ಮೋದಿ ಮಾಡಿರುವ 10 ಸಾಧನೆ ಹೇಳಿದ್ರೆ ಅಂದೇ ರಾಜಕೀಯಕ್ಕೆ ನಿವೃತ್ತಿ ಘೋಷಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ನಾನು ಪ್ರಮಾಣ ವಚನ ಸ್ವೀಕರಿದ ತಕ್ಷಣ ಐದು ಗ್ಯಾರಂಟಿ ಜಾರಿಗೆ ಆದೇಶ ಮಾಡಿದ್ದೆವು. ನಾಲ್ಕು ಸಲ ಗೆದ್ದ ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ ಸಾಧನೆ ಎನು?, ಇವರನ್ನ ಸಚಿವ ಸ್ಥಾನದಲ್ಲಿ ಇರಲು ಅಸಮರ್ಥ ಎಂದು ತೆಗೆದು ಹಾಕಲಾಯಿತು. ಇದು ಬಿಜೆಪಿಯ ಸುಳ್ಳು, ಕಾಂಗ್ರೆಸ್ ನ ಸತ್ಯದ ನಡುವಿನ ಚುನಾವಣೆ. ಈ ಸಲ ಸೋಲುವುದು ಖಚಿತವಾಗಿ ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ಪತ್ನಿ ಗಾಯತ್ರಿ ಸಿದ್ದೇಶ್ವರಗೆ ಟಿಕೆಟ್ ಕೊಡಿಸಿದ್ದಾರೆ ಎಂದರು.
ಬಿಜೆಪಿ ಎಂಪಿಗಳು ಕೊಲೆ ಬಸವ ಇದ್ದಂತೆ. ರಾಜ್ಯದಲ್ಲಿ ಭೀಕರ ಬರವಿದ್ದರೂ ಬಿಜೆಪಿ ಸಂಸದರು ಪರಿಹಾರ ಕೇಳಲಿಲ್ಲ. ರಾಜ್ಯಕ್ಕೆ 14,690 ಕೋಟಿ ರೂಪಾಯಿ ಕೇಂದ್ರ ಅನುದಾನ ನೀಡಲಿಲ್ಲ, ಭದ್ರಾ ಮೇಲ್ಡಂಡ 5,300 ಕೋಟಿ ಹಣ ನೀಡಲೇ ಇಲ್ಲ. ಬರಗಾಲ ಹಿನ್ನೆಲೆ 18 ಸಾವಿರ ಕೋಟಿ ಪರಿಹಾರ ಕೊಟ್ಟಿಲ್ಲ. ಎಂಪಿಗಳು ಆಯ್ಕೆ ಆಗಿ ಹೋಗುವುದು ಟಿಎ, ಡಿಎ ತೆಗೆದುಕೊಳ್ಳಲಿಕ್ಕಾ?, ಕೈ ಮುಗಿದು ಕೇಳಿದ ಬಿಜೆಪಿಗೆ ಮತ ನೀಡಬೇಡಿ ಎಂದು ವಾಗ್ದಾಳಿ ನಡೆಸಿದರು. ಅಲ್ಲದೇ ನರೇಂದ್ರ ಮೋದಿ ಹತ್ತು ವರ್ಷದಲ್ಲಿ ಹತ್ತು ಸಾಧನೆ ಹೇಳಿದ್ರೆ ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296