Author: admin

ಮಹಾರಾಷ್ಟ್ರ: ಮಹಾರಾಷ್ಟ್ರದ ನಾಗಸಾಪಾಟ ಬಳಿ ಮದುವೆಗೆ ಎಂದು ಹೊರಟಿದ್ದ ಕ್ರೂಜರ್ ಹಾಗೂ ಖಾಸಗಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರು ಬಾಗಲಕೋಟೆ ಜಿಲ್ಲೆಯವರಾಗಿದ್ದಾರೆ ಎಂದು ತಿಳಿದು ಬಂದಿದೆ. ಬಾಗಲಕೋಟೆ ಜಿಲ್ಲೆಯ ಭಾಗ್ಯಶ್ರೀ ಅಂಬೇಕರ್(18), ನಿವೇದಿತ(17), ಉಜ್ವಲ ಶಿಂದೆ(19) ಮೃತ ದುರ್ದೈವಿಗಳಾಗಿದ್ದಾರೆ. ವಿಜಯಪುರ ಜಿಲ್ಲೆಯ ಅನುಸೂಯ ಮೊರೆ(56) ಎನ್ನುವ ಮಹಿಳೆ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೃತರು ಮದುವೆಗೆ ಎಂದು ಹೊರಟಿದ್ದರು. ಈ ವೇಳೆ ಖಾಸಗಿ ಬಸ್ ಹಾಗೂ ಕ್ರೂಸರ್ ನಡುವೆ ಭೀಕರ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಸರಗೂರು: ತಾಲ್ಲೂಕಿನ ಎಂ.ಸಿ. ತಳಲು ಗ್ರಾ.ಪಂ. ವ್ಯಾಪ್ತಿಯ ಚನ್ನಗುಂಡಿ ನಮ್ಮ ಮತಗಟ್ಟೆಯಲ್ಲೆ ನಾವು ಮತ ಹಾಕ್ತೀವಿ. ಬೇರೆ ಊರಿಗೆ ಹೋಗುವುದಿಲ್ಲ. ನಮ್ಮೂರಲ್ಲೇ ನಮಗೆ ಮತಗಟ್ಟೆ ಕೊಡಿ. ಇಲ್ಲದಿದ್ದರೆ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಹಾಡಿಯಲ್ಲಿರುವ ಆದಿವಾಸಿ ಜನರು ಎಚ್ಚರಿಕೆ ನೀಡಿದ್ದಾರೆ. “ಏಪ್ರಿಲ್ 26 ರಂದು ನಡೆಯುವ ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ನಮ್ಮ ತಾತ ಮುತ್ತಾತನ ಕಾಲದಿಂದಲೂ ನಾವು ಚನ್ನಗುಂಡಿಹಾಡಿ ಗ್ರಾಮದಲ್ಲಿ ಮತವನ್ನು ಹಾಕಿ ಬರುತ್ತಿದ್ದೇವೆ. ನಮ್ಮೂರಲ್ಲಿ ಇದ್ದ ಮತಗಟ್ಟೆಯನ್ನು ತೆಗೆದು ಹಾಕಿ, ಪಕ್ಕದ ಅರಳಹಳ್ಳಿ ಗ್ರಾಮಕ್ಕೆ ವರ್ಗಾಯಿಸಿದ್ದಾರೆ. ಅರಳಹಳ್ಳಿ ಗ್ರಾಮಕ್ಕೆ ಹೋಗಿ ಮತ ಹಾಕಬೇಕು ಎಂದು ಹೇಳುತ್ತಿದ್ದಾರೆ. ನಮ್ಮಲ್ಲಿ ವಯಸ್ಸಾದ ವೃದ್ಧರು, ಅಂಗವಿಕಲರು, ಗರ್ಭಿಣಿಯರು ಹಾಗೂ ಬಾಣಂತಿಯರಿದ್ದಾರೆ. ಸುಮಾರು 5 ಕಿಲೋ ಮೀಟರ್ ದೂರ ನಡೆದುಕೊಂಡು ಹೋಗಿ ಮತವನ್ನು ಹಾಕಲು ನಮ್ಮಿಂದ ಸಾಧ್ಯವಿಲ್ಲ” ಎಂದು ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರಳಹಳ್ಳಿ ಗ್ರಾಮಕ್ಕೆ ಹೋಗಿ ಮತವನ್ನು ಚಲಾಯಿಸಿದ್ದೇವೆ. ಸಂಚಾರಕ್ಕೆ ಯಾವುದೇ…

Read More

ರಸ್ತೆ ಅಪಘಾತಗಳ ಸಂಖ್ಯೆಯನ್ನು ತಗ್ಗಿಸಲು ಉತ್ತರ ಪ್ರದೇಶ ಸಾರಿಗೆ ಇಲಾಖೆಯು ಹೊಸ ಕಾರ್ಯತಂತ್ರವೊಂದನ್ನು ರೂಪಿಸಿದೆ ಎಂದು ವರದಿ ತಿಳಿಸಿದೆ. “ವಾಣಿಜ್ಯ ವಾಹನಗಳು ಹಾಗೂ ರಾಜ್ಯ ಸಾರಿಗೆ ಬಸ್ ಗಳ ಚಾಲಕರು ತಮ್ಮ ಕುಟುಂಬದ ಫೋಟೊವನ್ನು ಡ್ಯಾಶ್ ಬೋರ್ಡ್ ಮೇಲೆ ಇರಿಸಿ”ಕೊಳ್ಳುವಂತೆ ರಾಜ್ಯ ಸಾರಿಗೆ ಆಯುಕ್ತ ಚಂದ್ರ ಭೂಷಣ್ ಸಿಂಗ್ ಮನವಿ ಮಾಡಿದ್ದಾರೆ. ಚಾಲಕರು ತಮ್ಮ ಕುಟುಂಬದ ಫೋಟೊಗಳನ್ನು ಪ್ರದರ್ಶಿಸುವ ಉಪಾಯವನ್ನು ಆಂಧ್ರಪ್ರದೇಶದಿಂದ ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಚಾಲಕರು ತಮ್ಮ ಮುಂದೆ ತಮ್ಮ ಕುಟುಂಬದ ಫೋಟೊ ಪ್ರದರ್ಶಿಸುವಂತೆ ಮಾಡುವ ಈ ವಿನೂತನ ಉಪಾಯವು ಚಾಲಕರಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಭಾವನಾತ್ಮಕ ಸಂವೇದನೆಯನ್ನು ರೂಪಿಸುವ ಗುರಿ ಹೊಂದಿದೆ ಎಂದು ಇಲಾಖೆಯ ಅಧಿಕಾರಿ ಹೇಳಿದ್ದಾರೆ. ಸಾರಿಗೆ ಆಯುಕ್ತರ ಪ್ರಕಾರ, ಈ ಕ್ರಮದಿಂದ ಆಂಧ್ರಪ್ರದೇಶದಲ್ಲಿ ಯಶಸ್ವಿಯಾಗಿ ರಸ್ತೆ ಅಪಘಾತ ಪ್ರಮಾಣವನ್ನು ತಗ್ಗಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ತಮ್ಮಲ್ಲಿದ್ದ 200 ಕೋಟಿ ರೂಪಾಯಿ ಆಸ್ತಿ ದೇಣಿಗೆ ನೀಡಿ ಸನ್ಯಾಸ ಸ್ವೀಕರಿಸಿದ ಗುಜರಾತ್ ನ ಈ ಜೈನ ದಂಪತಿ ಸುದ್ದಿಯಾಗಿದ್ದಾರೆ. ಅದರಲ್ಲೂ ಅವರು ಸನ್ಯಾಸ ಸ್ವೀಕರಿಸುವ ಮೊದಲು ಮೆರವಣಿಗೆ ಮಾಡಿ ಇದ್ದ ನಗದನ್ನೆಲ್ಲಾ ಜನರ ಮೇಲೆ ಸುರಿದಿದ್ದಾರೆ. ಆ ವೀಡಿಯೊ ವೈರಲ್ ಆಗಿದೆ. ತಮ್ಮ 200ಕೋಟಿ ಮೌಲ್ಯದ ಆಸ್ತಿಯನ್ನು ದೇಣಿಗೆ ನೀಡಿ ಸನ್ಯಾಸ ಸ್ವೀಕರಿಸಿದ ಗುಜರಾತ್ ನ ಶ್ರೀಮಂತ ಜೈನ ದಂಪತಿಗಳನ್ನು ನೋಡಿದರೆ ನಿಜಕ್ಕೂ ಆಚ್ಚರಿಯಾಗುತ್ತದೆ. ಭವೇಶ್ ಭಂಡಾರಿ ಅವರು ಕಟ್ಟಡ ನಿರ್ಮಾಣ ಉದ್ಯಮಿಯಾಗಿದ್ದು, ಇವರು ಸಬರ್ಕಾಂತ ಮತ್ತು ಅಹಮದಾಬಾದ್ ಎರಡರಲ್ಲೂ ತಮ್ಮ ಕೆಲಸ ನಿರ್ವಹಿಸುತ್ತಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರು 2022ರಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಇದೀಗ ಭಂಡಾರಿ ಮತ್ತು ಅವರ ಪತ್ನಿ ತನ್ನ ಐಷಾರಾಮಿ ಜೀವನವನ್ನು ತ್ಯಜಿಸಿ ಸನ್ಯಾಸಿಯಾಗಲು ನಿರ್ಧರಿಸಿದ್ದಾರೆ. ಅದಕ್ಕಾಗಿ ದಂಪತಿ ಗುಜರಾತ್ ನ ಸಬರ್ ಕಾಂತ ಜಿಲ್ಲೆಯಲ್ಲಿ ಟ್ರಕ್ ಅನ್ನು ರಥದಂತೆ ಅಲಂಕರಿಸಿ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ವಾಹನದ ಮೇಲೆ ನಿಂತು ಮೆರವಣಿಗೆ ನಡೆಸಿದ್ದಾರೆ.…

Read More

ದಕ್ಷಿಣ ಭಾರತ ಸಿನಿಮಾಗಳಲ್ಲಿ ಆರಂಭದ ದಿನಗಳಲ್ಲಿ ಹೊಸ ಭರವಸೆ ಮೂಡಿಸಿದ್ದ ಮಂಗಳೂರು ಮೂಲದ ಚೆಲುವೆ ಕೃತಿ ಶೆಟ್ಟಿ ನಟನೆಯ ಕೆಲ ತೆಲುಗು ಸಿನಿಮಾಗಳು ಒಂದರ ಹಿಂದೊಂದು ಫ್ಲಾಪ್ ಆಗಿದ್ದವು. ಈಗಂತೂ ಯಾವ ಆಫರ್ ಗಳಿಲ್ಲದೆ ನಟಿ ಮನೆಯಲ್ಲೇ ಕೂರುವ ಸ್ಥಿತಿ ಬಂದಿದೆ. ಆದರೀಗ ಅಚ್ಚರಿ ಎಂಬಂತೆ ನಟಿ ಎಲ್ಲಾ ನಿರ್ಮಾಪಕರಿಗೆ ಬಿಗ್ ಆಫರ್ ನೀಡಿದ್ದು ತಾನು ಬೋಲ್ಡ್ ಸೀನ್ ಗಳಲ್ಲಿ ನಟಿಸಲು ರೆಡಿ ಎಂದಿದ್ದಾರೆ. ಬಿಕಿನಿ’ಯಲ್ಲಿ ಕಾಣಿಸಿಕೊಳ್ಳಬೇಕೆಂದರೆ ಎರಡಲ್ಲ ”ಐದು ಕೋಟಿ”ಯನ್ನ ಕೊಡಬೇಕೆಂದು, ಕೃತಿ ಶೆಟ್ಟಿ ಹಿಂದೆ ಪಟ್ಟು ಹಿಡಿದಿದ್ದು, ಆಂಧ್ರದಲ್ಲಿ ಈ ವಿಚಾರವಾಗಿ ಸಿಕ್ಕಾಪಟ್ಟೆ ಚರ್ಚೆಗೀಡಾಗಿದ್ದ ಕೃತಿ ಶೆಟ್ಟಿ ಇದಕ್ಕೆ ತಕ್ಕ ಶಿಕ್ಷೆ ಅನುಭವಿಸಿದರು. ಈಕೆಗೆ ಹಣದ ಮೇಲೆ ಇರುವ ”ಪ್ರೀತಿ”ಯನ್ನ ಕಂಡು ಟಾಲಿವುಡ್ ಗೆ ಟಾಲಿವುಡ್ಡೇ ಬೆಚ್ಚಿ ಬಿದ್ದಿತ್ತು. ಈ ‘ಮೋಹ-ದಾಹ’ವೇ ಈಕೆಯನ್ನು ಮೂಲೆ ಗುಂಪಾಗಿಸಿತು. ಇದೀಗ ಎಲ್ಲದರಿಂದಲೂ ಸರಿಯಾಗಿ ಬುದ್ಧಿ ಕಲಿತಿರುವ ನಟಿ ಓಪನ್ ಆಗಿ ನಿರ್ಮಾಪಕರಿಗೆ ಆಫರ್ ನೀಡಿ ತಾನು ಎಲ್ಲಾ ಪಾತ್ರಕ್ಕೂ ರೆಡಿ, ತುಂಡುಡುಗೆಯನ್ನೂ…

