Subscribe to Updates
Get the latest creative news from FooBar about art, design and business.
- ನೀಟ್ ಹಗರಣ: ಧಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ತುಮಕೂರಿನಲ್ಲಿ ಕಾಂಗ್ರೆಸ್ ವಕೀಲರ ಘಟಕದಿಂದ ಪ್ರತಿಭಟನೆ
- ಸಹಕಾರ ಕ್ಷೇತ್ರಗಳ ಬೆಳವಣಿಗೆಗೆ ತರಬೇತಿ ಪೂರಕ: ಕೆ.ಎನ್.ರಾಜಣ್ಣ
- ರೂ.1.50 ಲಕ್ಷಗಳಂತೆ ಫೆಲೋಶಿಪ್: ಕಿರು ಅಧ್ಯಯನ ಯೋಜನೆಗೆ ಅರ್ಜಿ ಆಹ್ವಾನ
- ಜು.28 ರಂದು ಅರಳಿಮರದಡಿಯಲ್ಲಿ ‘ಮೊಳಗಲಿ ಜಾನಪದ’: ಸಂಗೀತ–ಸಾಂಸ್ಕೃತಿಕ ಕಾರ್ಯಕ್ರಮ
- ಪರ್ಯಾಯ ವ್ಯವಸ್ಥೆ ಮಾಡದೆ ತೆರವು ಮಾಡಬೇಡಿ: ಬೀದಿಬದಿ ವ್ಯಾಪಾರಿಗಳ ಸಂಘ ಮನವಿ
- ಚಿಕ್ಕನಾಯಕನಹಳ್ಳಿ: ಕುಡಿಯುವ ನೀರಿನ ವ್ಯವಸ್ಥೆ: ಮೂಲ ಸೌಕರ್ಯಕ್ಕೆ ಸೂಚನೆ
- ರಾಹುಲ್ ಗಾಂಧಿಯವರ ಧ್ವನಿ ಅಡಗಿಸುವುದಕ್ಕೆ ಕೇಂದ್ರದ ಪ್ರಯತ್ನ: ಡಾ.ಜಿ.ಪರಮೇಶ್ವರ
- ಕುಣಿಗಲ್: ಪಾವಸಂದ್ರ ಕಲ್ಲುಕ್ವಾರಿಯಲ್ಲಿ 12 ಜೀತದಾಳುಗಳ ರಕ್ಷಣೆ: ಉಪವಿಭಾಗಾಧಿಕಾರಿಗಳಿಂದ ವಿಮುಕ್ತಿ ಆದೇಶ
Author: admin
ಕಾಸರಗೋಡು: ಸಮುದ್ರ ಪ್ರಕ್ಷುಬ್ದಗೊಂಡಿದ್ದು, ಬೃಹತ್ ಅಲೆಗಳು ಸಮುದ್ರದ ದಡಕ್ಕೆ ಅಪ್ಪಳಿಸುವ ದೃಶ್ಯ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಕಾಸರಗೋಡು ಜಿಲ್ಲೆಯ ತೃಕನ್ನಾಡು ಬೀಚ್ ಈ ದೃಶ್ಯ ಕಂಡುಬಂದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪಳ್ಳಿಕೆರೆ, ರೆಡ್ ಮೂನ್ ಬೀಚ್ ನಲ್ಲಿ ಪ್ರವಾಸಿಗೆ ನಿರ್ಬಂಧ ಹೇರಲಾಗಿದೆ. ಮೀನುಗಾರಿಕಾ ದೋಣಿಗಳು ಸಮುದ್ರಕ್ಕೆ ಇಳಿಯದೆ ದಡದಲ್ಲೇ ಲಂಗರು ಹಾಕಿದ್ದು, ಕೋಸ್ಟಲ್ ಕಾವಲು ಪಡೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ. ಪ್ರತೀ ವರ್ಷದ ಜೂನ್ ತಿಂಗಳಲ್ಲಿ ಈ ದೃಶ್ಯ ಕಂಡುಬರುವುದು ಸಾಮಾನ್ಯವಾಗಿತ್ತು. ಆದರೆ ಈ ವರ್ಷ ಮೇ ತಿಂಗಳಲ್ಲೆ ಆರಂಭವಾಗಿದ್ದು, ಪ್ರವಾಸಿಗರು ಮತ್ತು ಮೀನುಗಾರರಲ್ಲಿ ಆತಂಕ ಮೂಡಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ವಿಜಯಪುರ: ದಿನೇ ದಿನೇ ಬೇಸಿಗೆಯ ಬಿಸಿ ತಾಪಮಾನ ಹೆಚ್ಚುತ್ತಿದೆ. ಇದೀಗ ಸೆಕೆ ತಡೆಯಲಾಗದೇ ಕೆರೆಯಲ್ಲಿ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮುಖಣಾಪುರ ಗ್ರಾಮದಲ್ಲಿ ನಡೆದಿದೆ. ರಾಜು ಕಾತ್ರಾಳ(35) ಕೆರೆಯಲ್ಲಿ ಮುಳುಗಿ ಸಾವಿಗೀಡಾದ ಯುವಕನಾಗಿದ್ದಾನೆ. ಜಿಲ್ಲೆಯಾದ್ಯಂತ ವಿಪರೀತ ಬಿಸಿಲಿನಿಂದ ಕೂಡಿದ್ದು, ಇದರಿಂದ ಬಳಲಿದ್ದ ರಾಜು ಕುತ್ರಾಳ ಕೆರೆಯಲ್ಲಿ ಈಜಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಮುದ್ದೇಬಿಹಾಳ: ತಾಲ್ಲೂಕಿನ ಢವಳಗಿ ಹಳ್ಳದ ಸಮೀಪದಲ್ಲಿ ಮರಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡ ಘಟನೆ ನಡೆದಿದೆ. ಮಸಬಿನಾಳದ ದೊಡ್ಡಯ್ಯ ರಾಚಯ್ಯ ಪುರಾಣಿಕಮಠ(37), ತಾಳಿಕೋಟಿ ತಾಲ್ಲೂಕಿನ ಜಲಪೂರದ ಪುಷ್ಪಾವತಿ ಶಿವಪುತ್ರಯ್ಯ ಹಿರೇಮಠ (55) ಮೃತ ದುರ್ದೈವಿಗಳಾಗಿದ್ದಾರೆ. ಮದುವೆಗೆ ಹೋಗಿ ವಾಪಸ್ ಊರಿಗೆ ತೆರಳುವ ಸಂದರ್ಭದಲ್ಲಿ ಮರಕ್ಕೆ ಕಾರು ಡಿಕ್ಕಿ ಹೊಡೆದಿತ್ತು. ಸ್ಥಳಕ್ಕೆ ಪಿಎಸ್ ಐ ಸಂಜಯ ತಿಪರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬೆಳಗಾವಿ: ಈ ಬಾರಿಯ ಲೋಕಸಭಾ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟವಾಗಿದೆ. ಈ ಹೋರಾಟದಲ್ಲಿ ಕಾಂಗ್ರೆಸ್ ಗೆಲ್ಲಲಿದ್ದು ಬಿಜೆಪಿ 200 ಸ್ಥಾನ ಗೆಲ್ಲುವುದೂ ಕಷ್ಟವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಳಗಾವಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಗೆ 400 ಸ್ಥಾನಗಳನ್ನು ನೀಡಿದರೆ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಬಿಜೆಪಿ ಹಾಗೂ ಆರ್ ಎಸ್ ಎಸ್ ಹೇಳುತ್ತಿದ್ದಾರೆ. ಅಂಬೇಡ್ಕರ್ ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ, ಸಮಸಮಾಜ ನೀಡುತ್ತದೆ. ಇದಕ್ಕೆ ವಿರುದ್ದವಾಗಿ ಬಿಜೆಪಿಯವರು ನಡೆಯುತ್ತಿದ್ದಾರೆ. ಅಂಬೇಡ್ಕರ್ ಅವರು ದೇಶಕ್ಕೆ ಕೇವಲ ರಾಜಕೀಯ ಸ್ವಾತಂತ್ರ್ಯ ಸಾಕಾಗುವುದಿಲ್ಲ. ಎಲ್ಲರಿಗೂ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ದೊರೆಯುವಂತಾಗಬೇಕು ಎಂದಿದ್ದಾರೆ. ಈ ಶಕ್ತಿಯನ್ನು ದುರ್ಬಲರಿಗೆ ತುಂಬವ ಸಲುವಾಗಿಯೇ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಜಾರಿ ಮಾಡಿದೆ ಎಂದರು. ಬಿಜೆಪಿಯವರು ಮೊದಲು ನಮ್ಮ ಗ್ಯಾರಂಟಿಗಳನ್ನು ಆಡಿಕೊಂಡರು. ಬಳಿಕ ಗ್ಯಾರಂಟಿಗಳನ್ನು ಜಾರಿ ಮಾಡಿದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎನ್ನುವ ಸುಳ್ಳು ಹರಡಿದರು. ಅಭಿವೃದ್ಧಿ ಕೆಲಸಗಳು ನಿಲ್ಲುತ್ತವೆ ಎಂದರು, ಲೋಕಸಭಾ ಚುನಾವಣೆ ತನಕ ಮಾತ್ರ ನೀಡಿ, ನಂತರ ನಿಲ್ಲಿಸುತ್ತಾರೆ…
