ್ ನ ಫೋಟೋಗಳಿಂದ, ತನ್ನ ವಿಚ್ಛೇದನದ ವಿಷಯದಿಂದಲೇ ಬಹು ಪ್ರಚಲಿತದಲ್ಲಿದ್ದಾರೆ. ತನ್ನ ಪ್ರವಾಸ-ಹವ್ಯಾಸದೊಂದಿಗೆ ದಿನ ಕಳೆಯುತ್ತಿರುವ ಸಮಂತಾ ಅವರು, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬೆತ್ತಲಾಗಿರುವ ದೇಹದ ಫೋಟೋವನ್ನು ಹಂಚಿಕೊಂಡಿದ್ದು, ಕೂಡಲೇ ಅದನ್ನು ಡಿಲೀಟ್ ಮಾಡಿದ್ದಾರೆ ಎನ್ನುವ ಮಾತೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಸಮಂತಾ ಅವರು ಇದನ್ನು ಪೋಸ್ಟ್ ಮಾಡಿದ ಕೂಡಲೇ ಟ್ರೆಂಡಿಂಗ್ ಸ್ಥಾನ ಪಡೆದುಕೊಂಡಿದ್ದಾರೆ. ಸಮಂತಾ ಅವರೇ ತಮ್ಮ ಬೆತ್ತಲೆ ಫೋಟೋವನ್ನು ಶೇರ್ ಮಾಡಿ ಡಿಲೀಟ್ ಮಾಡಿದ್ದಾರೆ ಎಂದು ಅನೇಕ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಇನ್ನೊಂದೆಡೆ ಇದೊಂದು ಫೇಕ್ ಫೊಟೋವೆಂದು ಸಮಂತಾ ಅಭಿಮಾನಿಗಳು ಹೇಳುತ್ತಿದ್ದಾರೆ. ಬಾತ್ ಟಬ್ ನಲ್ಲಿ ಬೆತ್ತಲಾಗಿ ಕೂತಿರುವ ಯುವತಿಯ ಫೋಟೋ ವೈರಲ್ ಆಗಿದ್ದು, ಮುಖ ಕಾಣುತ್ತಿಲ್ಲ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ತುರುವೇಕೆರೆ: ತಾಲೂಕಿನ ಮಾದಪಟ್ಟಣದ ಗ್ರಾಮದೇವತೆ ಶ್ರೀಕೆಂಪಮ್ಮದೇವಿ ಜಾತ್ರಾ ಮಹೋತ್ಸವ ಶುಕ್ರವಾರದಿಂದ ಭಾನುವಾರದವರೆಗೂ ಮೂರು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ನಡೆಯಿತು. ಶುಕ್ರವಾರ ರಾತ್ರಿ ಗ್ರಾಮದೇವತೆ ಶ್ರೀಕೆಂಪಮ್ಮ ದೇವಿಯ ಜೊತೆ ಪುಟ್ಟ ಬಾಲಕಿಯರು ಸೇರಿ ನೂರಾರು ಮಹಿಳೆಯರು ಆರತಿ ಹೊತ್ತು ಸಾಗಿದರು. ಸೋಮನ ಕುಣಿತ, ಡೊಳ್ಳು ಕುಣಿತ, ಚಿಟ್ಟೇ ಮೇಳ ಸೇರಿದಂತೆ ಅನೇಕ ಜನಪದ ಕಲಾಪ್ರಕಾರಗಳೊಂದಿಗೆ ಮದ್ದು ಗುಂಡುಗಳ ಚಮಾತ್ಕಾರದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಶನಿವಾರ ಸಂಜೆ ಬಾಯಿ ಬೀಗ ಉತ್ಸವದಲ್ಲಿ ಹರಕೆ ಹೊತ್ತ ಹೆಣ್ಣು ಮಕ್ಕಳು ಬಾಯಿಗೆ ತಂತಿ ಮಾಡಿದ ಸೂಜಿಯನ್ನು ಚುಚ್ಚಿಸಿಕೊಂಡು ಹರಕೆ ತೀರಿಸಿದರು. ಮೆರವಣಿಗೆಯಲ್ಲಿ ಬಸವನ ಮೇಲೆ ನಗಾರಿವಾದ್ಯ, ದೊಳ್ಳುವಾದ್ಯ ಜಾನಪದ ಕಲಾ ಪ್ರಕಾರದೊಂದಿಗೆ ರಸ್ತೆಯಲ್ಲಿ ಸಾಗಿತು. ಭಾನುವಾರ ಬೆಳಗ್ಗೆ ಕೆಂಪಮ್ಮದೇವಿ ಮತ್ತೆ ಮೂಲ ದೇವಸ್ಥಾನದಿಂದ ಮೆರವಣಿಗೆಯೊಂದಿಗೆ ಗ್ರಾಮಕ್ಕೆ ಪ್ರವೇಶ ಮಾಡಲಾಗುತ್ತದೆ. ನಂತರ ಭಕ್ತರು ತಮ್ಮ ಹರಕೆ ಹಾಗೂ ಕುರುಹುಗಳನ್ನು ಕೇಳುತ್ತಾರೆ. ದೇವಿಗೆ ಹಲಸಿನ ಹಣ್ಣು, ಬಾಳೆಹಣ್ಣು ಮಾಡಿದ ಪಲಹಾರವನ್ನು ದೇವಿಗೆ, ಸೋಮಗಳಿಗೆ ಮಣೇವು ಹಾಕಿ.…
ತುರುವೇಕೆರೆ: ತಾಲೂಕಿನ ದಬ್ಬೇಘಟ್ಟ ಹೋಬಳಿ ವ್ಯಾಪ್ತಿಗೆ ಬರುವ ಗಾಂಧಿ ಗ್ರಾಮದಲ್ಲಿ, ಕೆಲ ದಿನಗಳಿಂದ ನೆಪೆಡ್ ಮೂಲಕ ಕೊಬ್ಬರಿ ಖರೀದಿ ಮಾಡುವ ಕೇಂದ್ರಗಳನ್ನು ತೆರೆದಿದ್ದು, ಕೊಬ್ಬರಿ ಖರೀದಿಯಲ್ಲಿ ಅಧಿಕಾರಿಗಳು ಮತ್ತು ಕೆಲ ಸಿಬ್ಬಂದಿಗಳು ರೈತರ ಬಳಿ ಹಣ ವಸೂಲಿ ಮಾಡಲು ನಿಂತಿದ್ದಾರೆ ಎಂಬ ಮಾಹಿತಿಯನ್ನು, ನೊಂದ ರೈತನೊಬ್ಬ ಮಾಧ್ಯಮಕ್ಕೆ ದೂರವಾಣಿ ಮೂಲಕ ಕರೆ ಮಾಡಿ, ಆಗುತ್ತಿರುವ ಅನ್ಯಾಯವನ್ನು ಹಂಚಿಕೊಂಡಿದ್ದಾರೆ. ಇನ್ನು ಹಣ ವಸೂಲಿ ಮಾಡುವ ದರೋಡೆಕೋರ ಅಧಿಕಾರಿಗಳ ವಿರುದ್ಧ, ಈಗಾಗಲೇ ಸ್ವರ್ಣ ಭೂಮಿ ರೈತ ಉತ್ಪಾದಕರ ಕಂಪನಿಯ ಉಪಾಧ್ಯಕ್ಷರಾದ ಕುಮಾರಸ್ವಾಮಿಯವರಿಗೆ, ರೈತ ತನ್ನ ಅಳಲನ್ನು ತೋಡಿಕೊಂಡಿದ್ದಾನೆ. ಹೀಗೆ ಮುಂದುವರೆದರೆ ದೊಡ್ಡ ಮಟ್ಟದ ಉಗ್ರ ಹೋರಾಟ ಮಾಡಲಾಗುವುದು ಎಂದು ಉಪಾಧ್ಯಕ್ಷರಾದ ಕುಮಾರಸ್ವಾಮಿಯವರು ಕೂಡ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಹಾಗಾದರೆ, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಹಣ ವಸೂಲಿ ಮಾಡುತ್ತಿರುವ ಅಧಿಕಾರಿ ಮತ್ತು ಕೆಲ ಸಿಬ್ಬಂದಿಗಳ ವಿರುದ್ಧ ಯಾವ ರೀತಿ ಕಾನೂನು ಕ್ರಮ ಜರುಗಿಸುತ್ತಾರೆ ಕಾದು ನೋಡಬೇಕಾಗಿದೆ. ಬರಗಾಲದಲ್ಲೂ ಕೂಡ ರೈತರಿಂದ ಹಣ ವಸೂಲಿಗೆ ನಿಂತ ಕೆಲ…