ತುಮಕೂರು: ರಾಜ್ಯದ ಜನತೆಗೆ ಗೃಹ ಸಚಿವನಾಗಿ ಭರವಸೆ ಕೊಡಲು ಬಯಸುತ್ತೇನೆ. ಯಾರೇ ಆದರೂ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ ರಕ್ಷಣೆ ಮಾಡುವಂತಹ ಪ್ರಮೇಯವೇ ಇಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅವರು ಯಾರೇ ಆಗಲಿ. ಬೆಂಗಳೂರಿನಲ್ಲಿ ನಡೆದ ಘಟನೆ ದುರದೃಷ್ಟಕರವಾದುದಾಗಿದೆ. ಶ್ರೀರಾಮನ ನವಮಿ ದಿನ ಜೈ ಶ್ರೀರಾಮ್ ಘೋಷಣೆ ಕೂಗೋದು ಸಹಜ. ಅದಕ್ಕೆ ಇನ್ನೊಬ್ಬರು ಬೇರೆ ಸ್ಲೋಗನ್ ಕೂಗಿದ್ದಾರೆ. ಘಟನೆ ನಡೆದ ಬಳಿಕ ಅವರನ್ನು ರಕ್ಷಣೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಅದರಲ್ಲಿ ಯಾರನ್ನೂ ರಕ್ಷಣೆ ಮಾಡೋದಾಗಲಿ, ಓಲೈಸೋದಾಗಲಿ ನಾವು ಮಾಡೋದಿಲ್ಲ. ಕಾನೂನು ಕ್ರಮವನ್ನು ಯಾವುದೇ ಮುಲಾಜಿಲ್ಲದೇ ತೆಗೆದುಕೊಳ್ಳುತ್ತೇವೆ ಎಂದರು.
ಹುಬ್ಬಳ್ಳಿ ಘಟನೆ: ಹುಬ್ಬಳ್ಳಿಯಲ್ಲಿ ಕಾಲೇಜು ಯುವತಿ ಕೊಲೆ ವಿಚಾರದಲ್ಲಿ, ಲವ್ ಆಫೆರ್ ಇತ್ತು ಇಬ್ಬರು ಒಟ್ಟಿಗೆ ಕೆಲಸ ಮಾಡ್ತಾ ಇದ್ದರು. ಪರಸ್ಪರ ಒಬ್ಬರನೊಬ್ಬರು ಪ್ರೀತಿಸ್ತಾ ಇದ್ದರು. ನಂತರ ಇದ್ದಕಿದ್ದ ಹಾಗೆ ಆ ಹೆಣ್ಣು ಮಗಳು ದೂರ ಆಗೋದಕ್ಕೆ ಪ್ರಯತ್ನಿಸಿದಾಗ ಘಟನೆ ನಡೆದಿದೆ ಎಂದು ಹೇಳಿದರು. ಮಗಳನ್ನು ಫಾಲೋ ಮಾಡ್ತಾ ಇದ್ದ ತಾಯಿ ಮೇಲೂ ಹಲ್ಲೆ ಮಾಡಿದ್ದಾರೆ, ಅವರನ್ನು ರಕ್ಷಣೆ ಮಾಡಲಾಗಿದೆ. ಈ ಘಟನೆಗೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿಸಿದರು. ಇಂಥಹ ಘಟನೆಗಳು ಆಕಸ್ಮಿಕವಾಗಿ ನಡೆಯುತ್ತವೆ. ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಬೆಂಗಳೂರು ಘಟನೆಯಲ್ಲಿ ವೀಕ್ ಸೆಕ್ಷನ್ ಹಾಕಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಪ್ರಾರಂಭದಲ್ಲಿ ಯಾವ ಪ್ರಕರಣ ದಾಖಲಿಸಿಕೊಳ್ಳಬೇಕೋ ಅದನ್ನು ದಾಖಲು ಮಾಡಲಾಗಿದೆ. ತನಿಖೆ ಹಂತದಲ್ಲಿ ಯಾವುದನ್ನು ಆ್ಯಡ್ ಮಾಡಬೇಕೋ ಅದನ್ನು ಮಾಡಲಾಗುವುದು ಎಂದು ತಿಳಿಸಿದರು. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸೆಕ್ಷನ್ ಗಳನ್ನು ಹಾಕಲಾಗುವುದು. ಈ ಸೆಕ್ಸನ್ ಹಾಕಿಲ್ಲ, ಆ ಸೆಕ್ಷನ್ ಹಾಕಿಲ್ಲ ಅನ್ನೋಕೆ ಆಗಲ್ಲ. ತನಿಖೆಯ ಆಧಾರದ ಮೇಲೆ ಸೆಕ್ಷನ್ ಹಾಕಲಾಗುತ್ತದೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಇಂಥಹ ಘಟನೆ ಮರುಕಳಿಸುತ್ತದೆ ಎಂಬ ಬಿಜೆಪಿ ಆರೋಪಕ್ಕೆ ಸಂಬಂಧಿಸಿದಂತೆ, ಬಿಜೆಪಿ ಸರ್ಕಾರ ಇದ್ದಾಗಲೂ ಹಲವು ಘಟನೆಗಳು ನಡೆದ ಬಗ್ಗೆ ಮಾಹಿತಿ ಇದೆ ಎಂದರು.
ಅಶೋಕ್ ಮತ್ತು ಆರಗ ಜ್ಞಾನೇಂದ್ರ, ಬೊಮ್ಮಾಯಿ ಅವರು ಗೃಹ ಮಂತ್ರಿ ಇದ್ದಾಗ ಇಂಥಹ ಘಟನೆಗಳು ನಡೆದಿದೆ. ಯಾರೋ ಒಬ್ಬರು ಇದ್ದಾಗ ಇಂಥಹ ಘಟನೆ ನಡೆಯುತ್ತದೆ. ಇನ್ನೊಬ್ಬರು ಇದ್ದಾಗ ನಡೆಯಲ್ಲ ಅನ್ನುವ ಪ್ರಶ್ನೆ ಇಲ್ಲ. ಈಗ ಇಡೀ ರಾಜ್ಯದಲ್ಲಿ ಶ್ರೀರಾಮ ನವಮಿ ದಿನ ಎಷ್ಟು ಘಟನೆ ನಡೆದಿದೆ. ಇದೊಂದು ಹೊರತು ಪಡಿಸಿದರೆ ಬೇರೆ ನಡೆದಿಲ್ಲ ಎಂದು ಹೇಳಿದರು.
ಯಾರು ಕಾನೂನು ಬಾಹಿರವಾಗಿ ನಡೆದುಕೊಳ್ಳುತರೋ, ಅವರು ಯಾವುದೇ ಸಮುದಾಯ ಆಗಲಿ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು. ಅವರನ್ನು ಓಲೈಸುವ ಕೆಲಸ ನಾವು ಯಾವತ್ತೂ ಮಾಡೋದಿಲ್ಲ. ಸಮಾಜವನ್ನು ಶಾಂತಿಯಿಂದ ಇಡಬೇಕು ಅನ್ನೋದೆ ನಮ್ಮ ಉದ್ದೇಶ ಎಂದರು.