ಭೂಪಾಲ್: ಮಧ್ಯಪ್ರದೇಶದಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಫಿಯಾಗೆ ಪೊಲೀಸ್‌ಪೇದೆಯೊಬ್ಬರು ಬಲಿಯಾಗಿರುವ ಘಟನೆ ನಡೆದಿದೆ. ಮರಳು ಮಾಫಿಯಾಗೆ ಬಲಿಯಾಗಿರುವ ವ್ಯಕ್ತಿಯನ್ನು ಶೆಹ್ಡೋಲ್ ನ ಸಹಾಯಕ ಸಬ್ ಇನ್ಸ್ ಪೆಕ್ಟರ್ ಮಹೇಂದ್ರ ಬಗ್ರಿ ಎಂದು ಗುರುತಿಸಲಾಗಿದೆ. ಬಗ್ರಿ ಅವರು ಇಬ್ಬರು ಕಾನ್ ಸ್ಟೆಬಲ್ ಗಳಾದ ಪ್ರಸಾದ್ ಕಾನೋಜಿ ಮತ್ತು ಸಂಜಯ್ ದುಬೆ ಅವರೊಂದಿಗೆ ಅಕ್ರಮ ಗಣಿಗಾರಿಕೆಯನ್ನು ಪರಿಶೀಲಿಸಲು ಸ್ಥಳಕ್ಕೆ ಹೋಗಿದ್ದರು. ಮಧ್ಯಪ್ರದೇಶದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಅನ್ನು ತಡೆಯಲು ಬಂದ ಪೊಲೀಸ್ ಪೇದೆ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ವೇಗವಾಗಿ ಬಂದ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಅನ್ನು ಬಗ್ರಿ ಮೇಲೆ ಹರಿಸಲಾಯಿತು ಹೀಗಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅವರ ಜತೆಯಲ್ಲಿದ್ದ ಕಾನೋಜಿ ಮತ್ತು ದುಬೆ ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕ ಮತ್ತು ಟ್ರಕ್ ಮಾಲೀಕನ ಮಗನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಟ್ರ್ಯಾಕ್ಟರ್ ಮಾಲೀಕರು ಪರಾರಿಯಾಗಿದ್ದಾರೆ. ಟ್ರಾಕ್ಟರ್ ಚಾಲಕನನ್ನು ಬಂಧಿಸಿ…
ಕೋಟಾದಲ್ಲಿ ಎರಡು ದಿನಗಳ ಹಿಂದೆ ರೀಲ್ ಮಾಡುವಾಗ ಕಂಟ್ರಿಮೇಡ್ ಪಿಸ್ತೂಲ್ ನಿಂದ ಗುಂಡು ಹಾರಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದ. ಸ್ನೇಹಿತನನ್ನು ಮಾರಣಾಂತಿಕವಾಗಿ ಶೂಟ್ ಮಾಡಿದ ಬಾಲಾಪರಾಧಿ ಸೇರಿದಂತೆ ಆರೋಪಿಯ ಸಹಚರರಾದ ಅಜಯ್ ಸಾಲ್ವಿ ಮತ್ತು ದೀಪಕ್ ಪ್ರಜಾಪತಿ ಅಲಿಯಾಸ್ ‘ಲಡ್ಡು ಶೂಟರ್’ ನನ್ನೂ ಬಂಧಿಸಲಾಗಿದೆ. ಕೋಟಾ ಎಸ್ಪಿ ಅಮೃತಾ ದುಹಾನ್ ಮಾತನಾಡಿ ಮೇ 1 ರಂದು ಸಮುದಾಯ ಕೇಂದ್ರದ ಮುಂಭಾಗದ ಟೀ ಸ್ಟಾಲ್ ನಲ್ಲಿ ತನ್ನ ಮಗನನ್ನು ಅಜಯ್ ಸಾಲ್ವಿ, ದೀಪಕ್ ಪ್ರಜಾಪತಿ ಮತ್ತು ಇತರರು ಗುಂಡು ಹಾರಿಸಿ ಸಾಯಿಸಿದ್ದಾರೆಂದು ದೂರುದಾರರು ಆರೋಪಿಸಿರುವುದಾಗಿ ತಿಳಿಸಿದರು. ಸುಳಿವಿನ ಮೇರೆಗೆ ಬಾಲಾಪರಾಧಿ ಸೇರಿದಂತೆ ಆತನ ಸಹಚರರನ್ನು ಬಂಧಿಸಿದ್ದು, ಕಂಟ್ರಿಮೇಡ್ ಪಿಸ್ತೂಲ್ ಮತ್ತು ಅಪರಾಧಕ್ಕೆ ಬಳಸಿದ ಖಾಲಿ ಕಾರ್ಟ್ರಿಡ್ಜ್ ಅನ್ನು ಸಹ ವಶಪಡಿಸಿಕೊಂಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಮೈಸೂರು: ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಮೇದಿನಿ ಗ್ರಾಮದಲ್ಲಿ ವಿದ್ಯುತ್ ತಂತಿ ತುಳಿದು ರೈತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೇದಿನಿ ಗ್ರಾಮದ ನಿವಾಸಿ ರಾಚನಾಯಕ(70) ಮೃತ ದುರ್ದೈವಿಯಾಗಿದ್ದಾರೆ. ಇತ್ತೀಚೆಗೆ ಜಿಲ್ಲೆಯಾದ್ಯಂತ ಸುರಿದ ಧಾರಾಕಾರ ಮಳೆಯಿಂದಾಗಿ ವಿದ್ಯುತ್ ಕಂಬದಿಂದ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಈ ವೇಳೆ ರಾಚನಾಯಕ ತನ್ನ ಗದ್ದೆಯ ಕಡೆ ಹೋದಾಗ ಈ ಅವಘಡ ಸಂಭವಿಸಿದೆ. ಘಟನೆ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಾಲಮಡ್ಡಿಯಲ್ಲಿ ದಂಪತಿಗಳ ನಡುವೆ ಜಗಳ ನಡೆದಿದ್ದು, ಸಿಟ್ಟಿಗೆದ್ದ ಹೆಂಡತಿ ತಾನು ಹೆತ್ತ ಮಗುವನ್ನು ರಾತ್ರೊ ರಾತ್ರಿ ಮೊಸಳೆಗಳಿದ್ದ ನಾಲೆಗೆ ಎಸೆದಿರುವಂತಹ ಘಟನೆ ನಡೆದಿದೆ. ಸಾವಿತ್ರಿ ಆರೋಪಿ ತಾಯಿಯಾಗಿದ್ದಾರೆ. ವಿನೋದ್ (6) ಸಾವಿಗೀಡಾದ ಮಗುವಾಗಿದೆ. ನಿನ್ನೆ ರಾತ್ರಿ ಗಂಡ ರವಿಕುಮಾರ್ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿದ್ದ ಸಾವಿತ್ರಿ, ಕೋಪದಲ್ಲಿ ಮಗುವನ್ನ ಮೊಸಳೆಗಳಿದ್ದ ನಾಲೆಗೆ ಎಸೆದು ನಂತರ ಪಶ್ಚಾತಾಪದಿಂದಾಗಿ ಘಟನೆ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಮೃತದೇಹವನ್ನು ಹೊರತೆಗೆಯಲು ಮುಳುಗು ತಜ್ಞರಿಂದ ಶೋಧ ಕಾರ್ಯ ಮುಂದುವರೆದಿದ್ದು, ಕೊನೆಗೂ ಮಗುವಿನ ಮೃತದೇಹ ಸಿಕ್ಕಿದೆ. ಮಗುವಿನ ಬಲಗೈಯನ್ನು ಮೊಸಳೆ ಕಚ್ಚಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಘಟನೆಯ ಹಿನ್ನಲೆ: ಮೃತ 6 ವರ್ಷದ ವಿನೋದ್ ಮಾತು ಬಾರದ ಮಗು. ಇದನ್ನೇ ನೆಪಮಾಡಿಕೊಂಡಿದ್ದ ಗಂಡ ಕುಡಿದು ಹೆಂಡತಿ ಜತೆ ಜಗಳವಾಡುತ್ತಿದ್ದ. ಪ್ರತೀ ಬಾರಿ ಗಲಾಟೆಯಾದಾಗಲೂ ಮಗು ಸಾಯಲಿ ಅಂತಾ ಗಂಡ ರವಿಕುಮಾರ್ ಬೈಯ್ಯುತ್ತಿದ್ದ. ಹೀಗಾಗಿ ಗಂಡನ ಜತೆ ಗಲಾಟೆಯ ಕೋಪದಲ್ಲಿ ಮಗುವನ್ನು…