Read More

ಶ್ರೀ ರಾಮನವಮಿಯ ದಿನದಂದು ಜೈ ಶ್ರೀರಾಮ ಎಂದು ಮೂವರು ಹಿಂದೂ ಯುವಕರು ಕಾರಿನಲ್ಲಿ ಘೋಷಣೆ ಕೂಗಿದ್ದು, ಆ ಸಂದರ್ಭದಲ್ಲಿ ಕಾರನ್ನು ಅಡ್ಡಗಟ್ಟಿದ ಮುಸ್ಲಿಂ ಯುವಕರ ಗುಂಪು ಇಲ್ಲಿ ಶ್ರೀರಾಮ್‌ ಎನ್ನಂಗಿಲ್ಲ, ಓನ್ಲಿ ಅಲ್ಲಾ…ಅಲ್ಲಾ ಹು ಅಕ್ಬರ್‌ ಎನ್ನಬೇಕು ಎಂದು ಹೇಳಿ ಹಲ್ಲೆ ಮಾಡಿದ ಘಟನೆಯೊಂದು ನಡೆದಿದೆ. ಈ ಘಟನೆ ನಡೆದಿರುವುದು ಬೆಂಗಳೂರಿನ ಚಿಕ್ಕಬೆಟ್ಟಹಳ್ಳಿಯಲ್ಲಿ. ಬುಧವಾರ ಮಧ್ಯಾಹ್ನ ಮೂವರು ಬಾಲಕರು ಕಾರಿನಲ್ಲಿ ಹೋಗುತ್ತಿರುವಾಗ ಜೈ ಶ್ರೀರಾಮ್‌ ಎಂದು ಕೂಗಿದ್ದಾರೆ. ಆವಾಗ ಬೈಕ್‌ ನಲ್ಲಿ ಹೋಗುತ್ತಿದ್ದ ಯುವಕರು ಕಾರನ್ನು ಅಡ್ಡಗಟ್ಟಿ, ಗಲಾಟೆ ಪ್ರಾರಂಭ ಮಾಡಿದ್ದಾರೆ. ಕಾರಿನ ಬಳಿಗೆ ಬಂದ ಯುವಕರು ಏನು ನೀವು ಜೈ ಶ್ರೀರಾಮ್‌ ಎಂದು ಹೇಳಬೇಕಾ? ಇಲ್ಲಿ ಜೈ ಶ್ರೀರಾಮ್‌ ಇಲ್ಲ.. ಓನ್ಲೀ ಅಲ್ಲಾ.. ಅಲ್ಲಾಹು ಅಕ್ಕಬರ್‌ ಎಂದು ಹೇಳಬೇಕು ಎಂದು ಹೇಳುತ್ತಾ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಕುರಿತು ವರದಿಯಾಗಿದೆ. ನಮ್ಮ ಹಬ್ಬ ನಾವು ಏನಾದ್ರೂ ಮಾಡ್ತೀವಿ. ನಿಮ್ಮ ಹಬ್ಬದಲ್ಲಿ ಹೀಗೆ ಬಂದು ನಾವೇನಾದರೂ ಮಾಡ್ತೀವಾ? ಎಂದು ಪ್ರಶ್ನೆ ಮಾಡಿದ್ದಾರೆ…

Read More

ತುರುವೇಕೆರೆ: ಹೇಮಾವತಿ ನಾಲೆಯ ಲಿಂಕ್ ಕೆನಾಲ್ ಎಕ್ಸ್ ಪ್ರೆಸ್ ಲೈನ್ ಬಗ್ಗೆ ರೈತರಿಗೆ ಯಾವುದೇ ಮಾಹಿತಿ ಕೊಡದೆ ಏಕಾಏಕಿ ಸರ್ಕಾರದವರು ಕಾಮಗಾರಿಯನ್ನು ಪ್ರಾರಂಭ ಮಾಡಿದ್ದಾರೆ” ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತುರುವೇಕೆರೆ ತಾಲೂಕು ಅಧ್ಯಕ್ಷ ತಾಳ್ಕೆರೆ ನಾಗೇಂದ್ರ ನೇರ ಆರೋಪ ಮಾಡಿದ್ದಾರೆ. ಪಟ್ಟಣದ ಹೇಮಾವತಿ ಕಚೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಮುದ್ದಹನುಮೇಗೌಡರು, “ಯಾವುದೇ ಕಾಮಗಾರಿ ನಡೆದಿಲ್ಲ. ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಶಂಕು ಸ್ಥಾಪನೆ ಮಾಡಿದ ತಕ್ಷಣ ಅದು ಜಾರಿಯಾಗುವುದಿಲ್ಲ ಪೈಪ್ ಗಳ ಮೂಲಕ ಭೂಮಿಯಲ್ಲಿ ನೀರು ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳುತ್ತಿರುವುದನ್ನು ನಾವು ಒಪ್ಪುವುದಿಲ್ಲ. ಅವರು ಜಿಲ್ಲೆಯ ಜನರನ್ನು ದಾರಿತಪ್ಪಿಸುತ್ತಿದ್ದಾರೆ. ಈ ಕಾಮಗಾರಿಯ ಬಗ್ಗೆ ಅವರಿಗೆ ಮಾಹಿತಿ ಇಲ್ಲವಾ? ಜಿಲ್ಲೆಯ ರೈತರ ಬಗ್ಗೆ ಹಾಗೂ ಕುಡಿಯುವ ನೀರಿನ ಬಗ್ಗೆ ಇವರಿಗೆ ಕಾಳಜಿ ಹಾಗೂ ಸ್ಪಷ್ಟತೆಯಿಲ್ಲ. ರಾಜಕಾರಣಿಗಳು ಜಿಲ್ಲೆಯ ರೈತರನ್ನು ಅಧೋಗತಿಗೆ ತಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಕಾಮಗಾರಿ ನಡೆದಿರುವುದು ಸತ್ಯ. ನಾನು ಇದನ್ನು ಮಾಡಲು…

Read More

ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಟ ಮನ್ಸೂರ್ ಅಲಿ ಖಾನ್ ಪ್ರಚಾರದ ವೇಳೆ ಕುಸಿದು ಬಿದ್ದಿದ್ದಾರೆ. ವೆಲ್ಲೂರಿನಿಂದ ಮನ್ಸೂರ್ ಅಲಿ ಖಾನ್ ಸ್ಪರ್ಧಿಸಲಿದ್ದಾರೆ. ವೆಲ್ಲೂರಿನ ಒಳ ಗ್ರಾಮಗಳಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ಸದ್ಯ ಚೆನ್ನೈನ ಕೆ.ಕೆ. ನಗರದ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಮನ್ಸೂರ್ ಅಲಿಖಾನ್ ಅವರಿಗೆ ಚಿಕಿತ್ಸೆ ನಡೆಸುತ್ತಿದ್ದಾರೆ. ಪ್ರಚಾರ ಮಾಡುತ್ತಿದ್ದ ವೇಳೆ ಮನ್ಸೂರ್ ಅಲಿಖಾನ್ ಮಾಂಸ ಕಡಿದು, ತರಕಾರಿ ಮಾರಾಟ ಮಾಡಿ ವಿಭಿನ್ನವಾಗಿ ಮತಯಾಚನೆ ಮಾಡುತ್ತಿದ್ದರು. ಇತ್ತೀಚೆಗೆ, ನಟ ಡೆಮಾಕ್ರಟಿಕ್ ಟೈಗರ್ಸ್ ಆಫ್ ಇಂಡಿಯಾ ಎಂಬ ಹೊಸ ಪಕ್ಷವನ್ನು ಪ್ರಾರಂಭಿಸಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಮನ್ಸೂರ್ ಈ ಬಾರಿ ಅಣ್ಣಾ ಡಿಎಂಕೆ ಜತೆ ಸ್ಪರ್ಧಿಸಲು ಮುಂದಾದರು. ಆದರೆ ವಿಫಲರಾದರು. ಬಳಿಕ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದರು. ಮನ್ಸೂರ್ ಅಲಿ ಖಾನ್ ವೆಲ್ಲೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಏಪ್ರಿಲ್ 19 ರಂದು ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ…