ಹುಬ್ಬಳ್ಳಿ ಘಟನೆ ಲವ್ ಜಿಹಾದ್ ಎಂದು ಜೋಶಿ ಹೇಳಿಕೆ ವಿಚಾರದಲ್ಲಿ, ಅದು ಇಬ್ಬರ ನಡುವೆ ಪರಸ್ಪರ ಪ್ರೀತಿ ಉಂಟಾಗಿ, ಯಾವಾಗ ಆ ಹೆಣ್ಣುಮಗಳು ದೂರ ಹೋಗಲು ಶುರು ಮಾಡಿದ್ದಳೋ ಆ ಹುಡುಗ ಹೋಗಿ ಚುಚ್ಚಿದ್ದಾನೆ ಅದೆಲ್ಲಿ ಲವ್ ಜಿಹಾದ್? ನನಗೆ ಕಾಣಿಸಿಲ್ಲ ಎಂದರು. ನನ್ನನ್ನು ಬಿಟ್ಟು ಬೇರೆ ಮದುವೆ ಮಾಡಿಕೊಳ್ತಾಳೋ ಏನೋ ಅಂದುಕೊಂಡು, ಹೀಗೆ ಆಗಿದೆ. ನನಗೆ ಇದರ ಪೂರ್ತಿ ಮಾಹಿತಿ ಗೊತ್ತಿಲ್ಲ. ಪರಸ್ಪರ ಪ್ರೀತಿ ಮೇಲೆ ಆಗಿರುವ ಘಟನೆ ಇದು ಎಂದರು. ಲವ್ ಜಿಹಾದ್ ಅನ್ನೋದು ಕಾಣುತ್ತಿಲ್ಲ. ಬಿಜೆಪಿಯವರು ಸ್ವಾಭಾವಿಕವಾಗಿ ಇಂಥಹ ವಿಚಾರದಲ್ಲಿ ಕಾಂಗ್ರೆಸ್ ನ್ನು ದೂಷಣೆ ಮಾಡೋದು ಅವರ ಕೆಲಸ ಎಂದರು.
ಅದು ಅಷ್ಟು ಸಮಂಜಸ ಅಲ್ಲ, ನಾವು ಕಾನೂನು ಪ್ರಕಾರ ಕಂಟ್ರೋಲ್ ಮಾಡ್ತೀವಿ. ಈ ಚುನಾವಣೆ ಸಂದರ್ಭದಲ್ಲಿ ಎಲ್ಲವನ್ನೂ ರಾಜಕೀಯ ದೃಷ್ಟಿಯಿಂದ ನೋಡೋದು ಒಳ್ಳೆಯದಲ್ಲ. ಹಿಂಗೆ ತನಿಖೆ ಮಾಡಿ, ಈ ಸೆಕ್ಷನ್ ಹಾಕಿ ಎಂದು ಅವರು ಹೇಳೋಕೆ ಆಗಲ್ಲ. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸೆಕ್ಷನ್ ಹಾಕಲಾಗುತ್ತದೆ ಎಂದರು.
ಇವಿಎಂ ಮೇಲೆ ಅನುಮಾನ ಈಗಲೂ ಇದೆ. ನಾವು ಮೊದಲಿನಿಂದಲೇ ಹೇಳುತ್ತಾ ಬಂದಿದ್ದೇವೆ ಎಂದರು. ತಾಂತ್ರಿಕವಾಗಿ ಸಾಬೀತು ಮಾಡಿ ತೋರಿಸಿದ್ದೇವೆ. ಕೇರಳದಲ್ಲಿ ಯಾವುದೇ ಬಟನ್ ಒತ್ತಿದರೂ ಬಿಜೆಪಿಗೆ ಹೋಗುತ್ತದೆ ಅನ್ನೋದು ಪ್ರೂವ್ ಆಗಿದೆ. ಅವರು ಎಲ್ಲಾ ಕ್ಷೇತ್ರದಲ್ಲಿ ಹಾಗೆ ಮಾಡಲ್ಲ. ತುಂಬಾ ಬುದ್ಧಿವಂತಿಕೆಯಿಂದ ಮಾಡುತ್ತಾರೆ ಎಂದರು. 150-200 ಕ್ಷೇತ್ರ ಬಿಟ್ಟು, ಅಡಿಷನಲ್ ಕ್ಷೇತ್ರದಲ್ಲಿ ಹ್ಯಾಕ್ ಮಾಡುತ್ತಾರೆ ಎಂಬ ಅನುಮಾನ ಇದೆ ಎಂದು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296