ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಸಿನಿಮಾ ಇದೇ ಆಗಸ್ಟ್ 15ರಂದು ಬಿಡುಗಡೆ ಮಾಡುವುದಾಗಿ ಈಗಾಗಲೇ ಚಿತ್ರತಂಡ ಘೋಷಣೆ ಮಾಡಿದೆ. ‘ಪುಷ್ಪ 2’ ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲಿ ದಾಖಲೆಗೆ ಕಾರಣವಾಗುತ್ತಿದೆ.
ಈ ಸಿನಿಮಾದ ಡಿಜಿಟೆಲ್ ರೈಟ್ಸ್ ಬರೋಬ್ಬರಿ 275 ಕೋಟಿ ರೂಪಾಯಿ ಸೇಲ್ ಆಗಿದೆ ಎನ್ನುವ ಮಾಹಿತಿ ಸಿಗುತ್ತಿದೆ. ಈ ಹಣ ಸಿನಿಮಾ ರಿಲೀಸ್ ಆದ ನಂತರ ಮತ್ತಷ್ಟು ಏರಿಕೆಯೂ ಆಗಲಿದೆಯಂತೆ ಎನ್ನಲಾಗಿದೆ. ಇಷ್ಟೊಂದು ಮೊತ್ತದ ಹಣವನ್ನು ಕೊಟ್ಟು ಇದೇ ಮೊದಲ ಬಾರಿಗೆ ಡಿಜಿಟೆಲ್ ಹಕ್ಕುಗಳನ್ನು ಖರೀದಿಸಲಾಗಿದೆಯಂತೆ.
ಪುಷ್ಪ 2 ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಲೆಕ್ಕಾಚಾರದಂತೆ ಸಾವಿರಾರು ಕೋಟಿ ರೂಪಾಯಿ ವ್ಯಾಪಾರ ಮಾಡುವ ಶಕ್ತಿ ಈ ಚಿತ್ರಕ್ಕಿದೆಯಂತೆ. ಅಲ್ಲದೇ, ದೊಡ್ಡ ಮಟ್ಟದಲ್ಲಿ ಮತ್ತು ಹಲವು ಭಾಷೆಗಳಲ್ಲಿ ಈ ಚಿತ್ರವನ್ನು ತೆರೆಗೆ ತರಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296