ಛತ್ತೀಸ್ ಗಢ: ಛತ್ತೀಸ್ ಗಡದಲ್ಲಿ ಮೊಬೈಲ್ ಬಳಕೆಗೆ ಅಡ್ಡಿಯಾಗಿದ್ದನೆಂದು ಸ್ವತಃ ಅಣ್ಣನನ್ನೇ ತಂಗಿಯೊಬ್ಬಳು ಹೊಡೆದು ಕೊಂದ ಘಟನೆ ನಡೆದಿದೆ. 14ವರ್ಷದ ಬಾಲಕಿಯೊಬ್ಬಳು ಆಗಾಗ ಮೊಬೈಲ್ ನಲ್ಲಿ ಯಾರೋ ಹುಡುಗನ ಜೊತೆ ಮಾತನಾಡುತ್ತಿದ್ದು, ಇದನ್ನು ಗಮನಿಸಿದ ಆಕೆಯ ಅಣ್ಣ(18) ಇನ್ನು ಮುಂದೆ ಮೊಬೈಲ್ ಬಳಸದಂತೆ ಎಚ್ಚರಿಕೆ ನೀಡಿ ಮೊಬೈಲ್ ಕಿತ್ತುಕೊಂಡಿದ್ದ. ಇದರಿಂದ ಕುಪಿತಳಾದ ಬಾಲಕಿ ತಾಯಿ ಮನೆಯಲ್ಲಿಲ್ಲದ ವೇಳೆ ಕೊಡಲಿಯಿಂದ ಮಲಗಿದ್ದ ಅಣ್ಣನ ಕುತ್ತಿಗೆಗೆ ಬೀಸಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನೆ ಬಳಿಕ ಸ್ನಾನ ಮಾಡಿದ ಬಾಲಕಿ ತನ್ನ ಬಟ್ಟೆ ಮೇಲಿದ್ದ ರಕ್ತದ ಕಲೆಯನ್ನು ಸ್ವಚ್ಛ ಮಾಡಿದ್ದಳು. ಇದಾದ ಬಳಿಕ ತನ್ನ ಅಣ್ಣನನ್ನು ಯಾರೋ ಕೊಲೆ ಮಾಡಿದ್ದಾರೆಂದು ಬಾಲಕಿ ನೆರೆಮನೆಯವರಿಗೆ ತಿಳಿಸಿದ್ದಾಳೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಲಕಿಯನ್ನು ವಿಚಾರಣೆ ನಡೆಸಿದಾಗ ತಾನೇ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಆಕೆಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ…
ಮಾಜಿ ಸಚಿವ ಎಚ್.ಡಿ. ರೇವಣ್ಣ ಬಂಧನ ಹಿನ್ನಲೆ ಗದಗದಲ್ಲಿ ಕಾನೂನು ಸಚಿವ ಎಚ್.ಕೆ. ಪಾಟೀಲ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಮಾಜಿ ಮಂತ್ರಿಗಳಾದ ರೇವಣ್ಣ ಅವರನ್ನು ನಮ್ಮ ಪೊಲೀಸರು ಬಂಧನ ಮಾಡಿದ್ದಾರೆ. ಕಾನೂನು ತನ್ನ ಕ್ರಮ ತೆಗೆದುಕೊಂಡಿದೆ. ಅವರ ವಿರುದ್ಧ ಇರುವ ಆಪಾದನೆಗಳ ಹಿನ್ನಲೆಯಲ್ಲಿ ಕೇಸ್ ರಿಜಿಸ್ಟರ್ ಆಗಿತ್ತು. ಕೆಲವು ಪುರಾವೆಗಳು ಲಭ್ಯವಾಗಿದ್ದವು. ಆ ಹಿನ್ನಲೆಯಲ್ಲಿ ಅವರನ್ನು ಬಂಧನ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ವಿಷಯ ಅವರು ಎಲ್ಲೆ ಇರಲಿ, ಅವರನ್ನು ಬಂಧನ ಮಾಡುವುದಕ್ಕೆ ಸೂಕ್ತವಾದ ಕ್ರಮ ಜಾರಿಯಲ್ಲಿದೆ ಎಂದರು. ಇನ್ನೂ ಎಸ್.ಐಟಿ ತನಿಖೆ ಚುರುಕು ಗೊಳ್ಳುವ ವಿಚಾರವಾಗಿ ಮಾತನಾಡಿ, ಸಹಜವಾಗಿ ಚುರುಕುಗೊಳ್ಳಲಿದೆ. ಹೈಕೋರ್ಟ್ ನವರು ಜಾಮೀನು ಅರ್ಜಿ ರಿಜೆಕ್ಟ್ ಮಾಡಿದ್ದಾರೆ. ಆ ಮೇಲೆ ಇವರ ಬಂಧನ ಆಗಿದೆ. ಕಾನೂನು, ನ್ಯಾಯ, ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ ಹೇಳಿಕೆ ನೀಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ…