Author: admin

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಶಾಸಕರನ್ನು ವಿದೇಶ ಪ್ರವಾಸಕ್ಕೆ ಕಳಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕರು ಸ್ವಂತ ಖರ್ಚಿನಲ್ಲಿ ವಿದೇಶಕ್ಕೆ ಹೋಗುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಅತೃಪ್ತ ಶಾಸಕರನ್ನು ಸಮಾಧಾನಪಡಿಸಲು ಮತ್ತು ತಮ್ಮ ಕುರ್ಚಿ ಭದ್ರಪಡಿಸಿಕೊಳ್ಳಲು ಸಿದ್ದರಾಮಯ್ಯ ಅವರೇ ಈ ಪ್ರವಾಸದ ಯೋಜನೆ ರೂಪಿಸಿದ್ದಾರೆ ಎಂದು ವಿಜಯೇಂದ್ರ ಕುಟುಕಿದರು. ಅಭಿವೃದ್ಧಿ ಕುಂಠಿತ: ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ನಿಂತುಹೋಗಿವೆ. ಅನುದಾನದ ಕೊರತೆಯಿಂದ ಗಂಗಕಲ್ಯಾಣ ಯೋಜನೆ ಹಾಗೂ ಮನೆ ನಿರ್ಮಾಣ ಕಾರ್ಯಗಳು ಸ್ಥಗಿತಗೊಂಡಿವೆ. ಇಂತಹ ‘ಲಜ್ಜೆಗೆಟ್ಟ ಸರ್ಕಾರ’ವನ್ನು ರಾಜ್ಯದ ಇತಿಹಾಸದಲ್ಲೇ ನೋಡಿಲ್ಲ ಎಂದು ಅವರು ಕಿಡಿ ಕಾರಿದರು. 5000 ಕೋಟಿ ರೂ. ಹಗರಣದ ಆರೋಪ: ಗೃಹಲಕ್ಷ್ಮಿ ಯೋಜನೆಗೆ ಮೀಸಲಿಟ್ಟ ಸುಮಾರು 5,000 ಕೋಟಿ ರೂಪಾಯಿ ಹಣ ಎಲ್ಲಿಗೆ ಹೋಯಿತು? ಎಂದು ವಿಜಯೇಂದ್ರ ಪ್ರಶ್ನಿಸಿದರು. ಹಣಕಾಸು ಸಚಿವರೂ ಆಗಿರುವ ಸಿಎಂ…

Read More

ನವದೆಹಲಿ: ಕರ್ನಾಟಕ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಮತ್ತು ಅಧಿಕಾರ ಹಂಚಿಕೆಯ ಚರ್ಚೆಗಳು ತೀವ್ರಗೊಂಡಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾವು ರಾಜಕಾರಣದಲ್ಲಿದ್ದೇವೆ, ರಾಜಕಾರಣ ಮಾಡಲೇಬೇಕು. ನನಗೆ ಸದಾ ಯಶಸ್ಸು ಸಿಗುತ್ತದೆ, ಅದಕ್ಕೆ ಸ್ವಲ್ಪ ಶ್ರಮ ಬೇಕಾಗುತ್ತದೆ ಅಷ್ಟೇ” ಎಂದು ಮಾರ್ಮಿಕವಾಗಿ ನುಡಿದರು. ಹೈಕಮಾಂಡ್ ಭೇಟಿ: ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಅಧಿಕಾರ ಹಂಚಿಕೆ ಚರ್ಚೆ: ಅಧಿಕಾರ ಹಂಚಿಕೆ ಅಥವಾ ನಾಯಕತ್ವ ಬದಲಾವಣೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ಈ ಬಗ್ಗೆ ಬಹಿರಂಗವಾಗಿ ಚರ್ಚಿಸಲು ಸಾಧ್ಯವಿಲ್ಲ. ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್ ನಾಯಕರು ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ. ಮಾಧ್ಯಮಗಳು ಈ ಭೇಟಿಗೆ…

Read More

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಔಷಧಗಳ ದಾಸ್ತಾನು ಖಾಲಿಯಾಗಿದ್ದು, ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ಯಾರಾಸಿಟಾಮಾಲ್ ಸೇರಿದಂತೆ ಸುಮಾರು 800ಕ್ಕೂ ಹೆಚ್ಚು ಅಗತ್ಯ ಔಷಧಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲ. ಅಪಘಾತವಾದರೆ ಕಟ್ಟಲು ಬ್ಯಾಂಡೇಜ್ ಕೂಡ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಗಳ ನಿರ್ವಹಣಾ ಹಣದಲ್ಲೇ ಔಷಧ ಖರೀದಿಸುವಂತೆ ಸೂಚಿಸಿರುವುದು ಸರ್ಕಾರದ ಅಸಹಾಯಕತೆಯನ್ನು ತೋರಿಸುತ್ತದೆ ಅಂತ ಆರೋಪಿಸಿದರು. ಆರೋಗ್ಯ ಇಲಾಖೆ ನಿರ್ಲಕ್ಷ್ಯ: ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಆರೋಗ್ಯ ಇಲಾಖೆಯ ಬಜೆಟ್‌ ನಲ್ಲಿ ಶೇ. 30ರಷ್ಟು ಕಡಿತ ಮಾಡಲಾಗಿದೆ. ಇದರಿಂದಾಗಿ ಜನಸಾಮಾನ್ಯರಿಗೆ ಸಿಗಬೇಕಾದ ಕನಿಷ್ಠ ವೈದ್ಯಕೀಯ ಸೌಲಭ್ಯಗಳೂ ಇಲ್ಲದಂತಾಗಿದೆ ಎಂದು ಅವರು ದೂರಿದರು. ಶಾಸಕರ ವಿದೇಶ ಪ್ರವಾಸ: ಒಂದು ಕಡೆ ಜನರಿಗೆ ಔಷಧ ನೀಡಲು ಹಣವಿಲ್ಲ ಎಂದು ಹೇಳುವ ಸರ್ಕಾರ, ಮತ್ತೊಂದೆಡೆ ಶಾಸಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸುತ್ತಿದೆ. ರಾಜ್ಯದಲ್ಲಿ ಜನರು ಸಾರಿಗೆ ಸೌಲಭ್ಯವಿಲ್ಲದೆ ಪರದಾಡುತ್ತಿದ್ದರೆ,…

Read More

ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಭೈರತಿ ಬಸವರಾಜ್ ಅವರಿಗೆ ಸುಪ್ರೀಂ ಕೋರ್ಟ್ ಗುರುವಾರ ದೊಡ್ಡ ಆಘಾತ ನೀಡಿದೆ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಪ್ರಕರಣದ ಹಿನ್ನೆಲೆ: ಕಳೆದ ವರ್ಷ ಜುಲೈನಲ್ಲಿ ಬೆಂಗಳೂರಿನ ಭಾರತಿನಗರದಲ್ಲಿ ರೌಡಿ ಶೀಟರ್ ಬಿಕ್ಲು ಶಿವನನ್ನು ಸಶಸ್ತ್ರ ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ್ದರು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್‌ ನಲ್ಲಿ ಭೈರತಿ ಬಸವರಾಜ್ ಅವರನ್ನು ಐದನೇ ಆರೋಪಿ (A5) ಎಂದು ಹೆಸರಿಸಲಾಗಿದೆ. ಗ್ಯಾಂಗ್‌ ಸ್ಟರ್ ಜಗದೀಶ್ ಅಲಿಯಾಸ್ ಜಗ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಕಾನೂನು ಹೋರಾಟ: ಈ ಹಿಂದೆ ಕರ್ನಾಟಕ ಹೈಕೋರ್ಟ್ ಭೈರತಿ ಬಸವರಾಜ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ,…

Read More

ಕೊರಟಗೆರೆ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸಂಪೂರ್ಣವಾಗಿ ಕಾಪಾಡಿದ್ದೇವೆ. ಬೇರೆ ರಾಜ್ಯಕ್ಕೆ ಹೊಲಿಸಿದರೆ ನಮ್ಮ ರಾಜ್ಯ ಶಾಂತಿಯುತವಾಗಿದೆ. ಅದನ್ನ ಕಾಯುವಂತ ಜವಾಬ್ದಾರಿ ನನ್ನ ಮೇಲೆ ಇದೆ. ಅದನ್ನ ಸಮರ್ಥವಾಗಿ ಮಾಡಿದ್ದೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಪಟ್ಟಣದ ಪೊಲೀಸ್ ಸಿಬ್ಬಂದಿಗಾಗಿ ಸುಮಾರು 11 ಕೋಟಿ ವೆಚ್ಚದಲ್ಲಿ 36 ವಸತಿ ಗೃಹ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದರು. ವಿರೋಧ ಪಕ್ಷದವರಾದ ಬಿಜೆಪಿ, ಜನತಾದಳದವರು ಹೇಳ್ತಾರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿ ಹೋಗಿದೆ ಅಂತ. ಯಾವುದೋ ಒಂದೊರಡು ಅಂಕಿ ಅಂಶಗಳ ಬಗ್ಗೆ ಮಾಹಿತಿ ಕೊಡ್ತಾರೆ ಅಷ್ಟೇ. ರಾಜ್ಯದಲ್ಲಿ ನಮ್ಮ ಪೊಲೀಸ್ ಇಲಾಖೆ ಬಲಿಷ್ಠವಾಗಿ ಕೆಲಸ ಮಾಡುತ್ತಿದೆ. ಇತರೆ ರಾಜ್ಯಕ್ಕೆ ಹೊಲಿಸಿದರೆ ನಮ್ಮ ರಾಜ್ಯ ಶಾಂತವಾಗಿದೆ ಎಂದು ವಿರೋಧ ಪಕ್ಷದವರಿಗೆ ತಿರುಗೇಟು ನೀಡಿದರು. ಪೊಲೀಸ್ ಅಧಿಕಾರಿಗಳು ನಮ್ಮ ಸೇವೆ ಮಾಡಲು ಮಳೆ, ಚಳಿ, ಎನ್ನದೇ ಮತ್ತೆ ಅವರ ಮನೆಯಲ್ಲಿ ಸಾವು ನೋವುಗಳು ನೆಡೆದರೂ ಸಹ ನಮ್ಮ ಸೇವೆ ಮಾಡಲು ಬರುತ್ತಾರೆ. ಅವರಿಗೆ ಉತ್ತಮವಾದ…

Read More

ಹುಳಿಯಾರು: ಸಮೀಪದ ತೋರೆಮನೆ ಗ್ರಾಮದಲ್ಲಿ ನೆಲೆಸಿರುವ ಗ್ರಾಮದೇವತೆಗಳಾದ ಶ್ರೀ ಅಂತರಗಟ್ಟೆ ಕರಿಯಮ್ಮ ದೇವಿ, ಹಳೇಊರಮ್ಮ ದೇವಿ ಹಾಗೂ ಚೌಡೇಶ್ವರಿ ಅಮ್ಮನವರ ಅದ್ದೂರಿ ಜಾತ್ರಾ ಮಹೋತ್ಸವವು ಫೆಬ್ರವರಿ 20 ರಿಂದ 25 ರವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ ಎಂದು ದೇವಸ್ಥಾನದ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ. ಧಾರ್ಮಿಕ ಕಾರ್ಯಕ್ರಮಗಳ ವಿವರ: ಫೆಬ್ರವರಿ 20 ಶುಕ್ರವಾರದಂದು ಅಮ್ಮನವರ ಮೂಲಸ್ಥಾನದಲ್ಲಿ ಬೆಳಿಗ್ಗೆ ವಿಶೇಷ ಪೂಜೆ ಹಾಗೂ ಮಡಲಕ್ಕಿ ಸೇವೆಯೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಫೆ. 22 ಭಾನುವಾರ ಸಂಜೆ 6 ಗಂಟೆಗೆ ದೋಣಿ ಸೇವೆ ಹಾಗೂ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ಸೋಮವಾರ ಸಂಜೆ 5:30ಕ್ಕೆ ನೂರೊಂದು ಎಡೆ ಹಾಗೂ ಜಲ್ಲೆಗೌಡು ಸೇವೆ ನಡೆಯಲಿದ್ದು, ಅಂದು ರಾತ್ರಿ 9:30ಕ್ಕೆ ಅಮ್ಮನವರ ‘ಮದುವಣಗಿತ್ತಿ’ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಗಿರಲಿದೆ. ಚಿನ್ನದ ಅಶ್ವ ರಥೋತ್ಸವ: ಜಾತ್ರೆಯ ಪ್ರಮುಖ ಘಟ್ಟವಾದ ‘ಚಿನ್ನದ ಅಶ್ವ ರಥೋತ್ಸವ’ವು ಫೆಬ್ರವರಿ 24ರ ಮಂಗಳವಾರ ರಾತ್ರಿ 9 ಗಂಟೆಗೆ ಸಕಲ ವಾದ್ಯಗೋಷ್ಠಿಗಳೊಂದಿಗೆ ಅದ್ದೂರಿಯಾಗಿ ನಡೆಯಲಿದೆ. ಅದೇ ದಿನ ರಾತ್ರಿ 10:30ಕ್ಕೆ ಗೌರಿಬಿದನೂರಿನ…

Read More

ಕೊರಟಗೆರೆ: ವಿದ್ಯಾರ್ಥಿಗಳಲ್ಲಿ ವ್ಯಾಪಾರ ಮನೋಭಾವನೆ, ವ್ಯವಹಾರಿಕ ಜೀವನ ನಿರ್ವಹಣೆ ಮಹತ್ವ ತಿಳಿಸುವ ಉದ್ದೇಶದಿಂದ ಹೊಳವನಹಳ್ಳಿ ಹಿಂದೂಸ್ತಾನ್ ಇಂಟರ್ ನ್ಯಾಷನಲ್ ಶಾಲಾ ಆವರಣದಲ್ಲಿ ಎಲ್‌ ಕೆ ಜಿ, ಯಿಂದ 8 ನೇ ತರಗತಿ ವರೆಗಿನ ಮಕ್ಕಳಿಂದ ಮಕ್ಕಳ ಸಂತೆ ಏರ್ಪಡಿಸಲಾಗಿತ್ತು. ಓದು, ಆಟ–ಪಾಠಕ್ಕೆ ಮೀಸಲಾಗಿದ್ದ ಶಾಲಾ ಆವರಣ ಸಂತೆಯ ರೀತಿ ಮಾರ್ಪಾಡಗಿತ್ತು. ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ತಂದಂತಹ ವಿವಿಧ ಬಗೆ ಬಗೆಯ ತಾಜಾ ತರಕಾರಿ, ಹೂವು, ಸೊಪ್ಪು, ಹಣ್ಣು-ಹಂಪಲು ಹಾಗೂ ತಿಂಡಿ ತಿನ್ನಿಸುಗಳು, ತಂಪು ಪಾನೀಯಗಳು ಸಂತೆಯಲ್ಲಿದ್ದವು. ಮೊದಲೇ ಹಳ್ಳಿ ಮಕ್ಕಳಾದ್ದರಿಂದ ಪೈಪೋಟಿಗೆ ಬಿದ್ದವರಂತೆ ಭರ್ಜರಿ ವ್ಯಾಪಾರ ಮಾಡಿ ಓದಕ್ಕೂ ಸೈ, ವ್ಯಾಪಾರಕ್ಕೂ ಜೈ ಎನಿಸಿಕೊಂಡರು. ಶಾಲಾ ಮಕ್ಕಳ ವ್ಯಾಪಾರಕ್ಕೆ ಹಿರಿಯ ವಿದ್ಯಾರ್ಥಿಗಳು ಸಹಕಾರ ನೀಡಿದರು. ವ್ಯಾಪಾರ ಮಾಡುವ ಕೌಶಲ್ಯ ಹೇಳಿಕೊಟ್ಟರು, ಚಿಲ್ಲರೆ ಕೊಡುವ ಲೆಕ್ಕಚಾರ ಕಲಿಸಿದರು. ಒಟ್ಟಿನಲ್ಲಿ ಶಾಲೆಯ ಎಲ್ಲ ಮಕ್ಕಳಿಗೂ ಸಂತೆ ಮೇಳ ಹೊಸ ಕಲೆ ಕಲಿಸಿದಂತಿತ್ತು. ಈ ಮೇಳದಲ್ಲಿ ಶಿಕ್ಷಕರು, ಪೋಷಕರೇ ಗ್ರಾಹಕರಾಗಿ ತಮಗಿಷ್ಟವಾದ ವಸ್ತುಗಳನ್ನು ಖರೀದಿಸಿದರು. ವಿದ್ಯಾರ್ಥಿಗಳು…

Read More

ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಮತ್ತು ಕಾರ್ಮಿಕರ ಹಿತ ಕಾಪಾಡದೇ ಕಾರ್ಪೋರೇಟರ್‌ ಗಳನ್ನು ಬೆಳೆಸುವ ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಗೆ ತರಲು ತಯಾರಿ ಮಾಡಿಕೊಂಡಿದೆ. ಕಾರ್ಮಿಕರ ಕಷ್ಟವನ್ನು ಅರಿತು ದುಡಿಯುವ ವರ್ಗದ ಬೇಡಿಕೆಯನ್ನು ಶೀಘ್ರದಲ್ಲೇ ಈಡೇರಿಸದಿದ್ದರೆ ಹೋರಾಟದ ಕಿಚ್ಚು ಇನ್ನಷ್ಟು ಹೆಚ್ಚಲಿದೆ ಎಂದು ರೈತ ಸಂಘ ಅಧ್ಯಕ್ಷ ರಂಗಹನುಮಯ್ಯ ಎಚ್ಚರಿಕೆ ನೀಡಿದರು. ಕರ್ನಾಟಕ ರಾಜ್ಯ ರೈತ ಸಂಘ, ಸಿಐಟಿಯು ಕೊರಟಗೆರೆ ತಾಲ್ಲೂಕು ಸಮಿತಿ, ಬಿಸಿ ಊಟ ನೌಕರರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯರ್ತೆಯರು, ದಿನನಿತ್ಯ ಕೂಲಿ ಕಾರ್ಮಿಕರು, ಯುವಜನರು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ ಸೂಚಿಸಿ ಕೆಎಸ್‌ ಆರ್‌ ಟಿಸಿ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿಯ ವೆರೆಗೆ ಪ್ರತಿಭಟನೆ ನಡೆಸಿ ಗ್ರೇಡ್–2 ತಹಶೀಲ್ದಾರ್ ರಾಮ್‌ ಪ್ರಸಾದ್ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು. ಸರ್ಕಾರದ ಭ್ರಷ್ಠಚಾರಗಳನ್ನು ಅರಿತು ಜನರು ಜಾಗೃತರಾಗಿ ಶ್ರಮಕ್ಕೆ ತಕ್ಕ ಕೂಲಿಯನ್ನು ನೀಡುವಂತೆ ಮುಷ್ಕರದಲ್ಲಿ ಕಾರ್ಮಿಕರು ಪ್ರತಿಭಟಿಸುತ್ತಿದ್ದು, ತುಮಕೂರಿನ…

Read More

ಗುಬ್ಬಿ: ತಾಲೂಕಿನ ಕಸಬಾ ಹೋಬಳಿಯ ಹೊದಲೂರು ಗ್ರಾಮದ  ಶ್ರೀ ಕೆಂಪಮ್ಮ ದೇವಿ ಮತ್ತು ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿದ್ದು  ಅಗ್ನಿಕೊಂಡವನ್ನ ಹಾಯುವ ಮೂಲಕ ಭಕ್ತರು ತಮ್ಮ ಹರಕೆಯನ್ನು ಆಚರಿಸಿಕೊಂಡರು. ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಭಕ್ತರು  ಜಿಲ್ಲೆಯ ಹಲವು ಭಾಗಗಳಿಂದ ಆಗಮಿಸಿ ತಾಯಿಯ ದರ್ಶನವನ್ನು ಪಡೆದರು. ಮಂಗಳವಾರ ಮಧ್ಯರಾತ್ರಿಯವರೆಗೆ ಮೆರವಣಿಗೆ  ನಡೆದಿದ್ದು ಸೋಮನ ಕುಣಿತ  ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎಲ್ಲಾ ದೇವರ ಉತ್ಸವ  ನಡೆದಿದ್ದು ಬುದುವಾರ    ಬೆಳಗಿನ ಜಾವ  ಅಗ್ನಿಕೊಂಡ   ತುಳಿಯುವ ಮೂಲಕ  ಸಾವಿರಾರು ಭಕ್ತರು ಹರಕೆ ತೀರಿಸಿದರು. ನಂತರ  ಆರತಿ ಮೆರವಣಿಗೆ ನೂರಾರು ಮಹಿಳೆಯರು ಬಾಯಿ ಬೀಗಹಾಕಿಕೊಂಡು ಮೆರವಣಿಗೆ ಮೂಲಕ ಊರಿನ ಬೀದಿಗಳಲ್ಲಿ ಆರತಿಹೊತ್ತು ದೇವರಿಗೆ ಅರ್ಪಣೆ ಮಾಡಿದರು. ಗುಬ್ಬಿ ಹೊದಲೂರು ಗ್ರಾಮದಲ್ಲಿ ಶ್ರೀ ಕೆಂಪಮ್ಮ ದೇವಿ ಜಾತ್ರಾ ಮಹೋತ್ಸವ ನಡೆಯಿತು. ವರದಿ: ಚೇತನ್ ಗೌಡ,  ಗುಬ್ಬಿ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…

Read More

ತುಮಕೂರು: 2.4 ಎಕರೆ ಜಮೀನನ್ನು ತಂದೆಯಿಂದ ತಮ್ಮ ಹೆಸರಿಗೆ ಬರೆಯಿಸಿ ಕೊಂಡು ನಂತರ ತಂದೆ ತಾಯಿಯನ್ನು ಆರೈಕೆ ಮಾಡದೇ, ಅಮಾನವೀಯತೆ ಮೆರೆದಿದ್ದ ಪುತ್ರಿಯರಿಗೆ ಇದೀಗ ಪೋಷಕರು ಕಾನೂನಿನ ಮೂಲಕ ಬಿಸಿಮುಟ್ಟಿಸಿದ್ದು, ಇದೀಗ ಪೋಷಕರು ನೀಡಿದ್ದ  ಗಿಫ್ಟ್ ಡೀಡ್ ಆಸ್ತಿಯನ್ನು ಹೈಕೋರ್ಟ್ ಪೋಷಕರಿಗೆ ಮರಳಿಸಿದೆ. 2.4 ಎಕರೆ ಜಮೀನನ್ನು  ಇಬ್ಬರು ಪುತ್ರಿಯರು ತಮ್ಮ ಹೆಸರಿಗೆ ಬರೆದ ನಂತರ ತಮ್ಮನ್ನು ನಿರ್ಲಕ್ಷಿಸಿರುವ ಬಗ್ಗೆ ತುಮಕೂರು ತಾಲ್ಲೂಕಿನ ಹೆಬ್ಬೂರು ಹೋಬಳಿಯ ವೆಂಕಟಯ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಏಕ ಸದಸ್ಯ ಪೀಠ 2007ರ ಹಿರಿಯ ನಾಗರಿಕರ ಮತ್ತು ಪೋಷಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆಯನ್ನು ಅನ್ವಯಿಸಿ, ಕೃಷಿ ಭೂಮಿಯನ್ನು ಪುತ್ರಿಯರ ಹೆಸರಿಗೆ ಮಾಡಿಕೊಟ್ಟಿದ್ದ ಗಿಫ್ಟ್ ಡೀಡ್‌ ನ್ನು ರದ್ದುಗೊಳಿಸಿದೆ. ಜೊತೆಗೆ ಹಿರಿಯ ನಾಗರಿಕರಿಗೆ ಅವರ ವೃದ್ಧಾಪ್ಯದಲ್ಲಿ ಆರೈಕೆ ಮಾಡದೆ, ಅವರ ಜೀವನ ನಿರ್ವಹಣೆಗೆ ನೆರವಾಗದೆ ಇದ್ದರೆ ಅಂತಹ ಸಂದರ್ಭದಲ್ಲಿ ನ್ಯಾಯಾಲಯ ಅವರ ರಕ್ಷಣೆಗೆ ಧಾವಿಸಿ ಅವರ ಆಸ್ತಿಯನ್ನು ರಕ್ಷಿಸಿ, ಅವರ…

Read More