Read More

ಬಂಗಾಳದ ಮುರ್ಷಿದಾಬಾದ್‌ ನಲ್ಲಿ ರಾಮನವಮಿ ಆಚರಣೆ ವೇಳೆ ಬಾಂಬ್ ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ. ಸ್ಫೋಟದಲ್ಲಿ ಒಬ್ಬರು ಗಾಯಗೊಂಡಿದ್ದಾರೆ. ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಶಕ್ತಿಪುರ ಪ್ರದೇಶದಲ್ಲಿ ರಾಮ ನವಮಿಯಂದು ಮೆರವಣಿಗೆ ನಡೆಸಲಾಯಿತು. ಈ ವೇಳೆ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಮಹಿಳೆಯೊಬ್ಬರು ಗಾಯಗೊಂಡಿದ್ದು, ಅವರನ್ನು ಮುರ್ಷಿದಾಬಾದ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎಂದು ವರದಿ ಮಾಡಿದೆ. ನಿನ್ನೆ ಸಂಜೆ ಮುರ್ಷಿದಾಬಾದ್‌ನ ಶಕ್ತಿಪುರದಲ್ಲಿ ನಡೆದ ಮೆರವಣಿಗೆಯಲ್ಲಿ ಈ ಘಟನೆ ನಡೆದಿದೆ. ಮೆರವಣಿಗೆ ಮೇಲೆ ಕೆಲವರು ಕಲ್ಲು ತೂರಾಟ ನಡೆಸಿದ್ದು ಘರ್ಷಣೆಗೆ ಕಾರಣವಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮತ್ತು ಅಶ್ರುವಾಯು ಪ್ರಯೋಗಿಸಿದರು. ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದ್ದು, ಹೆಚ್ಚಿನ ಪಡೆಗಳನ್ನು ಸ್ಥಳಕ್ಕೆ ಕರೆತರಲಾಗಿದೆ ಎಂದು ಮುರ್ಷಿದಾಬಾದ್ ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಪೊಲೀಸರು ವಿವರವಾದ ತನಿಖೆ ನಡೆಸುತ್ತಾರೆ ಮತ್ತು ಘರ್ಷಣೆಯಲ್ಲಿ ಗಾಯಗೊಂಡವರನ್ನು ಬೆಹ್ರಾಂಪುರದ ಮುರ್ಷಿದಾಬಾದ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು…

Read More

ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಾಳೆ ನಡೆಯಲಿದೆ. 102 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ತಮಿಳುನಾಡಿನ ಎಲ್ಲಾ ಕ್ಷೇತ್ರಗಳು ಮತ್ತು 20 ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿವಿಧ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದೆ. 1625 ಅಭ್ಯರ್ಥಿಗಳು ಜನಾದೇಶ ಬಯಸುತ್ತಿದ್ದಾರೆ. ರಾಜಸ್ಥಾನದ 12, ಯುಪಿಯ ಎಂಟು, ಬಿಹಾರದ ನಾಲ್ಕು ಮತ್ತು ಬಂಗಾಳದ ಮೂರು ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ತಮಿಳುನಾಡಿನಲ್ಲಿ 950 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಿನ್ನೆ ಸಂಜೆ ಜಾಹೀರಾತು ಪ್ರಚಾರ ಮುಗಿದ ಸ್ಥಳಗಳಲ್ಲಿ ಇಂದು ಮೌನ ಪ್ರಚಾರ ನಡೆಯಲಿದೆ. ಪಶ್ಚಿಮ ಬಂಗಾಳ (3), ಅಂಡಮಾನ್ ಮತ್ತು ನಿಕೋಬಾರ್ (1), ಜಮ್ಮು ಮತ್ತು ಕಾಶ್ಮೀರ (1), ಛತ್ತೀಸ್‌ಗಢ (1), ಮಧ್ಯಪ್ರದೇಶ (6), ಮಹಾರಾಷ್ಟ್ರ (5), ಮಣಿಪುರ (2), ಅರುಣಾಚಲ ಪ್ರದೇಶ (2), ಅಸ್ಸಾಂ (5) ), ಬಿಹಾರ (4) , ಮೇಘಾಲಯ (2), ಮಿಜೋರಾಂ (1), ನಾಗಾಲ್ಯಾಂಡ್ (1), ಸಿಕ್ಕಿಂ (1), ತ್ರಿಪುರ (1), ಉತ್ತರ ಪ್ರದೇಶ (8), ಉತ್ತರಾಖಂಡ (5),…

Read More