Subscribe to Updates
Get the latest creative news from FooBar about art, design and business.
- ಹಿರಿಯ ಪತ್ರಕರ್ತೆ, ಜಿ.ಪಂ. ಮಾಜಿ ಅಧ್ಯಕ್ಷೆ ಕಮಲಾ ಗಂಗಹನುಮಯ್ಯ ವಿಧಿವಶ
- ಸರಗೂರಿನಲ್ಲಿ ಅಕ್ರಮ ಕೇರಳ ಲಾಟರಿ ದಂಧೆ ಜಾಲ ಪತ್ತೆ: ಇಬ್ಬರು ಆರೋಪಿಗಳ ಬಂಧನ, 1.44 ಲಕ್ಷ ಮೌಲ್ಯದ ಟಿಕೆಟ್ ವಶ
- ಜ್ಞಾನ ಪ್ರಕಾಶ್ ಸ್ವಾಮೀಜಿ ಜನ್ಮದಿನ ಆಚರಣೆ ಅಂಗವಾಗಿ ಮಕ್ಕಳಿಗೆ ನೋಟ್ ಬುಕ್ ವಿತರಣೆ
- ಪ.ಪಂ. ಮಾಜಿ ಅಧ್ಯಕ್ಷ ಸರಗೂರು ಶಿವಣ್ಣ ಅವರ 63ನೇ ಜನ್ಮದಿನಾಚರಣೆ
- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ: ಪ್ರವೇಶಾತಿಗೆ ಅರ್ಜಿ ಆಹ್ವಾನ
- ಗೋನೆಗಾರರು ಕೇರಾ ಸುರಕ್ಷಾ ವಿಮಾ ಯೋಜನೆ ಪ್ರಯೋಜನೆ ಪಡೆಯಲು ತೋಟಗಾರಿಕೆ ಇಲಾಖೆ ಮನವಿ
- 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ
- ತುಮಕೂರು: ಗಾಂಜಾ ಸಾಗಣೆ: ಅಪರಾಧಿಗೆ 4 ವರ್ಷ ಕಠಿಣ ಶಿಕ್ಷೆ; ದಂಡ
Author: admin
ತುಮಕೂರು: ರಾಜ್ಯದ ಜನತೆಗೆ ಗೃಹ ಸಚಿವನಾಗಿ ಭರವಸೆ ಕೊಡಲು ಬಯಸುತ್ತೇನೆ. ಯಾರೇ ಆದರೂ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ ರಕ್ಷಣೆ ಮಾಡುವಂತಹ ಪ್ರಮೇಯವೇ ಇಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅವರು ಯಾರೇ ಆಗಲಿ. ಬೆಂಗಳೂರಿನಲ್ಲಿ ನಡೆದ ಘಟನೆ ದುರದೃಷ್ಟಕರವಾದುದಾಗಿದೆ. ಶ್ರೀರಾಮನ ನವಮಿ ದಿನ ಜೈ ಶ್ರೀರಾಮ್ ಘೋಷಣೆ ಕೂಗೋದು ಸಹಜ. ಅದಕ್ಕೆ ಇನ್ನೊಬ್ಬರು ಬೇರೆ ಸ್ಲೋಗನ್ ಕೂಗಿದ್ದಾರೆ. ಘಟನೆ ನಡೆದ ಬಳಿಕ ಅವರನ್ನು ರಕ್ಷಣೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಅದರಲ್ಲಿ ಯಾರನ್ನೂ ರಕ್ಷಣೆ ಮಾಡೋದಾಗಲಿ, ಓಲೈಸೋದಾಗಲಿ ನಾವು ಮಾಡೋದಿಲ್ಲ. ಕಾನೂನು ಕ್ರಮವನ್ನು ಯಾವುದೇ ಮುಲಾಜಿಲ್ಲದೇ ತೆಗೆದುಕೊಳ್ಳುತ್ತೇವೆ ಎಂದರು. ಹುಬ್ಬಳ್ಳಿ ಘಟನೆ: ಹುಬ್ಬಳ್ಳಿಯಲ್ಲಿ ಕಾಲೇಜು ಯುವತಿ ಕೊಲೆ ವಿಚಾರದಲ್ಲಿ, ಲವ್ ಆಫೆರ್ ಇತ್ತು ಇಬ್ಬರು ಒಟ್ಟಿಗೆ ಕೆಲಸ ಮಾಡ್ತಾ ಇದ್ದರು. ಪರಸ್ಪರ ಒಬ್ಬರನೊಬ್ಬರು ಪ್ರೀತಿಸ್ತಾ ಇದ್ದರು. ನಂತರ ಇದ್ದಕಿದ್ದ ಹಾಗೆ ಆ ಹೆಣ್ಣು ಮಗಳು ದೂರ ಆಗೋದಕ್ಕೆ ಪ್ರಯತ್ನಿಸಿದಾಗ ಘಟನೆ…
ಪ್ರತಿದಿನ ಪಾಲಕ್ ಜ್ಯೂಸ್ ಕುಡಿಯುವುದರ ಪ್ರಯೋಜನಗಳು: ಬೆಳಗಿನ ಹೊತ್ತಿಗೆ ಹಲವು ರೀತಿಯ ಹಸಿರು ಜ್ಯೂಸ್ ಗಳನ್ನು ಕುಡಿದರೆ ಆರೋಗ್ಯಕ್ಕೆ ಒಳಿತು. ಅಂಥದ್ದೇ ಹಸಿರು ಜ್ಯೂಸ್ ಗಳ ಪೈಕಿ ಒಂದು ಪಾಲಕ್ ಸೊಪ್ಪಿನದ್ದು. ರುಚಿಗೆ ಬೇಕಿದ್ದರೆ ಶುಂಠಿ, ನಿಂಬೆ ರಸಗಳನ್ನೆಲ್ಲ ಬೆರೆಸಿಕೊಂಡರೆ ಹಸಿರು ಜ್ಯೂಸ್ ಗಳು ಬಾಯಿಗೂ ರುಚಿ ದೇಹಕ್ಕೂ ಹಿತ ನೀಡುತ್ತದೆ. ಹಲವು ರೀತಿಯ ಉತ್ಕರ್ಷಣ ನಿರೋಧಕಗಳು, ಕಬ್ಬಿಣ, ಕ್ಯಾಲ್ಸಿಯಂನಂಥ ಅಗತ್ಯ ಖನಿಜಗಳು, ಎ, ಸಿ, ಇ ನಂಥ ಮಹತ್ವದ ಜೀವಸತ್ವಗಳನ್ನು ಒಳಗೊಂಡ ಈ ಸೊಪ್ಪಿನಲ್ಲಿ ನಾರು ಸಹ ಹೇರಳವಾಗಿದೆ. ತುಳಸಿಯಲ್ಲಿದೆ ಹಲವು ಔಷಧೀಯ ಗುಣಗಳು…! ತುಳಸಿಯಲ್ಲಿ ಅನೇಕ ಔಷಧೀಯ ಗುಣಗಳಿವೆ. ತುಳಸಿಯನ್ನು ಆಹಾರ ರೂಪದಲ್ಲಿ ಸೇವಿಸಿದರೆ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಬೆಳಗ್ಗೆ ಮಾಡುವ ಚಹಾಗೆ ತುಳಸಿಯ ತಾಜಾ ಎಲೆಗಳನ್ನು ಹಾಕಿ ಬಿಸಿ ಬಿಸಿಯಾಗಿ ಕುಡಿದರೆ ನೆಗಡಿ ಹಾಗೂ ಕಟ್ಟಿದ ಮೂಗು ಸರಾಗವಾಗುತ್ತದೆ. ತುಳಸಿಯ ಪಾನಕ ಮಾಡಿ ಸಹ ಕುಡಿಯಬಹುದು. ಇತರ ಹಣ್ಣಿನ ಜ್ಯೂಸ್ ಗಳಿಗೆ ತುಳಸಿಯ ಎಲೆಗಳನ್ನು ಬೆರೆಸಿ ಕುಡಿಯಬಹುದು.…
102 ಲೋಕಸಭಾ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಮ್ಮ ಹಕ್ಕು ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಸ್ಥಳೀಯ ಭಾಷೆಗಳಲ್ಲಿ ಮತದಾನ ಮಾಡುವಂತೆ ಪ್ರಧಾನಿ ಮನವಿ ಮಾಡಿದರು. ಪ್ರತಿ ಮತ, ಪ್ರತಿ ಧ್ವನಿ ಮುಖ್ಯ. ದಾಖಲೆ ಮತದಾನ ಮಾಡುವಂತೆ ಕೋರಲಾಗಿದೆ ಎಂದರು. ಪ್ರತಿ ಮತಕ್ಕೂ ಮೌಲ್ಯವಿದೆ ಎಂದು ಪ್ರಧಾನಿ ನೆನಪಿಸಿದರು. ಇದು ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬಕ್ಕೆ ನಾಂದಿಯಾಗಿದೆ ಎಂದು ಪ್ರಧಾನಿ ಹೇಳಿದರು. ವಿವಿಧ ಭಾಷೆಗಳಲ್ಲಿ ಮತದಾನ ಮಾಡುವಂತೆ ಪ್ರಧಾನಿ ಕರೆ ನೀಡಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಎಲ್ಲಾ ಮತದಾರರು ತಮ್ಮ ಒಪ್ಪಿಗೆಯ ಹಕ್ಕನ್ನು ಚಲಾಯಿಸುವಂತೆ ಕರೆ ನೀಡಿದರು. ಚುನಾವಣೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಚುನಾವಣೆಗೆ ಎರಡು ವರ್ಷಗಳ ಸಿದ್ಧತೆ ನಡೆಸಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತರು ಸೂಚಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಸಿನಿಮಾ ಇದೇ ಆಗಸ್ಟ್ 15ರಂದು ಬಿಡುಗಡೆ ಮಾಡುವುದಾಗಿ ಈಗಾಗಲೇ ಚಿತ್ರತಂಡ ಘೋಷಣೆ ಮಾಡಿದೆ. ‘ಪುಷ್ಪ 2’ ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲಿ ದಾಖಲೆಗೆ ಕಾರಣವಾಗುತ್ತಿದೆ. ಈ ಸಿನಿಮಾದ ಡಿಜಿಟೆಲ್ ರೈಟ್ಸ್ ಬರೋಬ್ಬರಿ 275 ಕೋಟಿ ರೂಪಾಯಿ ಸೇಲ್ ಆಗಿದೆ ಎನ್ನುವ ಮಾಹಿತಿ ಸಿಗುತ್ತಿದೆ. ಈ ಹಣ ಸಿನಿಮಾ ರಿಲೀಸ್ ಆದ ನಂತರ ಮತ್ತಷ್ಟು ಏರಿಕೆಯೂ ಆಗಲಿದೆಯಂತೆ ಎನ್ನಲಾಗಿದೆ. ಇಷ್ಟೊಂದು ಮೊತ್ತದ ಹಣವನ್ನು ಕೊಟ್ಟು ಇದೇ ಮೊದಲ ಬಾರಿಗೆ ಡಿಜಿಟೆಲ್ ಹಕ್ಕುಗಳನ್ನು ಖರೀದಿಸಲಾಗಿದೆಯಂತೆ. ಪುಷ್ಪ 2 ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಲೆಕ್ಕಾಚಾರದಂತೆ ಸಾವಿರಾರು ಕೋಟಿ ರೂಪಾಯಿ ವ್ಯಾಪಾರ ಮಾಡುವ ಶಕ್ತಿ ಈ ಚಿತ್ರಕ್ಕಿದೆಯಂತೆ. ಅಲ್ಲದೇ, ದೊಡ್ಡ ಮಟ್ಟದಲ್ಲಿ ಮತ್ತು ಹಲವು ಭಾಷೆಗಳಲ್ಲಿ ಈ ಚಿತ್ರವನ್ನು ತೆರೆಗೆ ತರಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ನೈರೋಬಿ: ಮಿಲಿಟರಿ ಹೆಲಿಕಾಪ್ಟರ್ ಪತನವಾಗಿದ್ದು, ಅಪಘಾತದಲ್ಲಿ ಕೀನ್ಯಾದ ರಕ್ಷಣಾ ಮುಖ್ಯಸ್ಥರು ಮತ್ತು ಇತರ ಒಂಬತ್ತು ಉನ್ನತ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಅಧ್ಯಕ್ಷ ವಿಲಿಯಂ ರುಟೊ ತಿಳಿಸಿದ್ದಾರೆ. ಹೆಲಿಕಾಪ್ಟರ್ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರವೇ ಹೆಲಿಕಾಪ್ಟರ್ ಪತನಗೊಂಡಿದ್ದು, ರಾಜಧಾನಿ ನೈರೋಬಿಯ ವಾಯುವ್ಯಕ್ಕೆ 400 ಕಿಲೋಮೀಟರ್ ದೂರದಲ್ಲಿರುವ ಎಲ್ಜಿಯೊ ಮರಕ್ವೆಟ್ ಕೌಂಟಿಯಲ್ಲಿ ಹೆಲಿಕಾಪ್ಟರ್ ಪತನವಾಯಿತು. ಅವಘಡಕ್ಕೆ ಕಾರಣ ತಿಳಿಯಲು ಕೀನ್ಯಾ ವಾಯುಪಡೆಯು ತನಿಖಾ ತಂಡವನ್ನು ಕಳುಹಿಸಿ ತನಿಖೆ ಮುಂದುವರಿಸಲಾಗಿದೆ ಎಂದು ರುಟೊ ಹೇಳಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಗದಗ: ದಾಸರ ಓಣಿಯಲ್ಲಿ ಮಲಗಿದ್ದಲ್ಲೇ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆಯಾಗಿರುವ ಘಟನೆ ನಡೆದಿದೆ. ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಕಾರ್ತಿಕ್ ಬಾಕಳೆ(27), ಪರಶುರಾಮ(55) ಪತ್ನಿ ಲಕ್ಷ್ಮಿ(45), ಪುತ್ರಿ ಆಕಾಂಕ್ಷಾ(16) ಕೊಲೆಯಾದ ದುರ್ದೈವಿಗಳಾಗಿದ್ದಾರೆ. ಕೊಲೆ ಮಾಡಿದ್ದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಮೃತ ನಾಲ್ವರ ಪೈಕಿ ಮೂವರು ದಾಸರ ಓಣಿಯಲ್ಲಿ ತಮ್ಮ ಮನೆಯ ಮೊದಲ ಮಹಡಿಯಲ್ಲಿ ಮಲಗಿದ್ದರು. ಈ ಮೂವರು ಮೂಲತಃ ಕೊಪ್ಪಳ ಜಿಲ್ಲೆಯವರು. ಏಪ್ರಿಲ್ 17 ರಂದು ಪ್ರಕಾಶ್ ಬಾಕಳೆ ಪುತ್ರ ಕಾರ್ತಿಕ್ ನ ಮದುವೆ ಸಹ ನಡೆದಿತ್ತು. ವಿವಾಹ ಕಾರ್ಯಕ್ರಮಕ್ಕಾಗಿ ಸಂಬಂಧಿಕರು ಆಗಮಿಸಿದ್ದರು ಎಂದು ಹೇಳಲಾಗಿದೆ. ಆದರೆ, ದಂಪತಿ ಬಾಗಿಲು ತೆಗೆಯದೆ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಪೊಲೀಸರಿಗೆ ಫೋನ್ ಮಾಡುತ್ತಿದ್ದಂತೆ ದುಷ್ಕರ್ಮಿಗಳು ಹಿಂಬಾಗಿಲಿನಿಂದ ಪರಾರಿಯಾಗಿದ್ದಾರೆ. ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳನ್ನು ದುಷ್ಕರ್ಮಿಗಳು ಚರಂಡಿಯಲ್ಲಿ ಬಿಸಾಕಿದ್ದಾರೆ. ಸದ್ಯ ಸ್ಥಳಕ್ಕೆ ಶ್ವಾನದಳ, ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಸ್ಪಿ ಬಿ.ಎಸ್ ನೇಮಗೌಡ, ಹೆಚ್ಚುವರಿ ಎಸ್ಪಿ ಎಂ.ಬಿ ಸಂಕದ, ಡಿವೈಎಸ್ಪಿ,…
ಪ್ರೀತಿ ನಿರಾಕರಿಸಿದಳೆಂದು ಮುಸ್ಲಿಂ ಯುವಕನೋರ್ವ ಹಿಂದೂ ಯುವತಿಯ ಕುತ್ತಿಗೆ ಚಾಕುವಿನಿಂದ ಭೀಕರವಾಗಿ ಇರಿದು ಹತ್ಯೆ ಮಾಡಿದ ದುರ್ಘಟನೆಯೊಂದು ಹುಬ್ಬಳ್ಳಿಯ ಬಿವಿಬಿ ಕ್ಯಾಂಪಸ್‌ನಲ್ಲಿ ನಡೆದಿದೆ. ನೇಹಾ ಹಿರೇಮಠ, ಹತ್ಯೆಯಾದ ಯುವತಿ. ಫಯಾಜ್ ಎಂಬಾತನೇ ಹತ್ಯೆ ಮಾಡಿದ ಆರೋಪಿ. ಬೆಳಗಾವಿ ಜಿಲ್ಲೆಯ ಸವದತ್ತಿಯ ನಿವಾಸಿ ಈ ಆರೋಪಿ. ಈತ ಹುಡುಗಿಯ ಕುತ್ತಿಗೆ ಒಂಭತ್ತು ಬಾರಿ ಮನಬಂದಂತೆ ಚಾಕುವಿನಿಂದ ಇರಿದಿದ್ದಾನೆ. ರಕ್ತದ ಮಡುವಿನಲ್ಲಿದ್ದ ಯುವತಿಯನ್ನು ಕೂಡಲೇ ಅಲ್ಲಿದ್ದವರು ಆಸ್ಪತ್ರೆಗೆ ದಾಖಲು ಮಾಡಿದ್ದರೂ, ಚಿಕಿತ್ಸೆ ಫಲಿಸದೇ ಆಕೆ ಮೃತ ಹೊಂದಿದ್ದಾಳೆ. ನಗರದ ಕಾರ್ಪೋರೇಟರ್ ಮಗಳಾದ ಮೃತ ಯುವತಿ ನೇಹಾ ಹಿರೇಮಠ, ಈಕೆ ಈ ಕಾಲೇಜಿನಲ್ಲಿ ಎಂಸಿಎ ಓದುತ್ತಿದ್ದಳು. ಆರೋಪಿ ಕೂಡಾ ಅದೇ ಕಾಲೇಜಿನಲ್ಲಿ ಬಿಸಿಎ ಓದುತ್ತಿದ್ದ. ಫಯಾಜ್ ಕೆಲವು ದಿನಗಳಿಂದ ಪ್ರೀತಿ ಮಾಡುವಂತೆ ಹಿಂದೆ ಬಿದ್ದಿದ್ದ. ದಿನೇ ದಿನೇ ಟಾರ್ಚರ್ ಕೊಡುತ್ತಿದ್ದ. ಇಂದು ಕೂಡಾ ಫಾಲೋ ಮಾಡಿದ್ದ ಆರೋಪಿ ಯುವತಿ ಖಡಾಖಂಡಿತವಾಗಿ ನಿರಾಕರಣೆ ಮಾಡಿದ್ದಕ್ಕೆ ಹೀನಾಯವಾಗಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕಾಲೇಜು ಕ್ಯಾಂಪಸ್ ನಲ್ಲಿಯೇ ಯುವತಿಯ ಬರ್ಬರ…
ಅನೇಕ ಕಾರಣಗಳಿಂದಾಗಿ ‘ಕೊರಗಜ್ಜ’ ಸಿನಿಮಾ ಕೌತುಕ ಮೂಡಿಸಿದೆ. ಈ ಸಿನಿಮಾ ಸೆಟ್ಟೇರಿದಾಗಿನಿಂದಲೂ ಸಾಕಷ್ಟು ಅಡೆತಡೆಗಳು ಉಂಟಾದರೂ ಅವುಗಳನ್ನೆಲ್ಲ ನಿವಾರಿಸಿಕೊಂಡು ಚಿತ್ರತಂಡ ಮುನ್ನುಗ್ಗುತ್ತಿದೆ. ಆದರೀಗ ಅಚ್ಚರಿ ಎಂಬಂತೆ ಈ ಕೊರಗಜ್ಜ ಚಿತ್ರೀಕರಣದ ವೇಳೆ ಅಗೋಚರವಾದ ಶಕ್ತಿಯೊಂದು ಕಾಣಿಸಿದೆ. ಚಿತ್ರೀಕರಣದ ವೇಳೆ ನಿರ್ದೇಶಕ ಸುಧೀರ್ ಅತ್ತಾವರ್ ರನ್ನು ಅಗೋಚರ ಶಕ್ತಿಯೊಂದು ಬಲವಾಗಿ ತಳ್ಳಿ ಏಳೆಂಟು ಗಜ ದೂರಕ್ಕೆಸೆಯಲ್ಪಟ್ಟ ಘಟನೆ ನಡೆದಿದ್ದು, ಚಿತ್ರ ತಂಡವನ್ನು ಬೆಚ್ಚಿಬೀಳಿಸಿದೆ. ಎಲ್ಲೂ ಎಡವಿ ಬೀಳದೆ, ಜಾರದೆ ಇದ್ದರೂ, ಏಕಾಏಕಿ ಬಲವಾಗಿ ತಳ್ಳಿದಂತೆ ವೇಗ ಪಡೆದುಕೊಂಡು ನಿರ್ದೇಶಕರು ಎಸೆಯಲ್ಪಟ್ಟ ವಿಲಕ್ಷಣ ಘಟನೆ, ಸುಮಾರು ಮುನ್ನೂರಕ್ಕಿಂತಲೂ ಹೆಚ್ಚಿದ್ದ ಚಿತ್ರತಂಡದ ಎದುರಲ್ಲೇ ಘಟನೆ ನಡೆದಿದೆ. ಬಹು ನಿರೀಕ್ಷಿತ ಕೊರಗಜ್ಜ ಚಿತ್ರದ ಚಿತ್ರೀಕರಣವು ಕೊಚ್ಚಿ ಮತ್ತು ಮುಂಬೈನ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿತ್ತು. ಈ ವೇಳೆ ದೈವ ನರ್ತನದ ಪ್ರಮುಖ ದ್ರಶ್ಯವೊಂದನ್ನು ಶೂಟ್ ಮಾಡುತ್ತಿದ್ದು, ನಿನ್ನೆ ಮಧ್ಯರಾತ್ರಿ ನೂರಾರು ಉರಿವ ಪಂಜುಗಳನ್ನು ಧರಿಸಿಕೊಂಡ ಕೇರಳದ ತೆಯ್ಯಂ ಕಲಾವಿದರ ಮತ್ತು ಮಾಸ್ ಮಾದ ಅವರ ಮೈ ನವಿರೇಳಿಸುವ ಸಾಹಸ…
ಮತದಾನ ನಡೆಯುವ ಎರಡು ದಿನದಂದು ರಜೆ ನೀಡದ ಕಂಪನಿಗಳ ವಿರುದ್ಧ ಕಾರ್ಮಿಕ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಐಟಿ ವಲಯ ಸೇರಿದಂತೆ ಖಾಸಗಿ ಕಂಪನಿಗಳನ್ನು ಸಂಪರ್ಕ ಮಾಡಿದ್ದು, ಅಲ್ಲಿನ ಸಿಇಒ ಮತ್ತು ಮ್ಯಾನೇಜ್ ಮೆಂಟ್ ಗಳನ್ನು ಭೇಟಿಯಾಗಿ ಮತ ಚಲಾಯಿಸಲು ಸಿಬ್ಬಂದಿಗೆ ಉತ್ತೇಜಿಸುವಂತೆ ಹೇಳಿದ್ದೇವೆ ಎಂದು ತಿಳಿಸಿದರು. ಶೇ35 ಅಥವಾ ಇದಕ್ಕಿಂತ ಕಡಿಮೆ ಮತದಾನವಾಗಿರುವ ಬಿಬಿಂಪಿ ವ್ಯಾಪ್ತಿಯ 1800 ಮತ್ತು ರಾಜ್ಯದ 5000 ಮತಗಟ್ಟೆಗಳನ್ನು ಗುರುತಿಸಿದ್ದೇವೆ. ನಾವು ಮನೆ ಮನೆಗೆ ತೆರಳಿ ಮತದಾನದ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. ಹಾಗೆ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಗಳು ಮತ್ತು ರೆಸಿಡೆಂಟ್ ವೆಲ್ ಫೇರ್ ಅಸೋಸಿಯೇಷನ್ ಗಳನ್ನು ಸಂಪರ್ಕಿಸಿ ಮತದಾನದ ಬಗ್ಗೆ ತಿಳಿಸಿದ್ದೇವೆ. ಆದರೆ ನಾವು ಯಾರನ್ನೂ ಒತ್ತಾಯಿಸಲು ಸಾಧ್ಯವಿಲ್ಲ. ಏಪ್ರಿಲ್ 26 ಶುಕ್ರವಾರ ಆಗಿದ್ದು, ಮೊದಲು ಮತದಾನ ಮಾಡಿ ನಂತರ ರಜೆ ತೆಗೆದುಕೊಳ್ಳಬೇಕು ಅಂತ ಜನರಲ್ಲಿ…
ನಮ್ಮ ಸಂಪ್ರದಾಯಗಳಲ್ಲಿ ಬೆಳ್ಳಿಗೆ ವಿಶೇಷ ಸ್ಥಾನವಿದೆ. ಭಾರತೀಯ ಮಹಿಳೆಯರು ಧರಿಸುವ ಅನೇಕ ಆಭರಣಗಳನ್ನು ಬೆಳ್ಳಿ ಇರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಬೆಳ್ಳಿಯನ್ನು ಮನಸ್ಸಿಗೆ ಸಂಬಂಧಿಸಿದ ಲೋಹ ಎಂದು ಹೇಳಲಾಗುತ್ತದೆ. ಈ ಆಭರಣಗಳು ಮನಸ್ಸನ್ನು ಸ್ಥಿರವಾಗಿಡಲು, ಭಾವನೆಗಳನ್ನು ನಿಯಂತ್ರಿಸಲು ಮತ್ತು ಮನಸ್ಸನ್ನು ಶಾಂತವಾಗಿಡಲು ಧರಿಸಲಾಗುತ್ತದೆ. ಆದರೆ ಕೆಲವೊಮ್ಮೆ ಮಾರುಕಟ್ಟೆಯಲ್ಲಿ ನಕಲಿ ಬೆಳ್ಳಿಯೂ ಮಾರಾಟವಾಗುತ್ತಿದ್ದು, ಈ ಕುರಿತು ನಮಗೆ ಅರಿವಿರುವುದಿಲ್ಲ. ನಿಜವಾದ ಬೆಳ್ಳಿ ಮತ್ತು ನಕಲಿ ಬೆಳ್ಳಿಯ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ತುಂಬಾ ಕಷ್ಟ. ಈ ಸುಲಭ ವಿಧಾನಗಳ ಮೂಲಕ ನೀವು ಮೂಲ ಬೆಳ್ಳಿಯ ಆಭರಣಗಳನ್ನು ಕ್ಷಣಾರ್ಧದಲ್ಲಿ ಗುರುತಿಸಲು ಸಾಧ್ಯ. ಬನ್ನಿ ಅದೇಗೆ ತಿಳಿಯೋಣ. ಚಿನ್ನದಂತೆ, ಬೆಳ್ಳಿ ಆಭರಣಗಳು ಸಹ ಅಧಿಕೃತ ವಿಶಿಷ್ಟ ಲಕ್ಷಣದೊಂದಿಗೆ ಬರುತ್ತದೆ. ಈ ಗುರುತು ಯಾವಾಗಲೂ ಆಭರಣದ ಮೇಲೆ ಎಲ್ಲೋ ಗುರುತಿಸಲ್ಪಡುತ್ತದೆ. ಅದು ಅಕ್ಷರ, ಚಿಹ್ನೆ ಅಥವಾ ಸಂಖ್ಯೆಯಾಗಿರಬಹುದು. ಇದನ್ನು ನೋಡಲು ಲೆನ್ಸ್ ಕೂಡ ಬೇಕಾಗಬಹುದು. ನೀವು ಪ್ರಸಿದ್ಧ ಬ್ರಾಂಡ್‌ನಿಂದ ಆಭರಣಗಳನ್ನು ಖರೀದಿಸಿದರೂ, ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಬೆಳ್ಳಿಯು ಎಂದಿಗೂ ಆಯಸ್ಕಾಂತದಿಂದ…